ಪಶ್ಚಾತಾಪ ಮತ್ತು ಕ್ಷಮೆ.. ಯಾರಾದರೂ ನಮಗೆ ಕೆಡುಕನ್ನು ಮಾಡಿದಲ್ಲಿ ಅಥವಾ ತಪ್ಪು ರೀತಿಯಲ್ಲಿ ನಮ್ಮೊಂದಿಗೆ ವರ್ತಿಸಿದಲ್ಲಿ, ನಾವವರನ್ನು ಕ್ಷಮಿಸುವುದರಲ್ಲಿ ಒಳಿತಿದೆ. ಕಹಿ ಘಟನೆಯ ಕುರಿತು ಇಲ್ಲವೇ ಕೆಡುಕು ಬಯಸಿದ ವ್ಯಕ್ತಿಯ ಕುರಿತು ಪದೇ ಪದೇ ಯೋಚಿಸಿದರೆ ಸೇಡಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಪ್ರತಿಕಾರದ ಮನೋಭಾವ ನಮ್ಮಲ್ಲಿ ಹುಟ್ಟುತ್ತದೆ. ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ, ನಮ್ಮ ಸುತ್ತೆಲ್ಲ ಸಂತಸದ ಹೊನಲಿದ್ದರೂ ಅದನ್ನು ನಾವು ಗುರುತಿಸುವುದೇ ಇಲ್ಲ. ಇದಕ್ಕೆಲ್ಲ ಒಂದೇ ಪರಿಹಾರ ಸ್ನೇಹಿತರೆ, ತಪ್ಪು ಮಾಡಿದವರ ಎದುರಲ್ಲಿಯೇ ಕುಳಿತು ಮಾತನಾಡಿ. “ನೀನೆಷ್ಟೇ ತಪ್ಪು ಮಾಡಿದರೂ, ನನಗೆ ಕೆಡುಕು ಬಯಸಿದರೂ, ನಾನು ನಿನ್ನನ್ನು ಕ್ಷಮಿಸಿರುವೆ” ಎಂದು ಮನದಲ್ಲಿ ಅಂದುಕೊಂಡು ಅವರತ್ತ ಹೂವಿನ ನಗೆಯನ್ನು ಬೀರಿ. ಹೀಗೆ ಮಾಡಿದಲ್ಲಿ ಸಂತಸ, ಸಮಾಧಾನ, ಶಾಂತಿ, ನೆಮ್ಮದಿ ಎಲ್ಲಿದ್ದರೂ ನಿಮ್ಮ ಜೋಳಿಗೆಯಲ್ಲಿ ಬಂದು ಬೀಳುತ್ತವೆ. ತಿಳಿದೋ ತಿಳಿಯದೆನೋ ಮಾಡಿದ ತಪ್ಪನ್ನು ಕ್ಷಮಿಸುವುದರಿಂದ ಕೆಡುಕು ಬಯಸುವವರು ಕೂಡ ಮನ ಪರಿವರ್ತನೆ ಹೊಂದಬಹುದು. ದ್ವೇಷ, ರೋಷ, ಕ್ಲೇಷ ಇವುಗಳಿಂದ ವೈರತ್ವ ಬೆಳೆಯುವುದೇ ಹೊರತು ಪ್ರೀತಿ ನೆಲೆಸಲಾರದು. ಅಲ್ಲದೇ, ಯಾರಲ್ಲಿಯೂ ಶಾಂತಿ ಉಳಿಯುದಿಲ್ಲ. ಉದಾಹರಣೆಗೆ ನಾನೊಂದು ನೈಜ ಘಟನೆಯನ್ನು ತಮ್ಮ ಮುಂದಿಡಲು ಇಷ್ಟ ಪಡುತ್ತೇನೆ. ಮಂಗಳೂರು ಎಂಬ ಮಾಯಾನಗರಿಯ ಅಫ್ಸಾನ ಎನ್ನುವ ಹುಡುಗಿ, ಚಿಕ್ಕ ವಯ...