Posts

Showing posts from December, 2019

ದೈನಂದಿನ ಹದೀಸ್‌ಗಳು

حَدَّثَنَا هَنَّادٌ، حَدَّثَنَا عَبْثَرُ بْنُ الْقَاسِمِ، عَنِ الأَشْعَثِ، وَهُوَ ابْنُ سَوَّارٍ عَنْ أَبِي إِسْحَاقَ، عَنْ جَابِرِ بْنِ سَمُرَةَ، قَالَ رَأَيْتُ رَسُولَ اللَّهِ صلى الله عليه وسلم فِي لَيْلَةٍ إِضْحِيَانٍ فَجَعَلْتُ أَنْظُرُ إِلَى رَسُولِ اللَّهِ صلى الله عليه وسلم وَإِلَى الْقَمَرِ وَعَلَيْهِ حُلَّةٌ حَمْرَاءُ فَإِذَا هُوَ عِنْدِي أَحْسَنُ مِنَ الْقَمَرِ ‏.‏ قَالَ أَبُو عِيسَى هَذَا حَدِيثٌ حَسَنٌ غَرِيبٌ لاَ نَعْرِفُهُ إِلاَّ مِنْ حَدِيثِ الأَشْعَثِ ‏.‏ ಜಾಬೀರ್ ಬಿನ್ ಸಮುರಹ್ ರದಿಯಲ್ಲಾಹು ಅನ್ಹು ರವ್ರು ಹೇಳುತ್ತಾರೆ. ಒಂದು ದಿನ ಚಂದ್ರನ ಬೆಳಕಿನಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರನ್ನು ಕಂಡೆನು. ಅವರು ಕೆಂಪು ಬಣ್ಣದ ಚೌಕುಳಿಯಿರುವ ವಸ್ತ್ರ ಧರಿಸಿದ್ದರು. ನಾನು ಚಂದ್ರನತ್ತ ಮತ್ತು ಅವರತ್ತ ನೋಡಿದೆ, ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರು ಚಂದ್ರನಿಗಿಂತ ಮಿಗಿಲಾಗಿ ಕಂಡರು. ತಿರ್ಮಿದಿ ಹದೀಸ್ ಸಂಖ್ಯೆ-2811 Copyright NOOR-UL-FALAH 

ದೀನುಲ್ ಇಸ್ಲಾಂ

ಪಾಪಗಳನ್ನು ಮನ್ನಿಸಿ ನಗುಮುಖದೊಂದಿಗೆ ಮರಣ ಹೊಂದಲು ಬೇಕಾಗಿ. اللهم اغفرلي ماانت به اعلم انك انت الاعز الاكرم. ಅಲ್ಲಾಹಮ್ಮ ಇಗ್ ಫಿರ್ ಲೀ ಮಾ ಅಂತ ಬಿಹಿ ಅಹ್(ع)ಲಮು ಇನ್ನಕ ಅಂತಲ್ ಅಅ(ع)ಝ್ಝುಲ್ ಅಕ್ ರಮು. ಎಂ.ಫಯಾಝ್ ಬೀಸಿರೋಡು NOOR-UL-FALAH ISLAMIC STORE 

ದಿನುಲ್ ಇಸ್ಲಾಂ

بِــسْـمِ ٱلـلـّٰــهِ ٱلـرَّحْـمَـانِ ٱلـرَّحِـيـمِ ಇಮಾನಿನೊಂದಿಗೆ ಜೀವಿಸಿ ಈಮಾನಿನೊಂದಿಗೆ ಮರಣ ಹೊಂದಲು ಬೇಕಾಗಿ ಈ ದ್ಝಿಕ್ರನ್ನು ಹೇಳಿರಿ. اللهم افتح علينا بطاعتك واختمنا بمغفرتك ورضوانك. ಅಲ್ಲಾಹುಮ್ಮ ಫ್ತಹ್ ಅಲೈನಾ ಬಿತ್ವಾಅತಿಕ ವಾಖ್ ತಿಮ್ನಾ ಬಿಮಗ್ ಫಿರತಿಕ ವರಿಳ್ ವಾನಿಕ್... ಎಂ.ಫಯಾಝ್ ಬೀಸಿರೋಡು NOOR-UL-FALAH ISLAMIC STORE 

ಅವರು ﷺ ಮಗುವಿಗೂ ಮಧುರ

ಅವರು ﷺ ಮಗುವಿಗೂ ಮಧುರ ಒಂದು ಮಗುವಿನ ಬೆಳವಣಿಗೆಯಲ್ಲಿ ಪೋಷಕರ ಪಾಲು ಅಪಾರ. ಕೇಳಿಸುವುದು, ಮಾತನಾಡಿಸುವುದು, ಓದಿಸುವುದು, ಬರೆಸುವುದು ಯಾವುದರ ಕುರಿತಾಗಿದೆ ಎಂಬುವೂದರಲ್ಲಿ ಮಗುವೊಂದರ ಭವಿಷ್ಯ ರೂಪುಗೊಳ್ಳುತ್ತದೆ. ಆ ಮಗುವಿನ ಚಿಂತೆಯು ಈ ಮೂಲಕ ಲಭಿಸಿದ ಜ್ಞಾನದಲ್ಲಿ ಸಂಚರಿಸುತ್ತದೆ. ಆ ಮಗುವಿನದ್ದು ನಿಶ್ಕಲ್ಮಶ ಹೃದಯ. ಯಾವುದನ್ನೂ ಸರಿ-ತಪ್ಪುಗಳೆಂಬ ಪರಿಕಲ್ಪನೆಗಳಿಲ್ಲದೆ ಸ್ವೀಕರಿಸಬಲ್ಲ ಅವರ ಮನಸ್ಸಾಗಿದೆ ಇದಕ್ಕೆ ಕಾರಣ.     ಹೀಗಿರುವಾಗ ಪವಿತ್ರ ಇಸ್ಲಾo, ಪೋಷಕರ ಭಾದ್ಯತೆಯನ್ನು ಸ್ಪಷ್ಟಪಡಿಸಿದೆ. ''ನಮ್ಮ ನೆಬಿಯವರಾದ ಮುಹಮ್ಮದ್ ﷺ ರವರು ಜನಿಸಿದ್ದು ಮತ್ತು ಪ್ರವಾದಿತ್ವ ಪಡೆದದ್ದು ಮಕ್ಕಾದಲ್ಲೆಂದೂ, ಮರಣ ಹೊಂದಿದ್ದು ಹಾಗೂ ದಫನ ಹೊಂದಿದ್ದು ಮದೀನಾದಲ್ಲೆಂದೂ ಕಲಿಸುವುದು ಹತ್ತವರ ಮೊದಲ ಬಾಧ್ಯತೆಯಾಗಿದೆ.ಕರ್ಮಶಾಸ್ತ್ರಜ್ಞರು ಪ್ರಸ್ತಾಪಿಸಿದಂತೆ, ನಮಾಝ್ ಗೆ ಆದೇಶ ಕೊಡುವುದಕ್ಕೆ ಮೊದಲೇ ಇದನ್ನು ಕಲಿಸಬೇಕು''. (ಫತ್ಹುಲ್ ಮುಈನ್).      ಇಂದಿನ ದಿನಗಳಲ್ಲಿ , ಮನೆಗಳ ಅಂತರ್ಯದಲ್ಲಿ ಅನುರಾಗ ಮತ್ತು ಆತ್ಮೀಯತೆಯ ಸಂಸ್ಕೃತಿಯು ಎದ್ದುಕಾಣುವುದರ ಬದಲು ಅಶ್ಲೀಲತೆಯ ಮತ್ತು ಅನೈತಿಕತೆಯ ವಿವಿಧ ರೂಪಗಳು ಪ್ರತ್ಯಕ್ಷಗೊಳ್ಳುತ್ತಿವೆ. ದುಃಖವೇನೆಂದರೆ, ಇಂದಿನ ಹಲವು ನ್ಯೂಜನ್ ಪುಟ್ಟ ಪುಟಾಣಿಗಳ ನಾಲಿಗೆಯಿಂದ ಹೊರಬರುವುದು ಸಿನಿಮಾ ಹಾಡುಗಳು ಮತ್ತು ಸಿನಿಮಾ ಡೈಲಾಗ್ ಗಳಾಗಿವೆ. ತಮ್ಮ ಮಕ್ಕಳು ಡ್ಯಾನ್ಸ್ ಮಾ...

