Posts

Showing posts from March, 2021

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 141

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 141 تِلْكَ أُمَّةٌۭ قَدْ خَلَتْ ۖ لَهَا مَا كَسَبَتْ وَلَكُم مَّا كَسَبْتُمْ ۖ وَلَا تُسْـَٔلُونَ عَمَّا كَانُوا۟ يَعْمَلُونَ ಅರ್ಥ:⤵️ ▪️ಗತಿಸಿದ ಸಮುದಾಯವದು. ಅವರು ಮಾಡಿದ್ದು ಅವರಿಗೆ. ನೀವು ಮಾಡಿದ್ದು ನಿಮಗೆ. ಅವರು ಮಾಡಿದುದರ ಬಗ್ಗೆ ನಿಮ್ಮನ್ನು ಪ್ರಶ್ನಿಸಲಾಗುವುದಿಲ್ಲ.    ಸಂ: ✒️ಅಬೂರಿಫಾನ ಕುಂದಾಪುರ

ನಿಮ್ಮಲ್ಲಿ ಅತಿಯಾದ ಬೊಜ್ಜಿನ ಸಮಸ್ಯೆ ಇದೆಯೇ? ಹಾಗಾದರೆ ಈ ವಿಧಾನಗಳನ್ನು ಅನುಸರಿಸಿ:

ನಿಮ್ಮಲ್ಲಿ ಅತಿಯಾದ ಬೊಜ್ಜಿನ ಸಮಸ್ಯೆ ಇದೆಯೇ? ಹಾಗಾದರೆ ಈ ವಿಧಾನಗಳನ್ನು ಅನುಸರಿಸಿ: ಹೊಲ ಗದ್ದೆಗೆ ಕೆಲಸಕ್ಕೆ ಹೋಗುವ ಜನರಲ್ಲಿ ಬೊಜ್ಜಿನ ಸಮಸ್ಯೆ ಕಡಿಮೆಯಾಗಿರುತ್ತದೆ. ಊಟಕ್ಕೆ ತಕ್ಕಂತೆ ಕೆಲಸ ಅನ್ನುವ ಹಾಗೆ ಮೈ ಬಗ್ಗಿಸಿ ದುಡಿಯುರಲ್ಲಿ ಅನೇಕ ರೀತಿಯ ರೋಗಗಳು ಹಂತವರಿಂದ ದೂರ ಇರುತ್ತವೆ. ಇನ್ನು ಸಿಟಿ ಲೈಫ್‌ನಲ್ಲಿ ಪ್ರತಿಯೊಬ್ಬರೂ ಬ್ಯುಸಿ ಆಗಿರುತ್ತಾರೆ. ಜಂಕ್ ಫುಡ್ ಅಥವಾ ಫಾಸ್ಟ್ ಫುಡ್ ತಿನ್ನುವ ಅಭ್ಯಾಸ ಇದ್ದರೆ ಬೊಜ್ಜು ಕರುಗುವುದು ಅಸಾಧ್ಯ. ಯೋಗ, ವ್ಯಾಯಾಮಗಳನ್ನು ಮಾಡಿ. ಆಚೆ ಆಹಾರವನ್ನು ತಿಂದರೆ ಏನು ಪ್ರಯೋಜನ ಅಲ್ಲವೆ.? ನಿಮ್ಮ ಆರೋಗ್ಯದ ಪದ್ದತಿಯ ಮೇಲೆ ದೇಹದ ಸ್ಥಿತಿ ಇರುತ್ತದೆ. ಸಾಧ್ಯವಾದಷ್ಟು ಆಹಾರದ ಪದ್ದತಿ ಯಾವಾಗಲು ಚೆನ್ನಾಗಿ ಇರಬೇಕು. ಇನ್ನು ಏನೆಲ್ಲಾ ಮಾಡಿದರು ಹೊಟ್ಟೆಯ ಬೊಜ್ಜು ಕರಗಿಲ್ಲ ಎನ್ನುವವರು ಈ ತರಹದ ಮನೆಮದ್ದುಗಳನ್ನು ಬಳಸಿ. ಶುಂಠಿ ಎಲ್ಲರ ಮನೆಯಲ್ಲೂ ಸರ್ವೇಸಾಮನ್ಯವಾಗಿ ಶುಂಠಿಯನ್ನು ಬಳಸುತ್ತೆವೆ. ಅಡಿಗೆ, ಚಟ್ನಿ ಮಾಡಲು ಹೀಗೆ ಒಂದಲ್ಲ ಒಂದಕ್ಕೆ ಶುಂಠಿಯನ್ನು ಬಳಕೆ ಮಾಡಲಾಗುತ್ತದೆ. ಆದರೆ ಬೊಜ್ಜು ಕರಗಿಸಲು ಇದು ತುಂಬಾನೇ ಸಹಕಾರಿಯಾಗುತ್ತದೆ. ಒಂದು ಗ್ಲಾಸ್ ಹಾಲಿಗೆ ಒಂದು ಸ್ಪೂನ್ ಶುಂಠಿ ಪೌಡರ್ ಅನ್ನು ಬೆರಸಿ ಕುಡಿದರೆ ಬೊಜ್ಜು ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ. ಗೋದಿ ಹುಲ್ಲು ಗೋದಿ ಹುಲ್ಲುನ್ನು ಪ್ರತಿದಿನವೂ ಜ್ಯೂಸ್ ಮಾಡಿ ಕುಡಿಯುವವರು ಇದ್ದಾರೆ. ಇದರಲ್ಲಿ ನಾರಿನ ಅಂಶ, ಕಬ್ಬಿನಾಂಶ, ಪ್ರೊಟೀ...

ಒಳಿತನ್ನು ಬಯಸಬೇಕು:

ಒಳಿತನ್ನು ಬಯಸಬೇಕು: ನವ್ಮೊಂದಿಗೆ ಬೆರೆಯುತ್ತಿರುವ ಜನರಿಗೆ ಒಳಿತು ಸಿಗಬೇಕು ಎಂಬ ಮನಸ್ಸು ನಮ್ಮದಾಗ ಬೇಕು. ಅವನಲ್ಲಿ ಏನಾದರೂ ಅಭಿವೃದ್ಧಿ ಉಂಟಾದರೆ ಅದಕ್ಕೆ ಅಸೂಯೆ ಪಡಬಾರದು. ಬದಲಾಗಿ ಅವನ ಸಂತೋಷದಲ್ಲಿ ಪಾಲ್ಗೊಳ್ಳಬೇಕು. ಮನಸ್ಸಿನೊಳಗೆ ಇತರರ ಬಗ್ಗೆ ಅಸೂಯೆ ತುಂಬಿಕೊಂಡಿದ್ದರೂ ಹೊರಗಡೆ ಕೃತಕ ನಗೆ ಬೀರುವವರಿದ್ದಾರೆ. ಇದು ಸಲ್ಲದು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ್ದಾರೆ,  “ನೀವು ಅಸೂಯೆಯ ಬಗ್ಗೆ ಎಚ್ಚರ ವಹಿಸಿರಿ. ಬೆಂಕಿಯು ಕಟ್ಟಿಗೆಯನ್ನು ತಿನ್ನುವಂತೆ ಅಸೂಯೆಯು ಸತ್ಕರ್ಮಗಳನ್ನು ತಿನ್ನುತ್ತದೆ.” ============================ ಕೆಎಂ ಜಲೀಲ್ ಕುಂದಾಪುರ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)

ದರವೇಷಿಯ ದಾಯಿರ

ದರವೇಷಿಯ ದಾಯಿರ ಧಣಿವರಿಯದ ದಳವಾಯಿ ದಳವಾಯಿ ಎಂದ ತಕ್ಷಣ ಯುದ್ಧ ಭೂಮಿಯಲಿ ರಕ್ತದಿ ಮಿಂದು ಖಡ್ಗ ಝಳಪಿಸುತ್ತಾ ರುಧ್ರ ತಾಂಡವವಾಡುವ ಸೇನಾ ಮುಖ್ಯಸ್ಥನ ಮುಖ ನಿಮ್ಮ ಮನದಲ್ಲಿ ಒಂದು ಕ್ಷಣ ಹಾದು ಹೋಗದಿರಲು ಸಾಧ್ಯವಿಲ್ಲ ಅದು *ದಳವಾಯಿ* ಎಂಬ ಹೆಸರಿಗಿರುವ ಗತ್ತು...... ಆದರೆ ನಾನು ಇಲ್ಲಿ ನಿಮಗೆ ಪರಿಚಯಿಸಲು ಇರುವ ದಳವಾಯಿ ಒಬ್ಬ ನಾಯಕನೋ,ಧೀರ ಸೇನಾನಿಯೋ ಅಲ್ಲ ಬದಲಾಗಿ ಜೀವನದ ಎಲ್ಲಾ ಮಜಲುಗಳಲ್ಲೂ ತನ್ನವರಿಗಾಗಿ ಧಣಿವರಿಯದೆ ದುಡಿದು ಕೊನೆಗೊಂದು ದಿನ ಸದ್ಧಿಲ್ಲದೆ ಅಂತಿಮ ಯಾತ್ರೆ ಹೊರಡುವ ಒಬ್ಬ ತಂದೆಯ ಕಥೆ.........! ತಂದೆ ಎಂಬ ಪಾತ್ರದ ಬಗ್ಗೆ ಹೆಚ್ಚಾಗಿ ವಿವರಿಸುವ ಅಗತ್ಯವಿಲ್ಲ ಎಲ್ಲರಿಗೂ ತಿಳಿದಿರುವುದೇ ತಾನೆ ಕೆಲವೊಬ್ಬರಿಗೆ ಮಿತ್ರನಾಗಿ ಕೆಲವರಿಗೆ ಸ್ಪೂರ್ತಿಯಾಗಿ ಕೆಲವರಿಗೆ ದುಷ್ಟನಾಗಿಯೂ ಕಾಣುವ ಒಬ್ಬರಿದ್ದರೆ ಅದು ತಂದಯೇ ಆಗಿದ್ದಾರೆ... ಹೆಚ್ಚೇನು ಕಾಯಿಸದೆ ನಮ್ಮ ಕಥೆಗೆ ಹೋಗೋಣ ಬನ್ನಿ.......! ಪರಿಚಯ.....! ಅದೊಂದು ಸಣ್ಣ ಕುಗ್ರಾಮ ಕತ್ತಲೆಯಾಯಿತೆಂದರೆ ಸಾಕು ಎಲ್ಲಾ ಮನೆಗಳಲ್ಲಿಯೂ ಧೀವಟಿಗೆಯ ಬೆಳಕು ಮೆಲ್ಲನೆ ನಾಚುತ್ತಾ ತನ್ನ ಸೌಂಧರ್ಯವನ್ನು ತೋರಿಸಲು ಶುರುವಿಡುತ್ತಿತ್ತು ರಾತ್ರಿಯಲ್ಲಿ ಸುಂಯ್ಯನೆ ಬೀಸುವ ತಂಗಾಳಿಯು ಹೊತ್ತು ತರುತ್ತಿದ್ದ ಮಣ್ಣಿನ ಸುವಾಸನೆಯು ಗಂಧಕ್ಕಿಂತಲೂ ಸುವಾಸನೆಯಾಗಿತ್ತು......! ಗ್ರಾಮವೆಂದರೆ ನಿಮಗೆ ತಿಳಿದಿರಬಹುದು ಅಲ್ಲಿ ಪಬ್ ಇಲ್ಲದೇ ಇದ್ದರೂ ಕಾಲಹರಣಕ್ಕಾಗಿ ಒಂದು ಹಳ್ಳಿ ಕಟ್ಟೆ ಇದ್ದೇ ಇರುತ್...

