Posts

Showing posts from July, 2020

ಅಗ್ನಿ ಪರೀಕ್ಷೆಯಲ್ಲಿ ಜೋಡಿ ಹಕ್ಕಿ

     ✍ಅಬ್ದುಲ್ ಜಬ್ಬಾರ್              ಕುಡ್ತಮುಗೇರು   ﷽  ಅಗ್ನಿಪರೀಕ್ಷೆಯಲ್ಲಿ ಜೋಡಿಹಕ್ಕಿ'   ಅಲ್ಲಾಹನ ಖಲೀಲರಾದ ಪ್ರವಾದಿ ಇಬ್ರಾಹೀಂ ನೆಬಿ ಅಲೈಹಿಸ್ಸಲಾಂ ರವರಿಗೆ ಸಾರಾ ಬೀಬಿಯವರಲ್ಲಿ ಜನಿಸಿದ ಮಗನಾಗಿದ್ದಾನೆ ಇಸ್ಹಾಕ್ ನೆಬಿ  ಅಲೈಹಿಸ್ಸಲಾಂ, ಇಸ್ಹಾಕ್ ನೆಬಿಯವರಿಗೆ ಅಲ್ಲಾಹು ಅನುಗ್ರಹಿಸಿ ಕೊಟ್ಟಂತಹ ಎರಡು ಮಕ್ಕಳಲ್ಲಿ ಒಬ್ಬರಾದ ಯಅಖೂಬ್ ನೆಬಿ ಅಲೈಹಿಸ್ಸಲಾಂ ಮತ್ತೊಬ್ಬರು  ಡಮಾಸ್ಕಸ್ ನ ರಾಜನಾದ ಹೈಸ್ ಇದೆಲ್ಲವು ಅಲ್ಲಾಹು  ಇಬ್ರಾಹೀಂ ನೆಬಿ ಅಲೈಹಿಸ್ಸಲಾಂ ರವರನ್ನು ಗೌರವಿಸಿಯಾಗಿದೆ  ಇಬ್ರಾಹೀಂ ನೆಬಿಯವರ ಕುಟುಂಬದಿಂದ ಈ ಲೋಕಕ್ಕೆ ರಾಜರು ಮತ್ತು ಪ್ರವಾದಿಗಳನ್ನು ಅಲ್ಲಾಹು ಅನುಗ್ರಹಿಸಿರುವುದು..    ಒಂದು ಭಾಗದಲ್ಲಿ ಇಸ್ಹಾಖ್ ನೆಬಿಯವರ ಮಗನಾದ ಯಅಖೂಬ್ ನೆಬಿ ಅಲೈಹಿಸ್ಸಲಾಂ ರವರಿಗೆ ಹನ್ನೆರಡು ಮಕ್ಕಳನ್ನು ಕೊಟ್ಟಾಗ  ವಿಶ್ವಸುಂದರನಾದ ಒಂದು ಪ್ರವಾದಿ ಯೂಸುಫ್ ನೆಬಿ ಅಲೈಸ್ಸಲಾಂ ರವರನ್ನು ನೀಡಿ ಇನ್ನೊಂದು ಕಡೆಯಲ್ಲಿ ಹೈಸ್ ಎಂಬ ರಾಜನಿಗೆ ಕೊಟ್ಟ ಹಲವು ಮಕ್ಕಳ ಪೈಕಿ ಅದರಲ್ಲೊಬ್ಬರಿಗೆ  ಪ್ರವಾದಿ ಸ್ಥಾನ ಕೊಟ್ಟು  ಆಧರಿಸಿದಂತಹ ಮಹಾನರಾದ ಅಯ್ಯೂಬ್ ನೆಬಿ ಅಲೈಹಿಸ್ಸಲಾಂ ಇದೆಲ್ಲವೂ ಸೇರುವುದು ಮಹಾನರಾದ ಪ್ರವಾದಿ ಇಬ್ರಾಹೀಂ ನೆಬಿ ಅಲೈಹಿಸ್ಸಲಾಂ ರವರ ಪರಂಪರೆಗೆ ಆಗಿದೆ.  ನಾನೀಗ ಬರೆಯ ಬಯಸು...

ಸಬಾಹಲ್ ಖೈರ್

ಸಬಾಹಲ್ ಖೈರ್ ಮೌಲೀದ್ ಪಾರಾಯಣ: ಇಮಾಮ್ ಸುಯೂಥಿ(ರ) ಹೇಳುತ್ತಾರೆ: "ಮನೆಯಲ್ಲಿ, ಮಸೀದಿಯಲ್ಲಿ ಅಥವಾ ಇತರ ಸ್ಥಳಗಳಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಹೆಸರಲ್ಲಿ ಮೌಲೀದ್ ಪಾರಾಯಣ ಮಾಡಿದರೆ, ಆ ಸ್ಥಳವನ್ನು ಮಲಕುಗಳು ಸುತ್ತುವರಿದು, ಅಲ್ಲಿ ನೆರೆದಿರುವವರ ಒಳಿತಿಗಾಗಿ ಪ್ರಾರ್ಥಿಸುವುದಲ್ಲದೆ, ಕಾರುಣ್ಯ ಹಾಗೂ ಸಂತೃಪ್ತಿಗಳಿಂದ ಅವರನ್ನು ಹೊದಿಸುವರು..” ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೌಲೀದ್ ಪಾರಾಯಣ ಮಾಡುವ ಮನೆಗಳನ್ನು ಅಲ್ಲಾಹನು ಕ್ಷಾಮ, ಪ್ಲೇಗ್, ಅಸೂಯೆ, ಕಳ್ಳತನ ಹಾಗೂ ಕಣ್ಣು ಬೀಳುವುದರಿಂದ ಅಲ್ಲಾಹನು ರಕ್ಷಿಸುವನು. ಅಲ್ಲದೆ, ಆ ಮನೆಯಲ್ಲಿ ವಾಸಿಸುವವರಿಗೆ ಮುಂಕರ್‌ ನಕೀರ್ ಎಂಬ ಮಲಕುಗಳ ಪ್ರಶ್ನೆಗಳಿಗೆ ಪ್ರತ್ಯುತ್ತರ ನೀಡುವ ಸೌಭಾಗ್ಯವೂ ಲಭ್ಯವಾಗುವುದು.. (ಅನ್ನಿಅ್‌ಮತುಲ್ ಕುಬ್‌ರಾ-10,11) 

