ಇಸ್ಲಾಮ್ ಮದುವೆಗೆ ಪ್ರಾಧಾನ್ಯತೆ ಕಲ್ಪಿಸಿದೆ
ಇಸ್ಲಾಮ್ ಮದುವೆಗೆ ಪ್ರಾಧಾನ್ಯತೆ ಕಲ್ಪಿಸಿದೆ. ಪ್ರವಾದಿﷺರವರು ಮದುವೆ ಮಾಡಿಕೊಳ್ಳುವುದೆಂದರೆ ಧರ್ಮದ ಅರ್ಧ ಭಾಗವನ್ನು ಅಳವಡಿಸಿಕೊಂಡಂತೆ ಎಂದು ಸಾರಿದ್ದಾರೆ. ಖ್ಯಾತ ಸಹಾಬಿ ಅನಸ್ ರಳಿಯಲ್ಲಾಹು ಅನ್‌ಹುರವರು ವರದಿ ಮಾಡಿರುವ ಹದೀಸೊಂದರಲ್ಲಿ ಹೀಗಿದೆ;
ಒಬ್ಬ ವ್ಯಕ್ತಿ ವಿವಾಹದಲ್ಲಿ ಏರ್ಪಟ್ಟರೆ (ಮದುವೆ ಮಾಡಿಕೊಂಡರೆ) ಅವನು ಧರ್ಮದ ಅರ್ಧಾಂಶವನ್ನು ಪೂರ್ತಿಕರಿಸಿದಂತೆ ಆದ್ದರಿಂದ ಅವನು ಉಳಿದ ಅರ್ಧಾಂಶದ ಕುರಿತು ಅಲ್ಲಾಹನನ್ನು ಭಯಪಡಬೇಕಾಗಿದೆ.
ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜೀವನ ಚರಿತ್ರೆ, ಹದೀಸ್ ವಚನಗಳನ್ನು ಕೇಳಿ ಹೇಳಿ ದುಃಖಿಸುವ ಮತ್ತು ಹೆಮ್ಮೆ ಪಡುವುದರ ಜೊತೆಗೆ ಆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಜೀವನ ಮಾದರಿ ಅನುಸರಿಸಿ ಪರಿಶುದ್ದ ಮುಸ್ಲಿಮರಾಗಲು ಪ್ರಯತ್ನಿಸೋಣ. ಅಲ್ಲಾಹು ತೌಫೀಕ್ ನೀಡಲಿ.
ಅಲ್ಲಾಹನು ನಮ್ಮೆಲ್ಲರ ಸತ್ಕರ್ಮಗಳನ್ನು ಸ್ವೀಕರಿಸಲಿ ಹಾಗೂ ಎಲ್ಲಾ ವಿಪತ್ತುಗಳಿಂದ ನಮ್ಮನ್ನು ಕಾಪಾಡಲಿ
آمیـــــــــــــن یارب العالمین
ಕೆಎಂ ಜಲೀಲ್ ಕುಂದಾಪುರ
Copyright©
NOOR-UL-FALAH ISLAMIC ORGANIZATION(R)
Comments
Post a Comment