ಮದುವೆಯ ನಂತರ ಈ ಪ್ರಾರ್ಥನೆ ನಡೆಸಲಿ..
ಮದುವೆಯ ನಂತರ ಈ ಪ್ರಾರ್ಥನೆ ನಡೆಸಲಿ..
(عَنْ عَمْرِو بْنِ شُعَيْبٍ، عَنْ أَبِيهِ، عَنْ جَدِّهِ رضي الله عنهم، عَنِ النَّبِيِّ صلى الله عليه وسلم قَالَ: إِذَا تَزَوَّجَ أَحَدُكُمُ امْرَأَةً أَوِ اشْتَرَى خَادِمًا فَلْيَقُلِ "اللَّهُمَّ إِنِّي أَسْأَلُكَ خَيْرَهَا وَخَيْرَ مَا جَبَلْتَهَا عَلَيْهِ وَأَعُوذُ بِكَ مِنْ شَرِّهَا وَمِنْ شَرِّ مَا جَبَلْتَهَا عَلَيْهِ وَإِذَا اشْتَرَى بَعِيرًا فَلْيَأْخُذْ بِذِرْوَةِ سَنَامِهِ وَلْيَقُلْ مِثْلَ ذَلِكَ".رواه-أبو داوود/٢١٦٠)
ಅಮ್ರ್ ಬುನ್ ಶುಐಬ್(ರ.ಅ) ರಿಂದ ವರದಿ- ಪ್ರವಾದಿ ﷺ ಹೇಳಿದರು: ನಿಮ್ಮಲ್ಲಿ ಒಬ್ಬ ಪುರುಷನು ಮದುವೆಯಾದರೆ ಅಥವಾ ಸೇವಕನನ್ನು ಖರೀದಿ ಮಾಡಿದರೆ ಅವರು ಈ ರೀತಿಯಲ್ಲಿ ಹೇಳಲಿ:
اللَّهُمَّ إِنِّي أَسْأَلُكَ خَيْرَهَا وَخَيْرَ مَا جَبَلْتَهَا عَلَيْهِ وَأَعُوذُ بِكَ مِنْ شَرِّهَا وَمِنْ شَرِّ مَا جَبَلْتَهَا عَلَيْهِ
{ಓ ಅಲ್ಲಾಹನೇ, ಅವಳ ಒಳ್ಳೆಯತನವನ್ನು ಮತ್ತು ನೀನು ಅವಳನ್ನು ಯಾವ ಸ್ವಭಾವದಲ್ಲಿ ಸೃಷ್ಟಿಸಿದೆ, ಅದರ ಒಳ್ಳೆಯತನದ ಬಗ್ಗೆ ನಾನು ನಿನ್ನೊಂದಿಗೆ ಕೇಳುತ್ತೇನೆ. ಅವಳ ದುಷ್ಟತನದಿಂದ ಮತ್ತು ನೀನು ಅವಳನ್ನು ಯಾವ ಸ್ವಭಾವದಲ್ಲಿ ಸೃಷ್ಟಿಸಿದೆ, ಅದರ ಕೆಡುಕಿನಿಂದ ನಾನು ನಿನ್ನೊಂದಿಗೆ ಆಶ್ರಯಿಸುತ್ತೇನೆ}
ಯಾರಾದರೂ ಒಂಟೆಯನ್ನು ಖರೀದಿಸಿದರೆ, ಒಂಟೆಯ ಬೆನ್ನಿನ ಮೇಲೆ ಕೈಯಿಟ್ಟುಕೊಂಡು ಅವನು ಹೀಗೆಯೇ ಹೇಳಲಿ.
(ಹದೀಸ್- ಇಮಾಂ ಅಬೂ ದಾವೂದ್)
▪ಒಳಿತನ್ನು ಕಲಿಯಲು ಅಲ್ಲಾಹನು ನಮಗೆ ಅನುಗ್ರಹಿಸಲಿ. ಆಮೀನ್🤲▪
ಮುಹಮ್ಮದ್ ತಾಜುದ್ದೀನ್ ಸಖಾಫಿ
(ಖತೀಬರು- ಮುಹ್ಯದ್ಧೀನ್ ಜುಮಾ
ಮಸೀದಿ ಪರಪ್ಪು, ಗೇರುಕಟ್ಟೆ)
[01-06-2021,ಮಂಗಳವಾರ]
{19-ಶವ್ವಾಲ್-1442}
✳✳✳✳✳✳✳✳✳✳
Comments
Post a Comment