Posts

Showing posts from February, 2020

Noor-ul-Falah Quiz Scores

Noor-ul-Falah Quiz Score List ನೂರುಲ್ ಫಲಾಹ್ ಕ್ವಿಜ್ ಕಾಂಪಿಟಿಷನ್ ಸ್ಕೋರ್ ಲಿಸ್ಟ್.  Total Questions : 30 Remaining Days : 0 NAME CONTACT SCORE ASIYA *******68 29 KADHIJA FAHMA *******73 29 MUFAKKIR *******42 29 AYISHA *******22 27 HANNAMARIYAM *******06 27 MOHAMMED *******19 27 RAMLATH SAVAD *******04 27 SHAFI *******86 27 MOHAMMAD HARIS *******73 26 SURAYYA JARIGEBAIL *******33 26 ABDUL MAJEED *******13 25 MASHOODA JARIGEBAIL *******73 25 IMAZMUDIPU *******13 24 IBRAHIM KHALEEL *******86 23 MAIMOONA RAFFI *******81 23 SHAZA *******58 23 TANZIRA FATHIMA *******51 23 ಸಿದ್ದೀಕ್ ಸಾಝ್ *******35 23 BILAL RAFEEK *******04 22 SABEENA *******40 22 UMAIRATH HALYARA *******83 22 HUDA MARIYAM *******46 21 NAZEER BANGLORE *******27 21 FATHIMATH ZAHIRA *******84 19 AYISHATH MUFEEDA. K *******81 18 FAIROZA FATHIMA *******78 18 MUHAMMAD SHAHEED *******81 18 MUHAMMED MURSHID *******23 18 REHANAZ *******93 18 SAHADEEYA KALARA *******98 18 ABDUL RAZAK...

ಬ್ಯಾರಿ ಸಾಹಿತಿಗಾರರು, ಹಾಡುಗಾರರು , ನಿಮ್ಮಲ್ಲೊಂದು ಬದಲಾವಣೆ ತರಬಾರದೇ..

ಹೆಣ್ಣಿನ ಮೇಲೆ ಸಾಹಿತ್ಯ ಬರೆಯುವ ಬ್ಯಾರಿ ಸಾಹಿತಿಗಾರರು, ಹಾಡುಗಾರರು , ನಿಮ್ಮಲ್ಲೊಂದು ಬದಲಾವಣೆ ತರಬಾರದೇ..?? ✒ ರಜಬ್ ನಾವುಂದ (ಜ್ಞಾನದಾಹಿ) ದೈನಂದಿನವಾಗಿ ಹೆಚ್ಚಾಗುತ್ತಿರುವ ಸಾಹಿತಿಗಾರರ ಪ್ರತಿಭೆಯನ್ನು ನೋಡುವಾಗ ಬಹಳ ಸಂತೋಷವಾಗುತ್ತಿದೆ. ನಮ್ಮೆಡೆಯಲ್ಲಿ ಒಳಿತನ್ನು ಭೋದಿಸುವ ಬರಹಗಾರರು ಬೆಳೆಯುತ್ತಿದ್ದಾರೆ. ಉತ್ತಮ ಸಾಹಿತ್ಯವನ್ನು ವಿಭಿನ್ನ ಶೈಲಿಯಲ್ಲಿ ಹುಟ್ಟು ಹಾಕುವ ಸಾಹಿತಿಗಾರರು ಬೆಳೆಯುತ್ತಿದ್ದಾರೆ. ತನ್ನ ಮಧುರವಾದ ಕಂಠದಿಂದ ಜನರ ಮನಸ್ಸನ್ನು ಗೆಲ್ಲುವ ಹಾಡುಗಾರರಿದ್ದಾರೆ. ಆದರೆ ದುಃಖದ ವಿಷಯವೇನೆಂದರೆ ಹಲವು ಮಂದಿಯ ಸಾಹಿತ್ಯ ಹಾಗೂ ಮಧುರ ಕಂಠದ ಇಂಪಾದ ಧ್ವನಿಯು ಅಲ್ಲಾಹನಿಗೆ ಇಷ್ಟವಿಲ್ಲದ ಕಾರ್ಯಗಳಲ್ಲಿ ಮುಳುಗಿಹೋಗಿರುತ್ತದೆ. ಅಂತಹಾ ಸಾಹಿತಿಗಾರರೇ, ಹಾಡುಗಾರರೇ ನಿಮ್ಮಲ್ಲಿಯೇ ನೀವೊಂದು ಬದಲಾವಣೆ ತರಬಾರದೇ..?? ಅಲ್ಲಾಹನು ನೀಡಿರುವ ಅನುಗ್ರಹವಾಗಿರುವ ಸಾಹಿತ್ಯ ರಚನೆಯೂ , ಮಧುರವಾದ ಧ್ವನಿಯ ಮೂಲಕ ಹಾಡಲು ನೀಡಿರುವ ಧ್ವನಿಯೂ ಇವೆಲ್ಲವೂ ಅಲ್ಲಾಹನ ಅನುಗ್ರಹವಲ್ಲವೆ.? ಆದರೆ ನೀವದನ್ನು ಉಪಯೋಗಿಸುತ್ತಿರುವುದು ಶೈತಾನಿನ ಹಾದಿಯಲ್ಲಲ್ಲವೇ , ನಿಮಗೆ ನೀಡಿರುವ ಎಲ್ಲಾ ಅನುಗ್ರಹದ ಕುರಿತು ಅಲ್ಲಾಹನಲ್ಲಿ ಉತ್ತರಿಸುವ ಒಂದು ದಿನವಿದೆ ಎಂಬುವುದನ್ನು ಮರೆತು ಹೋಗಿದ್ದೀರಾ. ನೀವು ಬರೆಯುವ ಉತ್ತಮ ಸಾಹಿತ್ಯವನ್ನು ಯಾಕಾಗಿ ನೀವು ಯಾವುದೇ ಪ್ರಯೋಜನವಿಲ್ಲದ ಅನ್ಯ ಹೆಣ್ಣಿನ ಸೌಂದರ್ಯವನ್ನು ಅವಲಂಬಿಸಿ ಅವಳ ನಡೆ ನುಡಿಯ ಕುರಿತ...

