ಇಮಾಮರು ಹೇಳಿದ ಚರಿತ್ರೆಗಳು: ಭಾಗ-01-ತೇಲಿ ಬಂದ ಮಗು.

01-ಎರಡು ಪಿಶಾಚಿಗಳ ಭೇಟಿ!! 

      ಒಮ್ಮೆ ಎರಡು ಪಿಶಾಚಿಗಳು ಪರಸ್ಪರ ಭೇಟಿಯಾದವು. ಒಂದು ಪಿಶಾಚಿಯು ಸತ್ಯವಿಶ್ವಾಸಯೊಂದಿಗೂ, ಎರಡನೇ ಪಿಶಾಚಿಯು ಆತ್ಮವಿಶ್ವಾಸಯೊಂದಿಗೂ ಜೀವಿಸುತ್ತಿತ್ತು. ಎರಡನೇ ಪಿಶಾಚಿಯು ದೃಢ ಕಾಯ ಹಾಗೂ ಎಣ್ಣೆಮಿಶ್ರಿತ ಶರೀರವನ್ನು ಹೊಂದಿತ್ತು ಹಾಗೂ ವಸ್ತ್ರವನ್ನು ಧರಿಸಿತ್ತು. ಆದರೆ, ಒಂದನೇ ಪಿಶಾಚಿಯು ಎರಡನೇ ಪಿಶಾಚಿಗೆ ಹೋಲಿಸಿದರೆ ಸಂಪೂರ್ಣ ಭಿನ್ನವಾಗಿತ್ತು. ಅದು ಯಾವುದೇ ವಸ್ತ್ರಧಾರಣೆಯಿಲ್ಲದೆ, ಸಣಕಲು ದೇಹವನ್ನು ಹೊಂದಿತ್ತು.
     ದೃಢಕಾಯ ಶರೀರದ ಪಿಶಾಚಿಯು ಸಷಕಲು ಪಿಶಾಚಿಯೊಂದಿಗೆ ಕೇಳಿತು. "ಓ ಮಿತ್ರನೇ, ಏನಿದು ನಿನ್ನ ಅವಸ್ಥೆ! ತಿನ್ನಲೂ, ಧರಿಸಲೂ ಏನೂ ಸಿಗದ ದಾರಿದ್ಯ್ರವಂತನಂತೆ ಕಾಣುತ್ತಿದ್ದಿಯಲ್ಲಾ?" ಆಗ ಒಂದನೇ ಪಿಶಾಚಿಯು ಹೇಳಿತು. "ನನ್ನ ಸಹವಾಸಿಯು ದೈವಭಕ್ತನಾಗಿದ್ದಾನೆ. ಅವನು ಏನನ್ನಾದರೂ ಕುಡುಯುವಾಗ ಅಲ್ಲಾಹನ ನಾಮವನ್ನು ಉಚ್ಛರಿಸುವನು. ಇದರಿಂದ ನಾನು ದಾಹದಿಂದ ಬಳಲುವೆನು. ತಿನ್ನುವಾಗಲು "ಬಿಸ್ಮಿಲ್ಲಾಹ್ " ಎಂದು ಹೇಳುತ್ತಾನೆ. ಅಂದೂ ಸಂಪೂರ್ಣವಾಗಿ ಹಸಿವಿನಿಂದ ಕಂಗಾಲಾಗುವೆನು. ಮಾತ್ರವಲ್ಲ, ವಸ್ತ್ರಧಾರಣೆಯ ಸಮಯದಲ್ಲೂ ದೈವ ಸ್ಮರಣೆ ಮಾಡುವನು. ಇದರಿಂದ ನಾನು ನಗ್ನನಾಗಿ ತೀರುವೆನು‌. ಎಣ್ಣೆ ಹಚ್ಚುವ ಸಾಮಾರ್ಥವೂ ತಥೈವ!"
         ಇದನ್ನು ಆಲಿಸಿದ ಎರಡನೇ ಪಿಶಾಚಿಗೆ ತನ್ನ ಮಿತ್ರನ ಮೇಲೆ ಕರುಣೆ ಮೂಡಿತು. ಅದು ಈ ರೀತಿ ಹೇಳಿತು. "ಓ ನನ್ನ ಮಿತ್ರಾ, ನಿನ್ನ ಅವಸ್ಥೆಯು ಶೋಚನೀಯವೇ ಸರಿ. ನಿನ್ನ ಸಹವಾಸಿಗೆ ಸಂಪೂರ್ಣ ಭಿನ್ನವಾಗಿದ್ದಾನೆ ನನ್ನ ಜತೆಗಾರನು ಅವನ ಎಲ್ಲಾ ಕಾರ್ಯದಲ್ಲೂ ನಾನು ಜೊತೆಗೂಡಿಕೊಳ್ಳುವೆನು."
(ಇಹ್ ಯಾ -ಇಮಾಂ ಗಝ್ಝಾಲಿ(ರ))
            ಈ ಚರಿತ್ರೆಯು ಪ್ರತಿಯೊಂದರಲ್ಲೂ ಅಲ್ಲಾಹನ ಸ್ಮರಣೆ ಮಾಡಬೇಕೆಂಬುವುದನ್ನು ಸೂಚಿಸುತ್ತದೆ. ಹಾಗಾದರೆ ನಮ್ಮ ಸರ್ವ ಕಾರ್ಯದಲ್ಲೂ ಸಮೃದ್ದಿಯುಂಟಾಗುವುದು‌.

