ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 218
(ಅಧ್ಯಾಯ: 2 ಅಲ್-ಬಕ್ವರಃ ಸೂಕ್ತ: 218)
إِنَّ ٱلَّذِينَ ءَامَنُوا۟ وَٱلَّذِينَ هَاجَرُوا۟ وَجَٰهَدُوا۟ فِى سَبِيلِ ٱللَّهِ أُو۟لَٰٓئِكَ يَرْجُونَ رَحْمَتَ ٱللَّهِ ۚ وَٱللَّهُ غَفُورٌۭ رَّحِيمٌۭ
ಅರ್ಥ:ಸತ್ಯವಿಶ್ವಾಸವಿಟ್ಟವರು, ಧರ್ಮದ ಅನಿವಾ ರ್ಯತೆಗಾಗಿ ದೇಶತ್ಯಾಗ ಮಾಡಿದವರು ಹಾಗೂ ಅಲ್ಲಾಹನ ಮಾರ್ಗದಲ್ಲಿ ಧರ್ಮಯುದ್ಧ ಮಾಡಿದವರೇ ಅಲ್ಲಾಹನ ಕೃಪಾಕಾಂಕ್ಷಿಗಳು ¹¹⁷. ಅಲ್ಲಾಹನು ತುಂಬ ಕ್ಷಮಾಶೀಲನು. ಪರಮ ದಯಾನಿಧಿ.
ವಿವರಣೆ:
117.ಅಲ್ಲಾಹನ ಕಾರುಣ್ಯವನ್ನು ಆಕಾಂಕ್ಷಿಸುವ ಕೆಲವು ಪ್ರಧಾನ ಲಕ್ಷಣಗಳನ್ನು ಇಲ್ಲಿ ಹೇಳಲಾಗಿದೆ. ಎಂತಹ ಸನ್ನಿವೇಶದಲ್ಲೂ ಅಲ್ಲಾಹನನ್ನು ಅವಲಂಬವಾಗಿಟ್ಟು ಪರಿಪೂರ್ಣ ವಿಶ್ವಾಸವಿರಿಸಿ ಸತ್ಯಮಾರ್ಗದಲ್ಲಿ ಮುಂದೆ ಸಾಗುವುದು. ಅವನ ಆದೇಶಗಳನ್ನು ಪಾಲಿಸಿ ಬದುಕಲು ಸ್ವತಂತ್ರವಾಗಿ ಹಾಗೂ ನಿರ್ಭಯನಾಗಿ ಕಳೆಯಲು ಮನೆಮಾರುಗಳನ್ನು ಸ್ವತ್ತು ವಿತ್ತಗಳನ್ನು ತೊರೆದು ಹೋಗಬೇಕಾಗಿ ಬಂದರೂ ಅವೆಲ್ಲವನ್ನು ಅನುಭವಿಸುವುದು. ಸತ್ಯಮಾರ್ಗದ ಸಂರಕ್ಷಣೆÉ ಸಾಧ್ಯವಿಲ್ಲದ ಮಟ್ಟಿಗೆ ಪೀಡನೆ ಅಸಹನೀಯವಾದರೆ ವೈರಿಗಳನ್ನು ಹತ್ತಿಕ್ಕುವ ಪ್ರಸಂಗ ಬಂದರೆ ಅವರೊಡನೆ ಸಮರ ಸಾರುವುದಕ್ಕೂ ಸಿದ್ಧರಾಗುವುದು ಸದ್‍ವೃತ್ತರ ಲಕ್ಷಣಗಳೆನಿಸಿವೆ.
Comments
Post a Comment