ಕ್ಷಮೆ ಕೇಳುತ್ತಿರಬೇಕು:

ಕ್ಷಮೆ ಕೇಳುತ್ತಿರಬೇಕು: ನಮ್ಮಲ್ಲಿ ತಪ್ಪು ಸಂಭವಿಸುವುದು ಸಹಜವಾಗಿದೆ. ಮನುಷ್ಯನಾದ ಮೇಲೆ ತಪ್ಪು ಸಂಭವಿಸಲೇಬೇಕು. ಕೆಲವು ತಪ್ಪುಗಳು ವೈಯಕ್ತಿಕವಾದರೆ ಇನ್ನು ಕೆಲವು ತಪ್ಪುಗಳು ಇತರರಿಗೆ ದೋಷ ಉಂಟು ಮಾಡುವಂಥವುಗಳಾಗಿವೆ. ಇತರರಿಗೆ ನಮ್ಮಿಂದ ಯಾವುದೇ ತಪ್ಪು ಸಂಭವಿಸಿದರೆ ಅವರೊಂದಿಗೆ ಕ್ಷಮೆ ಕೇಳಬೇಕು. ಅದು ಎಷ್ಟು ಸಣ್ಣದಾದರೂ ಸರಿ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು,  “ಆದಮರ ಎಲ್ಲಾ ಸಂತತಿಗಳು ತಪ್ಪೆಸಗುವವರಾಗಿದ್ದಾರೆ. ಅವರಲ್ಲಿ ಅತ್ಯುತ್ತಮನು ಪಶ್ಚಾತ್ತಾಪ ಪಡುವವನಗಿದ್ದಾನೆ.” ನಾವು ಕ್ಷಮೆ ಕೇಳುವಾಗ ಅವರಿಗೆ ನಮ್ಮ ಮೇಲೆ ಗೌರವ ಮೂಡುತ್ತದೆ. ಇದರಿಂದಾಗಿ ನಮ್ಮ ಮತ್ತು ಅವರ ಮಧ್ಯೆ ಬಾಂಧವ್ಯ ಉಂಟಾಗುತ್ತದೆ. ============================ ಕೆಎಂ ಜಲೀಲ್ ಕುಂದಾಪುರ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 140

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 140 أَمْ تَقُولُونَ إِنَّ إِبْرَٰهِۦمَ وَإِسْمَٰعِيلَ وَإِسْحَٰقَ وَيَعْقُوبَ وَٱلْأَسْبَاطَ كَانُوا۟ هُودًا أَوْ نَصَٰرَىٰ ۗ قُلْ ءَأَنتُمْ أَعْلَمُ أَمِ ٱللَّهُ ۗ وَمَنْ أَظْلَمُ مِمَّن كَتَمَ شَهَٰدَةً عِندَهُۥ مِنَ ٱللَّهِ ۗ وَمَا ٱللَّهُ بِغَٰفِلٍ عَمَّا تَعْمَلُونَ ಅರ್ಥ:⤵️ ▪️ಇಬ್ರಾಹೀಮ್, ಇಸ್ಮಾಈಲ್, ಇಸ್ಹಾಖ್, ಯಅ್‌ಖೂಬ್ ಹಾಗೂ ಸಂತತಿಗಳು ಜೂದರು ಅಥವಾ ಕ್ರೈಸ್ತರಾಗಿದ್ದಾರೆಂದು ನೀವು ಹೇಳುತ್ತೀರಾ? “ಹೆಚ್ಚು ತಿಳಿದವರು ನೀವೋ, ಅಲ್ಲಾಹನೋ?” ಎಂದು ಪ್ರಶ್ನಿಸಿರಿ. ತನ್ನಲ್ಲಿರುವ ದೇವದತ್ತ ಸಾಕ್ಷ್ಯವನ್ನು ⁷² ಅಡಗಿಸಿಟ್ಟವನಿಗಿಂತ ದೊಡ್ಡ ದುಷ್ಕರ್ಮಿ ಯಾರು? ನಿಮ್ಮ ಪ್ರವರ್ತಿಗಳ ಬಗ್ಗೆ ಅಲ್ಲಾಹನು ನಿರ್ಲಕ್ಷ್ಯನಲ್ಲ.    ಸಂ: ✒️ಅಬೂರಿಫಾನ ಕುಂದಾಪುರ

ತಸ್‌ಬೀಹ್ ನಮಾಝ್

ತಸ್‌ಬೀಹ್ ನಮಾಝ್ ಇದು ಒಂಟಿಯಾಗಿ ನಿರ್ವಹಿಸಲ್ಪಡುವ ನಮಾಝ್ ಗಳ ಸಾಲಿಗೆ ಸೇರಿದೆ. ಈ ನಮಾಝಿಗೆ ಬಹಳಷ್ಟು ಸ್ರೆಷ್ಠತೆಯಿದೆ. ಸಾಧ್ಯವಾದವರು ಈ ನಮಾಝನ್ನು ಪ್ರತಿ ದಿನವೂ ನಿರ್ವಹಿಸಬೇಕು. ಇಲ್ಲವೇ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕೊಮ್ಮೆ ಈ ರೀತಿಯಲ್ಲಾದರು ನಿರ್ವಹಿಸಬೇಕು. ಈ ನಮಾಝ್ ನ ಅರಿತ ಬಳಿಕವೂ ಇದನ್ನು ತೊರೆಯುವವನು ಧರ್ಮ ಶ್ರದ್ಧೆಯಿಲ್ಲದ ಉದಾಸೀನನಾಗಿರುವವನು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ... ತಸ್ ಬೀಹ್ ನಮಾಝ್ ನಾಲ್ಕು ರಕ್ ಅತ್. ಹಗಲು ನಿರ್ವಹಿಸುವುದಾದರೆ ನಾಲ್ಕು ರಕ್ ಅತ್ ಗಳನ್ನು ಜೊತೆಯಾಗಿ ಒಂದೇ ಸಲಾಮಿನಲ್ಲಿ ಹಾಗೂ ರಾತ್ರಿ ನಿರ್ವಹಿಸುವುದಾದರೆ ಎರಡು ಸಲಾಂಗಳಲ್ಲಿ ತಲಾ ಎರಡು ರಕ್ ಅತ್ ಗಳನ್ನು ನಿರ್ವಹಿಸುವುದು ನಮಾಝ್ ನ ಉತ್ತಮ ಕ್ರಮವಾಗಿದೆ... ತಸ್ ಬೀಹ್ ನಮಾಝ್ 4 ರಕಅತ್ 300 ತಸ್ ಬೀಹ್ ಗಳು ತಸ್ ಬೀಹ್ ನಮಾಝ್ ನ ಕ್ರಮ " ತಸ್ಬೀಹ್ ನಮಾಝ್ ಎರಡು ರಕಅತ್ ಅಲ್ಲಾಹನಿಗಾಗಿ ನಾನು ನಿರ್ವಹಿಸುವೆನು " (ನಾಲ್ಕು ರಕಅತ್ ಗಳನ್ನು ಒಟ್ಟಿಗೆ ನಿರ್ವಹಿಸುವುದಾದರೆ ನಾಲ್ಕು ರಕಅತ್ ಎಂದು ನಿಯ್ಯತ್ ಮಾಡಬೇಕು) ಎಂದು ನಿಯ್ಯತ್ ಮಾಡಿ ತಕ್ಬೀರತುಲ್ ಇಹ್ರಾಂ ಹೇಳಿದ ಬಳಿಕ ದುಆಉಲ್ ಇಫ್ತಿತಾಹ್ (ವಜ್ಜಹ್ತು), ಸೂರತುಲ್ ಫಾತಿಹ, ಸೂರತುತ್ತಕಾಸುರ್ (ಅಲ್ ಹಾಕು ಮುತ್ತಕಾಸುರ್), ಇವುಗಳನ್ನು ಕ್ರಮವಾಗಿ ಓದಬೇಕು. ಆ ಬಳಿಕ سُبْحَانَ الْلَّهِ، وَالْحَمْدُ لِلَّهِ، وَلَا إِلَهَ إِلَّا الْلَّه...

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 139

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 139 قُلْ أَتُحَآجُّونَنَا فِى ٱللَّهِ وَهُوَ رَبُّنَا وَرَبُّكُمْ وَلَنَآ أَعْمَٰلُنَا وَلَكُمْ أَعْمَٰلُكُمْ وَنَحْنُ لَهُۥ مُخْلِصُونَ ಅರ್ಥ:⤵️ ▪️ಅಲ್ಲಾಹನ ವಿಷಯದಲ್ಲಿ ನಮ್ಮೊಂದಿಗೆ ವಾದ ಮಾಡುತ್ತಿರುವಿರಾ? ಆತನು ನಮ್ಮ-ನಿಮ್ಮ ಪ್ರಭು. ನಮಗೆ ನಮ್ಮ ಕರ್ಮಗಳು, ನಿಮಗೆ ನಿಮ್ಮ ಕರ್ಮಗಳು. ಆದರೆ, ಆತನಿಗೆ ಅಕಳಂಕ ನಿಷ್ಠರಾಗುವವರು ನಾವು’ ಎಂದು ಹೇಳಿರಿ.     ಸಂ: ✒️ಅಬೂರಿಫಾನ ಕುಂದಾಪುರ

ದಂತ ಕುಳಿ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು:

ದಂತ ಕುಳಿ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು: ಇಂದಿನ ದಿನಗಳಲ್ಲಿ ಚಿಕ್ಕವರು ದೊಡ್ಡವರು ಎಂಬ ವಯಸ್ಸಿನ ಮಿತಿ ಇಲ್ಲದ ಕಾರಣ ದಂತಕುಳಿ, ವಸಡಿನ ನೋವು, ಇಂತಹ ಗಂಭೀರ ಸಮಸ್ಯೆಗಳಿಂದ ಬಳಲುವಂತಾಗಿದೆ. ಇಂತಹ ಸಮಸ್ಯೆಗಳಿಂದ ದೂರವಾಗಬೇಕು ಅಂದರೆ ಈ ಮನೆಮದ್ದುಗಳನ್ನು ಉಪಯೋಗಿಸಿ. ▪️ಉಪ್ಪನ್ನು ಉಪಯೋಗಿಸುವುದರಿಂದ ಬಾಯಲ್ಲಿರುವ ನೋವು ಮತ್ತು ಬ್ಯಾಕ್ಟೀರಿಯಾ ಬೆಳೆಯೆದಂತೆ ತಡೆಹಿಡಿಯುತ್ತದೆ. ಒಂದು ಚಮಚ ಉಪ್ಪುನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿಕೊಂಡು, 5 ಅಥವಾ 10 ನಿಮಿಷಗಳ ಕಾಲ ನೀರನ್ನು ಬಾಯಲ್ಲಿ ಹಾಕಿಕೊಂಡು ಮುಕ್ಕಳಿಸಬೇಕು, ಇದನ್ನು ದಿನಕ್ಕೆ 3 ರಿಂದ 4 ಸಾರಿ ಈ ರೀತಿ ಮಾಡಬೇಕು. ನಿಮಗೆ ನೋವು ಹೆಚ್ಚಾಗಿದ್ದಲ್ಲಿ ದಿನ್ನಕ್ಕೆ 5 ರಿಂದ 6 ಸಲ ಮಾಡಿದರೆ ಉತ್ತಮ. ▪️ಬೆಳ್ಳುಳ್ಳಿಯನ್ನು ಹೆಚ್ಚಾಗಿ ಉಪಯೋಗಿಸ ಬೇಕು ಇದರಲ್ಲಿರುವ ಆಲಿಸಿನ್ ಎಂಬ ಅಂಶವು ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣು ಜೀವಿ ಹಾಗು ಆ್ಯಂಟಿಬಯಾಟಿಕ್ ಗುಣಗಳನ್ನು ಹೊಂದಿರುತ್ತದೆ. 4 ರಿಂದ 5 ಬೆಳ್ಳುಳಿ ಎಸಳುಗಳನ್ನು ಜಜ್ಜಿಕೊಂಡು ಅದಕ್ಕೆ 1/5 ಚಮಚ ಕಲ್ಲುಪ್ಪು ಹಾಕಿ, ನೋವಿರುವ ಹಲ್ಲಿನ ಜಾಗಕ್ಕೆ ಇಟ್ಟುಕೊಳ್ಳಬೇಕು, ನಂತರ 15 ನಿಮಿಷ ಬಿಟ್ಟು ಬಾಯಿ ಮುಕ್ಕಳಿಸಬೇಕು. ದಿನಕ್ಕೆ 2 ರಿಂದ 3 ಸಾರಿ ಹೀಗೆ ಮಾಡಿದರೆ ನೋವಿನ ಭಾದೆಯಿಂದ ಕೊಂಚ ವಿರಾಮ ಹೊಂದಬಹುದು.  ▪️ಲೈಕೋರೈಸ್ ಬೇರಿನ ಪುಡಿಯನ್ನು ಬಳುಸುವುದರಿಂದ ಹಲ್ಲಿಗೆ ಭಾದೆ ನೀಡುವಂತುವ ಬ್ಯಾಕ್ಟೀರಿಯಾ ಬರದಂತೆ ತಡೆಹಿಡಿಯುತ್ತದೆ...