02-ಉಪದೇಶ ಹೇಗಿರಬೇಕು?:

ನಡುರಾತ್ರಿಯ ಸಮಯ! ನಿರ್ಜನವಾದ ಮದೀನದ ದಾರಿಗಳು. ನಿಶ್ಶಬ್ಧ ವಾತಾವರಣ. ಎಂದಿನಂತೆ ಧೀರ ಖಲೀಫಾ ಉಮರ್ ರಳಿಯಲ್ಲಾಹು ಅನ್‌ಹು ಕೌತುಕ ಮುಖಛಾಯೆಯೊಂದಿಗೆ, ಗಾಂಭೀರ್ಯ ಯುತ ಹೆಜ್ಜೆಗಳನ್ನು ಹಾಕುತ್ತಾ ಒಂಟಿಯಾಗಿ ನಡೆಯುತ್ತಿದ್ದಾರೆ. ಆ ಸಂದರ್ಭ ಎಲ್ಲಿಂದಲೋ ಕೇಳಿ ಬಂದ ಗಾನಮೇಳದ ಶಬ್ಧವೊಂದು ಖಲೀಫರ ಕಿವಿಗೆ ಅಪ್ಪಳಿಸಿತು. ಇದ್ದಕ್ಕಿದ್ದಂತೆ ಮಧ್ಯರಾತ್ರಿಯ ಸಮಯದಲ್ಲಿ ಕೇಳಿಬಂದಂತಹ ಶಬ್ದದಿಂದ ಖಲೀಫರ ಚಿಂತನಾ ಲೋಕದ ಭಾರವು ಹೆಚ್ಚಿತು. ಖಲೀಫರು ಶಬ್ಧ ಕೇಳಿ ಬಂದ ಮನೆಯನ್ನು ಗುರಿಯಾಗಿಸಿಕೊಂಡು ತನ್ನ ಹೆಜ್ಜೆಯನ್ನು ಮುಂದಿರಿಸಿದರು.
          ಸೌಂದರ್ಯವಂತೆಯಾದ ಬೆಡಗಿ, ಹತ್ತಿರದಲ್ಲೋರ್ವ ಗಂಡಸು! ಮಧ್ಯ ತುಂಬಿದ ಗ್ಲಾಸುಗಳು. ಮಧ್ಯಪಾನದ ನಶೆಯಲ್ಲಿ ಅವರು ಕುಣಿಯುತ್ತಿದ್ದಾರೆ. ಅವರೊಂದಿಗೆ ಅಲಂಕಾರಿಕ ಜವಾಬ್ದಾರಿಯನ್ನು ಹೊತ್ತ ತರುಣಿ. ಈ ಎಲ್ಲಾ ದೃಶ್ಯಗಳನ್ನು ಕಂಡ ಖಲೀಫರ ರೋಮಗಳು ರೋಷದಿಂದ ಸೆಟೆದೆದ್ದವು. ಇಸ್ಲಾಮಿಕ್ ಸಾಮ್ರಾಜ್ಯದ ಅಧಿಪತಿ, ಅಧಾರ್ಮಿಕತೆಯ ವಿರುದ್ಧ ಸೆಟೆದೆದ್ದು ನಿಂತ ಧೀರ ನಾಯಕ. ಅನಾಚಾರದ ಭದ್ರಕೋಟೆಯನ್ನೇ ನಡುಗಿಸಿದ ಅಪ್ಪಟಶೂರ ನೇರವಾಗಿ ಮನೆಯ ಆವರಣದ ಮೇಲ್ಭಾಗದಿಂದ ನೆಗೆದು, ಮನೆಯೊಳಗೆ ಪ್ರವೇಶಿಸಿದರು. ಇದರಿಂದ ಗಾನವೇಳವು ಸ್ಥಗಿತಗೊಂಡಿತು. ಅನಿರೀಕ್ಷಿತವಾಗಿ ಖಲೀಫರನ್ನು ಕಂಡವಳು ನಿಂತಲ್ಲೇ ಸ್ತಂಬ್ಧರಾದರು. 
