ಮಲಕ್ ರಿಝ್‌ವಾನ್ (ಅ) ರನ್ನು ಬೇಟಿಯಾದ ಹಝ್ರತ್ ಉಮರ್ (ರ) ರ ದಾಸಿ
ಮಲಕ್ ರಿಝ್‌ವಾನ್ (ಅ) ರನ್ನು ಬೇಟಿಯಾದ ಹಝ್ರತ್ ಉಮರ್ (ರ) ರ ದಾಸಿ ✍ಯೂಸುಫ್ ನಬ್‌ಹಾನಿ ಕುಕ್ಕಾಜೆ ▪ ಇಸ್ಲಾಮಿನ ಎರಡನೇ ಖಲೀಫಾ ಹಝ್ರತ್ ಉಮರ್ ಬಿನ್ ಅಲ್ ಖತ್ತಾಬ್ (ರ) ರವರ ಮನೆಯಲ್ಲಿ ಝಾಯಿದಾ ಎಂಬ ಹೆಸರಿನ ಒಂದು ದಾಸಿ ಮನೆ ಕೆಲಸಕ್ಕಿದ್ದರು. ತನ್ನ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದ ಆ ಮಹಿಳೆಯಲ್ಲಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೂ ಬಹಳ ಇಷ್ಟವಾಗಿತ್ತು. ಮಾತ್ರವಲ್ಲ ಆ ಮಹಿಳೆಯನ್ನು ನೋಡುವಾಗಲೆಲ್ಲ ನೀನು ಭಾಗ್ಯವಂತೆ. ನೀನು ಅದೃಷ್ಟಶಾಲಿ" ಎಂದು ಪ್ರವಾದಿಯವರು ಯಾವಾಗಲೂ ಹೇಳುತ್ತಿದ್ದರು. ▪ ಒಂದು ದಿನ ಈ ದಾಸಿಯು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸನ್ನಿಧಿಗೆ ಬಂದು ಹೇಳಿದರು. "ನಾನಿವತ್ತು ಮನೆಯಲ್ಲಿ ಅಡುಗೆ ಮಾಡಲು ಕಟ್ಟಿಗೆ ತರಲು ಹತ್ತಿರದ ಬೆಟ್ಟಕ್ಕೆ ಹೋದೆನು. ಜಮೆ ಮಾಡಿದ ಕಟ್ಟಿಗೆಯ ಕಟ್ಟು ಬಹಳ ದೊಡ್ಡ ಗಾತ್ರದ್ದಾದರಿಂದ ನನಗೆ ಅದನ್ನು ಸ್ವಂತವಾಗಿ ತಲೆಯ ಮೇಲಿಟ್ಟು ಹೊರಲು ಕಷ್ಟಸಾಧ್ಯಯಿತು. ಏನು ಮಾಡುವುದು..? ಯಾರಾದರೂ ಸಹಾಯ ಮಾಡಲು ಸಿಗುತ್ತಾರಾ ಎಂದು ಆಲೋಚಿಸಿ ಕುಳಿತಿರುವಾಗ ಬಹಳ ಸುಂದರವಾದ ಒಬ್ಬ ಯುವಕ ಒಂದು ಕುದುರೆಯ ಮೇಲೆ ಕುಳಿತು ಸವಾರಿ ಮಾಡುತ್ತಾ ಬರುತ್ತಿದ್ದರು. ಎಷ್ಟು ಸುಂದರನೆಂದರೆ, ನಾನೊಮ್ಮೆಯೂ ನನ್ನ ಬದುಕಿನಲ್ಲಿ ಅಷ್ಟೊಂದು ಸುಂದರನಾದ ವ್ಯಕ್ತಿಯನ್ನು ಒಮ್ಮೆಯೂ ನೋಡಿರಲಿಲ್ಲ. ಬಹಳ ಶುಭ್ರವಾದ ವಸ್ತ್ರ ...