Noor-ul-Falah Quiz - Demo

ಲೋಕಕ್ಕೆ ಮೊದಲನೆಯದಾಗಿ ನಿಯೋಜಿಸಲ್ಪಟ್ಟ ಪ್ರವಾದಿ ಯಾರು..? 1) ಯೂನುಸ್ ನಬಿ 2) ಯಅಕೂಬ್ ನಬಿ 3) ಆದಂ ನಬಿ 4) ಇಸ್ ಹಾಕ್ ನಬಿ ಈ ಫಾರ್ಮ್ ಮೂಲಕ ಉತ್ತರಿಸಿ. Loading… ಸೂಚನೆ  : ನಿಮ್ಮ ಮೊಬೈಲ್ ನಲ್ಲಿ ಫಾರಂ ಕಾಣಿಸದಿದ್ದಲ್ಲಿ ಈ ಲಿಂಕ್ ಕ್ಲಿಕ್ ಮಾಡಿ ಉತ್ತರಿಸಬಹದು   https://forms.gle/Gj8dHN2tkT54RpJT9 Sponsered By :  Aseer Moodubidre Nawaz Kalanjibail Abdul Basith Thumbey Media Team KM Jaleel Kundapura Safwan Magundi ಯಾವುದೇ  ರೀತಿಯ ಸ್ಪಷ್ಟೀಕರಣಕ್ಕೆ ಬೇಕಾಗಿ ಅಡ್ಮಿನ್ ನನ್ನು ಸಂಪರ್ಕಿಸಬಹುದು  WhatsApp Admin

ಹಜರುಲ್ ಅಸ್ ವದ್

"ಹಜರುಲ್ ಅಸ್‌ವದ್" ಇದರ ಕುರಿತು ನಿಮಗೆಷ್ಟು ತಿಳಿದಿದೆ..? ಒಂದು ಇಣುಕು ನೋಟ.   ಅಲ್ಲಾಹುವಿನ ಪವಿತ್ರ ಭವನವಾದ ಕ‌ಅಬಾಲಯದ ಒಂದು ಪಾರ್ಶ್ವದಲ್ಲಿರುವ "ಹಜರುಲ್ ಅಸ್‌ವದ್" ಎಂಬ ಕಲ್ಲು ಅದರ ಪ್ರಾರಂಭದಲ್ಲಿ ಅದು ಒಂದು ಸದಾಚಾರಿಯಾದ (ಸ್ವಾಲಿಹ್) ಅಲ್ಲಾಹುವಿನ ಮಲಕ್ ಆಗಿತ್ತು.    ಮನುಷ್ಯ ಪಿತಾ ಹಝ್ರತ್ ಆದಮ್ (ಅ) ರನ್ನು ಅಲ್ಲಾಹನು ಸೃಷ್ಟಿಸಿ ಸ್ವರ್ಗದಲ್ಲಿ ವಾಸಿಸಲು ಮತ್ತು ಅಲ್ಲಿರುವ ಎಲ್ಲಾ ಸುಖ ಸೌಲತ್ತುಗಳನ್ನು ಉಪಯೋಗಿಸಲು ಅನುಮತಿ ಕೊಟ್ಟಿದ್ದನು. ಅದಾಗ್ಯೂ ಅಲ್ಲಿರುವ ಒಂದು ಮರಕ್ಕೆ ಸನ್ನೆ ಮಾಡಿ ಅತ್ತ ಹೋಗ ಬಾರದಾಗಿಯೂ ಅದರಿಂದ ಯಾವುದೇ ಹಣ್ಣನ್ನು ಕಿತ್ತಬಾರದಾಗಿಯೂ ತಾಕೀತು ಮಾಡಿದ್ದನು. ಅಲ್ಲದೆ ಅವರಿಬ್ಬರನ್ನೂ ಆ ಕಡೆ ಹೋಗದಂತೆ ನೋಡಿಕೊಳ್ಳುವ ಪೂರ್ಣ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಈ ಹೇಳಿದ ಮಲಕಿಗೆ ಕೊಟ್ಟಿದ್ದನು.    ಅಲ್ಲಾಹುವಿನ ತಕ್‌ದೀರ್ ಪ್ರಕಾರ ಹಝ್ರತ್ ಆದಮ್ (ಅ) ರು ಆ ಮರದಿಂದ ಹಣ್ಣನ್ನು ಕಿತ್ತು ತಿಂದು ಒಂದು ಮಹಾ ದುರಂತವು ನಡೆಯುವ ಸಾಧ್ಯತೆಯಿದೆಯೆಂದು ತಿಳಿದಾಗ ಆ ಮಲಕ್ ಅಲ್ಲಿಂದ ಅಪ್ರತ್ಯಕ್ಷರಾದರು. ಆಗ  ಅಲ್ಲಾಹನು ಆ ಮಲಕನ್ನು  ದೃಷ್ಟಿಯಿಟ್ಟು ಬಹಳ ಗಂಬೀರದ ಗದರಿಕೆಯ ಒಂದು ನೋಟ ನೋಡಿದನು. ಆ ಕಾರಣದಿಂದ ಕೂಡಲೇ ಆ ಮಲಕ್ ಒಂದು ಮಾಣಿಕ್ಯ ಅಥವಾ ವೈಡೂರ್ಯದ ಕಲ್ಲಾಗಿ ಮಾರ್ಪಟ್ಟರು.    ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಒಂದು ಹದೀಸ...

ಮದೀನ ಪ್ರಣಯಂ

Image
ಯಾ ರಸೂಲುಲ್ಲಾಹ್ ﷺ ಸೌರ್ ಗುಹೆಯಲ್ಲಿ ತಮ್ಮಯ ﷺ ಪ್ರಿಯ ಮಿತ್ರ ಅಬೂಬಕ್ಕರ್ ಸಿದ್ದೀಕ್ ರ.ಅ ರವರ ಕಾಲಿಗೆ ಹಾವು ಕಚ್ಚಿದಾಗ ಅದರ ನೋವನ್ನು ತಡೆದುಕೊಂಡು ತಮ್ಮ ﷺ ನಿದ್ರೆಗೆ ಭಂಗವಾಗದಿರಲೆಂದು ತನ್ನ ನೋವನ್ನು ಸಹಿಸಿ ತಮ್ಮಯ ﷺ ಪ್ರೀತಿಗೆ ಪಾತ್ರರಾದ ಸಿದ್ದೀಕ್ ರ.ಅ ರವರ ಪ್ರೀತಿಯ ಮುಂದೆ ನನ್ನ ಪ್ರೀತಿ ಏನೂ ಅಲ್ಲ.. ಯಾ ಅಲ್ಲಾಹ್ ಮನ ತುಂಬಿ ನನ್ನ ಮುತ್ತು ನಬಿಯನ್ನು ಪ್ರೀತಿಸಲು ತೌಫೀಖ್ ನೀಡು.. ಶಮೀಮಾ ಕನ್ನಂಗಾರ್ NOOR-UL-FALAH ISLAMIC STORE 