ಮರಣ

ಮರಣ: ಮರಣ ಎಂಬುದು ನಿರಾಕರಿಸಲಾಗದ ವಾಸ್ತವಿಕತೆಯಾಗಿದೆ. ಎಲ್ಲರೂ ಮರಣದ ರುಚಿಯನ್ನು ಅನುಭವಿಸುವರು. ಜನಿಸಿದ ಪ್ರತೀ ಜೀವಕ್ಕೂ ಮರಣವಿದೆ. ಮರಣವನ್ನು ಬಯಸಿದರೂ ಬಯಸದಿದ್ದರೂ ಅದು ಬಂದೇ ಬರುತ್ತದೆ. ಅದು ಯಾರ ಅನುಮತಿಗೂ ಕಾಯುವುದಿಲ್ಲ. ಮರಣವು ಬರುವಾಗ “ನನಗೀಗ ಬರಲು ಪುರುಸೊತ್ತಿಲ್ಲ. ಮುಂದಿನ ಬಾರಿ ನೋಡುವಾ” ಎಂದು ಸಾಗ ಹಾಕಿ ಕಳುಹಿಸಲು ಯಾವುದಾದರೂ ಆತ್ಮಕ್ಕೆ ಸಾಧ್ಯವಿದೆಯೇ.? ಅಲ್ಲಾಹನು ಪ್ರತಿಯೊಂದು ಆತ್ಮಕ್ಕೂ ಒಂದು ಅವಧಿಯನ್ನು ನಿಶ್ಚಯಿಸಿದ್ದಾನೆ. ಆ ಸಂದರ್ಭ ಬಂದೊದಗಿದಾಗ ಮರಣವು ಆವರಿಸಿಯೇ ತೀರುವುದು. ನಾವು ಯಾವ ಸ್ಥಿತಿಯಲ್ಲಿದ್ದರೂ ಸರಿ. ಅಲ್ಲಾಹನು ಹೇಳುತ್ತಾನೆ.  “ಪ್ರತಿಯೊಂದು ಜನಾಂಗಕ್ಕೆ ಒಂದು ಕಾಲಾವಧಿ ನಿಶ್ಚಿತವಿದೆ. ಅದರ ಕಾಲಾವಧಿಯು ಮುಗಿದಾಗ ಒಂದು ಕ್ಷಣ ಹಿಂದೆ ಅಥವಾ ಮುಂದೆ ಆಗುವುದಿಲ್ಲ.” (ಅಅ್‌ರಾಫ್-34)      ಎಷ್ಟೇ ದೊಡ್ಡ ಅಕ್ರಮಿಯಾದರೂ ಮರಣದ ಮುಂದೆ ಕುಬ್ಜನಾಗುತ್ತಾನೆ. ತನ್ನ ಶಕ್ತಿ, ಸಾಮರ್ಥ್ಯದಿಂದ ಜಗತ್ತಿನಲ್ಲಿ ಹಲವಾರು ಸಾಧನೆಗಳನ್ನು ಮಾಡಿದವರೂ ಅಕ್ರಮಗಳನ್ನೆಸಗಿದವರೂ ಮರಣ ಸಂಭವಿಸಿದರೆ ನಿಶ್ಚಲರಾಗುತ್ತಾರೆ. ದಷ್ಟ ಪುಷ್ಟವಾದ ಅಂಗಸೌಷ್ಠ್ಯವವಿದ್ದರೂ ಮಣ್ಣಿನ ಹುಳಗಳಿಗೆ ಆಹುತಿಯಾಗುತ್ತಾರೆ. ಅಲ್ಲಾಹನು ಮಾಡಲು ಹೇಳಿರುವ, ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕಲಿಸಿರುವ ಕೆಲಸಗಳನ್ನು ಮರಣಕ್ಕಿಂತ ಮುಂಚೆಯೇ ಮಾಡಬೇಕು. ಮರಣ ಸಮೀಪಿಸುವಾಗ ನನಗೆ ಸ್ವಲ್ಪ ಒಳಿತುಗಳನ್ನು ಮಾಡಲಿಕ್...

ಬರಾಅತ್ ರಾತ್ರಿಯ ಮಹತ್ವ

ಬರಾಅತ್ ರಾತ್ರಿಯ ಮಹತ್ವ ಪುಣ್ಯಗಳ ಆಗರ ಬರಾಅತ್ ರಾತ್ರಿಯ ಮಹತ್ವಗಳು...!! ✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ಗದಗ 🔹ಶ'ಅಬಾನ್ 14 ರ ಅಸ್ತಮಿಸಿದ 15 ರ ರಾತ್ರಿಯಾಗಿದೆ ಬರಾಅತ್ ರಾತ್ರಿ. ನರಕದಿಂದ ತನ್ನ ಧಾರಾಳ ದಾಸರನ್ನು ಮೋಚಿಸುವ ರಾತ್ರಿಯಾಗಿರುವುದರಿಂದ 'ಮೋಚನೆ' ಎಂಬರ್ಥ ಬರುವ ಬರಾಅತ್ ಎಂಬ ಇದಕ್ಕೆ ಬಂದದ್ದು.  إِنَّآ أَنزَلْنَٰهُ فِى لَيْلَةٍۢ مُّبَٰرَكَةٍ ۚ إِنَّا كُنَّا مُنذِرِينَ. فِيهَا يُفْرَقُ كُلُّ أَمْرٍ حَكِيمٍ أَمْرًۭا مِّنْ عِندِنَآ ۚ إِنَّا كُنَّا مُرْسِلِينَ ನಿಶ್ಚಯವಾಗಿಯೂ ನಾವು ಇದನ್ನು ಒಂದು ಅನುಗ್ರಹೀತ ರಾತ್ರಿಯಲ್ಲಿ ಅವತೀರ್ಣಗೊಳಿಸಿದ್ದೇವೆ. ನಾವು ಜನರಿಗೆ ಮುನ್ನೆಚ್ಚರಿಕೆ ನೀಡುವವರೇ ಆಗಿದ್ದೇವೆ. ಆ ರಾತ್ರಿಯಲ್ಲಿ ನಮ್ಮ ಅಪ್ಪಣೆಯಿಂದ ಸುಶಕ್ತವಾದ ಸಕಲ ವಿಷಯಗಳನ್ನು ಬೇರ್ಪಡಿಸಿ ವಿವರಿಸಲಾಗುತ್ತದೆ. ನಾವು ಸಂದೇಶವಾಹಕರನ್ನು ಕಳುಹಿಸುತ್ತಿರುವವರಾಗಿರುವೆವು."(ಸೂ.ದುಖಾನ್: 3,4) ಈ ಎರಡು ಆಯತನ್ನು ವಿದ್ವತ್‌ ಶ್ರೇಷ್ಠರಾದ ಖುರ್'ಆನ್ ವಿವರ್ತಕರು ವಿವರಿಸುವುದು ಈ ರೀತಿಯಾಗಿದೆ 'ಅನುಗ್ರಹೀತ ರಾತ್ರಿ’ಯ ಉದ್ದೇಶ ಲೈಲತುಲ್ ಖದ್‍ರ್ ಎಂದಾಗಿದೆ ಬಹುಮತಾಭಿಪ್ರಾಯ. ‘ಖುರ್-ಆನನ್ನು ರಮಳಾನಿನಲ್ಲಿ ಇಳಿಸಲಾಗಿದೆ. (ಸೂರ: ಅಲ್-ಬಖರ) ಎಂದೂ ಲೈಲತುಲ್ ಖದ್‍ರ್‍ನಂದು ಇಳಿಸಿದ್ದೇವೆ. (ಸೂರ: ಅಲ್‍ಖದರ್) ಎಂದೂ ಖುರ್-ಆನಿನಲ್ಲೇ ಇದೆ. ಲೈಲತುಲ್ ಖದ...

ವಸ್ತ್ರಧಾರಣೆ ಸರಳ ಮತ್ತು ಶುದ್ಧವಾಗಿರಬೇಕು:

ವಸ್ತ್ರಧಾರಣೆ ಸರಳ ಮತ್ತು ಶುದ್ಧವಾಗಿರಬೇಕು: ಓರ್ವನ ವಸ್ತ್ರಧಾರಣೆಯು ಜನರು ಅವನನ್ನು ನೋಡುವ ದೃಷ್ಟಿಕೋನದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಸರಳವೂ ಶುಭ್ರವೂ ಆದ ವಸ್ತ್ರ ಧರಿಸಿದ ಓರ್ವ ವ್ಯಕ್ತಿ ಏನಾದರೂ ಹೇಳುತ್ತಾನೆಂದಾದರೆ ಅದನ್ನು ಆಲಿಸಲು ಜನರಿರುತ್ತಾರೆ. ಅವನ ಮಾತಿಗೆ ಮನ್ನಣೆ ಲಭಿಸುತ್ತದೆ. ಜನರು ಅಂಥವರೊಂದಿಗೆ ಸಹವಾಸ ಬೆಳೆಸಲು ಬಯಸುತ್ತಾರೆ. ಶುದ್ಧಿ ಮತ್ತು ಸರಳತೆಗೆ ಇಸ್ಲಾಮ್ ಮಹತ್ವ ನೀಡಿದೆ. ಶುದ್ಧಿಯು ವಿಶ್ವಾಸದ ಅರ್ಧಾಂಶವಾಗಿದೆ. ಈ ಗುಣಗಳನ್ನೆಲ್ಲಾ ಮೈಗೂಡಿಸಿಕೊಂಡಿರುವವನು ಖಂಡಿತವಾಗಿಯೂ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರನಾಗುತ್ತಾನೆ. ಜನರ ವಧ್ಯೆ ಅಂತಹ ವ್ಯಕ್ತಿಗಳ ಪದವಿಯು ಉನ್ನತಿಗೇರಿರುತ್ತದೆ. ಆದ್ದರಿಂದ ನಾವು ಈ ಗುಣಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ಮೈಗೂಡಿಸಿಕೊಳ್ಳಬೇಕು. ============================ ಕೆಎಂ ಜಲೀಲ್ ಕುಂದಾಪುರ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)