ಸಬಾಹಲ್ ಖೈರ್

ಸಬಾಹಲ್ ಖೈರ್ ಉವೈಸುಲ್ ಖರ್ನಿ (ರ): •ಭೌತಿಕ ಜೀವನದಲ್ಲಿ ನಯಾಪೈಸೆಯ ಆಸಕ್ತಿಯನ್ನೂ ತೋರದ ಮಹಾತ್ಮರಾಗಿದ್ದರು ಉವೈಸುಲ್ ಖರ್ನಿ(ರ), ಇದರಿಂದ ಮನೆಯವರೂ ಸಹ ಅವರನ್ನು ಮಾನಸಿಕ ರೋಗಿಯಂತೆ ಕಂಡರು. ಅವರಿಗೆ ವಾಸಿಸಲು ಮನೆಯ ಪಕ್ಕದಲ್ಲಿ ಮತ್ತೊಂದು ಮನೆಯನ್ನು ನಿರ್ಮಿಸಿ ಕೊಡಲಾಯಿತು. ಉವೈಸುಲ್ ಖರ್ನಿ(ರ) ಆ ಮನೆಯನ್ನು ಬಹಳ ಕಡಿಮೆ ಹೊತ್ತು ಉಪಯೋಗಿಸುತ್ತಿದ್ದರು, ಸುಬುಹಿ ಬಾಂಗ್ ಮೊಳಗುತ್ತಿದ್ದಂತೆ ಅವರು ಮನೆಯಿಂದ ಹೊರಡುತ್ತಿದ್ದರು. ಇಶಾಅ್ ನಮಾಝಿನ ಬಳಿಕ ಹಿಂದಿರುಗುತ್ತಿದ್ದರು. ತೀರಾ ಕೆಳ ಮಟ್ಟದ ಒಣ ಖರ್ಜೂರ ದೊರೆತರೆ ಅವರದನ್ನು ಉಪವಾಸ ತ್ಯಜಿಸಲು ಎತ್ತಿಡುತ್ತಿದ್ದರು. ಏನೂ ಸಿಗದಿದ್ದಲ್ಲಿ ಅವರು ಖರ್ಜೂರದ ಬೀಜಗಳನ್ನು ಸಂಗ್ರಹಿಸಿ, ಮಾರಾಟ ಮಾಡುತ್ತಿದ್ದರು. ಅದರಿಂದ ದೊರೆತ ಹಣದಿಂದ ಉಪವಾಸ ತ್ಯಜಿಸಲು ಕಳಪೆ ಮಟ್ಟದ ಒಣ ಖರ್ಜೂರಗಳನ್ನು ಖರೀದಿಸುತ್ತಿದ್ದರು. ಇದು ಅವರ ಜೀವನ ರೂಢಿಯಾಗಿತ್ತು. (ಇಹ್ಯಾ: 3/192). 

ಸಬಾಹಲ್ ಖೈರ್

ಸಬಾಹಲ್ ಖೈರ್ ದಿಕ್ರ್‍ ಮಜ್ಲಿಸ್: ಅಬೂ ಮೂಸಲ್ ಅಶ್‌ಅರಿ(ರ) ವರದಿ: ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು. "ಅಲ್ಲಾಹನನ್ನು ಸ್ಮರಿಸುವ ಮನೆ ಹಾಗೂ ಸ್ಮರಿಸದ ಮನೆಯ ನಡುವಿನ ಹೋಲಿಕೆಯು ಜೀವ ಹಾಗೂ ಶವದ ನಡುವಿನ ಹೋಲಿಕೆಯಾಗಿದೆ.." (ಬುಖಾರಿ, ಮುಸ್ಲಿಮ್, ತರ್ಗೀಚ್ 1/279) ನವವೀ(ರ) ಹೇಳುತ್ತಾರೆ. "ಮನೆಯಲ್ಲಿ ಅಲ್ಲಾಹನ ದಿಕ್ರ್ ಹೇಳುವುದು ಸುನ್ನತ್ತಾಗಿದೆ. ಮಾತ್ರವಲ್ಲ, ದಿಕ್ರ್ ಹೇಳದಿರಬಾರದು ಎಂಬುದು ಈ ಹದೀಸ್‌ನಿಂದ ಸ್ಪಷ್ಟವಾಗುತ್ತದೆ.." (ಶರಹ್ ಮುಸ್ಲಿಮ್ 6/68 ) 

ಸಬಾಹಲ್ ಖೈರ್

ಸಬಾಹಲ್ ಖೈರ್ ಶುಕ್ರವಾರದ ಮಹತ್ವ: ಅಬೂಹುರೈರಾ (ರ) ನಿವೇದನೆ: ಶುಕ್ರವಾರದ ಕುರಿತು ಪ್ರವಾದಿﷺಮರು ಮಾಡಿದ ಭಾಷಣದಲ್ಲಿ ಹೇಳಿದರು: "ಆ ದಿನದಲ್ಲಿ ಪ್ರತ್ಯೇಕವಾದ ಒಂದು ಸಮಯವಿದೆ. ನಮಾಝ್ ನಿರ್ವಹಿಸಿ ಅಲ್ಲಾಹನೊಂದಿಗೆ ಪ್ರಾರ್ಥಿಸುವ ಸತ್ಯವಿಶ್ವಾಸಿಯ ಪ್ರಾರ್ಥನೆ ಆ ಸಮಯಕ್ಕೆ ಹೊಂದಿಕೆಯಾದರೆ ಅಲ್ಲಾಹನು ಅವನ ಕೋರಿಕೆಯನ್ನು ನೆರವೇರಿಸುತ್ತಾನೆ. ಇದು ತುಂಬಾ ಅಲ್ಪ ಸಮಯವಾಗಿದೆಯೆಂದು ಅವರು ಕೈಯಿಂದ ಸನ್ನೆಮಾಡಿ ತೋರಿಸಿದರು.." (ಬುಖಾರಿ, ಮುಸ್ಲಿಮ್)

ಸಬಾಹಲ್ ಖೈರ್

ಸಬಾಹಲ್ ಖೈರ್ ಮಳೆ: ಅವನೇ(ಅಲ್ಲಾಹನೇ) ತನ್ನ ಅನುಗ್ರಹಕ್ಕೆ (ಮಳೆಗೆ) ಮುನ್ನ, ಶುಭವಾರ್ತೆಯಾಗಿ ಗಾಳಿಯನ್ನು ಕಳುಹಿಸುವವನು. ಕೊನೆಗೆ ಅವು (ನೀರಿಂದ) ಭಾರವಾದ ಮೋಡಗಳನ್ನು ಹೊತ್ತು ತಂದಾಗ ನಾವು ಅವುಗಳನ್ನು ನಿರ್ಜೀವ ನಾಡಿನೆಡೆಗೆ ಒಯ್ಯುತ್ತೇವೆ ಮತ್ತು ಅವುಗಳಿಂದ ನೀರನ್ನು ಸುರಿಸುತ್ತೇವೆ ಹಾಗೂ ಅದರ ಮೂಲಕ ನಾವು ಎಲ್ಲ ಬಗೆಯ ಫಲಗಳನ್ನು ಹೊರತರುತ್ತೇವೆ – ಇದೇ ರೀತಿ ನಾವು ಮೃತರನ್ನು (ಜೀವಂತ) ಹೊರ ತರಲಿದ್ದೇವೆ ನೀವು ಪಾಠ ಕಲಿಯಬೇಕೆಂದು (ಇದನ್ನು ಹೇಳಲಾಗುತ್ತಿದೆ).  [ಕುರ್‍ಆನ್, 7: 57]