ಮದೀನ ಪ್ರಣಯಂ

Image
ಯಾ ರಸೂಲುಲ್ಲಾಹ್ ﷺ ತಮ್ಮನ್ನು ﷺ ಪ್ರೀತಿಸಲು ಸ್ವಲಾತ್ ಅಲ್ಲದೇ ಬೇರೆ ಯಾವ ದಾರಿಯೂ ನನ್ನಲ್ಲಿಲ್ಲ.. ಪುಣ್ಯ ಮದೀನ ಮಣ್ಣಿಗೆ ಬರಲು ಈ ಜೀವ ಆಸೆಪಡುತ್ತಿದೆ.. ಮನಸ್ಸು ದಿನೇ ದಿನೇ ಮದೀನವನ್ನು ಆಗ್ರಹಿಸುತ್ತಿದೆ.. ಮದೀನದ ಆ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಭಾಗ್ಯವ ನೀಡು ಅಲ್ಲಾಹ್.. ಶಮೀಮಾ ಕನ್ನಂಗಾರ್ NOOR-UL-FALAH ISLAMIC STORE 

ಮದೀನ ಪ್ರಣಯಂ

Image
ಯಾ ರಸೂಲುಲ್ಲಾಹ್ ﷺ ತಮ್ಮಯ ﷺ ಆ ಮುತ್ತಿನಂತಹ ಆ ಮಾತುಗಳು ನನ್ನ ಈ ಕಿವಿಗೆ ಕೇಳಬೇಕು.. ತಮ್ಮಯ ﷺ ಪ್ರಕಾಶ ತುಂಬಿದ ಪುಣ್ಯ ವದನವನ್ನು ನೋಡಿ ನನ್ನ ಕಣ್ಣು ತುಂಬಬೇಕು.. ಮದೀನದ ರಾಜಕುಮಾರರಾದ ತಮ್ಮನ್ನು ﷺ ಕಾಣಲು ಈ ಹೃದಯ ಆಸೆಪಡುತ್ತಿದೆ.. ಯಾ ಮುತ್ತು ನಬಿಯೇﷺ ಈ ಪಾಪಿಯ ಆಸೆಯನ್ನು ಈಡೇರಿಸಿ ಕನಸಲ್ಲೊಮ್ಮೆ ಬರುವಿರಾ..?? ಶಮೀಮಾ ಕನ್ನಂಗಾರ್ NOOR-UL-FALAH ISLAMIC STORE 

ಮದೀನ ಪ್ರಣಯಂ

Image
ಯಾ ರಸೂಲುಲ್ಲಾಹ್ ﷺ ತಮ್ಮನ್ನು ﷺ ಕನಸಿನಲ್ಲಿ ಕಂಡಂತಹ ಆಶಿಖೀನ್ ಗಳು ಎಷ್ಟೊಂದು ಮಂದಿ ನಮ್ಮ ಮುಂದೆ ಇದ್ದಾರೆ.. ಅವರೆಷ್ಟು ಭಾಗ್ಯವಂತರು.. ತಮ್ಮನ್ನು ﷺ ಕಣ್ಣಾರೆ ಕಂಡು ಕಣ್ಣು ಪುಳಕಿತಗೊಳಿಸಿದ್ದಾರೆ.. ಪಾಪಿಯಾದ ನನಗೂ ನನ್ನ ಹಬೀಬﷺರನ್ನು ಕನಸಲ್ಲಿ ದರ್ಶಿಸಲು ಸೌಭಾಗ್ಯ ನೀಡು ಅಲ್ಲಾಹ್.. ಶಮೀಮಾ ಕನ್ನಂಗಾರ್ NOOR-UL-FALAH ISLAMIC STORE 

ಮದೀನ ಪ್ರಣಯಂ

Image
ಯಾ ರಸೂಲುಲ್ಲಾಹ್ ﷺ ಮರಣದ ಆ ಕಠಿಣ ವೇದನೆಯ ಸಮಯದಲ್ಲೂ ತನ್ನ ಉಮ್ಮತಿಗಾಗಿ ಕಣ್ಣೀರು ಸುರಿಸಿ ಪ್ರಾರ್ಥಿಸಿದ ತಾವು ﷺ ಉಮ್ಮತಿಯನ್ನು ಎಷ್ಟು ಪ್ರೀತಿಸಿರಬಹುದು.. ಆದರೆ ಇಹಲೋಕದ ಸುಖದ ಆಡಂಭರದಲ್ಲಿ ಬದುಕುತ್ತಿರುವ ನಮಗೆ ತಮ್ಮನ್ನು ﷺ ಪ್ರೀತಿಸಲು ಸಮಯವಿಲ್ಲದಂತಾಗಿದೆ.. ಯಾ ಅಲ್ಲಾಹ್ ಮರಣದವರೆಗೂ ಮುತ್ತು ಹಬೀಬﷺರನ್ನು ಮನಸಾರೆ ಪ್ರೀತಿಸಲು ತೌಫೀಖ್ ನೀಡು.. ಶಮೀಮಾ ಕನ್ನಂಗಾರ್ NOOR-UL-FALAH ISLAMIC STORE 

ಪರಿಶ್ರಮವಿಲ್ಲದೆ ಅಲ್ಲಾಹನಾಗಿ ಲಾಭದಾಯಕ ವ್ಯಾಪಾರ!