ಪಾಲಕ್ ಸೊಪ್ಪು ಕೇವಲ ಸೊಪ್ಪಲ್ಲ ಹಲವು ಕಾಯಿಲೆಗಳಿಗೆ ಅಮೃತ:

ಪಾಲಕ್ ಸೊಪ್ಪು ಕೇವಲ ಸೊಪ್ಪಲ್ಲ ಹಲವು ಕಾಯಿಲೆಗಳಿಗೆ ಅಮೃತ:    ದೇಹವು ಆರೋಗ್ಯವಾಗಿರಲು ಹಣ್ಣು ತರಕಾರಿಗಳ ಸೇವನೆ ತುಂಬಾ ಮುಖ್ಯ. ಹಸಿ ಸೊಪ್ಪುಗಳನ್ನು ಹೆಚ್ಚಾಗಿ ತಿನ್ನುವುದರಿಂದ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳು ದೊರೆಯುತ್ತವೆ. ಅಲ್ಲದೆ ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಹಣ್ಣುಗಳನ್ನು ಸೇವನೆ ಮಾಡೋದ್ರಿಂದ ದೇಹಕ್ಕೆ ಒಳ್ಳೆಯ ಶಕ್ತಿ, ರಕ್ತ ಹೆಚ್ಚು ಮಾಡುವಲ್ಲಿ ಇವು ಸಹಕಾರಿ. ಮೆಂತ್ಯ ಸೊಪ್ಪು, ಮೂಲಂಗಿ ಸೊಪ್ಪು, ಸಬ್ಬಸಿಗೆ ಸೊಪ್ಪು, ಇವೆನ್ನೆಲ್ಲ ಹಸಿ ಕೋಸಂಬರಿ ತರ ಮಾಡಿಕೊಂಡು ತಿನ್ನಬೇಕು ತುಂಬಾ ರುಚಿ ಇರುತ್ತದೆ. ಈ ಎಲ್ಲ ಸೊಪ್ಪಿನ ಬಳಕೆ ಜೊತೆ ಪಾಲಕ್ ಸೊಪ್ಪುನ್ನು ಹೆಚ್ಚಾಗಿ ಉಪಯೋಗಿಸಿ. ಇದನ್ನು ಮಕ್ಕಳಿಗೆ ಹೆಚ್ಚಾಗಿ ಕೊಡಿ ಇದರಿಂದ ಅವರಿಗೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಇದನ್ನು ಆಂಗ್ಲ ಭಾಷೆಯಲ್ಲಿ *”ಸ್ಪಿನ್ಚ್”* ಎಂದು ಕರೆಯುತ್ತಾರೆ. ಇದರ ಉಪಯೋಗ ಇಷ್ಟೇ ಅಲ್ಲದೆ ಪಾಲಕ್ ಸೊಪ್ಪು ಹಲವು ಕಾಯಿಲೆಗಳಿಗೆ ರಾಮಬಾಣ ಹೇಗೆ ಅಂತೀರಾ? ಈ ಕೆಳಗಡೆ ಓದಿ.  ▪️ಪಾಲಕ್ ಸೊಪ್ಪಿನಲ್ಲಿ ಪ್ರೋಲೇಟ್ ಎಂಬ ಅಂಶವನ್ನು ಹೊಂದಿರುವ ಕಾರಣ ಇದನ್ನು ನಿತ್ಯ ಸೇವಿಸಿದರೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ.   ▪️ದೇಹದಲ್ಲಿರುವ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಪಾಲಕ್ ಸೊಪ್ಪನ್ನು ಹೆಚ್ಚಾಗಿ ಸೇವಿಸಬೇಕು. ಇದರಲ್ಲಿರುವ ಕ್ಯಾರೋಟಿನೈಡ್ ಎಂಬ ಅಂಶವು ಕೊಬ್ಬು ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಡ...

ಶಅ್ ಬಾನ್ ನ ಹದಿನೈದರ ರಾತ್ರಿ ಬಹಳಷ್ಟು ಶ್ರೇಷ್ಠ ತೆ ಗಳಿವೆ. ಲೆಕ್ಕಿಸಲು ಅಸಾಧ್ಯ

ಶಅ್ ಬಾನ್ ನ ಹದಿನೈದರ ರಾತ್ರಿ ಬಹಳಷ್ಟು ಶ್ರೇಷ್ಠ ತೆ ಗಳಿವೆ. ಲೆಕ್ಕಿಸಲು ಅಸಾಧ್ಯ ▪️▪️▪️▪️▪️▪️▪️ ✒ನಿಸಾರ್ ಸುಲ್ತಾನಿ ಅಸ್ಸಖಾಫಿ ಉಳ್ಳಾಲ ▪️▪️▪️▪️▪️▪️▪️ وهي من الليالي التي كان النبي عليه الصلاة والسلام يحييها ويميزها عن غيرها من ليالي العام وكان يقول عنها ಈ ರಾತ್ರಿಯನ್ನು ಇತರ ರಾತ್ರಿಗಳಿಂದ ಮುತ್ತು ನಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರು ಬೇರ್ಪಡಿಸಿರುವರು ಮತ್ತು ಜೀವಂತಗೊಳಿಸಿರುವರು. ಮುತ್ತು ನಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ:   : ( هذه ليلة النصف من شعبان يغفر الله فيها للمستغفرين ويرحم المسترحمين ويؤخر أهل الحقد على حقدهم ) (ಶಅ್ ಬಾನ್ ನ ಹದಿನೈದರ ರಾತ್ರಿ ಪ್ರಾಯಶ್ಚಿತ್ತ ಬೇಡುವವರಿಗೆ ಪ್ರಾಯಶ್ಚಿತ್ತ ನೀಡುವೆನು, ರಹ್ಮತ್ ಬೇಡುವವನಿಗೆ ರಹ್ಮತ್ ಕರುಣಿಸುವೆನು ಮತ್ತು ದ್ವೇಷ ದ ಜನರ ದ್ವೇಷ ವನ್ನು ಅಲ್ಲಾಹನು ವಿಳಂಬ ಗೊಳಿಸುವನು.) ▪️▪️▪️▪️▪️▪️▪️ ✅فإليك سبعا من أسمائها ಶಅ್ ಬಾನ್ ನ ಏಳು ಹೆಸರುಗಳು ಇಲ್ಲಿವೆ: 1_ تسمى ليلة الصك 2_ ليلة العتق ಮುಕ್ತಿ ಯ ರಾತ್ರಿ 3_ ليلة حب الخير ಉತ್ತಮ ರಾತ್ರಿ 4_ ليلة القسمة ವಿಭಾಗಿಸುವ ರಾತ್ರಿ 5_ ليلة الشفاعة ಶಿಫಾರಸ್ಸಿನ ರಾತ್ರಿ 6_ ليلة الإجابة ಉತ್ತರ ಲಭಿಸುವ ರಾತ್ರಿ 7_ ليلة التقدير ನಿರ್ಣಯಿಸುವ ರಾತ್ರಿ ▫️▫️▫️▫️ ✅وأضف سبعا من أسمائها ಹೆಚ್ಚುವರಿ ಏಳು ಹ...

ಕ್ಷಮೆ ಕೇಳುವ ಮುನ್ನವೇ ಕ್ಷಮಿಸೋಣ

ಕ್ಷಮೆ ಕೇಳುವ ಮುನ್ನವೇ ಕ್ಷಮಿಸೋಣ ✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ ಮನುಷ್ಯನಾಗಿ ಹುಟ್ಟಿದ ಮೇಲೆ ಆತನಿಂದ ಒಂದಲ್ಲ ಒಂದು ರೀತಿಯಲ್ಲಿ ತಪ್ಪು ಸಂಭವಿಸಬಹುದು. ಯಾವ ತಪ್ಪುಗಳು ಸಂಭವಿಸದೆ ಬದುಕಲು ಪುಣ್ಯ ಪುರುಷರಿಗೆ ಮಾತ್ರ ಸಾಧ್ಯವಾಗಬಹುದು. ಬೆರೆತು ಜೀವಿಸುವಾಗ ಮಾತು,ನಡತೆಗಳಿಂದ ಮನ ನೋವಾಗುವುದು ಸಹಜ. ಹಾಗಂತ ಅದನ್ನೇ ಮನದಲ್ಲಿ ಇಟ್ಟು ಕೊಂಡು "ನಾನು ಕ್ಷಮಿಸಲ್ಲ, ತನ್ನ ತಪ್ಪನ್ನು ಒಪ್ಪಿ ಕ್ಷಮೆ ಕೇಳಿದರೆ ಮಾತ್ರ ಕ್ಷಮಿಸುತ್ತೇನೆ" ಎಂಬ ಅಹಂಕಾರ ಮತ್ತು ಅಹಂಭಾವದ ಭಾವನೆ ನಮಗಿರಬಾರದು. ನಮಗೆ ಅನ್ಯಾಯ ವಾಗಿರಬಹುದು,ನಾವು ವಂಚನೆಗೆ ಒಳಗಾಗಿರಬಹುದು,ನಮ್ಮ ತಪ್ಪನ್ನು ಎತ್ತಿ ಹೇಳಿ ಅಪಮಾನಿಸಿರಬಹುದು.ಜೀವನದ ದುರ್ಬಲ ನಿಮಿಷ ದಲ್ಲಿ ಮನುಷ್ಯನು ಎಡವುದು ಸ್ವಾಭಾವಿಕ. ಅಲ್ಲಾಹನಿಗಾಗಿ, ನಮ್ಮ ಪರಲೋಕ ವಿಜಯಕ್ಕಾಗಿ ಅವರು ಕ್ಷಮೆ ಕೇಳುವ ಮುನ್ನವೇ ನಾವು ಕ್ಷಮಿಸಿ ಬಿಡೋಣ. "ಕ್ಷಮಿಸುವುದಿಲ್ಲ ಅಥವಾ ಕ್ಷಮೆ ಕೇಳಿದರೆ ಮಾತ್ರ ಕ್ಷಮೆ ನೀಡುತ್ತೇನೆ" ಎಂಬ ಜಿಗುಟು ಗುಣದಿಂದ ಹೊರ ಬರೋಣ. ಒಂದು ವೇಳೆ ಅಲ್ಲಾಹನು ನಮ್ಮ ತಪ್ಪಿಗೆ ಕ್ಷಮೆ ನೀಡುವುದಿಲ್ಲ ಎಂದು ಹೇಳಿದರೆ...!! ಊಹಿಸಿ ! ನಮ್ಮ ಪರಲೋಕದ ಸ್ಥಿತಿ ಏನಾಗಿರಬಹುದು ? ತಪ್ಪು ಮಾಡಿದ ದಾಸನು ಒಳಿತು ಮಾಡುವಾಗ ಆತನ ತಪ್ಪನ್ನು ಅಲ್ಲಾಹನು ಕ್ಷಮಿಸುವುದಾದರೆ ಮನುಷ್ಯರಾದ ನಮಗೆ ಹಠಮಾರಿತನ ಯಾಕೆ ?. ಪ್ರವಾದಿ ﷺ ರು ಹೇಳುತ್ತಾರೆ: "ನೀವು ಮನುಷ್ಯರ ಮೇಲೆ ಕರುಣೆ ತೋ...

