ಯಾತ್ರೆಯಿಂದ ಮರಳುವಾಗ
ಯಾತ್ರೆಯಿಂದ ಮರಳುವಾಗ
يُكَبِّرُ عَلَى كُلِّ شَرَفٍ ثَلاَثَ تَكْبِيرَاتٍ: (اللَّهُ أَكْبَرُ, اللَّهُ أَكْـبَرُ, اللَّهُ أَكْـبَرُ) ثُمَّ يَقُولُ: (لَا إِلَهَ إِلاَّ اللَّهُ وَحْدَهُ لَا شَرِيكَ لَهُ, لَهُ الْمُلْكُ, وَلَهُ الْحَمْدُ, وَهُوَ عَلَى كُلِّ شَيْءٍ قَدِيرٌ, آيِبُونَ, تاَئِبُونَ, عَابِدُونَ, لِرَبِّنَا حَامِدُونَ, صَدَقَ اللَّهُ وَعْدَهُ, وَنَصَرَ عَبْدَهُ, وَهَزَمَ الْأَحْزَابَ وَحْدَهُ)
ಅರ್ಥ: ಎತ್ತರದ ಎಲ್ಲ ಸ್ಥಳಗಳಲ್ಲೂ (ಮೂರು ಮೂರು ಬಾರಿ ಅಲ್ಲಾಹು ಅಕ್ಬರ್ ಎಂದು ಹೇಳಬೇಕು). ತರುವಾಯ ಈ ಪ್ರಾರ್ಥನೆ ಹೇಳಬೇಕು:
ಅಲ್ಲಾಹನ ಹೊರತು ಆರಾಧನೆಗೆ ನೈಜ ಹಕ್ಕುದಾರರಾಗಿ ಅನ್ಯರಿಲ್ಲ, ಅವನು ಏಕೈಕನು, ಅವನಿಗೆ ಸಹಭಾಗಿಗಳು ಯಾರೂ ಇಲ್ಲ, ಆಧಿಪತ್ಯವು ಅವನದ್ದು, ಸ್ತುತಿಯು ಅವನಿಗೆ ಮತ್ತು ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು. ನಾವು ಮರಳುತ್ತಿದ್ದೇವೆ, ಪಶ್ಚಾತ್ತಾಪ ಪಡುತ್ತಿದ್ದೇವೆ, ಆರಾಧಿಸುತ್ತಿದ್ದೇವೆ ಮತ್ತು ನಮ್ಮ ರಬ್ಬ್ ಗೆ ನಾವು ಸ್ತುತಿ ಅರ್ಪಿಸುತ್ತಿದ್ದೇವೆ. ಅಲ್ಲಾಹು ತನ್ನ ವಾಗ್ದಾನವನ್ನು ಸತ್ಯಪಡಿಸಿದ್ದಾನೆ ಮತ್ತು ತನ್ನ ದಾಸನಿಗೆ ಸಹಾಯವಿತ್ತಿದ್ದಾನೆ. ಮತ್ತು ಅವನು (ಅವಿಶ್ವಾಸಿಗಳ) ಪಕ್ಷಗಳನ್ನು ಒಬ್ಬಂಟಿಯಾಗಿ ಸೋಲಿಸಿದ್ದಾನೆ.
ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್. ಆಯಿಬೂನ ತಾಇಬೂನ ಆಬಿದೂನ ಲಿರಬ್ಬಿನಾ ಹಾಮಿದೂನ್. ಸದಕಲ್ಲಾಹು ವಅ್ ದಹೂ, ವನಸರ ಅಬ್ದಹೂ, ವಹಝಮಲ್ ಅಹ್‍ಝಾಬ ವಹ್ದಹೂ
(ಯುದ್ಧದಿಂದ ಅಥವಾ ಹಜ್ಜಿನಿಂದ ಮರಳಿ ಬರುವಾಗ ಪ್ರವಾದಿಯವರು ಇದನ್ನು ಹೇಳುತ್ತಿದ್ದರು. ಅಲ್‍ಬುಖಾರಿ 7/163; ಮುಸ್ಲಿಮ್ 2/980.)
Comments
Post a Comment