ಪರಿಶ್ರಮವಿಲ್ಲದೆ ಅಲ್ಲಾಹನಾಗಿ ಲಾಭದಾಯಕ ವ್ಯಾಪಾರ! ವಿಶ್ವ ವಿಖ್ಯಾತ ಪಂಡಿತ ಇಮಾಮ್ ಅಸ್‌ಮ‌ಈ (ರ) ರವರು (ಹಿಜ್‌ರಾ 121 - 216) ಒಂದು ದಾರಿಯಾಗಿ ಹೋಗುತ್ತಿರುವಾಗ ಒಬ್ಬಳು ಕೆಲಸದಾಳು ಒಂದು ಬುಟ್ಟಿ ತುಂಬಾ ದಾಳಿಂಬೆ ಹಣ್ಣನ್ನು ತಲೆಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದಳು.     ಆ ದಾರಿಯಾಗಿ ಹೋಗುತ್ತಿದ್ದ ಒಬ್ಬ ಯುವಕ ಆ ಬಡಪಾಯಿ ಮಹಿಳೆಯ ಹಿಂದಿನಿಂದ ಹೋಗಿ ದಾಳಿಂಬೆ ಬುಟ್ಟಿಯಿಂದ ಒಂದು ದಾಳಿಂಬೆಯನ್ನು ಕದ್ದು ತೆಗೆದನು. ಇಮಾಮ್ ಅಸ್‌ಮ‌ಈ (ರ) ರವರು ಈ ಕದ್ದ ದಾಳಿಂಬೆಯನ್ನು ಈತ ಏನು ಮಾಡುತ್ತಾನೆಂದು ನೋಡಲು ಅವನ ಹಿಂದಿನಿಂದ ಹೋದರು. ಸ್ವಲ್ಪ ಮುಂದೆ ಸಾಗಿದಾಗ ಯುವಕನು ಅದನ್ನು ಒಬ್ಬ ಭಿಕ್ಷುಕನಿಗೆ ಕೊಟ್ಟನು.     ಇಮಾಮ್‌ರವರು ಅವನಲ್ಲಿ ಕೇಳಿದರು. "ಏನಿದು ಅವಸ್ಥೆ..? ನಾನು ಭಾವಿಸಿದ್ದು ನಿನಗೆ ಹಸಿವಿಗೆ ತಿನ್ನಲಿಕ್ಕೆ ಆಗಿರಬಹುದು ಎಂದು. ಆದರೆ ನೀನು ಇದನ್ನು ಬೇರೊಬ್ಬರಿಗೆ ದಾನ ಮಾಡಿದಿ. ಇದು ಬಹಳ ಅದ್ಭುತವಾದ ಒಂದು ಸಂಗತಿ" ಆಗ ಆತ ಹೇಳಿದ. "ಇಮಾಮರೇ., ನೀವು ಯಾವ ಯುಗದಲ್ಲಿ ಇದ್ದೀರಿ..? ನಾನು ಯಾವುದೇ ಪರಿಶ್ರಮವಿಲ್ಲದೆ ಅಲ್ಲಾಹನಾಗಿ ಒಂದು ಲಾಭದಾಯಕ ವ್ಯಾಪಾರ ಮಾಡಿದ್ದು. ಕುಳಿತಲ್ಲಿಗೇ ಪ್ರತಿಫಲ."    ಇಮಾಮರು ಕೇಳಿದರು. "ಅದೇನು ಅಂತಹಾ ಲಾಭದಾಯಕ ವ್ಯಾಪಾರ..? ವಿವರಿಸಿ ಕೊಡುತ್ತಿಯಾ..?" ಆಗ ಆತ ಹೇಳಿದ. "ನಾನು ಒಂದು ದಾಳಿಂಬೆ ಕದ್ದು ತೆಗೆದ ಕಾರಣಕ್ಕೆ ನನ್ನ ಖಾತೆಯಲ್ಲಿ ಒಂದು ...

ಸಹೋದರನ ವೇದನೆ

ಸಹೋದರ ವೇದನೆ ಪ್ರಿಯ ಓದುಗರೇ.. ಇಕ್ಬಾಲ್ ಎಂಬ ಸಹೋದರನ ಜೀವನದಲ್ಲಿ ನಡೆದ ಕಥೆಯನ್ನು ಇಲ್ಲಿ ವಿವರಿಸುತ್ತಿದ್ದೇವೆ (ಕ್ಷಮಿಸಿ ಕಥೆಯಲ್ಲಿ ಸಹೋದರನ ಹೆಸರನ್ನು ಬದಲಾವಣೆ ಮಾಡಲಾಗಿದೆ) ತನ್ನ ಆರು ಸಹೋದರಿಯನ್ನು ಮದುವೆ ಮಾಡಿಸಲು ಅರಬ್ ರಾಷ್ಟ್ರಗಳಲ್ಲಿ ಆರು ವರ್ಷಗಳ ಕಾಲ ಸತತವಾಗಿ ದುಡಿದ ಒಬ್ಬ ನೊಂದ ಸಹೋದರನ ಕಥೆ ಕಥಾ ಪಾತ್ರದಲ್ಲಿ ಇಕ್ಬಾಲ್ ಮುಖ್ಯ ಪಾತ್ರಧಾರಿ ಮನೆಯಲ್ಲಿ ಆರು ಸಹೋದರಿಯರು ತಂದೆ ತಾಯಿ ಅಜ್ಜ ಅಜ್ಜಿ ಒಟ್ಟು ಒಂದು ಮನೆಯಲ್ಲಿ 11 ಜನರ ವಾಸ... ಕಷ್ಟದ ಜೀವನವನ್ನು ಮುನ್ನಡೆಸಲು ಮರುಭೂಮಿ ಎಂಬ ಪಂಜರಕ್ಕೆ ಪಯಣ... ಇಕ್ಬಾಲನ ತಂದೆ ಸೆಂಟ್ರಲ್ ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಮಾಡುವವರು ಇಕ್ಬಾಲ್ ಅಂತೂ ಇಂತೂ ಹತ್ತನೇ ತರಗತಿ ಪೂರೈಸಿ ಇನ್ನೇನು ಮಾಡಬೇಕು ಎಂಬ ಚಿಂತೆಯಲ್ಲಿ ಇರುವಾಗಲೇ.. ಯಾರೋ ಒಬ್ಬರು ಹೇಳುತ್ತಾರೆ ನಾನು ನಿನಗೆ ಮುಂದಿನ ವಿದ್ಯಾಭ್ಯಾಸಕ್ಕೆ ಹಣ ನೀಡುತ್ತೇನೆ ನೀನು ವಿದ್ಯಾಭ್ಯಾಸವನ್ನು ಅರ್ಧದಲ್ಲಿ ನಿಲ್ಲಿಸಬೇಡ ಎಂದು... ಆತನಿಗೆ ಮನಸ್ಸಮಾಧಾನವಾಗುವ ಹಾಗೇ ಹೇಳುತ್ತಾರೆ... ಈ ಮಾತನ್ನು ಕೇಳಿ ಖುಷಿಗೊಂಡ ಇಕ್ಬಾಲ್ ನಾನು ವಿದ್ಯಾಭ್ಯಾಸವನ್ನು ಮುಂದುವರಿಸಬಹುದು ಓದು ಮುಗಿಸಿ ಮುಂದಕ್ಕೆ ಒಂದು ಉತ್ತಮ ಉದ್ಯೋಗಕ್ಕೆ ಸೇರಿ ನನ್ನ ಮನೆಯ ಕಷ್ಟಗಳನ್ನೆಲ್ಲ ಬಗೆಹರಿಸಬಹುದು ಎಂದು ಆಲೋಚಿಸುತ್ತಿದ್ದ... ಅಂದು ಇಕ್ಬಾಲನ ತಂದೆ ಹಮಿದಾಕ ಮನೆಗೆ ಬರುವಾಗ ಸ್ವೀಟ್  ತಂದಿದ್ದರು ನನ್ನ ಮಗ 10ನೇ ಕ್ಲಾಸ್ ಪಾಸ್ ಆಗಿದ...

