ಕುದುರೆ ಪುರಾಣ
ಐಶ್ವರ್ಯದ ಸಂಕೇತವಾದ ಕುದುರೆ ಸಾಕುಮೃಗಗಳ ಪೈಕಿ ಬಹಳ ಘನತೆ, ಹೆಮ್ಮೆ ಮತ್ತು ಗೌರವವಿರುವ ಒಂದು ಆಡಂಬರ ಪ್ರಾಣಿಯಾಗಿದೆ ಕುದುರೆ. ಪವಿತ್ರ ಕುರ್‌ಆನಿನಲ್ಲಿ ಈ ಪ್ರಾಣಿಯ ಬಗ್ಗೆ ಹಲವಾರು ಕಡೆ ಉಲ್ಲೇಖವಿದೆ. ಅಲ್ಲದೆ ಅಲ್ಲಾಹನು ಇದರ ಹೆಸರೇಳಿ ಆಣೆ ಹಾಕಿದ ಅಧ್ಯಾಯ (ಸೂರಃ) ಕೂಡ ಪವಿತ್ರ ಕುರ್‌ಆನಿನಲ್ಲಿದೆ. ಮಾತ್ರವಲ್ಲ ಈ ಮೃಗದ ಮಹತ್ವವನ್ನು ಎತ್ತಿ ಹೇಳಿ ಡಝನುಗಟ್ಟಳೆ ಸಹೀಹಾದ ಪ್ರವಾದಿ ಹದೀಸುಗಳು ವರದಿಯಾಗಿದೆ. ಒಟ್ಟಿನಲ್ಲಿ ಕುದುರೆಯನ್ನು ಇತರ ಮೃಗಗಳಿಗೆ ಹೋಲಿಸಿದರೆ ಕುದುರೆಗಿರುವ ಸ್ಥಾನಮಾನ, ಘನತೆ ಮತ್ತು ಗೌರವ ಇತರ ಮೃಗಗಳಿಗೆ ಇಲ್ಲ. ಮನುಷ್ಯನನ್ನು ಹೊರತುಪಡಿಸಿ ಪ್ರಾಣಿಗಳಲ್ಲಿ ಇಷ್ಟೊಂದು ಚೆಲುವಾದ ಸುಂದರ ಜೀವಿ ಬೇರೊಂದಿಲ್ಲ ಎಂದು ಹಿಜ್‌ರಾ ಏಳನೆಯ ಶತಮಾನದ ಪ್ರಸಿದ್ಧ ಪಂಡಿತ ಇಮಾಮ್ ಖಝ್‌ವೀನಿಯವರು ಅಭಿಪ್ರಾಯ ಪಟ್ಟಿದ್ದಾರೆ. ಗಂಡು ಹೆಣ್ಣು ಪರಸ್ಪರ ನಾಲ್ಕು ವರ್ಷ ಪ್ರಾಯವಾಗುವಾಗಲೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗುತ್ತದೆ. ಗರ್ಭಧಾರಣೆಯಾಗಿ ಹನ್ನೊಂದು - ಹನ್ನೆರಡು ತಿಂಗಳಾಗುವಾಗ ಮರಿ ಹಾಕುತ್ತದೆ. ಬರೇ ಒಂದೇ ಒಂದು ಮರಿ ಮಾತ್ರ. ಕುದುರೆಯು ಸುಮಾರು ನಲುವತ್ತರಿಂದ ಐವತ್ತು ವರ್ಷಗಳ ತನಕ ಬದುಕುತ್ತದೆ. ಕೆಲವೊಂದು ಕುದುರೆಗಳು ಸುಮಾರು ತೊಂಬತ್ತು ವರ್ಷಗಳ ತನಕವೂ ಬದುಕುವುದಿದೆ. ಕುದುರೆಗೆ ಆಯಾಸ, ದಣಿವು, ನಿತ್ರಾಣ, ಬಳಲಿಕೆ ಎಂಬುದು ಇಲ್ಲವೇ ಇ...