ಗುಹಾ ರಹಸ್ಯ ಅದ್ಭುತ ಗೂಡು

"ಗುಹಾ"ರಹಸ್ಯ "ಅದ್ಭುತ ಗೂಡು....." ಇಸ್ಲಾಂ ಧರ್ಮದ ಆಧುನಿಕ ಕಾಲಘಟ್ಟದಲ್ಲಿರುವ ನಾವು ಯುವ ಸಮೂಹಕ್ಕೆ ಕೆಲವೊಂದು ಪುರಾತನ ಕಥೆಗಳನ್ನು ಹೇಳಿ ಕೊಡಬೇಕು. ಇಂದಿನ ತಲೆಮಾರು ವ್ಯಾಮೋಹ ಗಳಿಗೆ ಬಲಿಯಾಗುತ್ತಾ ಇಸ್ಲಾಂ ಧರ್ಮದ ನೈಜ ಆದರ್ಶ ಪರಂಪರೆ ಮತ್ತು ಕೆಲವೊಂದು ಸತ್ಯಗಳು ಮರೆತು ಹೋಗಿದ್ದಾರೆ. ಇಸ್ಲಾಂ ಧರ್ಮದ ಮತ್ತು ಆಶಯಗಳನ್ನು, ಆದರ್ಶಗಳನ್ನು ಬದಿಗೊತ್ತಿ ಆಧುನಿಕತೆಗೆ ಅನುಗುಣವಾಗಿ ಇಸ್ಲಾಮ್ ಧರ್ಮವನ್ನು ತಳ್ಳಿಹಾಕುವ ಯುವಕ ಮತ್ತು ಯುವತಿಯರಿಗೆ ಪ್ರತ್ಯೇಕವಾಗಿ ಈ ಚರಿತ್ರೆಯಲ್ಲಿ ಒಂದು ಸ್ಪಷ್ಟ ಸಂದೇಶ ಇದೆ. ಇಸ್ಲಾಂ ಧರ್ಮಕ್ಕಾಗಿ ಯಾವ ರೀತಿಯ ತ್ಯಾಗಕ್ಕೂ ಸಿದ್ದರಿದ್ದ ಆ ದಿನಗಳ ಯುವಕರಿಂದ ನಾವು ಪಾಠಗಳನ್ನು ಕಲಿತುಕೊಳ್ಳಬೇಕಿದೆ. ರಕ್ಷಣೆಗಾಗಿ ಅಲ್ಲಾಹನಲ್ಲಿ ನಯವಾಗಿ ಬೇಡಿಕೊಂಡರೆ ಖಂಡಿತ ಸತ್ಯದ ದಾರಿಯನ್ನು ಸುಗಮಗೊಳಿಸಿ ಕೊಡುತ್ತಾನೆ ಎಂಬುದಕ್ಕೆ ಇದು ಸಾಕ್ಷಿ.  ಅದ್, ಸಮುದ್, ಫಿರ್ಹವ್ನ್ ಚರಿತ್ರೆ ನಮಗರಿವಿಲ್ಲದೆ ಮರೆತುಬಿಡುತಿದ್ದೇವೆ. ಪುರಾತನ ಚರಿತ್ರೆಯ ಒಂದು ಭಾಗ ಅದುವೇ ಅಸ್ಹಾಬುಲ್ ಕಹ್ಫ್ ಗುಹೆ. ಜೋರ್ಡಾನ್ ಅಮ್ಮಾನ್ ಪ್ರದೇಶದ ರಾಜಿಬ್ನಲ್ಲಿ ಇಂದಿಗೂ ಶಾಕ್ಷಿ ಪುರಾವೆಗಳು ಚರಿತ್ರೆ ಓದಿ ಹೇಳುತ್ತಿದೆ. "ಯಾರವರು ಅಸ್ಹಾಬುಲ್ ಕಹ್ಫ್":- ಪವಿತ್ರ ಖುರಾನಿನ ಹದಿನೆಂಟನೇ ಸೂಕ್ತಗಳಲ್ಲಿ ಸವಿಸ್ತಾರವಿಗಿ ತಿಳಿಸಲಾಗಿದೆ. ಅಧ್ಯಾಯ 9 ರಿಂದ ಅಧ್ಯಾಯ 26 ರವರೆಗೆ ಈ ಬಗ್ಗೆ ಉಲ್ಲೇಖಿಸಲ...

ಪ್ರವಾದಿ ಕುಟುಂಬ ಅಥವಾ ಅಹ್ಲುಬೈತ್

ಪ್ರವಾದಿ ಕುಟುಂಬ ಅಥವಾ ಅಹ್ಲುಬೈತ್ ಸ್ವಹಾಬಿವರ್ಯರು ನಬಿﷺِ ರವರೊಂದಿಗೆ ಕೇಳಿದರು..!ಪ್ರವಾದಿಯವರೇ ,ನಾವು ಪ್ರೀತಿಸಬೇಕೆಂದು ಖುರ್ಆನಿನಲ್ಲಿ ಹೇಳಿದ ತಮ್ಮ ಕುಟುಂಬ ಯಾವುದು!? ನಬಿﷺِ ರವರು ಪ್ರತಿಕ್ರಿಯೆ ನಡೆಸುತ್ತಾರೆ..ನನ್ನ ಕುಟುಂಬವೆಂದು ನಾನು ಹೇಳಿದ್ದು ಅಲಿ(ರ) ಹಾಗೂ ಫಾತಿಮಾ (ರ) ಹಾಗೂ ಅವರ ಇಬ್ಬರು ಮಕ್ಕಳಾದ ಹಸನ್ ಹುಸೈನ್ (ರ) ರವರಾಗಿದ್ದಾರೆ‌.. ಅಹ್ಲ್ ಬೈತ್ಗಳೇ ನಿಮ್ಮಿಂದ ಕೊಳೆಯನ್ನು ದೂರೀಕರಿಸಿ ನಿಮ್ಮನ್ನು ಸಂಪೂರ್ಣ ಶುದ್ದೀಕರಿಸಲು ಅಲ್ಲಾಹನು ಉದ್ದೇಶಿಸಿದ್ದಾನೆ.‌. ಎಂಬ ಪವಿತ್ರ ಶ್ಲಾಘಿಸಿದರು...     ಖರ್ಆನ್ ಅವತೀರ್ಣಗೊಂಡಾಗ ನಬಿﷺِ ರವರು ಹಝ್ರತ್ ಅಲಿ (ರ) ಫಾತಿ‌ಮಾ ,ಹಸನ್ ಹುಸೈನ್ (ರ) ರವರನ್ನು ತನ್ನ ಬಳಿಗೆ ಕರೆದರು.ಬಳಿಕ ಅಲಿ ಮತ್ತು ಫಾತಿಮಾ (ರ) ರವರನ್ನು ತನ್ನೆದುರು ಕೂರಿಸಿಕೊಂಡರು..ಹಸನ್ ಮತ್ತು ಹುಸೈನ್ (ರ) ರವರನ್ನು ತನ್ನ ಎರಡು ತೊಡೆಯ ಮೇಲೆ ಕೂರಿಸಿ ಒಂದು ಚಪ್ಪರ ವನ್ನು ಎಲ್ಲರ ಮೇಲೆ ಹೊದಿಸಿ ಹೀಗೆಂದರು..!ಓಅಲ್ಲಾಹನೇ ....ಇವರೇ ನನ್ನ ಅಹ್ಲುಬೈತ್ ಗಳು ,ಖುರ್ ಆನಿನಲ್ಲಿ ಹೇಳಿದ ಆ ಮಹತ್ತರ ಸ್ಥಾನಮಾನಗಳಿಗೆ ಅರ್ಹರಾದವರು ಇವರೇ..(ಹದೀಸ್)       ಮುತ್ತು ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಒಮ್ಮೆ ತನ್ನ ಅಳಿಯನಾದ ಅಲಿ (ರ) ರವರನ್ನು ಉದ್ದೇಶಿಸಿ ಈ ರೀತಿ ಹೇಳಿದರು"ನನ್ನ ಮತ್ತು ನಿನ್ನ ನಡುವಿನ ಸಂಬಂಧವು ಪ್ರವಾದಿ ಮೂಸಾ (ಅ) ಮತ್ತು ಪ್ರವಾದ...

ಆಸೆ ದುರಾಸೆ

ಆಸೆ-ದುರಾಸೆ ಆಸೆಗೆ ಮಿತಿಯಿದೆ,ಮಿತಿ ಮೀರಿದರೆ ಅದು ದುರಾಸೆಯಾಗುತ್ತದೆ...ದುರಾಸೆಯನ್ನು ಬಿಟ್ಟರೆ,ನಿಶ್ಚಿಂತತೆಯ ಜೀವನ ನಮ್ಮದು..             ಒಮ್ಮೆ ನಾನು ಸೈಕಲ್ ನಲ್ಲಿ ಚಲಿಸುವಾಗ,ಬೈಕನ್ನು ನೋಡಿ ಚಿಂತಿಸತೊಡಗಿದೆ ನಾನು ಕೂಡಾ ಬೈಕ್ ನಲ್ಲಿ ಬರಬೇಕು ಎಂದು...ಅಂದಿನಿಂದ,ತುಂಬಾ ಕಷ್ಟಪಟ್ಟು ಬೈಕ್ ಖರೀದಿಸಿದೆ...ಹಾಗೆ ಒಮ್ಮೆ ಈ ಬೈಕಲ್ಲಿ ಚಲಿಸುವಾಗ,ಒಂದು ಕಡೆ ಸಿಗ್ನಲ್ ನಲ್ಲಿ ನಿಂತಿರುವಾಗ ಕಾರೊಂದು ಬದಿಯಲ್ಲಿ ಬಂದು ನಿಂತಾಗ,ಮತ್ತೆ ಚಿಂತೆಯಾಗತೊಡಗಿತು...ಕಾರ್ ಖರೀದಿಸುವ ಚಿಂತೆ! ಹೀಗೆ ನನಗೆ ಯಾವತ್ತೂ ಒಂದಲ್ಲ,ಒಂದು ವಿಷಯದಲ್ಲಿ ಚಿಂತೆ...ಈ ಬಗ್ಗೆ ಉಸ್ತಾದರೊಬ್ಬರಲ್ಲಿ ಹೇಳಿದಾಗ,ಅವರು ನೀಡಿದ ಸಣ್ಣ ಉಪದೇಶವೊಂದು ಮನಸ್ಸಿಗೆ ದುರಾಸೆಯಿಂದಾಗುವ ಒತ್ತಡದಿಂದ ರಕ್ಷಿಸಿತು. "ಅಲ್ಲಾಹು ನೀಡಿದ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸು..ಅದನ್ನು ಬಿಟ್ಟು,ಇದಕ್ಕಿಂತಲೂ ದೊಡ್ಡದು ಬೇಕು,ಇನ್ನೂ ಹೆಚ್ಚು ಹೆಚ್ಚು ಎಂಬುದಾಗಿ ಚಿಂತೆಯಲ್ಲಿ ಮುಳುಗಿದರೆ,ಅಂತಹಾ ಚಿಂತೆಗೆ ಕೊನೆಯೇ ಇರಲ್ಲ...ಗುಡಿಸಲಿನಲ್ಲಿ ಇರುವಾಗ,ಅಂಚಿನ ಮನೆಯ ಚಿಂತೆ,ಅಂಚಿನ ಮನೆ ದೊರೆತಾಗ,ಟ್ಯಾರಸಿ ಮನೆಯ ಚಿಂತೆ...ಒಂದು ವೇಳೆ ಟ್ಯಾರಸಿ ಮನೆ ಕಟ್ಟಿದರೂ,ಬಳಿಕ ಅದಕ್ಕಿಂತಲೂ ದೊಡ್ಡ ಮನೆ ಕಾಣುತ್ತೆ..ದೊಡ್ಡ ವಾಹನ ಖರೀದಿಸಿದಾಗ,ಅದಕ್ಕಿಂತಲೂ ದೊಡ್ಡ ಗಾಡಿಯ ಮೇಲೆ ಕಣ್ಣು.. ಹೀಗೆ ಆಸೆಗೆ ಕೊನೆಯೇ ಇಲ್ಲ..."         ...

