ತೂಕ ಇಳಿಕೆಯನ್ನು ಉತ್ತೇಜಿಸಲು ನಿಮ್ಮ ಆಹಾರದಲ್ಲಿ ಸಬ್ಜಾ ಬೀಜಗಳನ್ನು ಸೇರಿಸಿ


ತೂಕ ಇಳಿಕೆಯನ್ನು ಉತ್ತೇಜಿಸಲು ನಿಮ್ಮ ಆಹಾರದಲ್ಲಿ ಸಬ್ಜಾ ಬೀಜಗಳನ್ನು ಸೇರಿಸಿ

  ನೀವೇನಾದರೂ ತೂಕ ಇಳಿಸುವ ಪ್ರಯತ್ನದಲ್ಲಿ ಇದ್ದರೆ ಸಬ್ಜಾ ಬೀಜಗಳನ್ನು ನಿಮ್ಮ ತೂಕ ಇಳಿಕೆಯ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಿ. ಗಾತ್ರದಲ್ಲಿ ಚಿಕ್ಕದಾಗಿರುವ ಸಬ್ಜಾ ಬೀಜಗಳು ವಿವಿಧ ಆರೋಗ್ಯ ಮತ್ತು ಗುಣಪಡಿಸುವ ಗುಣಗಳನ್ನು ಹೊಂದಿವೆ.
    ಇತ್ತೀಚಿನ ದಿನಗಳಲ್ಲಿ ತೂಕನಷ್ಟ ಎನ್ನುವುದು ತನ್ನದೇ ಆದ ಹೊಸ ಆಯಾಮವನ್ನು ಪಡೆದುಕೊಂಡಿವೆ. ತೂಕ ನಷ್ಟಕ್ಕಾಗಿ ಹಲವಾರು ಜನರುಗಳು ಹಲವಾರು ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ತೂಕ ಕಳೆದುಕೊಳ್ಳಲು ತಮ್ಮ ಕೈಲಾದ ಪ್ರಯತ್ನಗಳನ್ನು ಸಹ ಮಾಡಿರುತ್ತಾರೆ. ಆದರೆ ಕೆಲವೊಮ್ಮೆ ನಾನಾ ಕಾರಣಗಳಿಂದಾಗಿ ಅವರ ತೂಕದಲ್ಲಿ ಯಾವುದೇ ಮಾರ್ಪಾಡು ಆಗಿರುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿರಬಹುದು.
ಆಮ್ಲೀಯತೆ, ಎದೆಯುರಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ದೇಹದ ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಸಬ್ಜಾ ಬೀಜಗಳು ಅಗತ್ಯವಾದ ಕೊಬ್ಬುಗಳು, ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಕ್ಯಾಲೋರಿಗಳನ್ನು ಕಡಿಮೆ ಹೊಂದಿರುವುದರಿಂದ ತೂಕ ಇಳಿಸಿಕೊಳ್ಳಲು ಈ ಬೀಜಗಳು ಸಹಾಯ ಮಾಡುತ್ತದೆ.
​ತೂಕ ಇಳಿಸಿಕೊಳ್ಳಲು ಸಬ್ಜಾ ಬೀಜಗಳು ಹೇಗೆ ಸಹಾಯ ಮಾಡುತ್ತವೆ?
ಅಗತ್ಯ ಕೊಬ್ಬಿನಾಮ್ಲ
ಸಬ್ಜಾ ಬೀಜಗಳಲ್ಲಿ ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದು ದೇಹದ ಚಯಾಪಚಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಬೀಜಗಳ ಉರಿಯೂತದ ಗುಣಲಕ್ಷಣಗಳು ಸ್ಥೂಲಕಾಯತೆ ಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹೀಗಾಗಿ ತೂಕ ನಷ್ಟಕ್ಕೆ ಇದು ಸಹಾಯ ಮಾಡುತ್ತದೆ.
ಹೆಚ್ಚಿನ ಫೈಬರ್ ಅಂಶ
ಸಬ್ಜಾ ಬೀಜಗಳಲ್ಲಿ ಇರುವ ಹೆಚ್ಚಿನ ನಾರಿನಂಶವು ನಿಮ್ಮನ್ನು ಹೆಚ್ಚು ಸಮಯದವರೆಗೆ ಹಸಿವಾಗದಂತೆ ಇರಿಸುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಅತಿಯಾಗಿ ತಿನ್ನುವುದು ಮತ್ತು ಅನಗತ್ಯ ಕಡುಬಯಕೆಗಳನ್ನು ತಡೆಗಟ್ಟುವ ಮೂಲಕ, ಸಬ್ಜಾ ಬೀಜಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ದೇಹದಲ್ಲಿನ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳ ಹೀರಿಕೊಳ್ಳುವಿಕೆ ಯನ್ನು ಕಡಿಮೆ ಮಾಡುವ ಮೂಲಕ ಫೈಬರ್ ಕೂಡ ಸಹಾಯ ಮಾಡುತ್ತದೆ. ಅಂದರೆ ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶವು ತೂಕ ಕಳೆದುಕೊಳ್ಳುವಿಕೆಗೆ ಸಹಾಯ ಮಾಡುತ್ತದೆ ಎಂದರ್ಥ.
*ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ
 ಸಬ್ಜಾ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ದೇಹದಲ್ಲಿನ ಬೊಜ್ಜು ನಿವಾರಣೆ ಆಗುತ್ತದೆ. ಇದರಲ್ಲಿರುವ ಫೈಬರ್ ಸಮೃದ್ಧವೂ ನಿಮ್ಮ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಹೆಚ್ಚಳವನ್ನು ತಡೆಯುತ್ತದೆ. ಟೈಪ್ 2 ಮಧುಮೇಹಿಗಳಿಗೆ ಇದು ಒಳ್ಳೆಯದು ಎಂದು ಹೇಳಲಾಗುತ್ತದೆ.
​ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
 ನೀರಿನಲ್ಲಿ ಸಬ್ಜಾ ಬೀಜಗಳನ್ನು ನೆನೆಸಿದಾಗ, ಉತ್ತಮ ಜೀರ್ಣಕಾರಿ ಕಿಣ್ವಗಳನ್ನು ಇದು ಬಿಡುಗಡೆ ಮಾಡುತ್ತದೆ. ಇದನ್ನು ನೀವು ಸೇವಿಸಿದಾಗ ಅನಗತ್ಯವಾಗಿ ಮತ್ತು ಅತಿಯಾಗಿ ತಿನ್ನುವುದನ್ನು ಇದು ತಡೆಯುತ್ತದೆ. ಇದನ್ನು ಸೇವಿಸುವುದರಿಂದ ನಿಮ್ಮ ಹಸಿವು ಸಹ ಕಡಿಮೆಯಾಗುತ್ತದೆ. ಈ ರೀತಿಯಾಗಿ ಹಸಿವು ಕಡಿಮೆಯಾದಾಗ ನೀವು ಸೇವಿಸುವ ಆಹಾರದ ಪ್ರಮಾಣ ಕಡಿಮೆಯಾಗುತ್ತದೆ.ನೀವು ಸೇವಿಸುವ ಆಹಾರದ ಪ್ರಮಾಣ ಕಡಿಮೆಯಾದರೆ ನಿಮ್ಮ ತೂಕವೂ ಸಹ ನಿಯಂತ್ರಣಕ್ಕೆ ಬರುತ್ತದೆ.
ಕಡಿಮೆ ಕ್ಯಾಲೋರಿ, ಹೆಚ್ಚಿನ ಪೋಷಕಾಂಶಗಳು
  ಕ್ಯಾಲೋರಿ ಕಡಿಮೆ ಇದ್ದರೂ, ಸಬ್ಜಾ ಬೀಜಗಳು ಕ್ಯಾಲ್ಸಿಯಂ, ಮೆಗ್ನೀಷಿಯಂ, ಕಬ್ಬಿಣ ಮತ್ತು ರಂಜಕ ಸೇರಿದಂತೆ ವಿವಿಧ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಈ ಎಲ್ಲಾ ಅಂಶಗಳು ನಿಮ್ಮ ತೂಕ ನಷ್ಟಕ್ಕೆ ಅವಶ್ಯಕವಾಗಿದೆ.
ಮಲಬದ್ಧತೆಗೆ ಪರಿಹಾರ ನೀಡುತ್ತದೆ
ಸಬ್ಜಾ ಬೀಜಗಳು ದೇಹವನ್ನು ನೈಸರ್ಗಿಕವಾಗಿ ಇಡುತ್ತದೆ. ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ನಿವಾರಿಸುತ್ತದೆ. ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮವಾಗಿ ಇರಿಸಿ, ಮಲಬದ್ಧತೆಯ ಸಮಸ್ಯೆಯನ್ನು ಸಹ ಇದು ನಿವಾರಿಸುತ್ತದೆ.ಒಟ್ಟಾರೆಯಾಗಿ ಹೇಳುವುದಾದರೆ, ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಯನ್ನು ಇದು ನಿವಾರಿಸುತ್ತದೆ.
*ದೇಹವನ್ನು ತಂಪಾಗಿ ಇಡುತ್ತದೆ
