ಪ್ರವಾದಿﷺ ರವರ ಪಾವನ ಬಾಯಿಯ ನೀರಿನ ಮಹತ್ವ!
ಪ್ರವಾದಿﷺ ರವರ ಪಾವನ ಬಾಯಿಯ ನೀರಿನ ಮಹತ್ವ!
ಸಹಲ್ ಬ್ನ್ ಸ'ಅದ್(ರ.ಅ) ರಿಂದ ನಿವೇದನೆ: ಖೈಬರ್ ಯುದ್ಧ ದಿನ ಪ್ರವಾದಿﷺ ಹೇಳಿದರು, "ಅಲ್ಲಾಹು ಮತ್ತು ಅವನ ರಸೂಲ್ﷺ ಪ್ರೀತಿಸುವ, ಅಲ್ಲಾಹನನ್ನು, ಅವನ ರಸೂಲ್ﷺ ರನ್ನು ಪ್ರೀತಿಸುವ ಒಬ್ಬರ ಹಸ್ತಕ್ಕೆ ನಾನು ಈ ಪತಾಕೆ ನೀಡುವೆನು. ಅವರ ನೇತೃತ್ವದಲ್ಲಿ ಅಲ್ಲಾಹು ವಿಜಯ ನೀಡುವನು. ಆ ಪತಾಕೆ ಯಾರಿಗೆ ನೀಡಬಹುದು ಎಂಬ ಕುತೂಹಲದೊಂದಿಗೆ ಜನರೆಲ್ಲಾ ಅಂದಿನ ರಾತ್ರಿ ಕಳೆದರು. ತರುವಾಯ ಪ್ರವಾದಿﷺ ಕೇಳಿದರು, "ಅಲೀ(ರ.ಅ) ಎಲ್ಲಿ?, ಜನರು; ಅವರಿಗೆ ಕಣ್ಣಿನ ಕಾಯಿಲೆ ಇದೆ. ಅವರನ್ನು ಕರೆದುಕೊಂಡು ಬನ್ನಿ." ಮಹಾನರನ್ನು ಕರೆದುಕೊಂಡು ಬಂದಾಗ ಪ್ರವಾದಿﷺ ತನ್ನ ಪಾವನ ಬಾಯಿಯ ನೀರು ಅಲೀ(ರ.ಅ) ರವರ ಕಣ್ಣಿಗೆ ಸವರಿ ದುಆಃ ಮಾಡಿದಾಗ ರೋಗ ಸಂಪೂರ್ಣ ವಾಸಿಯಾಯಿತು. ನಂತರ ಪ್ರವಾದಿﷺ ಆ ಪತಾಕೆ ಮಹಾನರಿಗೆ ಹಸ್ತಾಂತರಿಸಿದರು.
✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ ಅ'ಸ್ಸಿಂಧಿ ಗದಗ
Comments
Post a Comment