ಮರಣಹೊಂದಿದವರ ಕುರಿತು ಒಳ್ಳೆಯದು ಮಾತ್ರ ಹೇಳಿರಿ!


ಮರಣಹೊಂದಿದವರ ಕುರಿತು ಒಳ್ಳೆಯದು ಮಾತ್ರ ಹೇಳಿರಿ!

ಅನಸ್(ರ.ಅ) ರಿಂದ ನಿವೇದನೆ: ಒಂದು ಮಯ್ಯಿತ್ ನೊಂದಿಗೆ ಜನರು ಹಾದುಹೋಗುತ್ತಿದ್ದಾಗ ಕೆಲವರು ಆ ಮರಣ ಹೊಂದಿದ ವ್ಯಕ್ತಿಯನ್ನು ಹೊಗಳಿದರು. ಆಗ ಪ್ರವಾದಿﷺ ಹೇಳಿದರು, "ಆತನಿಗೆ ಅದು ನಿಶ್ಚಿತವಾಗಲಿ." ಮತ್ತೊಮ್ಮೆ ಒಂದು ಮಯ್ಯಿತ್ ನೊಂದಿಗೆ ಜನರು ನಡೆದು ಹೋಗುವಾಗ ಅದರ ಕುರಿತು ಕೆಲವರು ದೂಷಿಸಿದರು. ಆಗಲೂ ಪ್ರವಾದಿﷺ ಹೇಳಿದರು, "ಆತನಿಗೆ ಅದು ನಿಶ್ಚಿತ." ಇದು ಕೇಳಿದಾಗ ಉಮರ್(ರ.ಅ) ಕೇಳಿದರು, "ಏನು ನಿಶ್ಚಿತ ನೆಬಿಯವರೇﷺ? ಆಗ ಪ್ರವಾದಿﷺ ಹೇಳಿದರು, "ನೀವು ಹೊಗಳಿದವನಿಗೆ ಸ್ವರ್ಗ ನಿಶ್ಚಿತ. ಅದೇ ರೀತಿ ‌ನೀವು ದೂಷಿಸಿದವನಿಗೆ ನರಕ ನಿಶ್ಚಿತವಾಗಿದೆ. ನೀವು ಭೂಮಿಯಲ್ಲಿ ಅಲ್ಲಾಹನ ಸಾಕ್ಷಿಗಳು ಆಗಿರುವಿರಿ." [ಬುಖಾರಿ: 1367]

✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಅ'ಸ್ಸಿಂಧಿ ಗದಗ

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್