ಬೇಸಿಗೆಯ ಶಾಖ ನಿಯಂತ್ರಿಸುವಲ್ಲಿ ಇದು ಸಹಕಾರಿಯಾಗಿದೆ.ಇದನ್ನು ನೀವು ನೀರಿನಲ್ಲಿ ಬೆರೆಸಿಯೂ ಸಹ ಸೇವಿಸಬಹುದು ಅಥವಾ ನೀವು ತಯಾರಿಸುವ ಮಿಲ್ಕ್ ಶೇಕ್ ಮತ್ತು ಜ್ಯೂಸ್ ಗಳಲ್ಲಿಯೂ ಸಹ ಇದನ್ನು ಸೇರಿಸಬಹುದು.ಬೇಸಿಗೆಯ ಸಮಯದಲ್ಲಿ ಮಾತ್ರವಲ್ಲದೆ ನಿಮ್ಮ ದೇಹದ ಉಷ್ಣಾಂಶ ಹೆಚ್ಚಾದಾಗಲೂ ಸಹ ನೀವು ಇದನ್ನು ಸೇವಿಸಬಹುದು.
​ತೂಕ ನಷ್ಟಕ್ಕೆ ಸಬ್ಜಾ ಬೀಜಗಳನ್ನು ಸೇವಿಸುವುದು ಹೇಗೆ?
 ಸಬ್ಜಾ ಬೀಜಗಳನ್ನು ಅಗಿಯುವುದು ಕಷ್ಟ. ಆದ್ದರಿಂದ ಅವುಗಳನ್ನು ನೀರಿನಲ್ಲಿ ನೆನೆಸುವ ಮೂಲಕ ಸೇವಿಸಬಹುದು. ಇದು ಸಬ್ಜಾ ಬೀಜಗಳನ್ನು ಸೇವಿಸುವ ಅತ್ಯಂತ ಸರಳ ಮತ್ತು ಪರಿಣಾಮಕಾರಿಯಾದ ಮಾರ್ಗವಾಗಿದೆ. ಸಬ್ಜಾ ಬೀಜಗಳು ನೀರನ್ನು ಹೀರಿಕೊಳ್ಳುತ್ತವೆ. ನೀರಿಗೆ ನೆನೆಸುವ ಮುನ್ನ ಗಾತ್ರದಲ್ಲಿ ಚಿಕ್ಕದಾಗಿರುವ ಇವುಗಳು, ನೆನಸಿದ ತಕ್ಷಣವೇ ಗಾತ್ರದಲ್ಲಿ ಹೆಚ್ಚಾಗುತ್ತವೆ.
   ಈ ಪ್ರಕ್ರಿಯೆಯು ನಾರಿನ ಅಂಶವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕಾರಿ ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ. ಎರಡು ಚಮಚ ಸಬ್ಜಾ ಬೀಜಗಳನ್ನು ತೆಗೆದುಕೊಂಡು ಅವುಗಳನ್ನು ಒಂದು ಕಪ್ ಬೆಚ್ಚಗಿನ ನೀರಿನಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷ ನೆನೆಸಿಡಿ. ಬೀಜಗಳ ಗಾತ್ರ ದೊಡ್ಡದಾದ ನಂತರ ನೀವು ಅವುಗಳನ್ನು ಸೇವಿಸಬಹುದು ಅಥವಾ ನೀವು ಒಂದು ಲೀಟರ್ ನೀರಿನಲ್ಲಿ ಒಂದು ಟೀಸ್ಪೂನ್ ಸಬ್ಜಾ ಬೀಜಗಳನ್ನು ನೆನೆಸಿಟ್ಟು ಮತ್ತು ದಿನವಿಡಿ ಅದನ್ನು ಕುಡಿಯಬಹುದು.
​ಆಧುನಿಕ ಜೀವನಶೈಲಿಗೆ ತಕ್ಕಂತೆ ನಮ್ಮ ಆರೋಗ್ಯದ ಸ್ಥಿತಿಗಳು ಬದಲಾಗುತ್ತದೆ
ಬದಲಾದ ಜೀವನಶೈಲಿ, ಸರಿಯಾದ ಆಹಾರಕ್ರಮ ಪಾಲಿಸದೇ ಇರುವುದು, ದೈಹಿಕ ಶ್ರಮ ಇಲ್ಲದೆ ಇರುವುದು, ಅತಿಯಾದ ಒತ್ತಡ ಮುಂತಾದವುಗಳು ನಿಮ್ಮ ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ತೂಕ ಹೆಚ್ಚಳವನ್ನು ನಿಯಂತ್ರಿಸದಿದ್ದಲ್ಲಿ, ಅಧಿಕ ರಕ್ತದೊತ್ತಡ, ಹೃದ್ರೋಗ, ಹೆಚ್ಚಿನ ಕೊಲೆಸ್ಟ್ರಾಲ್ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ಆದ್ದರಿಂದ ನಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡುವುದು ಉತ್ತಮ. ಸಬ್ಜಾ ಬೀಜಗಳನ್ನು ಬಳಸುವ ಮೂಲಕ ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡಬಹುದು.

============================

ಸಂಗ್ರಹ: ಮನೆ ಮದ್ದುಗಳು

ಸಂ: ✒️ಅಬೂರಿಫಾನ ಕುಂದಾಪುರ


Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್