ಸಬಾಹಲ್ ಖೈರ್

ಸಬಾಹಲ್ ಖೈರ್ ಧರ್ಮದ ಕುರಿತು ಜ್ಞಾನ: ವಿಶ್ವಾಸ ಕಾರ್ಯಗಳು, ನಿಯಮ ನಿರ್ದೇಶನಗಳು, ಆರಾಧನಾ ಕರ್ಮಗಳು ಎಂಬಿತ್ಯಾದಿ ಅಡಗಿರುವ ಒಂದು ಧರ್ಮವೇ ಇಸ್ಲಾಮ್. ಅಲ್ಲಾಹನಿಂದ ಅವತೀರ್ಣವಾದವುಗಳ ಮೇಲೂ ಪ್ರವಾದಿﷺರವರು ನಿರ್ದೇಶಿಸಿರುವವುಗಳ ಮೇಲೂ ವಿಶ್ವಾಸವನ್ನಿಡುವುದು ಖಡ್ದಾಯವಾಗಿದೆ. ಸರ್ವ ಆರಾಧನೆಗಳನ್ನು ನೈಜ ಆರಾಧ್ಯನಾದ ಅಲ್ಲಾಹನಿಗೆ ಮಾತ್ರ ಅರ್ಪಿಸಬೇಕು ಎಂಬ ತತ್ವಾದರ್ಶದಲ್ಲಿ ದೃಢವಾಗಿರುವ ಧರ್ಮವೇ ಇಸ್ಲಾಮ್ ಹಾಗೂ ಅದು ವಿಶ್ವಾಸ, ಆಚಾರಾನುಷ್ಡಾನಗಳ ಒಂದು ಒಕ್ಕೂಟವೂ ಆಗಿದೆ. ಸದ್ಗುಣಗಳನ್ನೂ ಮೈಗೂಡಿಸುವುದರಲ್ಲೂ, ಅಧ್ಯಾತ್ಮಿಕ ಶುದ್ದೀಕರಣದಲ್ಲೂ, ಆ ಪ್ರಕಾರ ಜೀವನವನ್ನು ಸಾಗಿಸುವುದರಲ್ಲೂ, ವ್ಯಕ್ತಿಗಳನ್ನು ಉತ್ತಮ ಗೊಳಿಸುವುದರಲ್ಲೂ ಹಾಗೂ ಮುಸ್ಲಿಂ ಜನತೆಯ ಐಕ್ಯತೆ ಮತ್ತು ಒಗ್ಗಟ್ಟನ್ನು ಕಾದಿರಿಸುವುದರಲ್ಲೂ ಈ ಆರಾಧನೆಗಳು ವಹಿಸುವ ಪಾಲು ಬಹು ದೊಡ್ಡದು. ಆರು ಸ್ತಂಭಗಳ ಮೇಲಿನ ವಿಶ್ವಾಸವನ್ನು ಮೂಲಭೂತವಾಗಿ ಘೋಷಿಸಲಾಗಿದೆ. ಅವುಗಳು: 1). ಅಲ್ಲಾಹನ ಮೇಲಿರುವ ವಿಶ್ವಾಸ, 2). ಮಲಕುಗಳ ಮೇಲಿರುವ ವಿಶ್ವಾಸ, 3). ದೈವಿಕ ಗ್ರಂಥಗಳ ಮೇಲಿರುವ ವಿಶ್ವಾಸ, 4). ಪ್ರವಾದಿಗಳ ಮೇಲಿರುವ ವಿಶ್ವಾಸ, 5). ಅಂತ್ಯ ದಿನದ ಮೇಲಿರುವ ವಿಶ್ವಾಸ, 6). ಹಿತ-ಅಹಿತಗಳು ಅಲ್ಲಾಹನ ಅರಿವಿನಿಂದಲೂ ಅವನ ನಿರ್ಣಯದಿಂದಲೂ ಬರುವುದು ಎಂಬ ವಿಶ್ವಾಸ. "ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲುಲ್ಲಾಹ್.." ಎಂಬ ಎರಡು ಸಾಕ್ಷ್ಯ ವಚನಗಳು, ನಮಾಝ್ ಸಂಸ್ಥಾಪಿಸುವುದು...

ಸಬಾಹಲ್ ಖೈರ್

ಸಬಾಹಲ್ ಖೈರ್ ಸ್ವದಖ ಪಾಪಗಳನ್ನು ಅಳಿಸಿ ಬಿಡಲ್ಪಡುವುದು: ಸ್ವದಖ ನೀಡುವ ಮೂಲಕ ಪಾಪಗಳು ಅಳಿಸಿ ಬಿಡಲ್ಪಡುವುದು ಮತ್ತು ಕ್ಷಮಿಸಲ್ಪಡುವುದು.  ಅಲ್ಲಾಹನು ನುಡಿಯುತ್ತಾನೆ: "ನೀವು ಅಲ್ಲಾಹುವಿಗೆ ಉತ್ತಮ ಸಾಲವನ್ನು ನೀಡಿದರೆ ಅವನು ಅದನ್ನು ನಿಮಗೆ ಇಮ್ಮಡಿಗೊಳಿಸಿ ಕೊಡುವನು ಮತ್ತು ನಿಮ್ಮನ್ನು ಕ್ಷಮಿಸುವನು. ಅಲ್ಲಾಹು ಅತ್ಯಧಿಕ ಕೃತಜ್ಞನೂ, ಸಹನಶೀಲನೂ ಆಗಿರುವನು.." [ತಗಾಬುನ್: 17] ಮುಆದ್ [ರ]ರವರಿಂದ ವರದಿ: ಪ್ರವಾದಿﷺರವರು ಹೇಳಿದರು: "ಒಳಿತಿನ ಬಾಗಿಲುಗಳನ್ನು ನಾನು ನಿಮಗೆ ತಿಳಿಸಿ ಕೊಡುತ್ತೇನೆ, ವೃತ ಗುರಾಣೆಯಾಗಿದೆ, ಸ್ವದಖಗಳು ಪಾಪಗಳನ್ನು ಅಳಿಸಿ ಬಿಡುವುದಾಗಿದೆ. ನೀರು ಬೆಂಕಿಯನ್ನು ಅಳಿಸಿ ಬಿಡುವಂತೆ.." [ತಿರ್ಮಿದಿ]

