ಪರಿಹಾಸ್ಯ ಮಾಡುವವರಿಗೆ ನರಕವೇ ಗತಿ!
ಪರಿಹಾಸ್ಯ ಮಾಡುವವರಿಗೆ ನರಕವೇ ಗತಿ!
ಹಸನ್(ರ.ಅ) ರಿಂದ ನಿವೇದನೆ: ಪ್ರವಾದಿﷺ ಹೇಳಿದರು, ಭೂಲೋಕದಲ್ಲಿ ಮತ್ತೊಬ್ಬರನ್ನು ಪರಿಹಾಸ್ಯ(ಗೇಲಿ) ಮಾಡುತ್ತಿದ್ದ ಕಾರಣ ನರಕ ನಿವಾಸಿಗಳನ್ನು ಸ್ವರ್ಗದ ಬಾಗಿಲಿಗೆ ಕರೆಯಲಾಗುವುದು. ಅವನು ಅತ್ತ ತೆರಳುವಾಗ ಸ್ವರ್ಗದ ಬಾಗಿಲು ಮುಚ್ಚಲ್ಪಡುತ್ತದೆ. ಅವನನ್ನು ಪ್ರವೇಶಿಸಲು ಅನುಮತಿಸುವುದಿಲ್ಲ. ಅದೇ ರೀತಿ ಅವನನ್ನು ಪುನಃ ಪುನಃ ಕರೆಯಲಾಗುವುದು. ಹಾಗೆಲ್ಲಾ ಸ್ವರ್ಗದ ಬಾಗಿಲು ಮುಚ್ಚಲ್ಪಡುತ್ತದೆ. ಅವನು ಅವಮಾನದಿಂದ ಹಿಂದಿರುಗುತ್ತಾ ಇರುವನು. ಕೊನೆಗೆ ಅವನನ್ನು ತೆರೆದ ಸ್ವರ್ಗಕ್ಕೆ ಕರೆಯುವಾಗ ಅವನು ಬೇಸತ್ತು ಹತಾಶೆ, ನಿರಾಶೆಯಿಂದ ಅಲ್ಲಿಗೆ ಹೋಗಲು ಸಿದ್ಧನಾಗುವುದಿಲ್ಲ." [ಬೈಅಖಿ]
✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ ಅ'ಸ್ಸಿಂಧಿ ಗದಗ
Comments
Post a Comment