ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 217
(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 217)
يَسْـَٔلُونَكَ عَنِ ٱلشَّهْرِ ٱلْحَرَامِ قِتَالٍۢ فِيهِ ۖ قُلْ قِتَالٌۭ فِيهِ كَبِيرٌۭ ۖ وَصَدٌّ عَن سَبِيلِ ٱللَّهِ وَكُفْرٌۢ بِهِۦ وَٱلْمَسْجِدِ ٱلْحَرَامِ وَإِخْرَاجُ أَهْلِهِۦ مِنْهُ أَكْبَرُ عِندَ ٱللَّهِ ۚ وَٱلْفِتْنَةُ أَكْبَرُ مِنَ ٱلْقَتْلِ ۗ وَلَا يَزَالُونَ يُقَٰتِلُونَكُمْ حَتَّىٰ يَرُدُّوكُمْ عَن دِينِكُمْ إِنِ ٱسْتَطَٰعُوا۟ ۚ وَمَن يَرْتَدِدْ مِنكُمْ عَن دِينِهِۦ فَيَمُتْ وَهُوَ كَافِرٌۭ فَأُو۟لَٰٓئِكَ حَبِطَتْ أَعْمَٰلُهُمْ فِى ٱلدُّنْيَا وَٱلْءَاخِرَةِ ۖ وَأُو۟لَٰٓئِكَ أَصْحَٰبُ ٱلنَّارِ ۖ هُمْ فِيهَا خَٰلِدُونَ
ಅರ್ಥ: ಪವಿತ್ರ ಮಾಸದಲ್ಲಿ ಸಮರಕ್ಕಿಳಿಯುವ ಕುರಿತು ಅವರು ನಿಮ್ಮಲ್ಲಿ ಪ್ರಶ್ನಿಸುತ್ತಿದ್ದಾರೆ. ಹೇಳಿರಿ; ಆ ಮಾಸದಲ್ಲಿ ಸಮರವು ಮಹಾಪರಾಧ ನಿಜ. ಆದರೆ ಅಲ್ಲಾಹನ ಮಾರ್ಗಕ್ಕೆ ಅಡ್ಡಿಪಡಿಸುವುದು, ಅವನಿಗೆ ದ್ರೋಹ ವೆಸಗುವುದು, ಮಸ್ಜಿದುಲ್ ಹರಾಮ್‍ನಿಂದ ತಡೆಯುವುದು, ಅಲ್ಲಿನ ನಿವಾಸಿಗಳನ್ನು ಹೊರಹಾಕುವುದು ಅಲ್ಲಾಹನ ದೃಷ್ಟಿಯಲ್ಲಿ ಅದಕ್ಕಿಂತಲೂ ಘೋರ ಅಪರಾಧವಾಗಿದೆ ¹¹⁶. ಅರಾಜಕತೆಯು ಕೊಲೆಗಿಂತ ಗಂಭೀರ. ಅವರಿಗೆ ಸಾಧ್ಯವಾದರೆ ನಿಮ್ಮನ್ನು ನಿಮ್ಮ ಧರ್ಮದಿಂದ ವಿಮುಖಗೊಳಿಸುವವರೆಗೂ ನಿಮ್ಮೆದುರು ಯುದ್ಧ ಮಾಡುತ್ತಲೇ ಇರುವರು. ನಿಮ್ಮಿಂದ ಯಾವನು ಸ್ವಧರ್ಮದಿಂದ ಮರಳಿ ಅಧರ್ಮಿಯಾಗಿ ಸಾಯು ತ್ತಾನೋ ಅಂತಹವನ ಸುಕಾರ್ಯಗಳು ಇಹ - ಪರದಲ್ಲೂ ಫಲಹೀನವಾಗುವುವು. ಅವರು ನರಕದವರು. ಅದರಲ್ಲಿ ಅವರು ಚಿರವಾಸಿಗಳು.
ವಿವರಣೆ:
116. ಹಿಜ್ರ 2ನೇ ವರ್ಷದಲ್ಲಿ ಪ್ರವಾದಿವರ್ಯ(ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ)ರು ಅಬ್ದುಲ್ಲಾಹಿ ಬಿನ್ ಜಹ್‍ಶ್ ರಳಿಯಲ್ಲಾಹು ಅನ್‌ಹುರ ನೇತೃತ್ವದಲ್ಲಿ ಎಂಟು ಜನರನ್ನೊಳಗೊಂಡ ತಂಡವನ್ನು ಮಕ್ಕಾ ಮತ್ತು ತಾಇಫ್‍ನ ನಡುವಣ ನಖ್‍ಲಃ ಎಂಬಲ್ಲಿಗೆ ಕಳುಹಿಸಿ, ಕುರೈಶರ ಚಲನವಲನಗಳ ಬಗ್ಗೆ ನಿಗಾ ಇಡುವಂತೆ ಆದೇಶಿಸಿದರು. ಆದರೆ ಅಮ್ರ್‍ಬಿನ್ ಹಳ್‍ರಮಿ ನೇತೃತ್ವದ ವರ್ತಕ ತಂಡವು ಎದುರಾದಾಗ ಅವರು ಅವನನ್ನು ಕೊಂದು ಉಳಿದವರನ್ನು ಸೆರೆಹಿಡಿದರು. ಇದರಿಂದ ಪ್ರವಾದಿವರ್ಯ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂರು ಬಹಳ ನೊಂದರು. ಈ ಘಟನೆ ರಜಬ್ ತಿಂಗಳ ಪ್ರಥಮ ದಿನದಲ್ಲಿ ನಡೆದಿತ್ತು. ಆದರೆ ಮುಸ್ಲಿಮರು ಅದನ್ನು ಜುಮಾದುಲ್ ಆಖಿರವೆಂದು ಭಾವಿಸಿದ್ದರು. ಆಗ ಖುರೈಶರು ಆದರಣೀಯ ಮಾಸದ ಪಾವಿತ್ರ್ಯವನ್ನು ಮುಹಮ್ಮದರು ಹರಿದು ಹಾಕಿದರು ಎಂಬ ಆಕ್ಷೇಪದ ಮಾತನ್ನಾಡಿದರು. ಆಗ ಈ ಸೂಕ್ತ ಅವತೀರ್ಣಗೊಂಡಿತು.
Comments
Post a Comment