ಸಬಾಹಲ್ ಖೈರ್

ಸಬಾಹಲ್ ಖೈರ್ ಸ್ನಾನ, ವಸ್ತ್ರ, ಮತ್ತು ಸುಗಂಧ: •ಈದ್‌ಗಾಗಿ ಸ್ನಾನ ಮಾಡುವುದು ಪ್ರತ್ಯೇಕ ಸುನ್ನತ್ತಾಗಿದೆ. ಅಂದಿನ ಅರ್ಧ ರಾತ್ರಿಯಿಂದ ಈದ್ ನಮಾಝಿನ ನತಕವಾಗಿದೆ ಅತ್ಯುತ್ತಮ ಸಮಯ. ಆ ನಂತರ ಸೂರ್ಯಾಸ್ತಮಾನದವರೆಗೂ ಸ್ನಾನ ಮಾಡಬಹುದಾಗಿದೆ. ಸ್ನಾನ ಮಾಡದವರಿಗೂ ಇದು ಸುನ್ನತ್ತಿದೆ. ಆದರೆ "ಪೆರ್ನಾಳಿನ ಸುನ್ನತ್ ಸ್ನಾನ ನಾನು ಮಾಡುತ್ತಿದ್ದೇನೆ.” ಎಂಬ ನಿಯತ್ತ್ ಮಾಡಿದ್ದರೆ ಮಾತ್ರ ಪುಣ್ಯ ಲಭ್ಯ. ಅದೇ ರೀತಿ ಅಲ್ಲಾಹನು ನೀಡಿದ ಅನುಗ್ರಹಗಳನ್ನು ತೋರ್ಪಡಿಸುವಂತೆ ಕೃತಜ್ಞತಾ ಭಾವದಿಂದ ಹೊಸ ಉಡುಪುಗಳನ್ನು ಧರಿಸುವುದೂ, ಸುಗಂಧ ಹಚ್ಚುವುದೂ ಈದಾಚರಣೆಯ ಪೈಕಿ ವಿಶೇಷ ಸುನ್ನತ್ತಾಗಿದೆ..  ಪ್ರಕೃತಿಯ ಚಿಹ್ನೆಗಳ ಬಗ್ಗೆ ಕುರ್‍ಆನ್ ಏನು ಹೇಳುತ್ತದೆ: ಖಂಡಿತವಾಗಿಯೂ ಆಕಾಶಗಳ ಹಾಗೂ ಭೂಮಿಯ ಸೃಷ್ಟಿಯಲ್ಲಿ ಮತ್ತು ಇರುಳು ಹಾಗೂ ಹಗಲಿನ ಪರಿವರ್ತನೆಯಲ್ಲಿ ಮತ್ತು ಜನರಿಗೆ ಲಾಭದಾಯಕವಾದ ವಸ್ತುಗಳನ್ನು ಹೊತ್ತು ಕಡಲಲ್ಲಿ ತೇಲುತ್ತಾ ಸಾಗುವ ಹಡಗುಗಳಲ್ಲಿ ಮತ್ತು ಅಲ್ಲಾಹನು ಆಕಾಶದಿಂದ ಇಳಿಸುವ ನೀರಿನಲ್ಲಿ ಮತ್ತು ಆ ಮೂಲಕ ಅವನು ಭೂಮಿಯನ್ನು ಅದರ ಮರಣಾ ನಂತರ ಮತ್ತೆ ಜೀವಂತಗೊಳಿಸುವುದರಲ್ಲಿ ಹಾಗೂ ಅದರಲ್ಲಿ ಎಲ್ಲ ಜೀವಿಗಳನ್ನು ಹರಡುವುದರಲ್ಲಿ ಹಾಗೂ ಗಾಳಿಯ ಚಲನೆಯಲ್ಲಿ ಮತ್ತು ಆಕಾಶ ಹಾಗೂ ಭೂಮಿಯ ನಡುವೆ ವಿಧೇಯ ಸ್ಥಿತಿಯಲ್ಲಿರುವ ಮೋಡಗಳಲ್ಲಿ ಬುದ್ಧಿಯುಳ್ಳವರಿಗಾಗಿ ಅನೇಕ ನಿದರ್ಶನಗಳಿವೆ.  [ಕುರ್‍ಆನ್, 2: 164]

ಸಬಾಹಲ್ ಖೈರ್

ಸಬಾಹಲ್ ಖೈರ್ ತಕ್ಬೀರ್ ಮುಸ್ಲಿಮರ ಸಂತೋಷ ಪ್ರಕಟಣೆಯ ಘೋಷಣಾ ವಾಕ್ಯವಾಗಿದೆ ತಕ್ಬೀರ್, "ನಿಮ್ಮ ಶುಭ ದಿನಗಳನ್ನು ತಕ್ಬೀರ್‌ನಿಂದ ಅಲಂಕರಿಸಿರಿ." ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ. ಈದುಲ್ ಫಿತ್ವ್‌ರ್‌ನಂದು ಚಂದ್ರೋದಯದಿಂದ ಹಿಡಿದು ಈದ್ ನಮಾಝಿನ ಆರಂಭ ತನಕ ತಕ್ಬೀರ್ ಪ್ರಬಲ ಸುನ್ನತ್ತಾಗಿದೆ. ಈ ಅವಧಿಯಲ್ಲಿ ಮನೆ, ಮಸೀದಿ, ಮಾರ್ಗ ಮೊದಲಾದ ಎಲ್ಲಾ ಸ್ಥಳಗಳಲ್ಲೂ ಹಾಗೂ ನಮಾಝ್ ನಿರ್ವಹಿಸಿದ ಬಳಿಕವೂ ಇತರ ದಿಕ್ರ್‍ಗಳಿಗಿಂತಲೂ ಇದು ಅತ್ಯಂತ ಶ್ರೇಷ್ಠವಾಗಿದೆ. اَللهُ اَكْبَرْ اللهُ اَكْبَرْ اللهُ اَكْبَرْ لاَ اِلَهَ اِلاَّ اللهُ وَاللهُ اَكْبَرْ اللهُ اَكْبَرْ وَللهِ الْحَمْدُ ಎಂದಾಗಿದೆ ತಕ್ಬೀರಿನ ಸಾಮಾನ್ಯ ರೂಪ. ಪುರುಷರು ಧ್ವನಿಯೆತ್ತಿಯೂ ಸ್ತ್ರೀಯರು ಅನ್ಯ ಪುರುಷರು ಕೇಳದಂತೆ ಮೆಲುದನಿಯಲ್ಲೂ ನಿರಂತರ ತಕ್ಬೀರ್ ಹೇಳುತ್ತಿರಬೇಕು..

ಸಬಾಹಲ್ ಖೈರ್

ಸಬಾಹಲ್ ಖೈರ್  ಫಿತ್ವ್‌ರ್ ಝಕಾತಿನ ನಿಯ್ಯತ್: •ಇತರ ಎಲ್ಲಾ ಆರಾಧನೆಗಳಂತೆ ಫಿತರ್ ಝಕಾತ್ತಿಗೂ ಕೂಡಾ ನಿಯ್ಯತ್ ಕಡ್ಡಾಯವಾಗಿದೆ.. "ಕಡ್ಡಾಯ ಫಿತರ್ ಝಕಾತನ್ನು ನಾನು ಸಂದಾಯಿಸುತ್ತಿದ್ದೇನೆ..” ಎಂದು ಝಕಾತ್ತಿನ ಧಾನ್ಯವನ್ನು ಬೇರ್ಪಡಿಸಿಡುವಾಗ ಅಥವಾ ಅರ್ಹರಿಗೆ ನೇರವಾಗಿ ನೀಡುವಾಗ ಅಥವಾ ವಕೀಲಿನ ಕೈಗೆ ಒಪ್ಪಿಸುವಾಗ ದೃಢ ಸಂಕಲ್ಪ ಮಾಡಿಕೊಳ್ಳಬೇಕು. ಹಾಗೇ ನಿಯ್ಯತ್ ಮಾಡದಿದ್ದಲ್ಲಿ ತಾನು ನೀಡಿದ ದಾನವು ಫಿತರ್ ಝಕಾತ್ತಾಗಿ ಪರಿಗಣಿಸಲ್ಪಡುವುದಿಲ್ಲ. ಹಾಗಾಗಿ ತನ್ನ ಮೇಲಿರುವ ಕಡ್ಡಾಯ ಬಾಧ್ಯತೆ ಹಾಗೆಯೇ ಉಳಿಯುತ್ತದೆ..