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 138

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 138 صِبْغَةَ ٱللَّهِ ۖ وَمَنْ أَحْسَنُ مِنَ ٱللَّهِ صِبْغَةًۭ ۖ وَنَحْنُ لَهُۥ عَٰبِدُونَ ಅರ್ಥ:⤵️ ▪️ಅಲ್ಲಾಹನ ಧರ್ಮದ ನಿಜ ಬಣ್ಣವನ್ನು ನಮಗವನು ನೀಡಿರುತ್ತಾನೆ. ಅಲ್ಲಾಹನಿಗಿಂತ ಶ್ರೇಷ್ಟ ವರ್ಣದಾತರು ಯಾರಿದ್ದಾರೆ? ⁷¹ ನಾವು ಆತನಿಗೆ ಮಾತ್ರ ಆರಾಧಿಸುವೆವು (ಎಂದು ಹೇಳಿರಿ). ವಿವರಣೆ:⤵️ 71.136ನೇ ಆಯತ್‍ನಲ್ಲಿರುವ “ನಾವು ವಿಶ್ವಾಸವಿಟ್ಟಿರುವೆವು” ಎಂಬ ಮಾತಿಗೆ ಪುಷ್ಟೀಕರಣವಿದು. ಅಲ್ಲಾಹನು ನಮ್ಮನ್ನು ಅವನ ಸತ್ಯಧರ್ಮವಾದ ಇಸ್ಲಾಮ್ ಎಂಬ ಬಣ್ಣದಲ್ಲಿ ಮುಳುಗಿಸಿರುತ್ತಾನೆ ಎಂದರ್ಥ. ಇಲ್ಲಿ ಅಲ್ಲಾಹನ ಬಣ್ಣ ಎಂಬುದು ಅಲಂಕಾರಿಕ ಪದ. ವಸ್ತ್ರದಲ್ಲಿ ಬಣ್ಣವು ಎದ್ದುಕಾಣುವಂತೆ ಮುಸ್ಲಿಮನಲ್ಲಿ ಅಲ್ಲಾಹನ ಪರಿಶುದ್ಧ, ತಾಜಾ ಧರ್ಮವಾದ ಇಸ್ಲಾಮ್ ಎದ್ದುಕಾಣುತ್ತಿರುವುದು ಇಲ್ಲಿನ ಉಪಮೆಯ ಸಮಾನ ಧರ್ಮ. ಕ್ರೈಸ್ತರು ಮಕ್ಕಳನ್ನು ಹಳದಿ ಜಲದಲ್ಲಿ ಮುಳುಗಿಸುವ ‘ಮಾಮೊದಿ’ (ಜ್ಞಾನಸ್ನಾನ) ಎಂಬ ರೂಢಿಯೊಂದಿದೆ. ಹಾಗೆ ಮುಳುಗಿಸಿದರೆ ಆ ಮಗು ನಿಜವಾದ ಕ್ರೈಸ್ತನಾಯಿತು ಎಂದು ನಂಬಿಕೆ. ಆದ್ದರಿಂದ ಅಲ್ಲಾಹನ ಇಸ್ಲಾಮ್ ಎಂಬ ಬಣ್ಣ ಅದಕ್ಕಿಂತ ಶ್ರೇಷ್ಠ ಎಂಬ ಆಶಯಕ್ಕಾಗಿ ಇಲ್ಲಿ ಅಲ್ಲಾಹನು ಬಣ್ಣದ ಉಪಮೆ ಮಾಡಿರುತ್ತಾನೆ. ಪವಿತ್ರವೂ ಶುದ್ಧವೂ ಆದ ಪ್ರಕೃತಿಯಲ್ಲಿ ಅಲ್ಲಾಹನು ಮನುಷ್ಯನನ್ನು ಸೃಷ್ಟಿಸಿರುವನು. ಉತ್ತಮಿಕೆಯನ್ನು ಇಷ್ಟಪಡುವ, ಕೃತಿಮತೆ ಇಲ್ಲದ ಶುದ್ಧ ಪ್ರಕೃತಿ ಅದು. ಇದೇ ಇಸ್ಲಾಮ್ ಪ್ರಕೃತಿ. ಶೈಶವದ ...

ಮರಣ:

ಮರಣ: ಮರಣ ಎಂಬುದು ನಿರಾಕರಿಸಲಾಗದ ವಾಸ್ತವಿಕತೆಯಾಗಿದೆ. ಎಲ್ಲರೂ ಮರಣದ ರುಚಿಯನ್ನು ಅನುಭವಿಸುವರು. ಜನಿಸಿದ ಪ್ರತೀ ಜೀವಕ್ಕೂ ಮರಣವಿದೆ. ಮರಣವನ್ನು ಬಯಸಿದರೂ ಬಯಸದಿದ್ದರೂ ಅದು ಬಂದೇ ಬರುತ್ತದೆ. ಅದು ಯಾರ ಅನುಮತಿಗೂ ಕಾಯುವುದಿಲ್ಲ. ಮರಣವು ಬರುವಾಗ “ನನಗೀಗ ಬರಲು ಪುರುಸೊತ್ತಿಲ್ಲ. ಮುಂದಿನ ಬಾರಿ ನೋಡುವಾ” ಎಂದು ಸಾಗ ಹಾಕಿ ಕಳುಹಿಸಲು ಯಾವುದಾದರೂ ಆತ್ಮಕ್ಕೆ ಸಾಧ್ಯವಿದೆಯೇ.? ಅಲ್ಲಾಹನು ಪ್ರತಿಯೊಂದು ಆತ್ಮಕ್ಕೂ ಒಂದು ಅವಧಿಯನ್ನು ನಿಶ್ಚಯಿಸಿದ್ದಾನೆ. ಆ ಸಂದರ್ಭ ಬಂದೊದಗಿದಾಗ ಮರಣವು ಆವರಿಸಿಯೇ ತೀರುವುದು. ನಾವು ಯಾವ ಸ್ಥಿತಿಯಲ್ಲಿದ್ದರೂ ಸರಿ. ಅಲ್ಲಾಹನು ಹೇಳುತ್ತಾನೆ.  “ಪ್ರತಿಯೊಂದು ಜನಾಂಗಕ್ಕೆ ಒಂದು ಕಾಲಾವಧಿ ನಿಶ್ಚಿತವಿದೆ. ಅದರ ಕಾಲಾವಧಿಯು ಮುಗಿದಾಗ ಒಂದು ಕ್ಷಣ ಹಿಂದೆ ಅಥವಾ ಮುಂದೆ ಆಗುವುದಿಲ್ಲ.” (ಅಅ್‌ರಾಫ್-34)      ಎಷ್ಟೇ ದೊಡ್ಡ ಅಕ್ರಮಿಯಾದರೂ ಮರಣದ ಮುಂದೆ ಕುಬ್ಜನಾಗುತ್ತಾನೆ. ತನ್ನ ಶಕ್ತಿ, ಸಾಮರ್ಥ್ಯದಿಂದ ಜಗತ್ತಿನಲ್ಲಿ ಹಲವಾರು ಸಾಧನೆಗಳನ್ನು ಮಾಡಿದವರೂ ಅಕ್ರಮಗಳನ್ನೆಸಗಿದವರೂ ಮರಣ ಸಂಭವಿಸಿದರೆ ನಿಶ್ಚಲರಾಗುತ್ತಾರೆ. ದಷ್ಟ ಪುಷ್ಟವಾದ ಅಂಗಸೌಷ್ಠ್ಯವವಿದ್ದರೂ ಮಣ್ಣಿನ ಹುಳಗಳಿಗೆ ಆಹುತಿಯಾಗುತ್ತಾರೆ. ಅಲ್ಲಾಹನು ಮಾಡಲು ಹೇಳಿರುವ, ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕಲಿಸಿರುವ ಕೆಲಸಗಳನ್ನು ಮರಣಕ್ಕಿಂತ ಮುಂಚೆಯೇ ಮಾಡಬೇಕು. ಮರಣ ಸಮೀಪಿಸುವಾಗ ನನಗೆ ಸ್ವಲ್ಪ ಒಳಿತುಗಳನ್ನು ಮಾಡಲಿಕ್...

ಜ್ಞಾನಧಾರೆ

ಶ'ಅಬಾನ್ ತಿಂಗಳ ಮಹತ್ವ... 🌿🌿🌿🌿🌿🌿🌿🌿🌿🌿 ಹಲವಾರು ಸುವಿಶೇಷತೆಗಳು ಇರುವ ಪಾವನ ತಿಂಗಳು, ಹಿಜರಿ ಕ್ಯಾಲೆಂಡರಿನ ಎಂಟನೇ ತಿಂಗಳಾದ ಶ'ಅಬಾನ್‌ ರಜಬ್ ತಿಂಗಳ ಆಗಮನದೊಂದಿಗೆ ‌ವಿಶ್ವಾಸಿಗಳ‌ ಮನಸ್ಸು ಅತಿಯಾದ ಆನಂದದಿಂದಲೂ ರಜಬ್‌ ತಿಂಗಳಲ್ಲಿ ದೊರೆತ ‌ಆತ್ಮಾನುಭೂತಿ‌ಯು ರಮಳಾನ್ ಸ್ವೀಕರಿಸಲು ಇರುವ ಅಮಿತಾವೇಶದ ಕಾರಣದಿಂದಲೂ‌‌ ನಾವಿರುವ ಶ'ಅಬಾನ್ ತಿಂಗಳನ್ನು ಆರಾಧನೆ, ‌ಸತ್ಕರ್ಮಗಳಿಂದ ಧನ್ಯಗೊಳಿಸಬೇಕಾಗಿದೆ.  ಪ್ರವಾದಿﷺ ಮತ್ತು ಅವರ ಅನುಯಾಯಿಗಳು ಈ ಒಂದು ತಿಂಗಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಿದ್ದು ಈ ತಿಂಗಳಲ್ಲಿ ಅನೇಕ ಸಂಭಾವ್ಯ ಘಟನೆಗಳು ನಡೆದಿದ್ದು ಅದೆಲ್ಲವೂ ನಮಗೆ ಅನೇಕ ಪಾಠಗಳನ್ನು ಕಲಿಸುತ್ತದೆ.  ◼️ ಮಹತ್ವ ತುಂಬಿದ ಪಾವನ ತಿಂಗಳು... ಶ'ಅಬಾನ್ ಅನೇಕ ಸದ್ಗುಣಗಳಿಂದ ತುಂಬಿದ ತಿಂಗಳು. ಲೋಕ ನಾಯಕ ಪ್ರವಾದಿﷺ ಇದಕ್ಕೆ ಇತರ ತಿಂಗಳುಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು ಎಂದು ಹದೀಸುಗಳಿಂದ ತಿಳಿಯಲು ಸಾಧ್ಯವಾಗುತ್ತದೆ. ಬೀವಿ ಆಯಿಷಾ(ರ.ಅ) ಹೇಳುತ್ತಾರೆ: ಲೋಕ ನಾಯಕ ಪ್ರವಾದಿﷺ ಶ'ಅಬಾನ್ ತಿಂಗಳಲ್ಲಿ ಉಪವಾಸ ಹಿಡಿಯುವಂತೆ ಇತರ ತಿಂಗಳಲ್ಲಿ ಉಪವಾಸ ಅನುಷ್ಠಿಸುತ್ತಿರಲಿಲ್ಲ. (ಸ್ವಹೀಹುಲ್ ಬುಖಾರಿ 1834) ಇಮಾಮ್ ಮುಸ್ಲಿಂ(ರ.ಅ) ನಿರೂಪಿಸಿದ ಹದೀಸ್‌ನಲ್ಲಿ ಈ ರೀತಿ ಇದೆ. ಪ್ರವಾದಿﷺ ಶ'ಅಬಾನ್‌ನಲ್ಲಿ ಕೆಲವು ದಿನಗಳನ್ನು ಹೊರತುಪಡಿಸಿ ಪ್ರತಿದಿನ ವೃತಾನುಷ್ಠಿಸುತ್ತಿದ್ದರು. (ಮುಸ್ಲಿಂ 19...

ಸಮೃದ್ಧಿಯೇರಿದ ಬರಾಅತ್ ರಾತ್ರಿ!