ದೂರು ಕೊಡಲು ಹೋದವನ ಮೇಲೆ ಕೇಸು ದಾಖಲು!

ದೂರು ಕೊಡಲು ಹೋದವನ ಮೇಲೆ ಕೇಸು ದಾಖಲು!    ಖಲೀಫಾ ಉಮರ್ (ರ) ರ ಆಡಳಿತ ಕಾಲದಲ್ಲಿ ಒಬ್ಬ ಬಡಪಾಯಿಯು ಖಲೀಫರ ಸನ್ನಿಧಿಗೆ ಬಂದು ಹೇಳಿದನು. "ಖಲೀಫರೇ.., ನನ್ನ ಮಗನ ಸ್ವಭಾವ ಮತ್ತು ಗುಣ ನಡತೆ ಸರಿ ಇಲ್ಲ. ತಂದೆ ತಾಯಿಗಳಿಗೆ ಗೌರವ ಕೊಡುವುದಿಲ್ಲ. ನಾವು ಹೇಳಿದಂತೆ ಕೇಳುವುದಿಲ್ಲ. ಹೇಳಿದ ಯಾವ ಕೆಲಸವನ್ನು ಕೂಡ ಮಾಡುವುದಿಲ್ಲ. ಯಾವ ಕೆಲಸಕ್ಕೆ ಹೋಗುವುದಿಲ್ಲ."     ಕೂಡಲೇ ಖಲೀಫರು ಅವನ ಮಗನನ್ನು ತನ್ನ ಸನ್ನಿಧಿಗೆ ಹಾಜರುಪಡಿಸಿ ತಂದೆ ತಾಯಿಗಳ ಗೌರವ ಮತ್ತು ಅವರಿಗೆ ಇಸ್ಲಾಮಿನಲ್ಲಿರುವ ಬೆಲೆಯ ಬಗ್ಗೆ ಸವಿಸ್ತಾರವಾಗಿ ಅವನಿಗೆ ವಿವರಿಸಿ ಕೊಟ್ಟರು. ಖಲೀಫರ ಉಪದೇಶವನ್ನು ಚೆನ್ನಾಗಿ ಆಲಿಸಿದ ಆ ಬಾಲಕನು ಕೊನೆಗೆ ಖಲೀಫರಲ್ಲಿ ಕೇಳಿದನು. "ಖಲೀಫರೇ.., ಹಾಗಾದರೆ ತಂದೆಯಾದ ಒಬ್ಬರಿಗೆ ಮಕ್ಕಳಿಗೆ ಬೇಕಾಗಿ ಮಾಡಬೇಕಾದ ಕರ್ತವ್ಯ ಏನೂ ಇಲ್ಲವೇ.." ಖಲೀಫರು ಹೇಳಿದರು. "ಖಂಡಿತವಾಗಿ ಇದೆ" ಆಗ ಆ ಹುಡುಗ ಹೇಳಿದನು. "ಹಾಗಾದರೆ ಅದೇನೆಂದು ನನಗೆ ಒಂದು ಸವಿಸ್ತಾರವಾಗಿ ವಿವರಿಸಿ ಕೊಡುವಿರೇ ಖಲೀಫರೇ..?"    ಹಝ್ರತ್ ಉಮರ್ (ರ) ರವರು ಹೇಳಿದರು. "ಮೊದಲಾಗಿ ಹುಟ್ಟಿದ ಕೂಡಲೇ ಒಂದು ಒಳ್ಳೆಯ ಹೆಸರು ಇಡಬೇಕು. ನಂತರ ವಿವೇಕ ಪ್ರಾಯ ತಲುಪುವಾಗ ಇಸ್ಲಾಮಿನ ಬಗ್ಗೆ ಕಲಿಸಿ ಕೊಡಬೇಕು. ಮದ್ರಸಕ್ಕೆ ದಾಖಲು ಮಾಡಬೇಕು ಇತ್ಯಾದಿ..ಇತ್ಯಾದಿ.. " ಆಗ ಆ ಹುಡುಗ ಹೇಳಿದ "ಇವರು ನನ್ನನ್ನು ಹುಟ್ಟಿಸಿದ್ದೇ ವಿನಾ ...

ಮುಂಜಾನೆ ಇಬ್ಬನಿ

Image
ಮುಂಜಾನೆ ಇಬ್ಬನಿ ಜೀವನದಲ್ಲಿ ಸಂಬಂಧಗಳು ತಾನಾಗಿಯೇ ದೂರವಾಗುವುದಿಲ್ಲ  ಸಂಬಂಧಿಸಿದವರ ವರ್ತನೆ, ಅಹಂಕಾರ ಮತ್ತು ನಿರ್ಲಕ್ಷ್ಯದಿಂದ ದೂರವಾಗುತ್ತವೆ

