ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 214
(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 214)
أَمْ حَسِبْتُمْ أَن تَدْخُلُوا۟ ٱلْجَنَّةَ وَلَمَّا يَأْتِكُم مَّثَلُ ٱلَّذِينَ خَلَوْا۟ مِن قَبْلِكُم ۖ مَّسَّتْهُمُ ٱلْبَأْسَآءُ وَٱلضَّرَّآءُ وَزُلْزِلُوا۟ حَتَّىٰ يَقُولَ ٱلرَّسُولُ وَٱلَّذِينَ ءَامَنُوا۟ مَعَهُۥ مَتَىٰ نَصْرُ ٱللَّهِ ۗ أَلَآ إِنَّ نَصْرَ ٱللَّهِ قَرِيبٌۭ
ಅರ್ಥ: ನಿಮ್ಮ ಪೂರ್ವಿಕರ ಕಟು ಅನುಭವ ನಿಮಗೂ ಬಾರದೆ ಸ್ವರ್ಗಪ್ರವೇಶ ಸಾಧ್ಯವೆಂದು ಭಾವಿಸುತ್ತಿದ್ದೀರಾ? ಅವರಿಗೆ ಕಡುದಾರಿದ್ರ್ಯಗಳೂ ಕಠಿಣ ರೋಗಗಳೂ ಬಾಧಿಸಿದ್ದುವು. ಪ್ರವಾದಿಗಳೂ ವಿಶ್ವಾಸಿಗಳೂ *‘ಅಲ್ಲಾಹನ ನೆರವು ಯಾವಾಗ?’* ಎಂದು ಕೇಳುವಷ್ಟು ಕಷ್ಟಕೋಟಲೆಗಳಿಂದ ಕಂಪಿಸಲ್ಪಟ್ಟಿದ್ದರು. ಅಲ್ಲಾಹನ ಸಹಾಯ ಸನ್ನಿಹಿತವಾಗಿದೆ. (ಎಂದವರಿಗೆ ಸಾಂತ್ವನ ನೀಡಲಾಗಿತ್ತು)¹¹⁴.
ವಿವರಣೆ:
114. ಸತ್ಯವಿಶ್ವಾಸಿಗಳಿಗೆ ಶತ್ರುಗಳಿಂದ ಭಾರೀ ವಿರೋಧ ಹಾಗೂ ಅಪಾರ ಕಷ್ಟನಷ್ಟಗಳನ್ನು ಅನುಭವಿಸುವ ಪ್ರಸಂಗ ಬರಬಹುದು. ಅಂತಹ ಪ್ರತಿಕೂಲ ಘಟ್ಟಗಳಲ್ಲಿ ತತ್ತರಿಸದೆ, ಅಳುಕದೆ ಮನೋದಾಢ್ರ್ಯತೆಯಿಂದ ಅಚಲ ವಿಶ್ವಾಸದೊಂದಿಗೆ ಸತ್ಯವನ್ನು ಭದ್ರವಾಗಿ ಹಿಡಿದುಕೊಂಡು ಮುಂದೆ ಸಾಗಬೇಕು. ಅದಕ್ಕೆ ಮಹತ್ತರ ಕ್ಷಮೆ ಹಾಗೂ ಅಪೂರ್ವ ತ್ಯಾಗ ಸನ್ನದ್ದತೆ ಅಗತ್ಯ. ಆದರೆ ಇವೆಲ್ಲವೂ ಅಲ್ಲಾಹನ ಪರೀಕ್ಷೆಗಳಾಗಿವೆ. ಪ್ರವಾದಿಗಳು ಹಾಗೂ ಅವರ ಅನುಯಾಯಿಗಳು ಇಂತಹ ಅನೇಕ ಪರೀಕ್ಷೆಗಳನ್ನು ಎದುರಿಸುತ್ತಿದ್ದರು. ತ್ಯಾಗಕ್ಕೆ ಸನ್ನದ್ಧರಾಗದೆ ಮೋಕ್ಷ ಸಾಧ್ಯವಿಲ್ಲ.
Comments
Post a Comment