---------بسم الله الرحمان الرحيم---------- اَلصَّلَاةُ وَالسَّلَامُ عَلَيْكَ يَا سَيِّدِی يَا رَسُولَ اللّٰه ﷺ ■□□□□□□□□□□□□□□□□□□□□■ ಸಮೃದ್ಧಿಯೇರಿದ ಬರಾಅತ್ ರಾತ್ರಿ! ■□□□□□□□□□□□□□□□□□□□□■               ✒️ ಮುಹಮ್ಮದ್ ಹುಸೈನ್ ರಝಾ. ಅಮೀರುಲ್ ಮೂಮಿನೀನ್ ಸಯ್ಯಿದುನಾ ಉಮರ್ ಬಿನ್ ಅಬ್ದುಲ್ ಅಝೀಝ್ رضي الله عنه ರವರು ಒಮ್ಮೆ ಶಾಬಾನಿನ 15ನೇ ರಾತ್ರಿ ಅಂದರೆ ಬರಾಅತ್ ರಾತ್ರಿ ಆರಾಧನೆಯಲ್ಲಿ ತಲ್ಲೀನರಾಗಿದ್ದರು. ಆರಾಧನೆಗಳಿಂದ ವಿರಮಿಸಿ ತಲೆಯನ್ನು ಮೇಲೆತ್ತಿದಾಗ ಒಂದು ಹಸಿರು ಬಣ್ಣದ ಪತ್ರವನ್ನು ಕಾಣುತ್ತಾರೆ! ಅದರ ಪ್ರಕಾಶ ಆಕಾಶದ ವರೆಗೂ ಹರಡಿಕೊಂಡಿತ್ತು! ಅದರಲ್ಲಿ ಹೀಗೆ ಬರೆಯಲಾಗಿತ್ತು. *ಇದು ಗೌರವದ ಒಡೆಯನೂ ಯಜಮಾನನಾದ ಅಲ್ಲಾಹﷻನ ಕಡೆಯಿಂದ ಅವನ ದಾಸ ಉಮರ್ ಬಿನ್ ಅಬ್ದುಲ್ ಅಝೀಝ್ ನಿಗೆ ನರಕದ ಬೆಂಕಿಯಿಂದ ಬಿಡುಗಡೆಯ ಪತ್ರ !* (ತಫ್ಸೀರುಲ್ ರೂಹುಲ್ ಬಯಾನ್-7/406) ಮಹತ್ವವೇರಿದ ಮಾಸಗಳ ಪೈಕಿ ರಜಬ್ ಮಾಸವು ನಮ್ಮಿಂದ ನಿರ್ಗಮಿಸಿ ಮುತ್ತು ಹಬೀಬ್ ﷺ ರು ನನ್ನ ಮಾಸವೆಂದು ಹೇಳಿದ ಪವಿತ್ರ ಶಾಬಾನ್ ಮಾಸವು ನಮಗೆ ಒದಗಿ ಬಂದಿದೆ. ಈ ಶಾಬಾನ್ ಮಾಸದ 15ರ ರಾತ್ರಿಗೆ ಹತ್ತು ಹಲವು ಮಹತ್ವಗಳಿವೆ ಇದರಲ್ಲಿ ಮನುಷ್ಯನ ಒಳಿತು ಕೆಡುಕು ರಿಝ್ ಕ್ ಹಾಗೂ ಮರಣವನ್ನು ನಿಶ್ಚಯಿಸಲಾಗುತ್ತದೆ. ಏನು ಈ ಮಾಸದ ಶ್ರೇಷ್ಠತೆ.? ಏನಿದರ ಮಹತ್ವ ಮತ್ತು ಪ್ರತ್ಯೇಕತೆ? ಅಮೀರ...

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 137

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 137 فَإِنْ ءَامَنُوا۟ بِمِثْلِ مَآ ءَامَنتُم بِهِۦ فَقَدِ ٱهْتَدَوا۟ ۖ وَّإِن تَوَلَّوْا۟ فَإِنَّمَا هُمْ فِى شِقَاقٍۢ ۖ فَسَيَكْفِيكَهُمُ ٱللَّهُ ۚ وَهُوَ ٱلسَّمِيعُ ٱلْعَلِيمُ ಅರ್ಥ:⤵️ ▪️ನೀವು ವಿಶ್ವಾಸವಿಟ್ಟಂತೆಯೇ ಅವರೂ ವಿಶ್ವಾಸವಿಟ್ಟರೆ ಅವರು ಖಂಡಿತ ಸತ್ಫಥ ಪ್ರಾಪ್ತರು. ಅವರು ವಿಮುಖರಾದರೆ, ಅವರೇ ಒಡಕಿನವರು. ಆದ್ದರಿಂದ ಅವರಿಂದ ನಿಮ್ಮನ್ನು ಪಾರುಮಾಡಲು ಅಲ್ಲಾಹು ಸಾಕು. ಆತನು ಪರಮ ಶ್ರೋತೃನು. ಪರಮ ತಜ್ಞನು.    ಸಂ: ✒️ಅಬೂರಿಫಾನ ಕುಂದಾಪುರ

ಇಹ-ಪರ ವಿಜಯ:

ಇಹ-ಪರ ವಿಜಯ: ವಿದ್ವಾಂಸರಾದ ಹಾತ್ವಿಮುಲ್ ಹಸನ್(ರ.ಅ) ಹೇಳುತ್ತಿದ್ದರು, “ಅಲ್ಲಾಹನಿಗೆ ನೀಡಲು  ಉತ್ತರವನ್ನು ಸಿದ್ಧಪಡಿಸದೆ ನಾನು ಯಾವುದೇ ಮಾತನ್ನಾಡುತ್ತಿರಲಿಲ್ಲ. ಅಂತ್ಯ ದಿನದಲ್ಲಿ ಅಲ್ಲಾಹನು ನನ್ನೊಂದಿಗೆ, “ನೀನು ಯಾಕೆ ಹಾಗೆ ಹೇಳಿದ್ದು.? ಎಂದು ಪ್ರಶ್ನಿಸುವನು. ಅದರ ಕಾರಣವನ್ನು ಹೇಳಲು ನನಗೆ ಸಾಧ್ಯವಾಗಬೇಕು.” ಮಾತನಾಡಲು ಬಯಸಿದಾಗ ಒಮ್ಮೆ ಚಿಂತಿಸುವ ಜಾಯಮಾನವಾದರೂ ಇರಬೇಕು. ಮಾತನಾಡಿದ ಬಳಿಕ ಬೆರಳು ಕಚ್ಚಿ ಪ್ರಯೋಜನವಿಲ್ಲ. ಮಾತನಾಡುವ ವಿಧಾನದ ಕುರಿತು ಇಮಾಮ್ ಹಸನುಲ್ ಬಸರಿ ವಿವರಿಸುತ್ತಾರೆ, “ಬುದ್ಧಿವಂತನ ನಾಲಗೆಯು ಅವನ ಹೃದಯದ ಹಿಂದಿರುತ್ತದೆ. ಮಾತನಾಡಲು ಬಯಸಿದಾಗ ಅವನು ಹೃದಯದೊಂದಿಗೆ ಅನುಮತಿ ಕೇಳುವನು. ಅದು ಅನುಮತಿ ನೀಡಿದರೆ ಅವನು ಮಾತನಾಡುವನು. ಇಲ್ಲದಿದ್ದರೆ ಮೌನಪಾಲಿಸುವನು. ಅವಿವೇಕಿಯ ಹೃದಯವು ಅವನ ನಾಲಗೆಯ ಹಿಂದಿರುತ್ತದೆ. ಅವನು ಮಾತನಾಡುವಾಗ ಹೃದಯದ ಕಡೆಗೆ ತಿರುಗಿ ನೋಡುವುದಿಲ್ಲ. ನಾಲಗೆಯಲ್ಲಿ ಬರುವುದೆಲ್ಲವನ್ನೂ ಹೇಳುತ್ತಾನೆ.” ಒಟ್ಟಿನಲ್ಲಿ ನಾಲಗೆಯ ಉಪಯೋಗಕ್ಕನುಸಾರವಾಗಿ ಓರ್ವನ ಇಹ-ಪರ ವಿಜಯವು ತೀರ್ಮಾನವಾಗುತ್ತದೆ. ಚಿಂತಿಸದೇ ಹೇಳುವ ಮಾತುಗಳಿಂದಾಗಿ ನಮ್ಮ ವಿಶ್ವಾಸಕ್ಕೂ ಸತ್ಕರ್ಮಗಳಿಗೂ ಅಪಾಯವಿದೆ. ಅಲ್ಲಾಹನ ಪ್ರೀತಿ ಗಳಿಸಬೇಕಾದರೆ, ಪರಲೋಕದಲ್ಲಿ ವಿಜಯಿಗಳಾಗಬೇಕಾದರೆ ನಾಲಗೆ ಮತ್ತು ಮಾತಿನ ಮೇಲೆ ನಿಯಂತ್ರಣ ಹೇರುವುದು ಅನಿವಾರ್ಯವಾಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅದಕ್ಕೇ ಹೇಳಿದ್ದು,...

ತಲೆಹೊಟ್ಟು ಕೂದಲು ಉದುರುವಿಕೆಗೆ ಹಾಗೂ ಬಿಳಿಕೂದಲಿನ ಸಮಸ್ಯೆಗೆ ಮನೆಮದ್ದುಗಳು:

ತಲೆಹೊಟ್ಟು ಕೂದಲು ಉದುರುವಿಕೆಗೆ ಹಾಗೂ ಬಿಳಿಕೂದಲಿನ ಸಮಸ್ಯೆಗೆ ಮನೆಮದ್ದುಗಳು: ತಲೆ ಕೂದಲು ಉದುರುವಿಕೆ, ತುಂಡಾಗುವ ಸಮಸ್ಯೆಗಳು ಇದ್ದೇ ಇದೆ. ಅದಕ್ಕೆ ಕೆಲವು ಮನೆಮದ್ದುಗಳು ಇಲ್ಲಿವೆ.     ಮನೆಮದ್ದುಗಳು ಎಂದರೆ ಹೆಚ್ಚಿನ ಜನರಿಗೆ ತಾತ್ಸಾರ ಭಾವನೆ, ಅದೇ ಟಿವಿಯಲ್ಲಿ ತುಂಬಾ ಸುಂದರವಾಗಿ ತೋರಿಸುವಂತಹ ಉತ್ಪನ್ನಗಳು ಪ್ರಿಯವಾಗುವುದು. ಆದರೆ ಇದರ ಹಿಂದೆ ಅಡಗಿರುವಂತಹ ರಾಸಾಯನಿಕಗಳು ಅವರ ಗಮನಕ್ಕೆ ಬರುವುದೇ ಇಲ್ಲ.    ಸೌಂದರ್ಯ ವರ್ಧಕಗಳು ಹಾಗೂ ಕೂದಲಿಗೆ ಬಳಸುವಂತಹ ಶಾಂಪೂ, ಕಂಡೀಷನರ್ ಇತ್ಯಾದಿಗಳಲ್ಲಿ ಅತಿಯಾದ ರಾಸಾಯನಿಕಗಳಿಂದ ಕೂದಲಿಗೆ ಮತ್ತಷ್ಟು ಹಾನಿ ಆಗುವುದು. ಆದರೆ ಕೆಲವೊಂದು ಮನೆಮದ್ದುಗಳು ತುಂಬಾ ಸುಲಭವಾಗಿ ಕೂದಲು ಉದುರುವಿಕೆ, ತುಂಡಾಗುವುದು ಮತ್ತು ತಲೆಹೊಟ್ಟನ್ನು ನಿವಾರಣೆ ಮಾಡುವುದು. ಮನೆಮದ್ದು ಬಳಸಲು ತುಂಬಾ ತಾಳ್ಮೆ ಬೇಕು. ಯಾಕೆಂದರೆ ಇಂದು ಹಚ್ಚಿದ ಕೂಡಲೇ ಅದು ನಾಳೆ ಫಲಿತಾಂಶ ನೀಡಲ್ಲ. ಇದನ್ನು ಕೆಲವು ವಾರಗಳ ಕಾಲ ಬಳಸಿದರೆ ಆಗ ಫಲಿತಾಂಶ ಖಚಿತ. ಅದು ಕೂಡ ಇದು ಶಾಶ್ವತವಾಗಿರುವುದು.       ಇಂದಿನ ದಿನಗಳಲ್ಲಿ ಅತಿಯಾದ ಕಲುಷಿತ ವಾತಾವರಣದಿಂದ, ಆಹಾರ ಕ್ರಮ ಹಾಗೂ ಜೀವನ ಶೈಲಿಯಿಂದ ಕೂದಲಿನ ಸಮಸ್ಯೆಗಳು ಬರುವುದು ಸಹಜ. ಇದನ್ನು ದೂರ ಮಾಡಲು ನಾವು ನಿಮಗೆ ಕೆಲವು ಮನೆಮದ್ದುಗಳನ್ನು ತಿಳಿಸಲಿದ್ದೇವೆ. ಬೆಳ್ಳುಳ್ಳಿ ಮತ್ತು ಈರಳ್ಳಿ: ಇವುಗಳಲ್ಲಿ ಇರುವಂತಹ ಸಲ್ಫರ್ ಅಂಶವು ಕಾಲಜನ್ ಉತ...