ಇಸ್ಲಾಮಿನಲ್ಲಿ ವಿವಾಹ

ಇಸ್ಲಾಮಿನಲ್ಲಿ ವಿವಾಹ ಇಸ್ಲಾಮಿನಲ್ಲಿ ಮದುವೆಗೆ ಮಹತ್ತರವಾದ ಸ್ಥಾನವಿದೆ . ಮದುವೆಯೆಂಬುದು ಪವಿತ್ರ ಬಂಧವಾಗಿದೆ ಲೋಕ ಗುರು ಜಗತ್ಪ್ರವಾದಿ ‌ಮುಹಮ್ಮದ್ ರಸೂಲುಲ್ಲಾಹಿ ಸ.ಅ.ರವರು ತನ್ನ ಅನುಚರರಿಗೆ ಕಳುಹಿಸಿಕೊಟ್ಟ ಮಹತ್ವದ ಮಾರ್ಗವಾದ "ವಿವಾಹವು ನನ್ನ ಚರ್ಯೆಯಾಗಿದೆ ಯಾರು ನನ್ನ ಚರ್ಯೆಯನ್ನುಉಪೇಕ್ಷಿಸುತ್ತಾರೋ ಅವನು ನನ್ನವನಲ್ಲ"( ಪ್ರವಾದಿ ಸ.ಅ) ಎಂದು ಮದುವೆಯ ಮಹತ್ವವನ್ನು ಲೋಕಕ್ಕೆ ಸಾರಿದ್ದಾರೆ . ಮದುವೆಯು ಎರಡು ಕುಟುಂಬಗಳಲ್ಲಿ ಕೌಟುಂಬಿಕ ಬಂಧವನ್ನು ಸೇರಿಸುತ್ತದೆ . ಎರಡು ದೇಹ ಒಂದೇ ಜೀವವೆಂಬಂತೆ ಒಂದು ಗಂಡು ಒಂದು ಹೆಣ್ಣು ಸರೀಹತ್ತಿನ ನಿಯಮದ ಪ್ರಕಾರ ಒಪ್ಪಂದದ ಮೇರೆಗೆ ಸುಖ ದುಃಖಗಳಲ್ಲಿ ಸಮಾನರಾಗಿ ಪಾಲುದಾರರಾಗಿ ನೋವು ನಲಿವುಗಳನ್ನು ಹಂಚಿ ಬದುಕುವುದಾಗಿದೆ ಮದುವೆಯು ಸಾರುವ ಸಂದೇಶ.       ಈಗೀಗ ಮದುವೆಯು ಆಡಂಬರದ ಪ್ರತೀಕವಾಗಿರುವುದು ವಿಪರ್ಯಾಸ. ಉಲ್ಲವರಿಗೊಂದು ಕಾನೂನು ಬಡವನಿಗೊಂದು ಕಾನೂನು . ಸರಳ ವಿವಾಹಕ್ಕೆ ಒತ್ತು ನೀಡಬೇಕೆಂದು ಸಮಾಜದ ಮುಂದೆ ಕರೆನೀಡಿ ತನ್ನ ಮಗಳ/ಮಗನ ಮದುವೆಯನ್ನು ಐಷಾರಾಮಿ ಹಾಲ್'ಗಳಲ್ಲಿ ಮಾಡುತ್ತಾರೆ .      ಕೆಲವು ಯುವಕರಂತು ಬರೀ ವರದಕ್ಷಿಣೆಗಾಗಿ ಮದುವೆಯಾಗುವಂತೆ ಕಾಣುತ್ತಿದೆ . ಯಥೇಚ್ಛವಾಗಿ ವರದಕ್ಷಿಣೆ ವಸೂಲಿಮಾಡಿ ಬಡಪಾಯಿ ಹೆಣ್ಣುಮಗಳೊಬ್ಬಳ ತಂದೆಯ ಕಣ್ಣೀರಿನ ಹಣದಿಂದ ಇವನ ಮದುವೆ ಅದ್ದೂರಿಯಾಗಿ ಮಾಡಿಕೊಳ್ಳುತ್ತಾನೆ.     ...

ದಾನ

ದಾನ   ಇಸ್ಲಾಂ ಧರ್ಮವು ತನ್ನ ಸುಂದರವಾದ ಸಂಸ್ಕೃತಿಯನ್ನು ತೋರಿಸುತ್ತಾ ,ಜಗದೆಡೆಯಲ್ಲಿ ವಿಸ್ತರಿಸುತ್ತಾ ಹೋಗುತ್ತಿದೆ. ಹಾಗೆಯೇ ಕೆಲವೊಂದು ವಿಚಾರದಲ್ಲಿ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವುದರ ಮೂಲಕ ಇಸ್ಲಾಂ ಇಂದು ಜಗದೆಲ್ಲೆಡೆ ವಿಸ್ತರಿಸಿದೆ. ಪ್ರಾಧಾನ್ಯತೆ ನೀಡಿರುವ ಕಾರ್ಯದಲ್ಲೊಂದಾಗಿದೆ "ದಾನ." ಇಸ್ಲಾಂ ಧರ್ಮವು ದಾನಕ್ಕೆ  ಅತ್ಯಂತ ಹೆಚ್ಚು ಪ್ರಾಧಾನ್ಯತೆ ನೀಡಿದೆ. ಕೆಲವೊಂದು ಪುಣ್ಯ ದಿನಗಳಲ್ಲಿ ದಾನ ಮಾಡುವುದು ಕಡ್ಡಾಯವಾಗಿರುವ ಕರ್ಮವನ್ನಾಗಿಯೂ ಮಾಡಿದೆ. ಮುಸ್ಲಿಮರು ಆಚರಿಸುವ ಎರಡೂ ಹಬ್ಬಗಳಲ್ಲಿ ದಾನ ಮಾಡುವುದನ್ನು ಪ್ರೋತ್ಸಾಹಿಸುತ್ತವೆ. ಆ ಪುಣ್ಯ ದಿನದಲ್ಲಿ ಯಾರು ಹಸಿದಿರಬಾರದು ಎಂಬುವುದು ಈ ದಾನದ ಉದ್ದೇಶವಾಗಿದೆ. ದಾನ ನೀಡುವುದರಿಂದ ಒಬ್ಬಾತನ ಇಹ ಪರ ಲೋಕದ ವಿಜಯವು ಸಾಧ್ಯವಾಗಿದೆ. ಇರು ಲೋಕದಲ್ಲಿಯೂ ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದುಕೊಂಡ ಪುಣ್ಯ ಕಾರ್ಯವಾಗಿದೆ ದಾನ.    ಬಾಯಾರಿಕೆಯಿಂದ ಬಳಲುತ್ತಿದ್ದ ಒಂದು ನಾಯಿಗೆ ನೀರುಣಿಸಿದ ಒಂದೇ ಒಂದು ಕಾರಣದಿಂದ ಓರ್ವ ವೇಶ್ಯೆಯನ್ನು ಅಲ್ಲಾಹನು ಅವಳ ಎಲ್ಲಾ ಪಾಪಗಳಿಂದ ವಿಮುಕ್ತಿಗೊಳಿಸಿದ್ದಾನೆ, ಎಂದು ಇಸ್ಲಾಂ ಧರ್ಮವು ನಮಗೆ ಬೋಧಿಸುವಾಗ ಪರಲೋಕದ ಜೀವನದಲ್ಲಿ ದಾನಕ್ಕಿರುವ ಮಹತ್ವವನ್ನು ಅರಿಯಬಹುದಾಗಿದೆ. ಇನ್ನೂ ದಾನ ನೀಡುವುದರಿಂದ ಅವನಿಗೆ ಬಂದೊದಗುವ ಆಪತ್ತು‌ಗಳಿಂದ ರಕ್ಷೆ ಹೊಂದಬಹುದೆಂದು ಕಾಣಬಹುದು. ಈ ಹದೀಸನ್ನೊಮ್ಮೆ ನೋಡಿದರೆ ಮನದಟ್ಟಾಗುತ್...

