ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 203
(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 203)
۞ وَٱذْكُرُوا۟ ٱللَّهَ فِىٓ أَيَّامٍۢ مَّعْدُودَٰتٍۢ ۚ فَمَن تَعَجَّلَ فِى يَوْمَيْنِ فَلَآ إِثْمَ عَلَيْهِ وَمَن تَأَخَّرَ فَلَآ إِثْمَ عَلَيْهِ ۚ لِمَنِ ٱتَّقَىٰ ۗ وَٱتَّقُوا۟ ٱللَّهَ وَٱعْلَمُوٓا۟ أَنَّكُمْ إِلَيْهِ تُحْشَرُونَ
ಅರ್ಥ: ಎಣಿಸಲ್ಪಟ್ಟ ದಿನಗಳಲ್ಲಿ ಅಲ್ಲಾಹನ ಸ್ಮರಣೆ ಮಾಡಿರಿ. ಯಾರಾದರೂ ಎರಡೇ ದಿನಗಳಲ್ಲಿ ¹¹⁰ ತ್ವರೆ ಮಾಡಿದರೂ ಪರವಾಗಿಲ್ಲ. ತಡಮಾಡುವು ದಕ್ಕೂ ಅಭ್ಯಂತರವಿಲ್ಲ. ಇದು ತತ್ವ ನಿಷ್ಠೆಯುಳ್ಳವರಿಗೆ. ನೀವು ಅಲ್ಲಾಹನಿಗೆ ಹೆದರಿರಿ. ನೀವು ಆತನ ಬಳಿ ಜಮಾಯಿಸಲಿದ್ದೀರಿ ಎಂಬುದು ತಿಳಿದಿರಲಿ.
ವಿವರಣೆ:
110. ಎಣಿಸಲ್ಪಟ್ಟ ದಿವಸಗಳು ಅಂದರೆ ದುಲ್ ಹಜ್ 11, 12, 13,ಎಂಬೀ ಮೂರು ದಿವಸಗಳು. ಈ ದಿವಸಗಳು ಅಯ್ಯಾಮುತ್ತಶ್ರೀಕ್ ಎಂದೂ ಕರೆಯಲ್ಪಡುತ್ತದೆ. ಈ ಅವಧಿಯ ಎರಡು ದಿನಗಳಲ್ಲಿ ಕಲ್ಲೆಸೆದು ಸೂರ್ಯಾಸ್ತಮಾನದ ಮುಂಚೆ ಮಿನಾದಿಂದ ಹೊರಡಬಹುದು ಇಲ್ಲವೇ ಅಂದು ರಾತ್ರಿ ಮಿನಾದಲ್ಲಿ ತಂಗಿ ಮೂರನೆಯ ದಿನ ಕಲ್ಲೆಸೆದು ಅಲ್ಲಿಂದ ಹೊರಡಬಹುದು.
Comments
Post a Comment