ಅಹಂಕಾರ

ಅಹಂಕಾರ ಮನುಷ್ಯರ ಹೃದಯಗಳಿಗೆ ಹಲವಾರು ರೋಗಗಳು ಭಾದಿಸುತ್ತವೆ. ಅವು ಔಷಧಿಯ ಮೂಲಕ ಗುಣವಾಗುವಂಥದ್ದಲ್ಲ. ಶಸ್ತ್ರಕ್ರಿಯೆ ನಡೆಸಿ ನಿವಾರಿಸುವಂಥದ್ದಲ್ಲ. ಆತ್ಮ ನಿಯಂತ್ರಣವು ಆ ರೋಗಗಳಿಗೆ ಮದ್ದಾಗಿದೆ. ಅವುಗಳ ಪೈಕಿ ಅಹಂಕಾರವೂ ಒಂದಾಗಿದೆ. ಇದು ಓರ್ವ ವಿಶ್ವಾಸಿಯ ಸತ್ಕರ್ಮಗಳನ್ನು ನಾಶ ಪಡಿಸುತ್ತದೆ. ಅವನ ಸ್ವರ್ಗ ಪ್ರವೇಶಕ್ಕೆ ಕಂಟಕವಾಗುತ್ತದೆ. ಅಹಂಕಾರವು ಓರ್ವನಲ್ಲಿ ಮನೆ ಮಾಡಿಕೊಂಡಿದ್ದರೆ ಅವನ ಸುತ್ತಮುತ್ತಲಿರುವವರು ಅವನಿಗೆ ಕುಬ್ಜರಾಗಿ ತೋರುತ್ತಾರೆ. ಅವರ ಮುಂದೆ ತಾನು ದೊಡ್ಡವನು ಎಂಬ ಒಣ ಜಂಬವು ರೂಪುಗೊಳ್ಳುತ್ತದೆ. ಜನರನ್ನು ಕೇವಲವಾಗಿ ನೋಡುವುದು ಅಹಂಕಾರದ ಭಾಗವಾಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು,  “ಸತ್ಯವನ್ನು ನಿರಾಕರಿಸುವುದು ಮತ್ತು ಜನರನ್ನು ಕ್ಷುಲ್ಲಕವಾಗಿ ಪರಿ ಗಣಿಸುವುದು ಅಹಂಕಾರವಾಗಿದೆ.” ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅಹಂಕಾರವು ಅವನ ಪದವಿಯನ್ನು ಪತನಗೊಳಿಸುತ್ತದೆ. ಗತಕಾಲಗಳಲ್ಲಿ ಜೀವಿಸಿದ್ದ ದೊಡ್ಡ ದೊಡ್ಡ ವ್ಯಕ್ತಿತ್ವಗಳು ತಮ್ಮ ಅಹಂಕಾರದಿಂದಾಗಿ ನಾಶ ಹೊಂದಿದ ಹಲವಾರು ಘಟನೆಗಳಿಗೆ ಇತಿಹಾಸವೇ ಸಾಕ್ಷಿ. ಕುರ್‍ಆನ್ ಅಂಥವರ ಕುರಿತು ಹಲವಾರು ಕಡೆಗಳಲ್ಲಿ ವಿವರಿಸಿದೆ. ಕುರ್‍ಆನ್ ಇವುಗಳನ್ನು ವಿವರಿಸಿದ್ದು ಮನುಷ್ಯರು ಪಾಠ ಕಲಿಯಲಿಕ್ಕಾಗಿದೆ. ಆದರೆ ಇಂದು ಜನರು ಕುರ್‍ಆನ್ ಓದುತ್ತಿದ್ದರೂ, ಕಲಿಯುತ್ತಿದ್ದರೂ ಅದರ ಬೋಧನೆಗಳ ಪ್ರಕಾರ ವರ್ತಿಸುತ್ತಿಲ್ಲ. ಕುರ್‍ಆನ್ ವಿವರಿಸಿದ ಘಟನೆಗಳೆಲ್ಲಾ...

ಕೊತ್ತಂಬರಿ (ಧನಿಯಾ):

ಕೊತ್ತಂಬರಿ (ಧನಿಯಾ): ಒಂದು ಚಮಚ ನೀರನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ಬೆಳಗ್ಗೆ ಕುಡಿಯುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ. ಒಂದು ಪ್ರಮಾಣ ನಿಂದ ಒಂದು ಪ್ರಮಾಣ ಜೀರಿಗೆಯನ್ನು ಹುರಿದು ಪುಡಿಮಾಡಿ ಕೊಳ್ಳಬೇಕು. ಅರ್ಧ ಚಮಚ ಈ ಮಿಶ್ರಣವನ್ನು ಅರ್ಧಲೋಟ ಹಾಲಿಗೆ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಅಲ್ಸರ್ ಮತ್ತು ಅಸಿಡಿಟಿ ಕಡಿಮೆಯಾಗುತ್ತದೆ. ಒಂದು ಚಮಚ ದನಿಯಕ್ಕೆ ಒಂದು ಲೋಟ ನೀರು ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ತಲೆಸುತ್ತು ಕಡಿಮೆಯಾಗುತ್ತದೆ. ============================= ಸಂಗ್ರಹ: ಮನೆ ಮದ್ದುಗಳು ಸಂ: ✒️ಅಬೂರಿಫಾನ ಕುಂದಾಪುರ

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 136

ಅಧ್ಯಾಯ:2 (ಅಲ್-ಬಕ್ವರ) ಸೂಕ್ತ: 136 قُولُوٓا۟ ءَامَنَّا بِٱللَّهِ وَمَآ أُنزِلَ إِلَيْنَا وَمَآ أُنزِلَ إِلَىٰٓ إِبْرَٰهِۦمَ وَإِسْمَٰعِيلَ وَإِسْحَٰقَ وَيَعْقُوبَ وَٱلْأَسْبَاطِ وَمَآ أُوتِىَ مُوسَىٰ وَعِيسَىٰ وَمَآ أُوتِىَ ٱلنَّبِيُّونَ مِن رَّبِّهِمْ لَا نُفَرِّقُ بَيْنَ أَحَدٍۢ مِّنْهُمْ وَنَحْنُ لَهُۥ مُسْلِمُونَ ಅರ್ಥ:⤵️ ▪️ಅಲ್ಲಾಹನಲ್ಲಿ, ನಮಗೆ ಅವತೀರ್ಣವಾದುದರಲ್ಲಿ, ಇಬ್ರಾಹೀಮ್, ಇಸ್ಮಾಈಲ್, ಇಸ್‍ಹಾಖ್, ಯಅ್‌ಖೂಬ್ ಹಾಗೂ ಅವರ ವಂಶ ಪರಂಪರೆಯವರಿಗೆ ಅವತೀರ್ಣವಾದುದರಲ್ಲಿ, ಮೂಸಾ, ಈಸಾರವರಿಗೂ ಮತ್ತಿತರ ಪ್ರವಾದಿಗಳಿಗೂ ಅವರ ಪ್ರಭುವಿನಿಂದ ದೊರೆತಿರುವ ಆದರ್ಶಗಳಲ್ಲಿ ನಾವು ವಿಶ್ವಾಸವಿಟ್ಟಿರುವೆವು, ಪ್ರವಾದಿಗಳ ಪೈಕಿ ಯಾರೊಬ್ಬರಿಗೂ ನಾವು ಭೇದ ಬಗೆಯುವುದಿಲ್ಲ⁷⁰. ನಾವು ಅಲ್ಲಾಹನ ಆದೇಶಕ್ಕೆ ಬದ್ಧರಾಗಿದ್ದೇವೆ’ ಎಂದು ಘೋಷಿಸಿರಿ. ವಿವರಣೆ:⤵️ 70.ಯಅ್‌ಖೂಬ್‍ರ ಸಂತತಿಗಳು ಎಂಬ ಪ್ರಸ್ತಾಪದಲ್ಲಿರುವ ‘ಅಸ್ಬಾತ್’ ಎಂಬ ಪದದ ಉದ್ದೇಶ ಪ್ರವಾದಿ ಯಅ್‌ಖೂಬರ ಸಂತಾನ ಪರಂಪರೆಯಲ್ಲಿ ಸೇರಿದ ಗೋತ್ರಗಳು. ಅವರ ನಡುವೆ ನಾವು ಬೇಧ ಬಗೆಯುವುದಿಲ್ಲ ಎಂದರೆ ಕೆಲವರಲ್ಲಿ ವಿಶ್ವಾಸವಿರಿಸಿಕೊಂಡು ಇನ್ನು ಕೆಲವರನ್ನು ನಿಷೇಧಿಸುವುದಿಲ್ಲ ಎಂದರ್ಥ. ಪರಂತು ಉತೃಷ್ಟ ಗುಣಮಹಾತ್ಮೆಗಳಲ್ಲಿ ಎಲ್ಲರೂ ಸಮಾನರು ಎಂದಲ್ಲ. ಮೂಸಾ(ಅ.ಸ) ಮತ್ತು ಈಸಾ(ಅ.ಸ)ರಿಗೆ ಲಭ್ಯವಾದದ್ದು ಎಂದರೆ ಅವರಿಗ...