ಮುಂಜಾನೆ ಇಬ್ಬನಿ

108 "ಪ್ರತಿಯೊಬ್ಬ ವ್ಯಕ್ತಿಯು ಎರಡು ರೀತಿಯ ಶಿಕ್ಷಣ ಹೊಂದುತ್ತಾನೆ.  ಒಂದು ಇತರರು ಅವನಿಗೆ ನೀಡುವುದು. ಇನ್ನೊಂದು ಸ್ವಂತ ಅವನು ಕಲಿಯುವುದು.." 109 ಬೇರೆಯವರ ಮಾತು ನಮಗೆ ಸರಿಬಾರದಿದ್ದರೆ ತಿರಸ್ಕರಿಸಬಹುದು.. ಆದರೆ ನಮ್ಮ ಮಾತು ನಮಗೆ ಹಿತವಾಗದಿದ್ದರೆ..? ಹಾಗಗದಿರಲಿ..ಮಾತು ನಮ್ಮ ಮನಕ್ಕೊಪ್ಪುವಂತಿರಲಿ.. 110 ಜಗತ್ತಿನಲ್ಲಿ ಅತಿ ಕಷ್ಟದ ಕೆಲಸವೆಂದರೆ ಕ್ಷಮಿಸುವುದು ಒಮ್ಮೆ ನೀವು ಅದನ್ನು ಮೈಗೂಡಿಸಿಕೊಂಡರೆ ನಿಮಗಿಂತ ಸುಖಿ ಬೇರೊಬ್ಬರಿಲ್ಲ.. 111 ಗೆದ್ದವರಷ್ಟೇ ಬದುಕಿನ ಪಾಠ ಹೇಳಬೇಕೆಂದಿಲ್ಲ.. ಸೋತವರು ಅದಕ್ಕಿಂತಲೂಚೆನ್ನಾಗಿ ಅನುಭವದ ಪಾಠ ಕಲಿತ್ತಿರುತ್ತಾರೆ..! 112 ಪ್ರತಿನಿತ್ಯ ಒಂದು ಜಿಂಕೆ ಹುಲಿಯಿಂದ ತಪ್ಪಿಸಿಕೊಳ್ಳಲು ಮತ್ತು ಆ ಹುಲಿ ಆ ಜಿಂಕೆಯನ್ನು ಹಿಡಿಯಲು, ವೇಗವಾಗಿ ಓಡುತ್ತವೆ. ಬದುಕಿನ ನಿಯಮವೂ ಅಷ್ಟೇ!. ನಾವು ಜಿಂಕೆಯಾಗಲೀ ಅಥವಾ ಹುಲಿಯಾಗಲೀ ಓಡುವುದಂತೂ ತಪ್ಪಿದ್ದಲ್ಲ.. 113 “ಜೀವನದಲ್ಲಿ ನಾವು ಸೋತಾಗಲೇ ನಮ್ಮ ಆಪ್ತರೆಷ್ಟು ಮಂದಿ ಎಂಬ ನಿಜ ಸಂಗತಿ ತಿಳಿಯುವುದು...ನಾವು ಗೆದ್ದಾಗ ಎಲ್ಲರೂ ನಮ್ಮ ಜೊತೆ ಇರುತ್ತಾರೆ ಆದರೆ ನಾವು ಬಿದ್ದಾಗ ಕೇವಲ ನಮ್ಮ ನಿಜವಾದ ಆಪ್ತರು ಹಿತೈಷಿಗಳು ಮಾತ್ರ ನಮ್ಮ ಜೊತೆ ಇರುತ್ತಾರೆ..” 114 “ಹೇಳುವುದೊಂದು ಮಾಡುವುದು ಇನ್ನೊಂದು, ಆದ ತಪ್ಪಿಗೆ ಇನ್ನೊಬ್ಬರನ್ನ ಹೊಣೆ ಮಾಡುವುದು, ಒಬ್ಬರ ಮುಂದೊಂದು ಹಿಂದೊಂದು ಮಾತಾಡೋದು, ಇದ್ದದ್ದನ್ನು ಇದ್ದ...

ರಾಜ ಸನ್ನಿಧಿಗೆ ಒಂದು ಸಾಹಸ ಯಾತ್ರೆ

ರಾಜ ಸನ್ನಿಧಿಗೆ ಒಂದು ಸಾಹಸ ಯಾತ್ರೆ    ಅಬ್ದುಲ್ಲಾಹಿಬ್ನು  ಹುದಾಫ (ರ) ತನ್ನ  ಕುದುರೆಯನ್ನು ಸಾಧ್ಯವಾದಷ್ಟು ವೇಗದಲ್ಲಿ ಓಡಿಸುತ್ತಿದ್ದಾರೆ. ಕಾಡುಗಳು ಗುಡ್ಡೆಗಳು ನದಿಗಳು ತೊರೆಗಳು ಮರುಭೂಮಿಗಳು ಮುಂತಾದವುಗಳನ್ನು ಹಿಂದಿಕ್ಕುತ್ತಾ ಅಪರಿಚಿತರಾದ ಜನರು ಮನೆಗಳು  ಪ್ರದೇಶಗಳು ಯಾವುದೂ ಕೂಡಾ ಅವರ ಗಮನಕ್ಕೆ ಬರುವುದಿಲ್ಲ. ಅತೀ ವೇಗದ ಪ್ರಯಾಣ.       ತನ್ನಲ್ಲಿ ಅರ್ಪಿಸಲ್ಪಟ್ಟ ದೌತ್ಯ ನಿರ್ವಹಣೆಯಾಗಿದೆ ಪ್ರಧಾನ ಉದ್ದೇಶ ವಿಶಾಲವಾದ ಪೇರ್ಶ್ಯಾ ಸಾಮ್ರಾಜ್ಯಕ್ಕೆ... ಪ್ರಪಂಚವನ್ನು ನಡುಗಿಸಿದ ಕಿಸ್ರಾ ಚಕ್ರವರ್ತಿಯ ಸನ್ನಿಧಿಗೆ ಪ್ರವಾದಿ(ಸ.ಅ)ರವರು ಕೊಟ್ಟ ಕಾಗದವನ್ನು ಕೊಡಲು ಹಾಗೂ ಅವರನ್ನು ಇಸ್ಲಾಮ್ ಧರ್ಮಕ್ಕೆ ಆತ್ಮೀಯವಾಗಿ ಆಹ್ವಾನಿಸಲು.   ಅಲ್ಲಿ ತಲುಪಿದರೆ ಏನು ಘಟಿಸಬಹುದೆಂದು ಹೇಳುವುದು ಅಸಾಧ್ಯ.ಕ್ರೂರಿಯೂ ಅಹಂಕಾರಿಯೂ ಆದ ಚಕ್ರವರ್ತಿ ಕಿಸ್ರಾ ಕರುಣೆಯೆಂದರೆ ಏನೆಂದು ಕೂಡಾ ತಿಳಿಯದ ಕಪ್ಪಡರಿದ ಮನಸ್ಸಿನ ಒಡೆಯ ಅನಿಷ್ಠಕರವಾದ ಏನಾದರೂ ಸಂಭವಿಸಿದರೆ ಕೊಲೆ ಕೂಡಾ ಸಂಭವಿಸಬಹುದು ಅಷ್ಟೊಂದು ಬಾಲಾಢ್ಯ ಅಹಂಕಾರಿ !   ಒಂದೊಮ್ಮೆ ಇದು ನನ್ನ ಕೊನೆಯ ಪ್ರಯಾಣವಾಗಿರಬಹುದು.ಆದರೆ ಅದನ್ನು ನಾನು ಗಣನೆಗೆ ತೆಗೆದುಕೊಳ್ಳಬೇಕೆಂದಿಲ್ಲ.ಪ್ರವಾದಿ  (ಸ.ಅ)ರವರ ಆಜ್ಞಾಪಣೆ ನಿರ್ವಹಿಸುವುದು ಮಾತ್ರ ನನ್ನ ಮುಖ್ಯ ಉದ್ದೇಶ. ಅದಕ್ಕಾಗಿ ತನ್ನ ಸ್ವತಃ ಜೀವವನ್ನು ಕೂಡಾ ನೀಡಲು ಹಿಂಜ...

ಚರಿತ್ರೆಯೊಲ್ಲೊಂದು ಚಿನ್ನದ ಗರಿ

ಚರಿತ್ರೆಯಲ್ಲೊಂದು ಚಿನ್ನದ ಗರಿ ಬೀವಿ ಪೂರ್ಣ ಗರ್ಭಿಣಿ . ಯಾವುದೇ ಕ್ಷಣದಲ್ಲೂ ಹೆರಿಗೆ ಸಂಭವಿಸಬಹುದು. ಪರಿಸ್ಥಿತಿ ಹೀಗಿದ್ದರೂ ಮಕ್ಕಾದಲ್ಲಿ ಇನ್ನು ನಿಲ್ಲುವುದು ಮಾತ್ರ ಅಪಾಯಕಾರಿ. ಅಲ್ಲಿನ ವಾತಾವರಣ ಅಷ್ಟಕ್ಕೂ ಹದಗೆಟ್ಟಿದೆ. ಪ್ರಾಣಕ್ಕೆ ಕುತ್ತಾಗಬಹುದೆಂಬ ಭೀತಿ ಆ ಮಹಿಳಾಮಣಿಯನ್ನು ಕಾಡಿರಬೇಕು ಎಂಬ ತಪ್ಪು ಕಲ್ಪನೆಯಿಟ್ಟುಕೊಳ್ಳಬೇಡಿ. ತನ್ನ ಮನಸ್ಸಿನಲ್ಲಿ ಮೊಳಕೆಯೊಡೆದಿರುವ ಪವಿತ್ರ ಇಸ್ಲಾಮ್ ಚೌಕಟ್ಟಿನೊಳಗೆ ಬದುಕಲು ಮತ್ತು ಅಲ್ಲಾಹನೊಂದಿಗೆ ಇಟ್ಟುಕೊಂಡ ಅಚಂಚಲವಾದ ನಂಬಿಕೆಯನ್ನು ಕೊನೆಯುಸಿರಿನ ತನಕವೂ ಕಾಪಾಡಿಕೊಂಡು ಬರಲು ಮಕ್ಕಾವನ್ನು ತೊರೆಯಲೇಬೇಕಾದ ಅನಿವಾರ್ಯತೆಗೆ ಸಿಲುಕಿದರು. ಅದರಂತೆ ಅವರು ಮದೀನಾಗೆ ಕುಟುಂಬ ಸಮೇತ ಹೊರಟುಬಿಟ್ಟರು.           ಅತ್ಯಂತ ಕ್ಲೇಶಕರವಾದ ಯಾತ್ರೆಯಾಗಿತ್ತದು. ಪ್ರತೀಕ್ಷಣವೂ ಮುಂದೇನಾಗಬಹುದೆಂಬ ಆತಂಕ ಕೂಡ ಅವರನ್ನು ಆವರಿಸಿಕೊಂಡಿತ್ತು. ಗುರಿ ಮುಟ್ಟುವ ಮುನ್ನ ಹೆರಿಗೆ ನೋವು ಕಾಣಿಸಿಕೊಳ್ಳಲೂ ಬಹುದು. ವೈರಿಗಳು ಮುಗಿಬಿದ್ದು ಕೊಂದು ಬಿಡಲೂ ಸಾಕು. ಆದರೂ ಆ ನಾರೀಮಣಿ ಕಿಂಚಿತ್ತೂ ಧೃತಿಗೆಡದೆ ಯಾವುದನ್ನೂ ಲೆಕ್ಕಿಸದೆ ಬಂದದ್ದು ಬರಲಿ ಎನ್ನುತ್ತಾ ಮುಂದೆ ಸಾಗಿದರು. "ಖುಬಾಅ್ ಎನ್ನುವ  ಸ್ಥಳವನ್ನು ತಲುಪಿದಾಗ ಅವರು ಅಂದುಕೊಂಡಂತೆಯೇ ನಡೆದುಬಿಟ್ಟಿತು. ತೀವ್ರವಾದ ಹೆರಿಗೆ ನೋವು ಕಾಣಿಸಿಕೊಂಡಿತು. ಸರ್ವಶಕ್ತನ ಅಪಾರ ಅನುಗ್ರಹ ಮತ್ತು ನೆರವು ಅವರ ಪರವಾಗಿತ್ತು...

