ಅಲ್ಲಾಹನ ಮಾರ್ಗದಲ್ಲಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ
ಅಲ್ಲಾಹನ ಮಾರ್ಗದಲ್ಲಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ
(عَنْ أَنَسِ بْنِ مَالِكٍ رضي الله عنه، أَنَّ رَجُلاً كَانَ عِنْدَ النَّبِيِّ صلى الله عليه وسلم فَمَرَّ بِهِ رَجُلٌ فَقَالَ: يَا رَسُولَ اللَّهِ إِنِّي لأُحِبُّ هَذَا. فَقَالَ لَهُ النَّبِيُّ صلى الله عليه وسلم: أَعْلَمْتَهُ. قَالَ لاَ، قَالَ:أَعْلِمْهُ. قَالَ فَلَحِقَهُ فَقَالَ "إِنِّي أُحِبُّكَ فِي اللَّهِ". فَقَالَ "أَحَبَّكَ الَّذِي أَحْبَبْتَنِي لَهُ".رواه-أبو داوود/٥١٢٥)
ಅನಸ್ ಬುನ್ ಮಾಲಿಕ್ (ರ.ಅ) ರಿಂದ ವರದಿ- ಒಬ್ಬರು ಪ್ರವಾದಿ ﷺ ರವರ ಹತ್ತಿರದಲ್ಲಿದ್ದಾಗ ಇನ್ನೊಬ್ಬ ವ್ಯಕ್ತಿಯು ಅವರ ಮೂಲಕ ಹಾದುಹೋದರು.
ಆವಾಗ ಈ ವ್ಯಕ್ತಿ ಹೇಳಿದರು: ಓ ಅಲ್ಲಾಹನ ರಸೂಲರೇ (ﷺ) ನಾನು ಆ ಹೋದ ಮನುಷ್ಯನನ್ನು ಪ್ರೀತಿಸುತ್ತೇನೆ.
ಪ್ರವಾದಿ (ﷺ) ರು ಕೇಳಿದರು: ನೀವು ಅದನ್ನು ಅವರಿಗೆ ತಿಳಿಸಿದ್ದೀರಾ?
ಅವರು ಉತ್ತರಿಸಿದರು: ಇಲ್ಲ.
ಪ್ರವಾದಿ (ﷺ) ಹೇಳಿದರು: ಅವರಿಗೆ ತಿಳಿಸಿ.
ನಂತರ ಅವನು ಅವರ ಬಳಿಗೆ ಹೋಗಿ ಹೇಳಿದರು: "ಅಲ್ಲಾಹನ ಮಾರ್ಗದಲ್ಲಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ".
ಅವರು ಹೇಳಿದರು: "ನೀವು ಯಾರಿಗೆ ಬೇಕಾಗಿ ನನ್ನನ್ನು ಪ್ರೀತಿಸಿದ್ದೀರೋ, ಅವನು ನಿಮ್ಮನ್ನು ಪ್ರೀತಿಸಲಿ".
(ಹದೀಸ್- ಇಮಾಂ ಅಬೂ ದಾವೂದ್)
▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪
ಮುಹಮ್ಮದ್ ತಾಜುದ್ದೀನ್ ಸಖಾಫಿ
(ಖತೀಬರು- ಮುಹ್ಯದ್ಧೀನ್ ಜುಮಾ
ಮಸೀದಿ ಪರಪ್ಪು, ಗೇರುಕಟ್ಟೆ)
[04-06-2021,ಶುಕ್ರವಾರ]
{22-ಶವ್ವಾಲ್-1442}
✳✳✳✳✳✳✳✳✳✳
Comments
Post a Comment