         "ಅಲ್ಲಾಹನ ಕಡು ವೈರಿಯೇ, ಏನಿದು ಮಾಡುತ್ತಿರುವುದು!?. ಅರ್ಧರಾತ್ರಿಯಲ್ಲಿ ಮದ್ಯ ಹಾಗೂ ಹೆಣ್ಣನ್ನು ಬಳಸಿ, ನೀನು ಮಾಡುತ್ತಿರುವ ಈ ನೀಚಕೃತ್ಯವನ್ನು ಅಲ್ಲಾಹನು ಗಮನಿಸುವುದಿಲ್ಲ ಎಂದು ಭಾವಿಸಿದ್ದೀಯಾ?" ಸಿಂಹಘರ್ಜನೆಯ ರೂಪದಲ್ಲಿದ್ದ ಖಲೀಫರ ಗಾಂಭೀರ್ಯತೆಯಿಂದ ಕೂಡಿದ ಈ ಮಾತುಗಳು ಅಲ್ಲಿಯ ಸಂಭ್ರಮದ ವಾತಾವರಣವನ್ನು ಸ್ಮಶಾನ ಲೋಕವಾಗಿ ಮಾರ್ಪಡಿಸಿತು. ಆದರೆ, ಖಲೀಫರ ರೋಷಭರಿತ ಮಾತುಗಳನ್ನು ಆಲಿಸಿದ ಮನೆಯೊಡೆಯನು ಒಂದಲ್ಪವೂ ವಿಚಲಿತನಾಗಲಿಲ್ಲ. ಆತನು ಖಲೀಫರನ್ನು ತನ್ನ ದಿಟ್ಟ ಮಾತುಗಳಿಂದ ದೃಡವಾಗಿ ಎದುರಿಸಿದನು. ಆತನು ಹೇಳಿದನು "ಓ ಉಮರ್ರವರೇ, ನಾನು ಮಾಡಿದ್ದು ಒಂದು ತಪ್ಪಾದರೆ, ತಮ್ಮಿಂದ ಸಂಭವಿಸಿದ್ದು ಮೂರು ತಪ್ಪುಗಳಾಗಿವೆ."
           "ನನ್ನಿಂದ ಮೂರು ತಪ್ಪುಗಳಾ! ಏನಾಗಿವೆ ಆ ತಪ್ಪುಗಳು?" ಶಾಂತಚಿತ್ತರಾಗಿ ಖಲೀಫರು ಪ್ರಶ್ನಿಸಿದರು. "ತಮ್ಮಿಂದ ಸಂಭವಿಸಿದ ತಪ್ಪುಗಳನ್ನು ನಾನು ಸಂಕ್ಷಿಪ್ತವಾಗಿ ವಿವರಿಸುವೆನು. ಅದರ ನಂತರ ತಾವು ನನ್ನ ಬಗ್ಗೆ ತೀರ್ಮಾನವನ್ನು ಕೈಗೊಳ್ಳಿ." ಯಾವುದೇ ರೀತಿಯ ದುಷ್ಟಶಕ್ತಿಗಳನ್ನು ಲೆಕ್ಕಿಸದ ಖಲೀಫರ ನಿರ್ಭಯ ಮನಸ್ಸು ದೈವಭಯದಿಂದ ತಲ್ಲಣಗೊಂಡಿತು. ಖಲೀಫರ ಕುತೂಹಲಕರವಾದ ನೋಟವು ಮನೆಯೊಡೆಯನ ತುಟಿಗಳ ಮೇಲೆ ಬೀರಿತು. "ಓ ಉಮರ್ರವರೇ!! ತಾವು ರಹಸ್ಯ ಕಾರ್ಯಚರಣೆಗೆ ಇಳಿದದ್ದಾಗಿದೆ ತಮ್ಮ ಮೊದಲ ತಪ್ಪು ಅಲ್ಲಾಹನು ಅದನ್ನು ನಮ್ಮ ಮೇಲೆ ನಿರ್ಭಂದಿಸಿದ್ದಾನೆ."
"ತಮ್ಮ ಎರಡನೇ ತಪ್ಪು, ಗೋಡೆ ಹಾರಿ ಮನೆಯೊಳಗೆ ಪ್ರವೇಶಿಸಿದ್ದಾಗಿದೆ."
"ತಮ್ಮ ಮೂರನೇ ತಪ್ಪು, ತಾವು ತಮ್ಮ ಮನೆಯೊಳಗೆ ಪ್ರವೇಶಿಸಿದಾಗ ಯಾವುದೇ ರೀತಿಯ ಪ್ರವೇಶಾನುಮತಿಯನ್ನು ಕೇಳದಿರುವುದಾಗಿದೆ. ಅನುಮತಿ ಹಾಗೂ ಸಲಾಂ ಹೇಳದೆ ಅನ್ಯರ ಮನೆಯೊಳಗೆ ಪ್ರವೇಶಿಸುವುದು ಧರ್ಮಬಾಹಿರವಾಗಿದೆ ಎಂದು ಅಲ್ಲಾಹನು ಆದೇಶಿಸಿಲ್ಲವೇ?"