ದೂರ ದಿಗಂತದಲ್ಲಿ ಬಾಡಿದ ಕನಸುಗಳು

ದೂರ ದಿಗಂತದಲ್ಲಿ ಬಾಡಿದ ಕನಸುಗಳು ಮೇಲಂಗಡಿಯ ಆಮದಾಕ ಗಲ್ಫ್ ಜೀವನವನ್ನು ಕೊನೆಗೊಳಿಸಿ ವರ್ಷ ಹಲವಾದವು. ಊರಿಗೆ ಬಂದ ನಂತರ ಒಂದೇ ಒಂದು ದಿವಸವೂ ಗಲ್ಫಿನ ಕಥೆಗಳನ್ನು ಹೇಳದೆ ಅವರು ನೆಮ್ಮದಿಯಾಗಿ ನಿದ್ರಿಸಿಯೇ ಇಲ್ಲ ಎನ್ನಬಹುದು. ಗಲ್ಫ್ ಬದುಕಿನ ಬಗ್ಗೆ ಹೇಳಿಕೊಳ್ಳುವುದೆಂದರೆ ಆಮದಾಕರಿಗೆ ಅದೇನೋ ನೆಮ್ಮದಿ. ತನ್ನ ಕಥೆಗಳನ್ನು ಕೇಳಲು ಯಾರೂ ಸಿಗದಿದ್ದರೆ ಹೆಂಡತಿಯನ್ನು ಮುಂದೆ ಕೂರಿಸಿಯಾದರೂ ತೃಪ್ತಿಯಾಗುವಂತೆ ಕೊರೆಯುತ್ತಿದ್ದರು. ಹೇಳಿದ ಕಥೆಗಳನ್ನೇ ಮತ್ತೆ ಮತ್ತೆ ಹೇಳಿ ಹೆಂಡತಿಯನ್ನು ಪೀಡಿಸುತ್ತಿದ್ದರು. ಅವರ ಕಥೆಗಳನ್ನು ಕೇಳಿ ಕೇಳಿ ಸಾಕಾಗಿ ಊರಿನವರು ಆಮದಾಕ ಎಂದರೆ ತಲೆತಪ್ಪಿಸಿಕೊಳ್ಳತೊಡಗಿದರು.       ಹೀಗಿರುವಾಗ ಒಂದು ದಿನ ನಾನು ಆಮದಾಕನ ಮನೆಯ ಮುಂದೆ ಹೋಗುತ್ತಿದ್ದವನು "ಪಾಪ ಪ್ರಾಯದವರೆಲ್ಲವೇ? ಒಮ್ಮೆ ಮಾತಾಡಿಸಿಕೊಂಡು ಬರೋಣ" ಎಂದು ಅವರ ಮನೆಯೊಳಗೆ ಹೋದೆ. ಆಮದಾಕರ ಸಂತೋಷಕ್ಕೆ ಪಾರವೇ ಇರಲಿಲ್ಲ. ಹೆಂಡತಿಗೆ ಚಹಾ ಮಾಡುವಂತೆ ಆರ್ಡರ್ ಮಾಡಿ ಆಮದಾಕ ಮಾತನಾಡಲು ಶುರು ಮಾಡಿದರು. ಪಾಪ ಅವರ ಹೆಂಡತಿಗೆ ಇಂದಾದರೂ ನೆಮ್ಮದಿಯಿಂದ ನಿದ್ರಿಸಬಹುದಲ್ಲಾ ಎಂದು ಅನಿಸಿರಬೇಕು. ಆದ್ದರಿಂದ ಉತ್ಸಾಹದಲ್ಲೇ ಚಹಾ ಮಾಡಲು ಅಡುಗೆಮನೆಗೆ ಹೋದರು. ಆಮದಾಕರ ಕಥೆ ಹೀಗಿತ್ತು....          1970 ರಲ್ಲಿ ಯಾವುದೋ ಒಂದು ಬೇಸಿಗೆಯಲ್ಲಿ ಆಮದಾಕ ಮುಂಬೈ ಬಸ್ಸು ಹತ್ತಿದ್ದರು . ಊರಿನವರಾದ ಹಸನ್ ಹಾಜಿಯವರು ...

ಜುಬೈದಾ

السَّـــــــلاَمُ عَلَيــْــكُم وَرَحْمَةُ اللهِ وَبَرَكـَـاتُه ಜುಬೈದಾ ವಿಧವೆಯ ವಿವಾಹ ಜೀವನ ಆತ್ಮೀಯ ಓದುಗರಲ್ಲಿ ಬದುಕು ಭಾವನೆಯೊಂದಿಗೆ ರಾಜಿಯಾದಷ್ಟು ವಿಚಾರದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ.. ವ್ಯಕ್ತಿಗಳಲ್ಲಿನ ಬದಲಾವಣೆ ಮುಖ್ಯವಾಗಿ ಪರಿಸರ ಬದಲಾಗುವ ಸ್ಥಾನ-ಮಾನಗಳು. ಆಸೆ ಆಕಾಂಕ್ಷೆಗಳನ್ನು ಅವಲಂಬಿಸಿರುತ್ತದೆ ಇಂಥ ಆಕರ್ಷಣೆ ಭಾವನೆಗಳ ಜೊತೆ ನಿರಂತರ ಘರ್ಷಣೆಯಿಂದ ಸೋಲನ್ನು ಅನುಭವಿಸುತ್ತದೆ ಇಂಥ ನೈಜ ಕಥಾವಸ್ತು ಕಾದಂಬರಿ ರೂಪದಲ್ಲಿ ನಿಮ್ಮ ಮುಂದೆ ತಂದಿದ್ದೇನೆ ಎಲ್ಲ ಧರ್ಮಗಳ ಅಪಾರ ಓದುಗರ ಬಳಗವಿರುವುದರಿಂದ ಧಾರ್ಮಿಕತೆಗೆ ಧಕ್ಕೆಯಾಗದಂತೆ ಅಕ್ಷರಗಳನ್ನು ಜೋಡಿಸಿರುತ್ತೇನೆ ಅದೇ ರೀತಿ ಈ ಕಾದಂಬರಿಯನ್ನು ಬಡ ಹೆಣ್ಣು ಮಕ್ಕಳ ಆಶಾಕಿರಣವಾದ ಡೌರಿ ಫ್ರೀ ನಿಖಾಃಹ್ ಗ್ರೂಪ್ ಸಹಯೋಗದೊಂದಿಗೆ ಬಿಡುಗಡೆ ಮಾಡುತ್ತಿದ್ದೇವೆ ಸದಾ ನಿಮ್ಮ ಪ್ರೀತಿ ವಿಶ್ವಾಸ ಸಿಕ್ಕುತ್ತದೆ ಎಂಬ ಭರವಸೆಯೊಂದಿಗೆ ಪರಮದಯನಾದ ಅಲ್ಲಾಹನ ನಾಮದಿಂದ........ ಕೆಎಂ ಜಲೀಲ್ ಕುಂದಾಪುರ ಆಗ ತಾನೇ ಆಫೀಸಿನಿಂದ ನೇರವಾಗಿ ಮಸೀದಿಗೆ ತೆರಳಿ ಲುಹರ್ ನಮಾಝ್ ಮುಗಿಸಿ ತನ್ನ ಮನೆಯ ಹೊರಾಂಗಣದಲ್ಲಿ ಅಂದಿನ ದಿನ ಪತ್ರಿಕೆ ಓದುತ್ತ ಕುಳಿತ ಇಲ್ಯಾಸ್ ಭಾಯ್ ತಮ್ಮ ಎದುರಿಗೆ ಬಂದು ನಿಂತ ಯುವಕನತ್ತ ದೃಷ್ಟಿ ಹಾಯಿಸಿದರು. ಅವನಾದರೋ ಅವರು ತನ್ನನ್ನು ನೋಡಲೆಂದೇ ಕಾಯುತ್ತಿರುವಂತಿತ್ತು ಆರೆಕ್ಷಣವೂ ತಡಮಾಡದೇ.... "ಅಸ್ಸಲಾಮು...