ತೀರ್ಪಿನ ಮಾನದಂಡ

ತೀರ್ಪಿನ ಮಾನದಂಡ ಅಬ್ದುಲ್ಲಾಹಿಬಿನ್ ಉತ್‌ಬ(ರ.ಅ ) ಅವರಿಂದ ನಿವೇದನೆ: ಉಮರ್ (ರ.ಅ) ಹೇಳಿದ್ದನ್ನು ನಾನು ಆಲಿಸಿರುವೆನು: "ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತಮಗೆ ಲಭಿಸುತ್ತಿದ್ದ ವಹ್ಶ್ ಮೂಲಕ ಕೆಲವರನ್ನು ಬಂಧಿಸಲು ಸಾಧ್ಯವಾಗುತ್ತಿತ್ತು. (ಅವರ ಮರಣದೊಂದಿಗೆ) ವಹ್ಶ್ ಸ್ಥಗಿತಗೊಂಡಿತು. ಇಂದು ಕರ್ಮಗಳ ಬಾಹ್ಯ ರೂಪವನ್ನು ನೋಡಿ ಮಾತ್ರ ನಿಮ್ಮನ್ನು ಬಂಧಿಸಲು ನಮಗೆ ಸಾಧ್ಯವಿದೆ. ಆದುದರಿಂದ ಯಾರು ಒಳಿತನ್ನು ಪ್ರಕಟಿಸುತ್ತಾರೋ ಅವರಿಗೆ ನಾವು ಅಭಯ ನೀಡಿ ಅವನೊಂದಿಗೆ ಸಂಬಂಧ ಬೆಳೆಸುತ್ತೇವೆ. ಅವನ ರಹಸ್ಯಗಳನ್ನು ಹುಡುಕುವುದು ನಮ್ಮ ಮಾಧ್ಯತೆಯಲ್ಲ, ಅದನ್ನು ಅಲ್ಲಾಹನು ವಿಚಾರಿಸಿಕೊಳ್ಳುತ್ತಾನೆ. ಕೆಡುಕು ಪ್ರವೃತ್ತಿಸುವವರಿಗೆ ನಾವು ಅಭಯ ನೀಡಲಾರೆವು ಮತ್ತು ಅವರನ್ನು ಅಂಗೀಕರಿಸುವುದೂ ಇಲ್ಲ. ಆತ ತನ್ನ ರಹಸ್ಯದ ಮುಖವು ಅದಷ್ಟು ಪರಿಶುದ್ಧವಾಗಿದೆಯೆಂದು ಹೇಳಿದರೂ ಸರಿ." (ಬುಖಾರಿ) ಕೆಎಂ ಜಲೀಲ್ ಕುಂದಾಪುರ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)

ಐದೇ ಐದು ನಿಮಿಷದಲ್ಲಿ ಹಲ್ಲು ನೋವು ನಿಯಂತ್ರಣಕ್ಕೆ ಪವರ್‌ಫುಲ್ ಮನೆ ಔಷಧಿಗಳು:

ಐದೇ ಐದು ನಿಮಿಷದಲ್ಲಿ ಹಲ್ಲು ನೋವು ನಿಯಂತ್ರಣಕ್ಕೆ ಪವರ್‌ಫುಲ್ ಮನೆ ಔಷಧಿಗಳು:     ಯಾವುದೇ ರೀತಿಯ ನೋವಾಗಲಿ, ಅದು ದೇಹದ ಮೇಲೆ ಪರಿಣಾಮ ಬೀರುವುದು. ದೇಹದ ಯಾವುದೇ ಭಾಗದಲ್ಲಿ ನೋವಿದ್ದವರನ್ನು ಕೇಳಿನೋಡಿ. ಆ ನೋವು ಯಾರಿಗೂ ಬರುವುದು ಬೇಡಪ್ಪಾ ಎನ್ನುತ್ತಾರೆ. ಯಾಕೆಂದರೆ ನೋವು ಅನುಭವಿಸಿದರೆ ಅದರ ತೀವ್ರತೆ ಗೊತ್ತಿರುವುದು. ಅದೇ ಹಲ್ಲು ನೋವು ಬಂದರೆ ಅದನ್ನು ತಡೆದುಕೊಳ್ಳುವುದು ಅಸಾಧ್ಯವಾಗುವುದು.   ಹಲ್ಲು ನೋವಿನಿಂದ ವಸಡು ಹಾಗೂ ತಲೆ ಕೂಡ ನೋಯಲು ಆರಂಭವಾಗುವುದು. ಹಲ್ಲಿನ ಸ್ವಚ್ಛತೆ ಸರಿಯಾಗಿರದೆ ಇರುವುದೇ ಹಲ್ಲು ನೋವಿಗೆ ಪ್ರಮುಖ ಕಾರಣವಾಗಿದೆ. ಇತರ ಕೆಲವು ಕಾರಣಗಳೆಂದರೆ ಪಲ್ಬಿಟಿಸ್ ಮತ್ತು ಅವಧಿರೋಗ, ಹಲ್ಲಿನ ಹುಳುಕು ಇತ್ಯಾದಿ. ಹೆಚ್ಚಿನವರು ಹಲ್ಲು ನೋವು ಶುರುವಾದ ಕೂಡಲೇ ಹಲ್ಲಿನ ವೈದ್ಯರಲ್ಲಿಗೆ ಹೋಗುತ್ತಾರೆ. ಸಣ್ಣ ಪ್ರಮಾಣದ ಹಲ್ಲಿನ ನೋವಿದ್ದರೂ ದಂತ ವೈದ್ಯರಲ್ಲಿ ಹೋಗಬೇಕೆಂದಿಲ್ಲ. ಯಾಕೆಂದು ತಿಳಿಯಲು ಮುಂದೆ ಓದಿ..  ಹಲ್ಲು ನೋವಿಗೆ ಏನು ಮಾಡಬೇಕು?: ಆಯುರ್ವೇದವು ತುಂಬಾ ಪರಿಣಾಮಕಾರಿ ಮನೆಮದ್ದಾಗಿರುವ ಕಾರಣದಿಂದ ಇದು ಪ್ರತಿನಿತ್ಯವೂ ಮನುಷ್ಯನ ಆರೋಗ್ಯಕ್ಕೆ ಹಲವಾರು ರೀತಿಯ ಪರಿಹಾರ ಒದಗಿಸುವುದು. ಆಯುರ್ವೇದದಲ್ಲಿ ಇರುವಂತಹ ಹಲವಾರು ಸಾಮಗ್ರಿಗಳು ಹಲ್ಲು ನೋವಿಗೆ ಪರಿಹಾರ ಒದಗಿಸುವುದು. ಆಯುರ್ವೇದದಲ್ಲಿ ಇರುವ ವೇಗ ಹಾಗೂ ಪರಿಣಾಮಕಾರಿ ಮದ್ದನ್ನು ನಿಮಗೆ ತಿಳಿಸಲಿದ್ದೇವೆ. ಇದನ್ನು ಪ್ರಯೋಗಿಸಿ ನೋಡಿ....

ಗೌರವಾನ್ವಿತವಾದುದನ್ನು ಗೌರಿವಿಸುವುದು:

ಗೌರವಾನ್ವಿತವಾದುದನ್ನು ಗೌರಿವಿಸುವುದು: ಅಬೂಹುರೈರಾ(ರ.ಅ) ನಿವೇದನೆ: ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು: ಒಬ್ಬ ಮುಸ್ಲಿಮನಿಗೆ ಮತ್ತೋರ್ವ ಮುಸ್ಲಿಮನೊಂದಿಗೆ ಐದು ಬಾಧ್ಯತೆಗಳಿವೆ. 1).ಸಲಾಮ್‌ಗೆ ಉತ್ತರಿಸುವುದು. 2). ರೋಗಿಯನ್ನು ಸಂದರ್ಶಿಸುವುದು. 3).ಮಯ್ಯಿತನ್ನು ಅನುಗಮಿಸುವುದು. 4).ಆಮಂತ್ರಣವನ್ನು ಸ್ವೀಕರಿಸುವುದು. 5). ಸೀನಿದವನಿಗಾಗಿ ಪ್ರಾರ್ಥಿಸುವುದು. (ಬುಖಾರಿ, ಮುಸ್ಲಿಂ) ============================ ಕೆಎಂ ಜಲೀಲ್ ಕುಂದಾಪುರ ಕಾರ್ಯನಿರ್ವಾಹಕರು: ನೂರುಲ್ ಫಲಾಹ್ ಸಮೂಹ ಸಂಸ್ಥೆ(ರಿ)

ಹಲ್ಲುನೋವೇ-ಶೀಘ್ರ ಶಮನಕ್ಕಾಗಿ ಐದು ಸುಲಭ ಮನೆಮದ್ದುಗಳು:

ಹಲ್ಲುನೋವೇ-ಶೀಘ್ರ ಶಮನಕ್ಕಾಗಿ ಐದು ಸುಲಭ ಮನೆಮದ್ದುಗಳು: ಹಲ್ಲು ನೋವು ಎದುರಾದರೆ ಬೇರಾವ ಕೆಲಸವನ್ನೂ ಮಾಡಲಿಕ್ಕಾಗದೇ ನಿತ್ಯ ಜೀವನ ಬಾಧೆಗೊಳಗಾಗುತ್ತದೆ. ಕೆಲವೊಮ್ಮೆ ಹಲ್ಲುನೋವು ಯಾವುದೇ ಮುನ್ಸೂಚನೆ ಇಲ್ಲದೇ ಧಿಡೀರನೇ ಎದುರಾಗಬಹುದು. ಆಗ ನೋವು ಅನುಭವಿಸುತ್ತಾ ಕೊರಗುವ ಬದಲು ಸುಲಭ ಮನೆಮದ್ದುಗಳನ್ನು ಅನುಸರಿಸುವುದೇ ವಾಸಿ.     ನೀವು ಹಲ್ಲುನೋವಿನಿಂದ ಬಳಲುತ್ತಿದ್ದರೆ, ಅದು ಎಷ್ಟು ಪ್ರಬಲ ಎಂದು ನಿಮಗೆ ಈಗಾಗಲೇ ಅನುಭವಕ್ಕೆ ಬಂದಿರಬಹುದು. ಹಲ್ಲುನೋವು ಎಂದಿಗೂ ಯಾವುದೇ ಮುನ್ಸೂಚನೆ ಇಲ್ಲದೇ ಎದುರಾಗಬಹುದು ಮತ್ತು ಕೆಲವೊಮ್ಮೆ ಅದು ನಿಮ್ಮ ದಿನದ ಚಟುವಟಿಕೆಗಳನ್ನೆಲ್ಲಾ ಏರುಪೇರು ಗೊಳಿಸಬಹುದು.     ಆದರೆ ಈ ನೋವನ್ನು ನಿಭಾಯಿಸಲು ನೀವು ಕೆಲವು ಪರಿಣಾಮಕಾರಿ ಮನೆಮದ್ದುಗಳನ್ನು ಪ್ರಯತ್ನಿಸಲು ಬಯಸಿದರೆ, ಇಂದಿನ ಲೇಖನದಲ್ಲಿ ಇಂತಹ ಪ್ರಮುಖವಾದ ಮತ್ತು ಫಲಪ್ರದವಾದ ಐದು ವಿಧಾನಗಳನ್ನು ನೀಡಲಾಗಿದ್ದು ನಿಮಗೆ ಸೂಕ್ತವಾದುದನ್ನು ಆಯ್ದು ಅನುಸರಿಸಬಹುದು. ಉಪ್ಪುನೀರಿನ ಮುಕ್ಕಳಿಕೆ: ಒಂದು ವೇಳೆ ಹಲ್ಲುಗಳ ಸ್ವಚ್ಛತೆಯ ಕೊರತೆಯಿಂದಾಗಿ ಹಲ್ಲುಗಳ ಸಂಧುಗಳಲ್ಲಿ ಕೊಳೆತು ನೋವು ಎದುರಾಗಿದ್ದರೆ ಈ ವಿಧಾನ ಅತಿ ಸೂಕ್ತವಾಗಿದೆ. ಜಗಿಯುವಾಗ ಹೆಚ್ಚು ನೋಯುವ ಹಲ್ಲುಗಳು ಉಳಿದ ಸಮಯದಲ್ಲಿ ನೋವು ಕೊಡದಿರುವುದು ಈ ಸೋಂಕಿನ ಲಕ್ಷಣವಾಗಿದೆ. ಉಪ್ಪು ನೀರು ಈ ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಕೊಂದು ನಿವಾರಿಸುವ ಮೂಲಕ ಹಲ್ಲುನೋವನ್ನು ...