ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 205
(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 205)
وَإِذَا تَوَلَّىٰ سَعَىٰ فِى ٱلْأَرْضِ لِيُفْسِدَ فِيهَا وَيُهْلِكَ ٱلْحَرْثَ وَٱلنَّسْلَ ۗ وَٱللَّهُ لَا يُحِبُّ ٱلْفَسَادَ
ಅರ್ಥ:(ನಿಮ್ಮ ಬಳಿಯಿಂದ) ಅವನು ಹೊರಟು ಹೋದರೆ ಭೂಮಿ ಮೇಲೆ ಕೇಡು ಹರಡಲೂ, ಕೃಷಿ ನಾಶ, ವಂಶನಾಶಕ್ಕೂ ಶತ ಪ್ರಯತ್ನ ಮಾಡುತ್ತಾನೆ. ವಾಸ್ತವ ದಲ್ಲಿ ಅಲ್ಲಾಹನು ಕೇಡನ್ನು ಇಷ್ಟಪಡುವುದಿಲ್ಲ ¹¹¹.
ವಿವರಣೆ:
111. ಇದು ಕಪಟಿಯಾದ ಅಖ್‍ನಸ್ ಬಿನ್ ಶುರೈಖನ ಬಗ್ಗೆ ಅವತೀರ್ಣಗೊಂಡಿದೆ. ಅವನು ಪ್ರವಾದಿವರ್ಯ(ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ) ರಲ್ಲಿ ಮಧುರ ಮಾತು ಹೇಳುತ್ತ ಸಂಭಾವಿತನಂತೆ ನಟಿಸಿಕೊಂಡು ಹಿಂತಿರುಗಿದಾಗ ದಾರಿಯಲ್ಲಿ ಮುಸ್ಲಿಮರ ಹೊಲಗಳಿಗೆ ಬೆಂಕಿ ಹಚ್ಚಿದನು ಮತ್ತು ಕತ್ತೆಗಳನ್ನು ತರಿದು ಹಾಕಿದನು.
Comments
Post a Comment