ಪ್ರವಾದಿ (ಸ.ಅ) ವಿದಾಯದ ಪ್ರಭಾಷಣ

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ವಿದಾಯ ಪ್ರಭಾಷಣ (ಅರಫಾ ಪ್ರಬಾಷಣ) ಜಬಲುಲ್ ರಹ್ಮಾ (ಅರಫಾ ಮೈದಾನದಲ್ಲಿರುವ ಬೆಟ್ಟದ ಹೆಸರು) ಕಾರುಣ್ಯದ ಪರ್ವತವೆ೦ದು ಅರಿಯಲ್ಪಡುವ ಜಬಲುಲ್ ರಹ್ಮಾ. ಜಬಲುಲ್ ರಹ್ಮಾ ಎ೦ದರೆ "ಅನುಗ್ರಹಿತ ಪರ್ವತ" ಎ೦ದರ್ಥ. ಅರಫಾ ಮೈದಾನದ ಮಧ್ಯಭಾಗದಲ್ಲಾಗಿ ನೆಲೆನಿ೦ತಿರುವ ಚರಿತ್ರೆ ಪ್ರಸಿದ್ದವಾದ ಪರ್ವತವಾಗಿದೆ ಇದು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ತಮ್ಮ ವಿದಾಯ ಪ್ರಭಾಷಣವನ್ನು ನೆರವೇರಿಸಿದ್ದು ಜಬಲುಲ್ ರಹ್ಮಾದಲ್ಲಾಗಿತ್ತು. ಈ ಪರ್ವತದ ಮೇಲೆ ಹತ್ತಿ ನಿ೦ತುಕೊ೦ಡಾಗಿದೆ ಅ೦ತಿಮ ಪ್ರವಾದಿ (ಸ.ಅ) ಹಿಜ್ರಾಃ ಹತ್ತನೇ ವರುಷದ ಹಜ್ಜ್ ಮಹಾ ಸಮ್ಮೇಳನದಲ್ಲಿ ಪ್ರಭಾಷಣ ಮಾಡಿದ್ದು. ಹಿಜ್ರಾಃ ಹತ್ತನೇ ವರುಷದ ದುಲ್ ಖೈದ್ (ಅರಬಿಕ್ ಕ್ಯಾಲೆ೦ಡರಿನ ಹನ್ನೋ೦ದನೆ ತಿ೦ಗಳು) ಮಾಸದ ಇಪ್ಪತ್ತೈದನೇ ತಾರೀಖು ಶನಿವಾರ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರೂ, ಅನುಯಾಯಿಗಳೂ ಹಜ್ಜ್ ನಿರ್ವಹಿಸಲಿಕ್ಕಾಗಿ ಹೊರಟರು. ಪ್ರವಾದಿ (ಸ.ಅ) ಅರಫಾದ ಹತ್ತಿರ 'ನಮೀರ' ಎ೦ಬ ಸ್ಥಳದಲ್ಲಿ ನಿರ್ಮಿಸಿದ ಟೆ೦ಟಲ್ಲಿ ಮಧ್ಯಾಹ್ನದ ತನಕ ಸಮಯವನ್ನು ಕಳೆದರು. ಲುಹರ್ ಸಮಯವಾದಾಗ ಪ್ರವಾದಿ (ಸ.ಅ) ತಮ್ಮ ಒ೦ಟೆಯನ್ನು ಹತ್ತಿದರು. 'ಬತನುಲ್ ವಾದಿ' (ಇವತ್ತು ಅರಫಾದ ಮಸೀದಿಯು ಇರುವ ಸ್ಥಳ) ಚರಿತ್ರೆ ಪ್ರಸಿದ್ದವಾದ ತಮ್ಮ ಖುತುಬತ್ತುಲ್ ವಿದಾಹ್. (ವಿದಾಯ ಪ್ರಭಾಷಣ) ನಿರ್ವಹಿಸಿದ್ದು. ಒ೦ದು ಲಕ್ಷಕ್ಕಿ೦ತಲೂ ಅಧಿಕ ಜನರು ಪ್ರವಾದಿ (ಸ....

ಉತ್ತಮ ಕುಟುಂಬಕ್ಕೆ ಹದಿನಾಲ್ಕು ಸೂತ್ರಗಳು

ಉತ್ತಮ ಕುಟುಂಬಕ್ಕೆ ಹದಿನಾಲ್ಕು ಸೂತ್ರಗಳು ಮುನ್ನುಡಿ: ಕುಟುಂಬವೆಂದ ಮೇಲೆ ಅಲ್ಲಿ ಸಮಸ್ಯೆಗಳು ಇದ್ದೇ ಇರುತ್ತದೆ. ಆದರೆ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದು ಕುಟುಂಬ ಸದಸ್ಯರ ಜಾಣತನ. ಕುಟುಂಬದೊಳಗೆ ಉದ್ಭವಿಸುವ ಸಮಸ್ಯೆಯನ್ನು ಯಾರು ಹೇಗೆ ಎದುರಿಸುತ್ತಾರೆ , ಯಾವ ರೀತಿಯ ಪರಿಹಾರ ಕಂಡುಕೊಳ್ಳುತ್ತಾರೆ ಎಂಬುದರ ಮೂಲಕ ಸುಖೀ ಕುಟುಂಬವೊಂದನ್ನು ಅಳೆಯಬಹುದು. ನಿಮ್ಮದು ಸುಖೀ ಕುಟುಂಬವಾಗಬೇಕಾದರೆ ಇಲ್ಲಿ ಹದಿನಾಲ್ಕು ಸೂತ್ರಗಳಿವೆ. 1.ಸಮಸ್ಯೆಗಳನ್ನು ಪಕ್ಷತೆಯಿಂದ ಎದುರಿಸುವುದು. ಕುಟುಂಬ ಜೀವನದಲ್ಲಿ ಸಮಸ್ಯೆಗಳು ಸ್ವಾಭಾವಿಕ . ಸಮಸ್ಯೆಗಳಿಗೆ ಬಡವ , ಶ್ರೀಮಂತ ಎಂಬುವ ಬೇಧಭಾವವೂ ಇಲ್ಲ. ಎಲ್ಲರ ಮನೆಯ ದೋಸೆಯೂ ತೂತೆ ಎಂಬ ನಾಣ್ಣುಡಿ ಕೇಳಿಲ್ಲವೇ? ಸಮಸ್ಯೆಗಳೆಂಬ ತೂತು ದೋಸೆಗಳು ಎಲ್ಲರ ಮನೆಯಲ್ಲೂ ಕಾಣಸಿಗುತ್ತದೆ. ಆದರೆ , ಅದನ್ನು ನಿರ್ವಹಿಸುವ ರೀತಿಯಲ್ಲಿ ಮಾತ್ರ ವ್ಯತ್ಯಾಸಗಳಿರುತ್ತವೆ. ಕೆಲವರು ಸಮಸ್ಯೆಗಳನ್ನು ಪಕ್ವತೆಯಿಂದ ನಿರ್ವಹಿಸಿ ತಮ್ಮ ಕುಟುಂಬವನ್ನು ಹೋಳಾಗದಂತೆ ರಕ್ಷಿಸಿಕೊಳ್ಳುತ್ತಾರೆ. ಇನ್ನು ಕೆಲವರು ಅತಿಯಾಗಿ ವರ್ತಿಸಿ, ಮೂರ್ಖರಂತೆ ತಮ್ಮ ಬುದ್ದಿಗೆ ಕೋಲು ಕೊಟ್ಟು ಕುಟುಂಬ ಜೀವನವನ್ನೇ ಕಳೆದುಕೊಳ್ಳುತ್ತಾರೆ. ಸಾಯುವವರೆಗೂ ನೆಮ್ಮದಿಯಿಲ್ಲದೆ ಕಳೆಯುವ ಆ ಯಾತನೆ ಮನುಷ್ಯನಾದವನಿಗೆ ಬೇಕೇ? ಖಂಡಿತ ಬೇಡ. ಹಾಗಾದರೆ , ನಾವು ನಮ್ಮ ಕುಟುಂಬದೊಳಗಿನ ಸಮಸ್ಯೆಗಳನ್ನು ಪಕ್ವತೆಯಿಂದ , ಜಾಣತನದಿಂದ ಎದುರಿಸಿ, ಪರಿಹಾ...