ಸಬಾಹಲ್ ಖೈರ್

ಸಬಾಹಲ್ ಖೈರ್ ಸ್ತ್ರೀಯರಿಗೆ ಅವರ ಪುರುಷರ ಕುರಿತು ಹೃದಯದಲ್ಲಿ ವಿಶಿಷ್ಟ ಸ್ಥಾನವಿರುತ್ತದೆ: ಪ್ರವಾದಿﷺಮರವರು ಹಂನ ಬಿಂತೆ ಜಹಶ್ [ರ]ರನ್ನು ಸಂಧಿಸಿದರು. ಅವರಿಗೆ ಅವರ ಅಬ್ದುಲ್ಲ ಬಿನ್ ಜಹಶ್ [ರ] ಯುದ್ಧದಲ್ಲಿ ಹುತಾತ್ಮರಾದ ಸುದ್ಧಿ ನೀಡಲಾಯಿತು. ಅದನ್ನು ಆಲಿಸಿಕೊಂಡು  "ಇನ್ನಾಲಿಲ್ಲಾಹಿ.." ಪಠಿಸಿದರು ಮತ್ತು ತನ್ನ ಸಹೋದರನ ಸದ್ಗತಿಗಾಗಿ ಪಾರ್ಥಿಸಿದರು.  ಬಳಿಕ ಅವರ ಮಾವ ಹಂಝ ಬಿನ್ ಅಬ್ದುಲ್ ಮುತ್ತಲಿಬ್ [ರ]ರವರು ಹುತಾತ್ಮರಾದ ಸುದ್ಧಿಯನ್ನು ಅವರಿಗೆ ತಿಳಿಸಲಾಯಿತು. ಅವರು ಅದನ್ನು ಆಲಿಸಿಕೊಂಡು ಮತ್ತೊಮ್ಮೆ "ಇನ್ನಲಿಲ್ಲಾಹ್.. " ಪಠಿಸಿದರು ಮತ್ತು ಅವರ ಸದ್ಗತಿಗಾಗಿ ಪ್ರಾರ್ಥಿಸಿದರು.  ಅನಂತರ ಅವರ ಪತಿ ಮಿಸ್ ಅಬ್'ಬಿನ್ ಉಮೈರ್ [ರ]ರವರು ರಕ್ತಸಾಕ್ಷಿಯಾದ ವಿಷಯವನ್ನು ಅವರಿಗೆ ತಿಳಿಸಲಾಯಿತು. ಅದನ್ನು ಆಲಿಸಿಕೊಂಡು ಅವರ ತಾಳ್ಮೆಯ ಕಟ್ಟೆ ಒಡೆಯಿತು. ಅವರು ಆಘಾತವನ್ನು ತಡೆದುಕೊಳ್ಳಲಾರದೆ ಕುಸಿದು ಕುಳಿತು ರೋಧಿಸಲಾರಂಭಿಸಿದರು.  ಅಲ್ಲಾಹನ ಸಂದೇಶವಾಹಕರುﷺಮರು ಹೇಳಿದರು: "ಸ್ತ್ರೀಯರಿಗೆ ಅವರ ಪುರುಷರ ಕುರಿತು ಹೃದಯದಲ್ಲಿ ವಿಶಿಷ್ಟ ಸ್ಥಾನವಿರುತ್ತದೆ.." [ಇಬ್ನ್ ಹಿಷಾಮ್, 2/98] 

ಸಬಾಹಲ್ ಖೈರ್

ಸಬಾಹಲ್ ಖೈರ್ ಇಮಾಮ್ ಬುಖಾರಿ: ಇಮಾಮ್ ಬುಖಾರಿ 600,000 ಹದೀಸ್ ಸನದ್ ಸಮೇತ ಅವರಲ್ಲಿ ಇತ್ತು. ಅದರಿಂದ ಅವರು ಸಹೀಹ್ ಬುಖಾರಿ ಗ್ರಂಥವನ್ನು ಬರದರು. ಅವರ 16 ವರ್ಷ ಪರಿಶ್ರಮದಿಂದ ಈ ಗ್ರಂಥ ಹೊರಗೆ ಬಂತು. ಕೇವಲ ಈ ಮೇಲೆ ಇದ್ದ ಹದೀಸ್ ನಿಂದ ಸಹೀಹ್ ಹದೀಸ್ ಆಯ್ಕೆ ಮಾಡಲು ಒಂದು ಸಲ ಯೋಚಿಸಿ-ಅವರ ಮರಣ ನಂತರವೂ ಈ ಗ್ರಂಥವನ್ನು ಓದದೆ ಇರುವ ಮದರಸ ತುಂಬಾ ಕಡಿಮೆ ಯಾವುದೇ ಇಸ್ಲಾಮಿಕ್ ಸ್ಪೀಚ್ ಆಗಿರಲಿ, ಇದನ್ನು ಸಹೀಹ್ ಬುಖಾರಿಯಿಂದ ತೆಗೆಯಲಾಗಿದೆ ಎಂದರೆ ಎಲ್ಲರಿಗೂ ಒಂದು ದೊಡ್ಡ ನಂಬಿಕೆ ಅವರ ಮನಸ್ಸಿನಲ್ಲಿ ಮೂಡಿ ಬರುತ್ತದೆ. ಸಹೀಹ್ ಬುಖಾರಿಯನ್ನು ಜಗತ್ತಿನ ಎಲ್ಲಾ ಮೂಲೆ ಮೂಲೆಯಲ್ಲಿ ಪಠಣವಾಗುತ್ತದೆ. ಅದು ಇಂಡಿಯಾ ಆಗಿರಲಿ, ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೆಶ್ಯಿಯಾ, ಮಲೆಶ್ಯಿಯಾ, ಸೌದಿ ಆರೆಬಿಯಾ, ಅಮೇರಿಕಾ, ಇಂಗ್ಲೆಂಡ್.. 