ಚಿಗುರಿದ ಕನಸು

ತವರು ಮನೆ ಉಡುಗೊರೆ ಭಾಗ.  ಚಿಗುರಿದ ಕನಸು           ಬರೆಯಲು ಶಕ್ತಿ ಕೊಟ್ಟ ಅಲ್ಲಾಹನಿಗಷ್ಟೇ ಸರ್ವ ಸ್ತುತಿ ಅರ್ಪಿಸುತ್ತಾ ಅವನ ನಾಮದೊಂದಿಗೆ ಈ ಬರಹವನ್ನು ಬರೆಯುತ್ತಾ ಇದ್ದೇನೆ ಮದುವೆಯೆಂಬ ಪದವು ತಾಹಿರಾಳ ಜೀವನದಲ್ಲಿ ಕಮರಿಹೋದಾಗ ತಾನು ಕುರೂಪಿ ಎಂದು ಕಡೆಗನಿಸಿ ಇವಳನ್ನು ವರನ ಕಡೆಯವರು ನೋಡಿ ಬಿಟ್ಟು ಹೋದಾಗ ಕೊನೆಯಲ್ಲಿ ದೂರದ ಅರಸಿಕೆರೆಯೆಂಬ ಊರಿನಿಂದ ಬಂದ ಒಂದು ಹುಡುಗನಿಗೆ ತಾಹಿರಾಳ ತಂದೆ ಮತ್ತು ಚಿಕ್ಕಮ್ಮ ಮದುವೆ ಮಾಡಲು ಮುಂದೆ ಬರುತ್ತಾರೆ. ಆದರೆ ತಾಹಿರಾ ಇವರ ಹಿನ್ನಲೆ ಏನು ಎಂದು ತಿಳಿಯದೆ ತನ್ನ ತಂದೆಯ ಮಾತಿಗೆ ಒಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಡುತ್ತಾಳೆ. ತಾಹಿರಾ ಹಾಗೂ ಶಬೀರ್ ಖಾನ್ ಮದುವೆಯು ಯಾವುದೇ ಅಡಂಬರವಿಲ್ಲದೆ ಕರೀಮಾಕ ಅಲ್ಪವೆಚ್ಚದಲ್ಲಿ ಮದುವೆ ಕಾರ್ಯ ಮಾಡಿ ಮುಗಿಸುತ್ತಾರೆ. ಕೊನೆಯಲ್ಲಿ ತಾಹಿರಾ ಗಂಡನ ಮನೆಗೆ ಹೋಗುವಾಗ ತನ್ನ ಪ್ರೀತಿಯ ತಮ್ಮನಾದ ಅಶಿಕ್'ನನ್ನು ತನ್ನ ಜೊತೆಯಲ್ಲಿ ತವರುಮನೆ ಉಡುಗೊರೆಯಾಗಿ ತಾಹಿರಾಳ ತಂದೆ ಕರಿಮಾಕ ಜೊತೆಯಲ್ಲಿ ಕಳಿಸಿಕೊಡುತ್ತಾರೆ.... ತಾಹಿರಾ ತನ್ನ ಇನಿಯನ ಜೊತೆಯಲ್ಲಿ ಹೊರಟು ನಿಂತಾಗ ಬ್ರೋಕರ್ ಮತ್ತು ಕರೀಮಾಕ ಒಬ್ಬರನೊಬ್ಬರು ಅತಂಕದಿಂದ ಮುಖ ಮುಖ ನೋಡುತ್ತಾ ಇದ್ದರು. ಅಂತು ನಮ್ಮ ಕಥಾ ನಾಯಕಿ ತಾಹಿರಾ ತನ್ನ ತಮ್ಮ ಅಶಿಕ್' ನೊಂದಿಗೆ ಮನೆಮಂದಿಗೆಲ್ಲಾ ಸಲಾಮ್ ಹೇಳಿ ಗಂಡನ ಮನೆಗೆ ಹೊರಟೇ ಬಿಟ್ಟಳು... ಮುಂದೆ ಓದಿ....... ತಾಹಿ...

ಭಿಕ್ಷುಕ ಒಂದು ಮಹಾ ಅಧ್ಯಾಯ

ಭಿಕ್ಷುಕ ಒಂದು ಮಹಾ ಅಧ್ಯಾಯ ಸರ್ವವೂ ಬಲ್ಲ ಸರ್ವಾಂತರ್ಯಾಮಿ ಸೃಷ್ಟಿಕರ್ತನಿಗೆ ಚಿರಋುಣಿ ನಾನು ದಿನನಿತ್ಯ ಮಸೀದಿ ಮಂದಿರಗಳ ಹತ್ತಿರ ಹಾದು ಹೋಗುವಾಗ ಕಾಣ ಸಿಗುವ ಕೆಲವು ಪಾತ್ರಗಳು ಕೇಳುವ ಕೆಲವು ಜರ್ಜರಿತ ಧ್ವನಿಗಳು ನನ್ನ ಹೃದಯದ ಕದ ತಟ್ಟಿ ಈ ಬರಹಕ್ಕೆ ಪ್ರೇರೇಪಣೆ ನೀಡಿದೆ ಈ ಬರಹದಲ್ಲಿ ಯಾವುದೇ ಜಾತಿಯನ್ನಾಗಲಿ ವ್ಯಕ್ತಿಯನ್ನಾಗಲಿ ನಿಂದಿಸುವ ಉಧ್ದೇಶ ನನಗಿಲ್ಲ ಬಡವರ ಮರ್ಧಿತರ ಧ್ವನಿಯನ್ನು ನನ್ನ ಲೇಖನಿಯ ಮೂಲಕ ಚಿತ್ರಿಸಲು ಬಯಸಿರುವೆನು ಅಷ್ಟೆ ಈ ಬರಹದಿಂದ ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆಯಾಚಿಸುತ್ತಾ ನನ್ನ ಬರಹದ ಮೊದಲ ಹೆಜ್ಜೆಯನ್ನು ಇಡುತ್ತಿರುವೆನು ತಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ಆಶಿಸುವೆನು... ಪ್ರಾರಂಭ....... ಈ ಜಗತ್ತು ಒಂದು ವಿಸ್ಮಯ ಇಲ್ಲಿ ನಾನಾ ಭಾಷೆ ಹಲವು ವೇಶ ರೀತಿ ರಿವಾಜುಗಳನ್ನು ಪಾಲಿಸುತ್ತಾರೆ ಹಲವು ವರ್ಗಗಳು ಹಲವು ರೀತಿಯ ನಿಯಮಗಳನ್ನು ಪಾಲಿಸುತ್ತದೆ ಶ್ರೀಮಂತ ವರ್ಗ ಒಂದು ರೀತಿಯಾದರೆ ಮಧ್ಯಮ ವರ್ಗ ಇನ್ನೊಂದು ರೀತಿ ಬಡ ವರ್ಗದಲ್ಲಿ ಬರುವ ಇನ್ನೊಂದು ವರ್ಗವೇ ಭಿಕ್ಷುಕರು ಅವರ ಜೀವನವೇ ನನ್ನ ಈ ಬರಹ. ಭಿಕ್ಷುಕ ಎಂದ ಕೂಡಲೆ ನಮ್ಮ ಮುಂದೆ ಬರುವ ಚಿತ್ರಣ ಹರುಕು ಮುರುಕು ಬಟ್ಟೆ ಕೊಳಕು ತುಂಬಿದ ಮೈ ಹಾಗೂ ಸದಾ ಬಾಡಿ ದುಃಖದಿಂದ ಬೆಂದು ಹೋಗಿರುವ ಮುಖ ಕೈಯ್ಯಲ್ಲೊಂದು ತಟ್ಟೆ ಒಂದು ಉದ್ದಗಿನ ಕೋಲು ಸದಾ ಗದ್ಗದಿತ ಧ್ವನಿಯಲ್ಲಿ ಕೂಗುತ್ತಿರುವ ಆರ್ತನಾದ ಅಮ್ಮಾ ತಾಯಿ ದಾನ ಮಾಡಿ ತಿಂದು ಮೂರ...