ಈ ರೀತಿಯಾಗಿ ಮನೆಯೊಡೆಯನು ಖಲೀಫರ ಮೂರು ತಪ್ಪುಗಳನ್ನು ಸರಾಗವಾಗಿ ಅವರ ಮುಂದೆ ವಿವರಿಸಿದನು. ತನ್ನ ಮೇಲಿರುವ ಮುರು ಆರೋಪವನ್ನು ಕೇಳಿ, ಖಲೀಫರ ಮುಖವು ವಿವರ್ಣಗೊಂಡಿತು‌. ತಪ್ಪಿತಸ್ಥ ಮುಖಭಾವದೊಂದಿಗೆ ಖಲೀಫರು ಹೇಳಿದರು "ನಾನು ನಿನಗೆ ಕ್ಷಮಾಪಣೆ ನೀಡುವೆನು. ಬದಲಾಗಿ ನೀನು ಮಾಡುವ ಒಳಿತು ಯಾವುದು"
"ಅಲ್ಲಾಹನೇ ಸತ್ಯ, ಓ ಉಮರ್ರವರೇ, ತಾವು ನನಗೆ ಕ್ಷಮಾಪಣೆ ನೀಡುವುದಾದರೆ ಅದಕ್ಕೆ ಪ್ರತಿಯಾಗಿ ನಾನು ಈ ರೀತಿಯಾದ ಯಾವ ತಪ್ಪುಗಳನ್ನು ಮರುಕಳಿಸುವುದಿಲ್ಲ. ಅವುಗಳಿಂದ ನಾನು ಸಂಪೂರ್ಣವಾಗಿ ಮುಕ್ತನಾಗುವೆ" ಎಂದು ಮನೆಯೊಡೆಯನು ಭಿನ್ನವಿಸಿದಾಗ, ಖಲೀಫರು ಆತನಿಗೆ ಕ್ಷಮಾಪಣೆಯನ್ನು ನೀಡಿ, ಅಲ್ಲಿಂದ ಮರಳಿದರು. 
(ಇಹ್ಯಾ ಉಲೂಮಿದ್ದೀನ್ - ಇಮಾಂ ಗಝ್ಝಾಲಿ (ರ))
      ಪ್ರಸ್ತುತ ಘಟನೆಯ ಮೂಲಕ ನಾವು ತಿಳಿಯಬೇಕಾದ ಒಂದು ನೀತಿಯುತ ಪಾಠವಿದೆ. ಯಾವೊಬ್ಬನಿಗೂ ನಾವು ಉಪದೇಶಿಸಲು ಮುನ್ನುಗ್ಗುವಾಗ ಬಹಳ ತಂತ್ರಪೂರ್ವಕ ಹಾಗೂ ದೂರ ದೃಷ್ಟಿಯುತ ಹೆಜ್ಜೆಗಳನ್ನಿಡಬೇಕು. ನಮ್ಮಿಂದ ಉಪದೇಶಿಸಲ್ಪಡುವವನು ನಮ್ಮ ಕೊರತೆಯನ್ನು ಹೇಳಿಸುವ ಪರಿಸ್ಥಿತಿಯನ್ನು ನಮ್ಮ ಕೈಯ್ಯಾರೆ ನಾವು ಉಂಟುಮಾಡಬಾರದು.

ಮೂಲ.ಲೇಖಕರು:
ಮುಹಮ್ಮದ್ ಪಕ್ಷಿಕೆರೆ

ಸಂಗ್ರಹ:
ಮುಹಮ್ಮದ್ ಹುಸೇನ್ ಮತ್ತಿಮನೆ

Copyright©
NOOR-UL-FALAH ISLAMIC ORGANIZATION(R) 

Comments

Popular posts from this blog

ಆರು ಮತ್ತು ಐದು

ಮೂಸಾ ನಬಿ(ಅ) ಮತ್ತು ಫಿರ್‌ಔನ್

ನಸೀಹಾಳ ನಸೀಹತ್