ನೆಲಗಡಲೆ ನೆನೆಸಿ ತಿಂದರೆ ಆರೋಗ್ಯಕ್ಕೇನು ಲಾಭ.?


ನೆಲಗಡಲೆ ನೆನೆಸಿ ತಿಂದರೆ ಆರೋಗ್ಯಕ್ಕೇನು ಲಾಭ.?

  ಬದಾಮಿಯಲ್ಲಿರುವ ಬಹುತೇಕ ಎಲ್ಲಾ ಪೋಷಕಾಂಶಗಳು ನೆಲಗಡಲೆಯಲ್ಲಿರುತ್ತವೆ. ಅದಕ್ಕಾಗಿಯೇ ನೆಲಗಡಲೆ ಬಡವರ ಬದಾಮಿ. ಹಾಗಂತ ತಾತ್ಸಾರ ಮಾಡಬೇಡಿ. 
   ನೆಲಗಡಲೆಯಲ್ಲಿ ಕೊಬ್ಬಿನಂಶ, ಫೈಬರ್, ಪೊಟಾಶಿಯಂ, ರಂಜಕ, ವಿಟಮಿನ್ ಬಿ, ಮೆಗ್ನೇಶಿಯಂ ಇತ್ಯಾದಿ ಪೋಷಕಾಂಶಗಳು ಭರಪೂರವಾಗಿರುತ್ತದೆ. ಬದಾಮಿಯನ್ನೇನೋ (Almond) ನೀವು ನೆನೆ ಹಾಕಿ ತಿನ್ನುತ್ತೀರಿ. ಆದರೆ, ನೆಲಗಡಲೆಯಲ್ಲಿ ಬೇಯಿಸಿ, ಹುರಿದು ತಿನ್ನುವವರೇ ಅಧಿಕ. ನೆಲಗಡಲೆಯನ್ನು ನೀರಲ್ಲಿ ನೆನೆಹಾಕಿ ಕೂಡಾ ತಿನ್ನಬಹುದು. ಆದರಿಂದ ಹೆಲ್ತ್ ಲಾಭ (Health benefits) ಏನು.?
  ಈ ಸಂಬಂಧ ಆಹಾರ ತಜ್ಞರು, ವಿಶೇಷ ತಜ್ಞರು ನೀಡಿರುವ ಮಾಹಿತಿಗಳನ್ನು ಕ್ರೋಢಿಕರಿಸಿ ಇಲ್ಲಿಟ್ಟಿದ್ದೇವೆ. ಓದಿ.
1. ಹೊಟ್ಟೆಯ ಸಮಸ್ಯೆಗಳಿಗೆ ರಾಮಬಾಣ
ನೆನೆ ಹಾಕಿದ ನೆಲಗಡಲೆ (Peanut) ತಿಂದರೆ ಹೊಟ್ಟೆ ಉಬ್ಬರಿಕೆ, ಗ್ಯಾಸ್ಟ್ರಿಕ್ ದೂರವಾಗುತ್ತದೆ. ಜೀರ್ಣಕ್ರಿಯೆ (Digestion) ಕೂಡಾ ಸರಾಗವಾಗಿ ನಡೆಯುತ್ತದೆ. 
2. ಹೃದಯದ ಮಿತ್ರ
ನೆನೆ ಹಾಕಿದ ನೆಲಗಡಲೆ ತಿಂದರೆ ಅದು ದೇಹದಲ್ಲಿ ರಕ್ತ ಸಂಚಾರ (Blood circulation) ಸರಾಗವಾಗುವಂತೆ ನೋಡಿಕೊಳ್ಳುತ್ತದೆ. ಹೃದಯದ ಸಮಸ್ಯೆ ತಡೆಗಟ್ಟುವಲ್ಲಿ ಸಹಕರಿಸುತ್ತದೆ.
3. ಬೆನ್ನು ನೋವಿಗೆ
ನೆನೆಹಾಕಿದ ನೆಲಗಡಲೆ ಮತ್ತು ಬೆಲ್ಲ (Jagerry) ಸೇರಿಸಿ ತಿಂದರೆ ಬೆನ್ನು ನೋವು ಕಡಿಮೆಯಾಗುತ್ತದೆ. ನೆಲಗಡಲೆ ಮತ್ತು ಬೆಲ್ಲದಲ್ಲಿರುವ ಪೋಷಕಾಂಶಗಳು ಬೆನ್ನು ನೋವು ಕಡಿಮೆ ಮಾಡುತ್ತವೆ
4.ಕಟ್ಟು ಮಸ್ತಿನ ಮೈಕಟ್ಟು
ವರ್ಕೌಟ್ (Work out) ಮಾಡುವವರಿಗೆ ಪೌಷ್ಟಿಕಾಂಶಗಳು ಸಾಕಷ್ಟು ಬೇಕು. ನೆಲಗಡಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಲಭ್ಯವಿದೆ. ನೆಲಗಡಲೆ ಮೊಳಕೆ ಬರಿಸಿ ತಿಂದರೆ ಇನ್ನೂ ಉತ್ತಮ
5.ಕ್ಯಾನ್ಸರ್ ತಡೆಯುತ್ತದೆ
ನೆನೆಸಿದ ನೆಲಗಡಲೆ ದೇಹದಲ್ಲಿನ ಫ್ರೀ ರ್ಯಾಡಿಕಲ್ಸ್ ಹೋಗಲಾಡಿಸುತ್ತದೆ. ಇದರಲ್ಲಿ ಕಬ್ಬಿಣದಂಶ, ಪೊಲೆಟ್, ಕ್ಯಾಲ್ಸಿಯಂ ಇದ್ದು, ಕ್ಯಾನ್ಸರ್ ಕಣಗಳು ದೇಹದಲ್ಲಿ ಉತ್ಪತಿಯಾಗದಂತೆ ತಡೆಯುತ್ತದೆ. 
6. ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ (blood sugar level) ನಿಯಂತ್ರಿಸುವಲ್ಲಿ ನೆಲಗಡಲೆ ತುಂಬಾ ಸಹಕಾರಿ.

=============================

ಸಂಗ್ರಹ: ಮನೆ ಮದ್ದುಗಳು

ಸಂ: ✒️ಅಬೂರಿಫಾನ ಕುಂದಾಪುರ


Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್