ಪ್ರೇಮಾನುಭವ

ಪ್ರೇಮಾನುಭವ ಕೆಲವು ಪ್ರೇಮ ಸತ್ಯಗಳ ಅನಾವರಣ ಅಬೂಸುಫ್ಯಾನರ ಮಗನಾದ ಮುಆವಿಯಾ ರಳಿಯಲ್ಲಾಹು ಅನ್ ಹು ರವರ ಆಡಳಿತ ಕಾಲವಾಗಿತ್ತದು. ಬಿಡುವಿಲ್ಲದ ತನ್ನ ದೈನಂದಿನ ಬದುಕಿನಲ್ಲಿ ವಿಶ್ರಾಂತಿಗಾಗಿ ಅವರು ಸಮಯವನ್ನು ಕಾಣುತ್ತಿದ್ದರು. ಹೀಗಿರಲು ಒಂದು ದಿನ ಆಡಳಿತ ಸಂಬಂಧವಾದ ಕಾರ್ಯಗಳಿಂದ ಹೊರಬಂದು ಡಮಸ್ಕಸ್ ನ ವೇದಿಕೆಯೊಂದರಲ್ಲಿ ಕುಳಿತಿದ್ದ ವೇಳೆ ತನ್ನ ಮುಂದೆ ಒಬ್ಬ ಅರಬಿ (ಗ್ರಾಮೀಣ)ಯಾದ ವ್ಯಕ್ತಿಯು ಚಪ್ಪಲು ಧರಿಸದೆ ಬಹಳ ದುಃಖ ದಿಂದ ಹೆಜ್ಜೆಯಿಡುತ್ತಿರುವುದನ್ನು  ಕಂಡರು. ಇದರಿಂದ ಸಂಶಯಗೊಂಡ ಮುಆವಿಯಾ ರಳಿಯಲ್ಲಾಹು ಅನ್ ಹು ಆ ವ್ಯಕ್ತಿಯನ್ನು ತನ್ನ ಸನ್ನಿಧಿಗೆ ಹಾಜರುಪಡಿಸುವಂತೆ ಹತ್ತಿರವಿದ್ದ ವ್ಯಕ್ತಿಯೊಬ್ಬರಲ್ಲಿ ಆಜ್ಞಾಪಿಸಿದರು. ಅವರು ಕೂಡಲೇ ಆ ವ್ಯಕ್ತಿಯನ್ನು ಮುಆವಿಯಾರ ಸಮೀಪ ಹಾಜರುಪಡಿಸಿದರು.    'ಈ ಒಣ ಬಿಸಿಲಿನಲ್ಲಿ ಬೇಸರಯುಕ್ತ ಮುಖದೊಂದಿಗೆ ನೀನು ಎತ್ತ ಸಾಗುತ್ತಿರುವಿ?' ಮುಆವಿಯಾ ರಳಿಯಲ್ಲಾಹು ಅನ್ ಹು ಆ ವ್ಯಕ್ತಿಯಲ್ಲಿ ಪ್ರಶ್ನಿಸಿದರು.  "ಓ ಅಮೀರುಲ್ ಮುಮಿನೀನ್ .... ನಾನು ನಿಮ್ಮ ಬಳಿ ನನಗುಂಟಾದ ಅನ್ಯಾಯದ ಕುರಿತು  ಹೇಳಲು ಬಂದಿರುವೆನು. ನಿಮ್ಮ ಒಬ್ಬ ಗವರ್ನರ್ ರಿಂದಲೇ ನನಗೆ ಅನ್ಯಾಯವಾಗಿದೆ. ನಿಮ್ಮ ಚಿಕ್ಕಪ್ಪನ ಮಗನಾದ ಮರ್ ವಾನುಬ್ ನುಲ್ ಹಕಂ ಎಂಬವರಿಂದ ನಾನು ಅನ್ಯಾಯಕ್ಕೊಳಗಾಗಿದ್ದೇನೆ"  ಎಂದು ಆ ವ್ಯಕ್ತಿ ಉತ್ತರಿಸಿದರು. ಇದನ್ನು ಕೇಳಿ ಆಶ್ಚರ್ಯಗೊಂಡ ಮುಆವಿಯಾ ರಳಿಯಲ್ಲಾ...

ಮುತ್ತುಪೇಟೆ ಕರಾಮತ್‌ಗಳು..