ಸಬಾಹಲ್ ಖೈರ್

ಸಬಾಹಲ್ ಖೈರ್ ಫಿತ್ವ್‌ರ್ ಝಕಾತ್: ಈದುಲ್ ಫಿತ್ವ್‌ರಿನಂದು ವಿತರಿಸಲಾಗುವ ಕಡ್ಡಾಯ ದಾನವೇ ಫಿತ್ವ್‌ರ್ ಝಕಾತ್, ಶರೀರದ ನೈತಿಕ ಮಾಲಿನ್ಯಗಳನ್ನು ನಿವಾರಿಸಿ ಶುಚಿತ್ವಗೊಳಿಸಲು ಹಾಗೂ ರಮಳಾನ್ ವ್ರತಗಳಲ್ಲಿ ನಾವರಿಯದೆ ಉಂಟಾಗಬಹುದಾದ ಲೋಪದೋಷಗಳನ್ನು ಪರಿಹರಿಸಲೂ ಫಿತ್ವ್‌ರ್ ಝಕಾತ್ ಸಹಾಯಕವಾಗುತ್ತದೆ.  ಜೊತೆಗೆ ಬಡವ-ನಿರ್ಗತಿಕರಂತಹ ಅಸಹಾಯಕರಿಗೂ ಹಬ್ಬದ ಸಂಭ್ರಮದಲ್ಲಿ ನಿಶ್ಚಿಂತೆಯಿಂದ ಪಾಲ್ಗೊಳ್ಳಲು ಕೂಡಾ ಇದು ಅನುವು ಮಾಡಿ ಕೊಡುತ್ತದೆ. ಸಂತೋಷ ಸಡಗರ ಸಂದರ್ಭಗಳಲ್ಲಿ ಕೂಡಾ ಬಡವರ ಬಳಲನ್ನು ಪರಿಗಣಿಸುವ ಇಂತಹ ವಿಧಿ ವಿಧಾನಗಳು ಇಸ್ಲಾಮಿನ ಮಾತ್ರ ಒಂದು ವಿಶೇಷತೆಯಾಗಿದೆ.. 

ಸಬಾಹಲ್ ಖೈರ್

ಸಬಾಹಲ್ ಖೈರ್ ಸದಖದಲ್ಲಿ ಮೇಲಿರುವ ಕೈ: ಅಲ್ಲಾಹನು ನೀಡಿರುವ ಅವನ ಅನುಗ್ರಹವಾದ ಸಂಪತ್ತನ್ನು ಇಸ್ಲಾಮಿನ ಮಾರ್ಗದಲ್ಲಿ ಖರ್ಚು ಮಾಡುವುದು ತುಂಬಾ ಪುಣ್ಯವಿರುವ ಕರ್ಮವಾಗಿದೆ. ಹಾಗೆ ಖರ್ಚು ಮಾಡುವ ಮೇಲಿನ ಕೈ ಅದನ್ನು ಪಡೆಯುವ ಕೆಳಗಿನ ಕೈಗಿಂತ ಉತ್ತಮವು, ಪ್ರತಿಫಲಾರ್ಹವು ಆಗಿದೆ. ಈ ಒಂದು ಹದೀಸನ್ನು ಗಮನಿಸಿರಿ: ಇಬ್ನು ಉಮರ್ [ರ]ರವರಿಂದ ವರದಿ: ಪ್ರವಾದಿﷺರವರು ಮಿಂಬರಿನಲ್ಲಿದ್ದಾಗ ಅವರು ಹೇಳುವುದನ್ನು ನಾನು ಆಲಿಸಿದ್ದೇನೆ: ಅವರು ಸ್ವದಖದ ಕುರಿತು, ಚಾರಿತ್ರ್ಯತೆಯ ಕುರಿತು ಹೇಳಿದರು, ಹಾಗೆಯೇ ಮೇಲಿನ ಕೈ ಕೆಳಗಿನ ಕೈಗಿಂತ ಉತ್ತಮವೆಂಬ ವಿಷಯವನ್ನೂ ಹೇಳಿದರು. ಮೇಲಿನ ಕೈ ಎಂದರೆ ಖರ್ಚು ಮಾಡುವ ಕೈ, ಕೆಳಗಿನ ಕೈ ಎಂದರೆ ಬೇಡುವ ಕೈಯಾಗಿದೆ" [ಬುಖಾರಿ]

ಸಬಾಹಲ್ ಖೈರ್

ಸಬಾಹಲ್ ಖೈರ್ ಲೈಲತುಲ್ ಖದ್‌ರ್ ಮಹೋನ್ನತ ರಾತ್ರಿ: ಲೈಲತುಲ್ ಖದ್‌ರ್ ರಮಳಾನ್‌ನಿನ ರಾತ್ರಿಗಳಲ್ಲಿ ಅತ್ಯಂತ ಮಹೋನ್ನತ ರಾತ್ರಿಯಾಗಿದೆ. ಅಲ್ಲಾಹನು ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಪವಿತ್ರ ಕುರ್‌ಆನ್ ಆವತೀರ್ಣಗೊಳಿಸಲು ಪ್ರಾರಂಭ ಮಾಡಿದ ರಾತ್ರಿಯಾಗಿದೆ, ರಕ್ಷೆ, ಅನುಗ್ರಹ, ಒಳಿತು ಹಾಗೂ ಪ್ರತಿಫಲದ ರಾತ್ರಿಯಾಗಿದೆ. ಲೈಲತುಲ್ ಖದ್‌ರ್ ಅಂದರೆ ಗೌರವದ ರಾತ್ರಿ, ಮಹೋನ್ನತ ರಾತ್ರಿ, ಶ್ರೇಷ್ಟತೆಯ ರಾತ್ರಿ ಎಂಬೀ ಅರ್ಥಗಳಿವೆ. ಆ ರಾತ್ರಿಯಲ್ಲಿ ಪ್ರಾರ್ಥನ ಸ್ವೀಕರಿಸಲ್ಪಡಲು, ಆಪತ್ತು, ಮುಸೀಬತ್ತು, ರೋಗ ರುಜಿನಗಳು ನೀಗಿ ಹೋಗಲು, ಸುಖ ಸಂತೋಷ, ಕ್ಷೇಮ, ಐಶ್ವರ್ಯ ವರ್ಷಿಸಲು ಆಕಾಶದ ಬಾಗಿಲುಗಳು ತೆರೆಯಲಾಗುತ್ತದೆ. ಇದು ಲೈಲತುಲ್ ಖದ್‌ರ್ ನ ಮಹತ್ವವಾಗಿದೆ, ಈ ರಾತ್ರಿಯು ಇತರ ಎಲ್ಲಾ ರಾಶಿಗಳಿಗಿಂತ ಅತ್ಯಂತ ಉನ್ನತ ರಾತ್ರಿಯಾಗಿದೆ, ಇಮಾಮ್‌ ಅಬೂಬಕರಿನಿಲ್ ವರ್ರಾಖ್ (ರ) ಹೇಳುತ್ತಾರೆ: "ನಿಶ್ಚಯವಾಗಿಯೂ ಈ ರಾತ್ರಿಯಲ್ಲಿ ಅತಿ ಮಹೋನ್ನತ ಗ್ರಂಥ ಪವಿತ್ರ ಕುರ್‌ಆನ್, ಅತಿ ಮಹೋನ್ನತ ಮಲಕ್ ಜಿಬ್‌ರೀಲ್ (ಅ) ರವರ ಮುಖಾಂತರ ಅತಿ ಮಹೋನ್ನತ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಹಾಗೂ ಅವರ ಅತಿ ಮಹೋನ್ನತ ಸಮುದಾಯದ ಮೇಲೆ ಅವತೀರ್ಣವಾಯಿತು. ಈ ಕಾರಣದಿಂದಲೇ ಈ ರಾತಿಗೆ ಲೈಲತುಲ್ ಖದ್‌ರ್ (ಅತಿ ಮಹೋನ್ನತ ರಾತ್ರಿ) ಎಂಬ ಹೆಸರು ಬಂತು.."

