ಖಬರಸ್ಥಾನದಿಂದ ಕೆಲವು ಆಲೋಚನೆಗಳು

ಖಬರಸ್ಥಾನದಿಂದ ಕೆಲವು ಆಲೋಚನೆಗಳು


ಖಬರೊಂದರ ದಫನ ಕಾರ್ಯ ಮುಗಿಸಿ ಮರಳುವಾಗ ತಟ್ಟನೆ ಆಲೋಚನೆಯೊಂದು ಮನದೊಳಗೆ ತೀವ್ರ ಭಯ ಮತ್ತು ಆತಂಕವನ್ನು ಮೂಡಿಸಿತು . 

ಕಾರಣ ಬೇರೇನಿರಲಿಲ್ಲ ,
ಈ ಕೋವಿಡ್ ಕಾಲ ಮುಗಿಯುವ ಮೊದಲೇ ಮರಣ ಬಂದು ಬಿಡುವುದೋ ಎಂಬ ಆತಂಕ . 

ಸಹಸ್ರಾರು ಸತ್ಯ ವಿಶ್ವಾಸಿಗಳು ಸಂಗಮಿಸುವ ಜನಾಝ ನಮಾಝ್ ಇರಲಿಕ್ಕಿಲ್ಲ .
ಕೊನೆಯದಾಗಿ ಪವಿತ್ರ ಮಸೀದಿಯೊಳಗೆ ಕೊಂಡೊಯ್ಯುವ ಸಾಧ್ಯತೆಯಿಲ್ಲ .
ಮಸೀದಿಯೊಳಗೆ ಕುಟುಂಬಿಕರ , ಆಪ್ತರ , ಪರಿಚಯಸ್ಥರ ಬಳಿ ಮಸೀದಿ ಇಮಾಮರು ನಮಗಾಗಿ ಕೇಳುವ ಕೊನೆಯ ಕ್ಷಮಾಪಣೆಯ ಕಾರ್ಯ ನಡೆಯಲಿಕ್ಕಿಲ್ಲ . 

ನಮ್ಮ ಬಾಧ್ಯತೆಗಳನ್ನು ವಹಿಸಿಕೊಳ್ಳುವ ನಮ್ಮವರ ಮಾತುಗಳಿಗೆ ಅವಕಾಶವಿರಲಿಕ್ಕಿಲ್ಲ .
ಸಾತ್ವಿಕರ ಸೂಫಿವರ್ಯರ ಸಾದಾತುಗಳ ಪೈಕಿ ಹೆಚ್ಚಿನವರ ಸಾನಿಧ್ಯ ಉಂಟಾಗಲಿಕ್ಕಿಲ್ಲ .
ಬರಲಾಗದ ಕಾರಣ ಅವರ ಪುಣ್ಯ ಪ್ರಾರ್ಥನೆಗಳ ಧನ್ಯತೆ ನೇರವಾಗಿ ಸಿಗಲಿಕ್ಕಿಲ್ಲ . 

ಕೊನೆಯದಾಗಿ ನಮ್ಮ ಮೇಲೆ ಹಿಡಿ ಮಣ್ಣು ಹಾಕಲಾಗುವಾಗ ತಸ್ಬೀತ್ ಹೇಳುವ ಜನರೂ ವಿ‌ರಳವಿರಬಹುದು ....
ಅದೆಂತಹ ಯಾತ್ರೆಯಾಗಿರಬಹುದು ಅದು !!!! 

ಇಕ್ಕೆಲಗಳಲ್ಲಿರುವ ಖಬರುಗಳನ್ನು ನೋಡಿದಾಗ ಅದರಲ್ಲಿರುವವರೊಂದಿಗೆ ಮನಸ್ಸು ಅರಿಯದೆ ಮಂತ್ರಿಸಿತು .... 

" ನೀವೆಷ್ಟು ಭಾಗ್ಯವಂತರು .. ! ಜನಾಝವೊಂದಕ್ಕೆ ಸಿಗಬೇಕಾದ ಸಕಲ ಗೌರವಗಳು ಮತ್ತು ಸೌಭಾಗ್ಯಗಳನ್ನು ಪಡೆದು ಯಾತ್ರೆಯಾದಿರಿ . ನೂರಾರು ಮಂದಿ ನಿಮಗೆ ಜನಾಝ ನಮಾಝ್ ನಿರ್ವಹಿಸಿರಬಹುದು . ಪ್ರಾರ್ಥನೆ ನಡೆಸಿರಬಹುದು . ಅವರಲ್ಲೊಬ್ಬರು ಗದ್ಗದಿತರಾಗಿ ನಿಮಗಾಗಿ ಕ್ಷಮಾಪಣೆ ಕೋರಿರಬಹುದು . ಅದನ್ನು ಕೇಳಿ ಕೆಲವರಾದರೂ ನಿಮಗಾಗಿ ಕಣ್ಣೀರಿಟ್ಟು ಪ್ರಾರ್ಥಿಸಿರಬಹುದು ... " 

ನಿಮಗಿಂತ ನಾನಾಗಿದ್ದರೆ ..... 

ಕೊನೆಯ ಮಾತು ಮನದೊಳಗೆ ಮೂಡಿದಾಕ್ಷಣ ಆಶ್ಚರ್ಯವೆಂಬಂತೆ ಹದೀಸೊಂದು ನೆನಪಿಗೆ ಬಂತು  . 

" ಒಂದು ಕಾಲ ಬರಲಿದೆ .. ಅಂದು ಖಬರಿನ ಸಮೀಪದಲ್ಲಿ ನಡೆದು ಹೋಗುವ ಓರ್ವ ವ್ಯಕ್ತಿ  , ಆ ಖಬರಿನಲ್ಲಿ ಮಲಗಿರುವವನು ನಾನಾಗಿದ್ದರೆ ಪರವಾಗಿರಲಿಲ್ಲ ಎಂದು ಬಯಸಲಿರುವನು " 

ಅಲ್ಲಾಹ್ .....
ನೀನೇ ಅಭಯ .
ಈಮಾನಿನೊಂದಿಗಿನ ಮರಣ ದಯಪಾಲಿಸು ರಬ್ಬೇ ... 

ಆಮೀನ್ ಯಾ ರಬ್ಬಲ್ ಆಲಮೀನ್ 

✍️ ಭಾವಾನುವಾದ : ಅಬೂ ಝಹ್ರಾನ್

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್