ಮುತ್ತುಪೇಟೆ ಕರಾಮತ್‌ಗಳು.. بسم الله الرحمن الرحيم الحمد لله رب العالمين.. الصلاة والسلام على أشرف المقلوقين.. وعلى آله وصحبه أجمعي ಶೈಖ್ ದಾವೂದುಲ್ ಹಕೀಮ್ (ರ) ರವರ ಸಂಕ್ಷಿಪ್ತ ಜೀವನಚರಿತ್ರೆ ಜಗತ್ತಿನ ಒಡೆಯನಾದ ಅಲ್ಲಾಹನು ಮನುಷ್ಯ ವಿಭಾಗವನ್ನು ತನ್ನ ಸೃಷ್ಟಿಗಳ ಪೈಕಿ ಅತ್ಯುನ್ನತವಾಗಿ ಸೃಷ್ಟಿಸಿರುವನು. ಲೋಕದಲ್ಲಿ ಸದಾಕಾಲ ತನ್ನನ್ನು ಅನುಸರಿಸುವ, ಆರಾಧಿಸುವ, ತನ್ನ ಪರಿಶುದ್ಧತೆಯನ್ನು ಪ್ರಕೀರ್ತಿಸುವ ಹಾಗೂ ತನ್ನ ಆದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಒಂದು ವಿಭಾಗವು ಯಾವತ್ತೂ ಲೋಕದಲ್ಲಿ ಆಸ್ತಿತ್ವದಲ್ಲಿರಬೇಕೆಂದು ಅಲ್ಲಾಹನು ಇಚ್ಚಿಸಿದನು. ಇದು ಸಾಕ್ಷಾತ್ಕಾರಗೊಳ್ಳಲು ಅಗತ್ಯವಾದ ವ್ಯವಸ್ಥೆಯನ್ನೂ ಅವನು ಕಲ್ಪಿಸಿದನು. ಅವನು ಜನರಿಗೆ ಸತ್ಯ, ನ್ಯಾಯ, ಸಫಲತೆಯ ಮಾರ್ಗವನ್ನು ತೋರಿಸಿಕೊಡುವ ಸಲುವಾಗಿ ಪ್ರವಾದಿಗಳನ್ನು ಹಾಗೂ ಗ್ರಂಥಗಳನ್ನು ಅವತೀರ್ಣಗೊಳಿಸಿದ.. ಪ್ರವಾದಿಗಳ ಕಾಲಾನಂತರ ಅಲ್ಲಾಹನು ಅವರ ದೌತ್ಯವನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಔಲಿಯಾಗಳಿಗೆ ಒಪ್ಪಿಸಿದನು. ಪ್ರತಿಯೋರ್ವ ಪ್ರವಾದಿಗಳ ಸಮುದಾಯದಲ್ಲಿ ಔಲಿಯಾಗಳಿದ್ದರು. ಪ್ರವಾದಿ ಈಸಾ (ಅ) ರವರ ಸಮುದಾಯದಲ್ಲಿ ಹವಾರಿಯ್ಯ್‌ಗಳು ಔಲಿಯಾಗಳಾಗಿದ್ದರು. ಪ್ರವಾದಿ ಮೂಸಾ (ಅ) ರವರ ಸಮುದಾಯದಲ್ಲಿ ರಿಬ್ಬಿಯ್ಯ್‌ಗಳು ಔಲಿಯಾಗಳಾಗಿದ್ದರು. ಪ್ರವಾದಿಗಳಿಗೆ ಜಿಬ್ರೀಲ್(ಅ) ರವರ ಮೂಲಕ ಅಲ್ಲಾಹನ ವಹ್ಯ್ ಲಭಿಸುತ್ತಿತ್ತು. ಔಲಿಯಾಗಳಿಗೆ ವಹ್...

ಜಿನ್ನ್‌ಗಳ ನಿಗೂಢ ಲೋಕ

ಜಿನ್ನ್‌ಗಳ ನಿಗೂಢ ಲೋಕ ಅವರನ್ನು ನಾವು ಕಂಡಿಲ್ಲ..! ಅವರಿಗೆ ನಮ್ಮನ್ನು ಕಾಣುವ ಸಾಮರ್ಥ್ಯವಿದೆ ಎಂದರೆ ನೀವು ನಂಬುತ್ತೀರಾ....? ನಂಬಲೇ ಬೇಕು..!     ಅಗ್ನಿ ಸೃಷ್ಟಿಗಳಾದ ಜಿನ್ನ್ ವರ್ಗದವರು ಖುರ್ ಆನ್ ನಲ್ಲೂ ಹದೀಸ್ ಗಳಲ್ಲೂ ಅವರ ಪ್ರಸ್ತಾಪ ಬಂದ ಕಾರಣ ಅವರಲ್ಲಿ ವಿಶ್ವಾಸವನ್ನರ್ಪಿಸುವುದು ಸತ್ಯ ವಿಶ್ವಾಸಿಯೊಬ್ಬನ ಕಟ್ಟುನಿಟ್ಟಿನ ಕರ್ತವ್ಯ. ಅದ್ದರಿಂದಲೇ ಅವರ ನಿಗೂಢ ಕೋಟೆಯೊಳಗೆ ಒಂದು ಸುತ್ತು ಬಂದಿದ್ದೇವೆ ಆ ಪಯಣಕ್ಕಾಗಿ ಕೆಲವು ಅಗ್ರಗಣ್ಯ ವಿದ್ವಾಂಸರ ಗ್ರಂಥಗಳ ಪುಟಗಳನ್ನು ತಿರುವಿನ ಹಾಕಿದ್ದೇನೆ. ಒಂದಿಷ್ಟು ನನ್ನ ಅರಿವಿನಂತರಾಳದಿಂದ ಮೊಗೆದು ಗೀಚಿದ್ದೇನೆ.. #ಜಿನ್ನ್ ಗಳ ಹಿಂದೆ ನಡೆದಾಗ.. ಅಲ್ಲಾಹನ ಸೃಷ್ಟಿಗಳ ಪೈಕಿ ವಿಶಿಷ್ಟ ರೀತಿಯ ಸೃಷ್ಟಿಯಾಗಿದೆ ಜಿನ್ನ್ ವರ್ಗ. ಮನುಷ್ಯರಂತೆ ವಿವೇಕಿಗಳಾದ ಅವರ ಇರುವಿಕೆಯನ್ನು ಖುರ್ ಆನ್ ಹಾಗೂ ಹದೀಸ್ ಗಳು ದೃಢಪಡಿಸಿದೆ.     ಬಹುತೇಕ ಮಅ್'ತಝಿಲಿಗಳು, ಕೆಲವೇ ಕೆಲವು ಫಿಲೋಸಿಫಿಕರು, ಮತ್ತೆ ಕೆಲವು ಅಜ್ಞಾನಿಗಳ ಹೊರತಾಗಿ ಎಲ್ಲಾ ವಿದ್ವಾಂಸರೂ 'ಜಿನ್ನ್'ಎಂಬ ವರ್ಗವಿದೆಯೆಂಬುವುದನ್ನು ಅಂಗೀಕರಿಸುತ್ತಾರೆ.   ಅಲ್ಲಾಹನು ಹೇಳುತ್ತಾನೆ "ನಾನು ಜಿನ್ನ್ ಗಳನ್ನೂ ಮನುಷ್ಯರನ್ನೂ ನನ್ನ ಆರಾಧನೆಗಾಗಿಯೇ ಹೊರತು ಸೃಷ್ಟಿಸಲಿಲ್ಲ" (ಅದ್ದಾರಿಯಾತ್:56). ನಬಿ(ಸ)ರವರು ಹೇಳುತ್ತಾರೆ; "ನೀವು ಎಲುಬಿನಿಂದ ಶುಚಿಗೊಳಿಸಬೇಡಿ. ಕಾರಣ,ಅದು ನಮ್ಮ ಸಹೋದರರಾದ ಜಿನ...