ಸತ್ಯ ವಿಶ್ವಾಸಿಗಳ ಗಮನಕ್ಕೆ

ಸತ್ಯ ವಿಶ್ವಾಸಿಗಳ ಗಮನಕ್ಕೆ ಇಬ್ನು ಅಬ್ಬಾಸ್ ರಲಿಯಲ್ಲಾಹು ಅನ್ಹು ರವರಿಂದ ವರದಿ: ಅಂತ್ಯ ದಿನ ಸಮೀಪಿಸುವಾಗ ಒಂದು ವಿಭಾಗದ ಜನತೆ ಬರಲಿದ್ದಾರೆ. ಪಾರಿವಾಳಗಳ ಕುತ್ತಿಗೆಯ ಸುತ್ತ ಇರುವ ಬಣ್ಣದ ವೃತ್ತಾಕಾರದ ಗುರುತಿನಂತೆ ತಮ್ಮ ರೋಮಗಳಿಗೆ ಅವರು ಬಣ್ಣ ಬಳಿಯುವವರಾಗಿರುವರು. ಅಂತವರಿಗೆ ಸ್ವರ್ಗದ ಪರಿಮಳವೂ ದೊರೆಯದು. (ಅಬೂದಾವೂದ್) ಕೂದಲಿಗೆ ಬಣ್ಣ ಕೊಡುವುದರಿಂದ ಉಂಟಾಗುವ ತೊಂದರೆಗಳು. ✳ಕಡ್ಡಾಯ ಸ್ಥಾನ ಸಿಂಧುವಾಗದು. ✳ಸ್ಥಾನ ಸಿಂಧುವಾಗದಿದ್ದಲ್ಲಿ. ಮಸೀದಿ ಪ್ರವೇಶ ಹರಾಂ ಆಗುತ್ತದೆ. ✳ಖುರ್ ಆನ್ ಪಾರಾಯಣ ಹರಾಂ ಆಗುತ್ತದೆ. ✳ವುಳೂ ಸಿಂಧುವಾಗದು. ✳ವುಳೂ ಅಸಿಂಧುವಾದರೆ ನಮಾಝ್ ಬಾತಿಲ್ ಆಗುತ್ತದೆ. ✳ಮುಸ್ಹಫನ್ನು ಮುಟ್ಟುವುದು ಹರಾಂ. ✳ತವಾಫ್ ಸಿಂಧುವಾಗದು. ✳ಕಡ್ಡಾಯ ತವಾಫ್ ಬಾತಿಲ್ ಆದರೆ ಹಜ್ಜ್ ಕರ್ಮವೇ ಅಸಿಂಧುವಾಗುತ್ತದೆ. ಆದ್ದರಿಂದ ಕೂದಲಿಗೆ ಬಣ್ಣ ಕೊಡುವವರೇ ಜಾಗೃತೆ. ಬಣ್ಣ ಕೊಡುವುದು ಸುಲಭ ಆದರೆ ಅದರ ಪರಿಣಾಮಗಳು ಅತೀ ಗಂಭೀರ. ಇಹದ ಸುಖಲೋಲುಪತೆಗೆ ಬೇಕಾಗಿ ಅತ್ಯಮೂಲ್ಯವಾದ ಪರಲೋಕವನ್ನು ಮಾರಟ ಮಾಡದಿರಿ. ಈ ಕೂದಲಿಗೆ ಬಣ್ಣ ಕೊಡುವುದರ ತೊಂದರೆಯನ್ನು ಅರಿಯದೆ ಹಲವಾರು ಜನರ ತಂದೆಯಂದಿರು ಬಿಳಿ ಕೂದಲಿಗೆ ಬಣ್ಣ ಕೊಡುವುದಾಗಿ ಕಾಣಬಹುದು. ಈ ಕೂದಲಿಗೆ ಬಣ್ಣ ಕೊಡುವುದರ ತೊಂದರೆ ಯನ್ನು ಅರಿತಿರುವ ನಾವು ಅವರಿಗೆ ಅದರ ಅರಿವನ್ನು ಮೂಡಿಸಬೇಕು. ಪತ್ನಿ ಪತಿಗೆ ತಿಳಿಸಿ ಕೊಡಬೇಕು. ಮಕ್ಕಳು ತಂದೆಗೆ ತಿಳಿಸಿ ಕೊಡಬೇಕು. ಹೀಗೆ ಯಾರು ಬಣ್ಣ...

ಆಚಾರವಿಲ್ಲದ ನಾಲಗೆ

ಆಚಾರವಿಲ್ಲದ ನಾಲಗೆ.. ನಾವು ತಿಳಿದೋ ತಿಳಿಯದೆಯೋ ಮಾಡುವಂತಹ ದೊಡ್ಡ ಪಾಪವೆಂದರೆ ಇನ್ನೊಬ್ಬರ ಬಗ್ಗೆ ಮಾತನಾಡುವುದು. ಇಬ್ಬರು ಅಥವಾ ಗುಂಪು ಜತೆಯಾದರೆ ಇನ್ನೊಬ್ಬನ ಬಗ್ಗೆಯೇ ನಮ್ಮ ಮಾತಕತೆಯಿರುತ್ತದೆ. ಇಸ್ಲಾಮ್ ವ್ಯಭಿಚಾರಕ್ಕಿಂತಲೂ ದೊಡ್ಡ ಪಾಪಗಳೆಂದು ಹೇಳಿರುವ ಕೆಲವು ದುಷ್ಕರ್ಮಗಳಿವೆ. ಅವುಗಳ ಪೈಕಿ ಪರದೂಷಣೆಯು ಪ್ರದಾನವಾದುದಾಗಿದೆ. ಪರದೂಷಣೆ ಎಂದರೇನು? ಎಂದು ಪ್ರವಾದಿಯವರೊಡನೆ(ಸ.ಅ)ರಲ್ಲಿ ಕೇಳಲಾಯಿತು. ಆಗ ಅವರು ಹೇಳಿದರು “ನೀನು ನಿನ್ನ ಸಹೋದರನ ಬಗ್ಗೆ ಅವನಿಗೆ ಅಸಮಾಧಾನ ಉಂಟಾಗುವಂತಹ ರೀತಿಯಲ್ಲಿ ಪ್ರಸ್ತಾಪಿಸುವುದು. ಮತ್ತೆ ಪ್ರಶ್ನಿಸಿದವರು " ನಾನು ಪ್ರಸ್ತಾಪಿಸುವಂತಹ ವಿಷಯ ನನ್ನ ಸಹೋದರನಲ್ಲಿದ್ದರೆ ನಿಮ್ಮ ಅಭಿಪ್ರಾಯವೇನು?” ಎಂದು ಕೇಳಲಾಯಿತು. ಅದಕ್ಕೆ ಪ್ರವಾದಿಯವರು(ಸ.ಅ) ಹೇಳಿದರು. ಅವನಲ್ಲಿ ಆ ವಿಷಯ ಇದ್ದಾಗಲೇ ಅದು ಪರದೂಷಣೆ ಎನಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಅದು ಆರೋಪವೆನಿಸಿಕೊಳ್ಳುತ್ತದೆ.” ಇಂದು ನಾವು ಈ ಮಹಾ ಅಪರಾಧವನ್ನು ಕ್ಷುಲ್ಲಕವೆಂದು ಭಾವಿಸಿ ದಿನನಿತ್ಯ ಮಾಡುತ್ತಿದ್ದೇವೆ. ಜನರು ‘ಟೈಂಪಾಸ್’ ಎಂಬ ನೆಲೆಯಲ್ಲಿ ಮಾಡುತ್ತಿರುವುದು ಈ ಪರದೂಷಣೆಯನ್ನಾಗಿದೆ. ನಾವು ಟೈಮ್ ಪಾಸಿಗಾಗಿ ಕಂಡುಕೊಂಡ ಒಂದು ಮಾರ್ಗ ಮೂರನೆಯವನ ಬಗ್ಗೆ ಮಾತನಾಡುವುದು. ಕಟ್ಟೆಗಳಲ್ಲಿ ಕ್ಲಾಸುಗಳಲ್ಲಿ ದೂರವಾಣಿಯಲ್ಲಿ ಮದುವೆ ಸಮಾರಂಭಗಳಲ್ಲಿ ನಾವು ಈ ಅಪರಾಧದ ವಕ್ತಾರರಾಗುತ್ತಿದ್ದೇವೆ.ಇನ್ನೊಬ್ಬನ ಬಗ್ಗೆ ನಾವು ಮಾತನಾಡುವಾಗ ಎಲ್ಲ...

ತಪ್ಪು ಒಪ್ಪೋಲೆ

ತಪ್ಪು - ಒಪ್ಪೋಲೆ "ತಪ್ಪುಗಳು ತುಬ್ಬಿಕೆಗಳ ತಲೆಬಾಗಿಲುಗಳು" ಈ ಮಾತನ್ನು ಹೇಳಿದವರು ಜೇಮ್ಸ್ ಜೊಯ್ಸ್ ಎಂಬುವವರು; ಇವರು ಅಮೇಜಾನ್ ಎನ್ನುವ ಒಂದು ಅತಿ ಪ್ರಖ್ಯಾತ ವೆಬ್-ಸೈಟನ್ನು ತಮ್ಮ ಒಂದು ಸಣ್ಣ ತಪ್ಪಿನಿಂದ 24 ಘಂಟೆಗಳ ಕಾಲ ಕೆಲಸ ಮಾಡದಂತೆ ಮಾಡಿ, ಅದರಿಂದ ಅಮೇಜಾನ್ ಕಂಪನಿಯು ಕೋಟ್ಯಂತರ ಡಾಲರ್ ಗಳ ನಷ್ಟವನ್ನು ಅನುಭವಿಸುವಂತೆ ಮಾಡಿದ ಮಹಾನುಭಾವ. ನಮ್ಮ ತಪ್ಪುಗಳು ಈ ರೀತಿಯ ದೊಡ್ಡ ದೊಡ್ಡ ನಷ್ಟಗಳನ್ನು ಮಾಡದಿದ್ದರೂ, ಸ್ವಲ್ಪವಾದರೂ ನಷ್ಟವನ್ನು ಮಾಡೇ ಮಾಡುತ್ತವೆ. ತಪ್ಪುಗಳನ್ನು ಮಾಡದವರು ಯಾರಿದ್ದಾರೆ ಹೇಳಿ? ಆದರೆ ನಮ್ಮ ತಪ್ಪುಗಳನ್ನು ಅರಿತು, ನಮ್ಮನ್ನು ನಾವು ತಿದ್ದಿಕೊಂಡು ಪುನಃ ಅಂಥದೇ ತಪ್ಪುಗಳನ್ನು ಮಾಡದೆ ಇರುವುದೆ ಜಾಣ್ಮೆ. ನಮ್ಮ ತಪ್ಪುಗಳನ್ನು ನಮ್ಮ ಉನ್ನತಿಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ಕೆಲವು ವಿಧಾನಗಳನ್ನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. 1. ನಮ್ಮ ತಪ್ಪುಗಳ ಜವಾಬ್ದಾರಿಯನ್ನು ನಾವೇ ಹೊತ್ತುಕೊಳ್ಳುವುದು ಸಾಮಾನ್ಯವಾಗಿ ನಾವು ಪರಿಸ್ಥಿತಿಯ ಅಡಿಯಾಳುಗಳಾಗಿ ತಪ್ಪುಗಳನ್ನು ಮಾಡುತ್ತೇವೆಂದು ಭಾವಿಸಿರುತ್ತೇವೆ. ಅಥವಾ ಬೇರೆಯವರ ಕುತಂತ್ರವನ್ನೊ ಅಥವಾ 'ಇವತ್ತ್ಯಾಕೊ ದಿನಾನೇ ಸರಿಯಾಗಿಲ್ಲ' ಅಂತಾದ್ರೂ ಹೇಳಿಕೊಂಡು ನಮ್ಮ ತಪ್ಪುಗಳ ಜವಾಬ್ದಾರಿಯನ್ನು ಕಳಚುವ ಪ್ರಯತ್ನವನ್ನು ಸಹಜವಾಗಿ ಮಾಡುತ್ತೇವೆ. ನಿಜವಾಗಿಯೂ ಉತ್ತಮ ನಾಯಕರು/ಮುಂದಾಳುಗಳು (ಲೀಡರ್ಸ್) ತಮ್ಮ ತಪ್ಪುಗಳ ಜವಾಬ್ದಾರಿಯನ್ನು ತ...