ಸಬಾಹಲ್ ಖೈರ್

ಸಬಾಹಲ್ ಖೈರ್ ಮದರಂಗಿ ಇಡುವುದು: ಪೆರ್ನಾಳ್ ದಿನದಲ್ಲಿ ಮದರಂಗಿ ಹಾಕುವ ಪದ್ದತಿ ಎಲ್ಲಾ ಊರುಗಳಲ್ಲೂ ಸರ್ವ ವ್ಯಾಪಕವಾಗಿದೆ. ವಿವಾಹಿತೆಯಾದ ಸ್ತ್ರೀಯರಿಗೆ ತಮ್ಮ ಕೈಕಾಲುಗಳಲ್ಲಿ ಮದರಂಗಿ ಇಡುವುದು ಸುನ್ನತ್ ಕೂಡಾ ಇದೆ. ಆದರೆ ಅವಿವಾಹಿತ ಮಹಿಳೆಯರಿಗೆ ಇದು ಕರಾಹತ್ತಾಗಿದೆ. ಪುರುಷರಿಗೂ, ಪತಿ ತೀರಿಕೊಂಡು 'ಇದ್ದ' ಕುಳಿತ ಸ್ತ್ರೀಯರಿಗೂ ಮದರಂಗಿ ಇಡುವುದು ಹರಾಮ್ ಆಗಿದೆ..

ಸಬಾಹಲ್ ಖೈರ್

ಸಬಾಹಲ್ ಖೈರ್ ಮಹಿಳೆಯರ ಜಮಾಅತ್‌: ಮಹಿಳೆಯರಿಗೂ ತರಾವೀಹ್ ನಮಾಝ್ ಸುನ್ನತ್ತಿದೆ. ಅವರಿಗೂ ಸಮ್ಮತ ಸ್ವತಃ ಮನೆಯಲ್ಲಿ ಜಮಾಅತ್ತಾಗಿ ನಿರ್ವಹಿಸಬಹುದು. ಆದರೆ ಅದಕ್ಕಾಗಿ ಮನೆ ಬಿಟ್ಟು ಹೋಗುವುದು ಒಳಿತಲ್ಲ. ಕಾರಣ ಮಹಿಳೆಯರು ಸ್ವತಃ ಮನೆಯೊಳಗೆ ಮಾಡುವ ಇಬಾದತ್‌ಗಿಂತಲೂ ಉತ್ತಮವಾದ ಆರಾಧನೆ ಮತ್ತೊಂದಿಲ್ಲವೆಂದು ಪ್ರವಾದಿ ಸ್ವಲಲ್ಲಾಹು ಅಲಾಹಿವಸಲ್ಲಮರು ಹೇಳಿದ್ದಾರೆ. ಮಾತ್ರವಲ್ಲ ಸ್ತ್ರೀಯರಿಗೆ ನಮಾಝ್ ನಿರ್ವಹಿಸಲು ಅತ್ಯಂತ ಶ್ರೇಷ್ಟ ಸ್ಥಳ ಅವಳ ಸ್ವತಃ ಮನೆಯ ಒಳ ಕೊಠಡಿಯಾಗಿದೆ ಎಂದು ಅದೆಷ್ಟೋ ಹದೀಸ್‌ಗಳಲ್ಲಿ ಸ್ಪಷ್ಟಗೊಂಡಿದೆ. ಆದ್ದರಿಂದಲೇ ಇತ್ತೀಚಿನ ಕಾಲದಿಂದ ಕೆಲವು ಊರುಗಳಲ್ಲಿ ಕಂಡು ಬರುವಂತೆ ಅಕ್ಕಪಕ್ಕದ ಮಹಿಳೆಯರು ಸೇರಿ ಒಂದು ಮನೆಯಲ್ಲಿ ಅಥವಾ ಮದ್ರಸಾದಂತಹ ಇನ್ನಿತರ ಸ್ಥಳಗಳಲ್ಲಿ ತರಾವೀಹ್ ಜಮಾಅತ್ ನಡೆಸುವುದು ಇಸ್ಲಾಮ್ ಒಮ್ಮೆಯೂ ಪ್ರೋತ್ಸಾಹ ಕೊಡುವಂತಹ ಸಂಗತಿಯಲ್ಲ. ಒಳಿತಿಗೆ ವಿರುದ್ಧವಾದ ಇಂತಹ ಕಾರ್ಯಗಳಿಗೆ ಮದ್ರಸಾವನ್ನು ಬಿಟ್ಟು ಕೊಡುವುದು ಸರಿಯಲ್ಲ. ಆಡಳಿತಾಧಿಕಾರಿಗಳು ಆ ಬಗ್ಗೆ ಜಾಗೃತರಾಗಲೇಬೇಕು. ಅದೇ ರೀತಿ ಸ್ವತಃ ಮನೆಯನ್ನು ಬಿಟ್ಟು ಕೊಡುವುದೂ ಇಸ್ಲಾಮ್ ಆದೇಶಿಸುವ ಒಳಿತಿನ ವಿರುದ್ದ ಸಹಾಯ ಮಾಡುವಂತಾಗುತ್ತದೆ.  ಸ್ವತಃ ಮನೆಯಿಂದ ಹೊರ ಹೋಗಿ ಜಮಾಅತಾಗಿ ನಿರ್ವಹಿಸುವುದಕ್ಕಿಂತಲೂ ಮನೆಯೊಳಗೆಯೇ ಒಬ್ಬಂಟಿಯಾಗಿ ನಿರ್ವಹಿಸುವುದೇ ಮಹಿಳೆಯರಿಗೆ ಉತ್ತಮವೆಂದು ಮೇಲಿನ ಹದೀಸ್‌ಗಳಿಂದ ಮನಗಾಣಬಹುದು. ಮಾತ್ರವಲ್ಲ ಶಾಫಿಈ ಮದ್ಸ್‌ಹಬ್...

