ನಮಾಝ್
ನಮಾಝ್ ನಾನು ಓದಿದರಲ್ಲಿ ನನಗೆ ತುಂಬಾ ಇಷ್ಟಪಟ್ಟ ಲೇಖನ ಇದು... ಮೂಲ: ಮಳಯಾಲಮ್ ಸಾಧ್ಯವಾದರೆ ಇದನ್ನು ಕೋಪಿ ಮಾಡಿ ಸೇವ್ ಮಾಡಿ ಇಡಿ...ಆಗಾಗ ಓದುತ್ತಾ ಇರಿ. ಅಷ್ಟೂ ಹೃದಯ ಮಿಡಿಯುವ ಲೇಖನವಾಗಿದೆ. ಮದುವೆ ನಿಶ್ಚಿತಾರ್ಥ ವಾದ ಎಲ್ಲಾ ಹೆಣ್ಣು ಮಕ್ಕಳು ಇದನ್ನು ಓದಲೇಬೇಕು, ಅಥವಾ ಓದಿಸಲೇಬೇಕು... ಬರೆದದ್ದು ಯಾರು ಅಂತ ಗೊತ್ತಿಲ್ಲ...ಆದರೆ ಮನಮುಟ್ಟುವ ರಚನೆಯಾಗಿದೆ. ಅದು ಅವಳ ಮದುವೆ ಸುದಿನವಾಗಿತ್ತು. ರಾತ್ರಿ ೯ ಗಂಟೆಗೆ ಮನಯಿಂದ ಸ್ಪಲ್ಪ ದೂರದಲ್ಲಿರುವ ಹಾಲಿನಲ್ಲಿ ನಡೆಯಬೇಕಿದ್ದ ಮದುವೆ ಸಮಾರಂಭಕ್ಕೆ ಬಂಧು ಬಳಗದವರೂ ನೆರೆಮನೆಯವರೂ ಮಧ್ಯಾಹ್ನದ ನಂತರ ಅವಳ ಮನೆಗೆ ಬರುತ್ತಲೇ ಇದ್ದರು. ಮಗ್ರಿಬ್ ನಮಾಝಿನ ನಂತರ ಎಲ್ಲರೂ ಹಾಲಿಗೆ ಹೋಗುವುದಾಗಿ ತೀರ್ಮಾನಿಸಲಾಯಿತು. ಗೆಳತಿಯರು ಹಾಗೂ ನೆರೆಮನೆಯ ಹೆಣ್ಣು ಮಕ್ಕಳು ಆಗಲೇ ಅವಳ ಕೋಣೆಗೆ ಪ್ರವೇಶಿಸಿಯಾಗಿತ್ತು. ಮದುಮಗಳ ವಸ್ತ್ರದ ಮತ್ತು ಆಭರಣದ ಸೌಂದರ್ಯ ವನ್ನು ಅವರು ಕಣ್ತುಂಬಾ ಆಸ್ವದಿಸಿದರು ಹಾಗೆಯೇ ಮಸೀದಿಯ ಮಿನಾರದಿಂದ ಅಸರ್ ಬಾಂಗ್ ಮೊಳಗಿತು. ಎಲ್ಲರೂ ನಮಾಝಿನಲ್ಲಿ ನಿರತರಾದರು. ನಮಾಝಿನಿಂದ ವಿರಮಿಸಿದ ನಂತರ ಪೇಟೆಯ ಪ್ರಮುಖ ಬ್ಯೂಟಿಶ್ಯನ್ ಹಾಗೂ ಅವಳ ಸಹಾಯಕಿಯರು ಆಗಮಿಸಿದರು. ತುಂಬಿ ತುಳುಕಾಡುತ್ತಿರುವ ಕೋಣೆಯಿಂದ ಎಲ್ಲರನ್ನೂ ಅವರು ಹೊರಹೋಗುವಂತೆ ಸೂಚಿಸಿದರು. ಅವರು ಅವಳನ್ನು ಇನ್ನಷ್ಟು ಸೌಂದರ್ಯವತಿಯಾಗಿ ಮಾಡಲು ಹೊರಟರು. ಹಿಜಾಬಿನ ಮಧ್ಯದಲ್ಲಿ ಕಂಗೊಳಿಸುವ ಅವಳ ಮುಖ...