ದುನ್ಯಾದ ಸೌಂದರ್ಯ
ದುನ್ಯಾದ ಸೌಂದರ್ಯ
ಮಹಾತ್ಮರೊಬ್ಬರೊಂದಿಗೆ ಒಂದು ಪ್ರಶ್ನೆ; "ದುನ್ಯಾದಲ್ಲಿ ಒಬ್ಬನ ಸೌಂದರ್ಯವನ್ನು ಹೆಚ್ಚಿಸುವಂತಹ ಸಂಗತಿ ಯಾವುದು?". ಅವರು, "ಆತನಿಗೆ ಔನ್ನಿತ್ಯವನ್ನು ನೀಡುವ ಜ್ಞಾನವಾಗಿದೆ" ಎಂದರು.
"ಅದಿಲ್ಲದಿದ್ದರೆ ಬೇರೆ ಯಾವುದು?". "ಆತನಿಗೆ ಸುರಕ್ಷೆಯೊದಗಿಸುವ ಸಂಪತ್ತು!" ಎಂದರು.
"ಅದೂ ಇಲ್ಲದಿದ್ದರೆ..?". "ಆತನ ನ್ಯೂನ್ಯತೆಗಳನ್ನು ಮುಚ್ಚಿಡುವ ಶಿಸ್ತು" ಎಂದರು.
"ಅದೂ ಕೂಡಾ ಇಲ್ಲದಿದ್ದರೆ....?".
ಮಹಾತ್ಮರು ಹೇಳಿದರು; "ಅದ್ಯಾವುದೂ ಇಲ್ಲದಿದ್ದರೆ ಆಕಾಶದಿಂದ ಬಂದೆರಗುವ ಭೀಕರಾಗ್ನಿ ಆತನನ್ನು ಸುಟ್ಟು ಬೂದಿ ಮಾಡಲಿದೆ!".
ಜುನೈದ್ ಸಖಾಫಿ ಜೀರ್ಮುಕ್ಕಿ
ಮುದರ್ರಿಸ್,ದ್ಸಿಕ್ರಾ ಮೂಡಬಿದ್ರೆ
ಜೂನ್ 08, 2021
ಮಂಗಳವಾರ, ಶವ್ವಾಲ್ 27, 1442
Comments
Post a Comment