ಕಠಿಣ ಪ್ರಾಯಶ್ಚಿತ್ತ:


ಕಠಿಣ ಪ್ರಾಯಶ್ಚಿತ್ತ:

     ಒಬ್ಬಾತ ರಮಳಾನ್ ತಿಂಗಳಲ್ಲಿ ಮನಃಪೂರ್ವಕ ಲೈಂಗಿಕ ಸಂಪರ್ಕ ನಡೆಸಿ ತನ್ನ ಉಪವಾಸವನ್ನು ಭಂಗಪಡಿಸಿದರೆ ಖಳಾ ಪೂರೈಸುವುದರೊಂದಿಗೆ ಕಠಿಣ ಪ್ರಾಯಶ್ಚಿತ ಕೂಡಾ ನೀಡಬೇಕಾಗುತ್ತದೆ. ಮಹಿಳೆಯರು ಸಂಭೋಗಕ್ಕೆ ಒಪ್ಪಿಕೊಳ್ಳುವುದು ಹರಾಂ (ನಿಷಿದ್ದ) ಆದರೂ ಅವರಿಗೆ ಪ್ರಾಯಶ್ಚಿತ್ತ ಮಾತ್ರ ಕಡ್ಡಾಯವಿಲ್ಲ. ಕೇವಲ ಖಳಾ ಪೂರೈಸಿದರೆ ಸಾಕು. ಮುಅ್‌ಮಿನಾದ ಓರ್ವ ಗುಲಾಮನನ್ನು ದಾಸ್ಯತನದಿಂದ ಬಿಡುಗಡೆಗೊಳಿಸುವುದಾಗಿದೆ ನಿಜವಾದ ಪ್ರಾಯಶ್ಚಿತ. ಅದು ಹೇಗೂ ಅಸಾಧ್ಯವೆನಿಸಿದರೆ ಎರಡು ತಿಂಗಳ ಕಾಲ ಸತತ ವ್ರತ ಕೈಗೊಳ್ಳಬೇಕು. ಮಧ್ಯದಲ್ಲಿ ಒಂದು ದಿನ ಕೈತಪ್ಪಿ ಹೋದಲ್ಲಿ ಮತ್ತೆ ಮೊದಲಿನಿಂದಲೇ ಪ್ರಾರಂಭಿಸಬೇಕಾಗುತ್ತದೆ. ಈ ರೀತಿ ವ್ರತಾನುಷ್ಟಿಸಲೂ ಸಾಧ್ಯವಿಲ್ಲವೆಂದಾದರೆ 60ಬಡವರಿಗೋ ಅಥವಾ ನಿರ್ಗತಿಕರಿಗೋ ಒಬ್ಬೊಬ್ಬರಿಗೆ ಒಂದೊಂದು ಬೊಗಸೆ (650ಗ್ರಾಂ) ಆಹಾರ ಧಾನ್ಯವನ್ನು ದಾನ ನೀಡಬೇಕು. ಈ ಮೂರು ವಿಧಾನವೂ ಅವನಿಂದ ಅಸಾಧ್ಯವಾದರೆ ಎಂದೆಂದಿಗೂ ತನ್ನ ಹೆಗಲ ಮೇಲೆ ಅದೊಂದು ಕಡ್ಡಾಯ ಬಾಧ್ಯತೆಯಾಗಿ ಉಳಿಯುತ್ತದೆ. ಯಾವಾಗ ತನ್ನಿಂದ ಸಾಧ್ಯವಾಗುತ್ತದೋ ಆ ಸಂದರ್ಭದಲ್ಲಿ ಅದನ್ನು ಸಂದಾಯಿಸುವುದು ಕಡ್ಡಾಯವಾಗುತ್ತದೆ. ಒಬ್ಬಾತ ಎರಡೂ ದಿನಗಳ ವ್ರತವನ್ನು ಸಂಭೋಗದ ಮೂಲಕ ಭಂಗಪಡಿಸಿದ್ದಲ್ಲಿ ಮೇಲೆ ಹೇಳಿದ ಪ್ರಕಾರ ಎರಡು ಪ್ರಾಯಶ್ಚಿತ್ತ ಕಡ್ಡಾಯವಾಗುತ್ತದೆ. ಈ ರೀತಿ ಎಷ್ಟು ದಿನಗಳ ವ್ರತ ಭಂಗಪಡಿಸುತ್ತಾನೋ ಅಷ್ಟೇ ಪ್ರಾಯಶ್ಚಿತ್ತವೂ ಕಡ್ಡಾಯವಾಗುತ್ತದೆ.

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್