ಕಬ್ಬಿಣದಂಗಡಿ!
ಕಬ್ಬಿಣದಂಗಡಿ!
ರಬೀಉ ಬಿನುಲ್ ಖೈಸಂ(ರ) ರವರು ಮಹಾನುಭಾವರಾದ ಇಬ್ನು ಮಸ್ ಊದ್(ರ) ರವರು ಭೇಟಿಯಾಗಲು ಹೊರಟಿದ್ದರು. ದಾರಿ ಮಧ್ಯೆ ಕಬ್ಬಿಣ ಮಾರುವ ಅಂಗಡಿಯೊಂದರಲ್ಲಿ ಉರಿಯುತ್ತಿರುವ ಒಲೆಯನ್ನಿಟ್ಟು ಕಬ್ಬಿಣವನ್ನು ಹದಗೊಳಿಸುತ್ತಿದ್ದರು. ಮಹಾತ್ಮರಿಗೆ ಈ ದೃಶ್ಯ ಗೋಚರಿಸಿದಾಕ್ಷಣ ಅವರು ಪ್ರಜ್ಞಾಹೀನರಾಗಿ ಬಿದ್ದು ಬಿಟ್ಟರು. ಮರುದಿನದ ತನಕ ಅದೇ ಪ್ರಜ್ಞಾ ಹೀನ ಸ್ಥಿತಿ. ಪ್ರಜ್ಞೆ ಮರಳಿ ಬಂದ ಬಳಿಕ ಅವರೊಂದಿಗೆ ಈ ಬಗ್ಗೆ ಕೇಳಿದಾಗ ಅವರ ಉತ್ತರ ಹೀಗಿತ್ತು; "ಆ ದೃಶ್ಯ ಕಂಡಾಗ ನನಗೆ ನರಕವಾಸಿಗಳ ನರಕಜೀವನದ ಭಯಾನಕತೆ ನೆನಪಾಯಿತು!".(ಅಲ್ ಇಸ್ತಿಇದಾದು ಲಿಲ್ ಮೌತ್)
ಜುನೈದ್ ಸಖಾಫಿ ಜೀರ್ಮುಕ್ಕಿ
ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ
ಜೂನ್ 13, 2021
ಆದಿತ್ಯವಾರ, ದುಲ್ ಖಅದ್ 02, 1442
Comments
Post a Comment