ನಾವ್ಯಾಕೆ ತಪ್ಪು ಮಾಡುತ್ತೇವೆ

ನಾವ್ಯಾಕೆ ತಪ್ಪು ಮಾಡುತ್ತೇವೆ..? ಮನುಷ್ಯನೆಂದೂ ಪರಿಪೂರ್ಣನಲ್ಲ. ಆತನಲ್ಲಿ ತಪ್ಪುಗಳು, ಒಪ್ಪುಗಳು ಇದ್ದೇ ಇರುತ್ತವೆ. ತಪ್ಪು ಮಾಡುವುದು ಸಹಜ ಆದರೆ ಅದನ್ನು ತಿದ್ದಿ ಸರಿದಾರಿಯಲ್ಲಿ ನಡೆಯುವುದು ಜಾಣತನ. ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಒಂದಲ್ಲ ಒಂದು ತಪ್ಪನ್ನು ಮಾಡಿಯೇ ಮಾಡುತ್ತಾನೆ. ಇಲ್ಲಿ ತಪ್ಪು ಯಾರು ಹೇಗೆ ಮಾಡಿದ್ದಾರೆ ಎಂಬುದು ಪ್ರಶ್ನೆಯಲ್ಲ ಯಾಕಾಗಿ ಆ ತಪ್ಪು ಆಗಿ ಹೋಯಿತು? ಅದನ್ನು ತಿದ್ದುವುದಾದರೂ ಹೇಗೆ ಎಂಬುದು ಚಿಂತಿಸಬೇಕಾದ ವಿಷಯ. ಚಿಕ್ಕವರಿರುವಾಗ ನಾವು ಅದೆಷ್ಟೋ ತಪ್ಪುಗಳನ್ನು ಮಾಡುತ್ತೇವೆ. ಆವಾಗ ನಮ್ಮ ಹೆತ್ತವರು, ಹಿರಿಯರು, ಟೀಚರ್್ಗಳು ಕೆಲವೊಮ್ಮೆ ಗುದ್ದು ನೀಡಿ ಮತ್ತೊಮ್ಮೆ ಮುದ್ದು ಮಾಡಿ ಆ ತಪ್ಪುಗಳನ್ನು ತಿದ್ದಲು ಸಹಕರಿಸುತ್ತಾರೆ. ನಮ್ಮ ಅಪ್ಪ ಅಮ್ಮ ನಾವು ಚಿಕ್ಕದಿರುವಾಗ ಮಾಡಿದ ಅದೆಷ್ಟೋ ತಪ್ಪುಗಳನ್ನು ಕ್ಷಣ ಮಾತ್ರದಲ್ಲಿ ಕ್ಷಮಿಸಿ ಬಿಡುತ್ತಾರೆ. ಆದರೆ ನಾವು ದೊಡ್ಡವರಾದಾಗ ನಮ್ಮ ಅಪ್ಪ ಅಮ್ಮ ( ವೃದ್ಧರಾಗಿರುತ್ತಾರೆ) ಯಾವುದಾದರೂ ಚಿಕ್ಕ ತಪ್ಪು ಮಾಡಿದರೆ ಗುರ್ರ್ ಅನ್ನುತ್ತೇವೆ. ಇದ್ಯಾಕೆ ಹೀಗೆ? ತಪ್ಪು ಮಾಡಿದ್ದು ಯಾರೇ ಆಗಿರಲಿ ಅದನ್ನು ಪ್ರೀತಿಯಿಂದ ಕ್ಷಮಿಸುವುದರಲ್ಲಿ ಒಂದು ರೀತಿಯ ತೃಪ್ತಿಯಿದೆ. ಕೆಲವೊಮ್ಮೆ ಪ್ರೀತಿ ಮಾಡಿದ್ದೇ ತಪ್ಪು ಅಂತಾ ನಾವು ಅಂದುಕೊಳ್ಳುತ್ತೇವೆ. ನಿಜವಾಗಿಯೂ ಪ್ರೀತಿ ಎಂಬುದು ತಪ್ಪಲ್ಲ. ಆದರೆ ಯಾವಾಗ ಲವ್ ಬ್ರೇಕ್ ಅಪ್ ಆಗುತ್ತದೋ ಆವಾಗ ನಾನು ಮಾಡಿದ್ದು ತಪ್ಪು ಎಂ...

ಕ್ಷಮಿಸಿ ಮೇಡಂ

ಕ್ಷಮಿಸಿ ಮೇಡಂ ಬಾಲವಿಲ್ಲದ ಕೋತಿಯನ್ನ ಗಡಿಯಾರವನ್ನೆ ಮಕಾಡೆ ಮಲಗಿಸಿ, ಟೈಮ್ ಮ್ಯಾನೇಜ್‌ಮೆಂಟ್ ಅನ್ನೋ ಪದವೇ ದೊಡ್ಡ ಕಂಟಕವಾಗಿದ್ದ ನಮಗೆ ಶಿಸ್ತನ್ನ ಕಲಿಸುತ್ತೆವೆ ಎನ್ನುವ ಗುರು ಬಂದರೆ ಕೇಳುವುದುಂಟೆ? ಅವರಿಗೆ ಅಶಿಸ್ತಿನಲ್ಲಿ ಎಂಥ ಗಮ್ಮತ್ತು ಇದೆ ಎಂದು ತೋರಿಸುವ ಬಾಲವಿಲ್ಲದ ಕೋತಿಗಳು ನಾವು. ಗಡಿಯಾರವನ್ನೆ ಮಕಾಡೆ ಮಲಗಿಸಿ, ಟೈಮ್ ಮ್ಯಾನೇಜ್‌ಮೆಂಟ್ ಅನ್ನೋ ಪದವೇ ದೊಡ್ಡ ಕಂಟಕವಾಗಿದ್ದ ನಮಗೆ ಶಿಸ್ತನ್ನ ಕಲಿಸುತ್ತೆವೆ ಎನ್ನುವ ಗುರು ಬಂದರೆ ಕೇಳುವುದುಂಟೆ? ಅವರಿಗೆ ಅಶಿಸ್ತಿನಲ್ಲಿ ಎಂಥ ಗಮ್ಮತ್ತು ಇದೆ ಎಂದು ತೋರಿಸುವ ಬಾಲವಿಲ್ಲದ ಕೋತಿಗಳು ನಾವು. ಆ ಬಾಲವನ್ನು ಮೊಟುಕುಗೊಳಿಸಲು ಒಬ್ಬ ಶಿಕ್ಷಕಿಯ ಆಗಮನವಾಯಿತು. ನಾವೋ ಶಿಸ್ತಿನ ದ್ವೇಷಿಗಳು. ಆದರೆ ತರಗತಿಗೆ ವೇಳೆಗೆ ಸರಿಯಾಗಿ ಬರದಿದ್ದರೆ ಹಾಜರಾತಿಯ ಇಲ್ಲ. ಒಳಗೆ ಸೇರಿಸುವುದಿಲ್ಲ ಎಂದು ಹೇಳಿದಾಗ ಕಿವಿಗೆ ಹಾಕಿಕೊಳ್ಳಲಿಲ್ಲ. ಬೇರೆಯವರ ಬುದ್ಧಿವಾದಕ್ಕೆ ಕಿವಿಗೊಡುವ ಸದ್ಬುದ್ಧಿ ಇದ್ದಿದ್ದರೆ ಎಷ್ಟೋ ಅನಾಹುತಗಳು ತಪ್ಪಬಹುದಿತ್ತೇನೊ. ಆದರೆ ಈ ಹದಿಹರೆಯದ ವಯಸ್ಸಿನಲ್ಲಿ ಯಾರ‌್ರಿ ಕೇಳೋರು. ಮೊದಲನೆ ಕ್ಲಾಸ್ ಮಿಸ್, ಎರಡು, ಮೂರು ಕ್ಲಾಸ್‌ಗಳು ಮಿಸ್ ಆದವು. ಊಹೂಂ ಆಗಲಿಲ್ಲ. ಮೊದಲೆ ಹಾಜರಾತಿಯ ಶೇಖಡವಾರು ಕಡಿಮೆ ಇದ್ದ ನಾವು ಪ್ರಿನ್ಸಿಪಲ್ ಗೆ ದೂರು ಮಾಡುವ ಎಂದು ಮಹತ್ತರ ನಿರ್ಧಾರ ಮಾಡಿದೆವು. ಆತುರಗಾರನಿಗೆ ಬುದ್ಧಿ ಮಟ್ಟ ಎಂಬಂತೆ ಹಾಜರಾತಿ, ಪಾಠ ಕಳೆದುಕೊಂಡ ಸಿಟ್ಟಿನಲ್ಲಿ ‘‘ನಾವು 5 ನಿ...