ಸಬಾಹಲ್ ಖೈರ್

ಸಬಾಹಲ್ ಖೈರ್ ಮಹೋನ್ನತ ರಾತ್ರಿ: ಅಲ್ಲಾಹು ಪವಿತ್ರ ಕುರ್‌ಆನಲ್ಲಿ "ಲೈಲತುಲ್ ಖದ್‌ರ್ ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವಾಗಿದೆ.."ಎಂದಿದಾನೆ, ಸಾವಿರ ತಿಂಗಳು ಅಂದರೆ ಎಂಭತ್ತಮೂರು ವರುಷ ನಾಲ್ಕು ತಿಂಗಳು ಆಗುತ್ತದೆ.. ಇಹದಲ್ಲಿ ಜೀವಿಸುವ ಒಬ್ಬ ಮನುಷ್ಯನ ಒಟ್ಟಾರೆ ಆಯುಷ್ಯವಾಗಿದೆ. ಹೀಗೆ ನೋಡುವಾಗ ಲೈಲತುಲ್ ಖದರಿನ ಒಂದು ರಾತ್ರಿ ಒಬ್ಬ ಮನುಷ್ಯನ ಆಯುಷ್ಯಕ್ಕಿಂತಲೂ ಹೆಚ್ಚು ಶ್ರೇಷ್ಠವಾಗಿದೆ ಎಂದು ತಿಳಿಯಬಹುದು.. ನಿಶ್ಚಯವಾಗಿಯೂ ಲೈಲತುಲ್ ಖದರಿನ ರಾತ್ರಿಗೆ ಅತ್ಯಂತ ಹೆಚ್ಚು ಮಹತ್ವವಿದೆ. ಅಲ್ಲಾಹನು ಅವನ ಪವಿತ್ರ ಕುರ್‌ಆನಲ್ಲಿ ಲೈಲತುಲ್ ಖದ್ರನ ವಿಶೇಷತೆಗಳನ್ನು ತಿಳಿಸುತ್ತಾನೆ, "ನಿಶ್ಚಯವಾಗಿಯೂ ಲೈಲತುಲ್ ಖದರ್ ಬರ್ಕತ್ (ಕ್ಷೇಮಾಭಿವೃದ್ಧಿ)ನ ರಾತ್ರಿಯಾಗಿದೆ, ಅತ್ಯಂತ ಉನ್ನತ ರಾತ್ರಿಯಾಗಿದೆ, ಪವಿತ್ರ ಕುರ್‌ಆನ್ ಅವತೀರ್ಣವಾದ ರಾತ್ರಿಯಾಗಿದೆ. ಸಾವಿರ ತಿಂಗಳುಗಳಿಗಿಂತ ಶ್ರೇಷತೆ ಇರುವ ರಾತ್ರಿಯಾಗಿದೆ. ಮಲಕುಗಳು ಧರೆಗೆ ಇಳಿದು ಬರುವ ರಾತ್ರಿಯಾಗಿದೆ. ರಕ್ಷೆಯ ರಾತ್ರಿಯಾಗಿದೆ, ಫಜರ್‌ನ ವೇಳೆಯ ತನಕ ಆ ರಾತ್ರಿಯು ನೀಳವಾಗಿರುತ್ತದೆ..” ಅಂದು ಪಶ್ಚಾತಾಪಪಡುವವರೆಲ್ಲಾ ಪಶ್ಚಾತಾಪಗಳನ್ನು ಸ್ವೀಕರಿಸಲಾಗುತ್ತದೆ. ಸೂರ್ಯಾಸ್ತಮಾನದಿಂದ ಪ್ರಭಾತದವರೆಗೆ ಎಂದು ಳಹ್‌ಹಾಕ್‌ನಲ್ಲಿ ವರದಿಯಾಗಿದೆ.  "ಲೈಲತುಲ್ ಖದರ್‌ನ ರಾತ್ರಿ ಭೂಮಿಯಲ್ಲಿ ಕಲ್ಲುಗಳಿಗಿಂತಲೂ ಅಧಿಕ ಮಲಕುಗಳಿರುತ್ತಾರೆ.."ಎಂದು ಅಬೂಹುರೈರಾ ಉಲ್ಲೇಖಿಸಿದ್...

ಸಬಾಹಲ್ ಖೈರ್

ಸಬಾಹಲ್ ಖೈರ್  ಮಲಾಇಕತ್‌ಗಳಿಂದ ಅಭಿನಂದನೆ: ಲೈಲತುಲ್ ಖದ್‌ರ್ ನಂದು ಮಲಾಇಕತ್‌ಗಳ ನಾಯಕ ಜಿಬ್‌ರೀಲ್ ಅಲೈಹಿಸ್ಸಲಾಂ ವಿಶೇಷವಾದ ಒಂದು ಹಿಂಡು ಮಲಾಇಕತ್‌ಗಳ ಜೊತೆ ಇಳಿದು ಬಂದು ನಿಂತುಕೊಂಡ ರೀತಿಯಲ್ಲೂ, ಕುಳಿತ ರೀತಿಯಲ್ಲೂ ಅಲ್ಲಾಹನ ಸ್ಮರಣೆಯಿಂದ ಕಳೆಯುವ ಪ್ರತಿಯೋರ್ವ ದಾಸರಿಗೂ ಸಲಾಮ್ ಹೇಳಿ ಅವರ ಪಾಪಮನ್ನಣೆಗೋಸ್ಕರ ಪ್ರಾರ್ಥನೆ ನಡೆಸುತ್ತಾರೆಂದು ಹದೀಸ್‌ಗಳಲ್ಲಿ ವರದಿಯಾಗಿದೆ (ಸೂಹುಲ್ ಬಯಾನ್), ಮಲಕುಗಳ ನಾಯಕರೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ದಿವ್ಯಾಣಿ ತಲುಪಿಸಿಕೊಡುವ ಮೂಲಕ ಆ ಮಹೋನ್ನತ ಸಾಮೀಪ್ಯ ಪಡೆದ ಜಿಬ್‌ರೀಲ್ ಅಲೈಹಿಸ್ವಲಾಮ್‌ರವರ ನೇರ ಅಭಿವಾದನೆ ಮತ್ತು ಪ್ರಾರ್ಥನೆ ದೊರಕುವುದೆಂದರೆ ಒಂದು ಮಹಾ ಭಾಗ್ಯ ಸರಿ. ಆದರೆ ಕೆಲವು ಹತಭಾಗ್ಯರು ಮಾತ್ರ ಇದರಿಂದ ವಂಚಿತರಾಗುತ್ತಾರೆ. ಅವರ ಕುರಿತು ಇನ್ನು ಅಬ್ಬಾಸ್ (ರ) ರವರು ಹೇಳುತ್ತಾರೆ: "ಸರ್ವ ಮುಅ್‌ಮೀನ್‌ಗಳೊಂದಿಗೂ ಲೈಲತುಲ್ ಖದ್‌ರ್‌ನಂದು ಮಲಾಇಕತ್‌ಗಳು ಸಲಾಮ್ ಹೇಳುತ್ತಾರೆ. ಆದರೆ ನಿತ್ಯವೂ ಮದ್ಯಪಾನ ಮಾಡುವವನು, ಪಾಪ ಕೃತ್ಯಗಳಲ್ಲಿ ನಿರತನಾದವನು, ಜ್ಯೋತಿಷನು ಹಾಗೂ ಇತರರೊಂದಿಗೆ ವಿದ್ವೇಷವನ್ನುಂಟು ಮಾಡಿ ಶತ್ರುತ್ವವನ್ನು ಬೆಳೆಸಿಕೊಳ್ಳುವವನು ಮುಂತಾದವರನ್ನು ಹೊರತು ಪಡಿಸಲಾಗುತ್ತದೆ. ಹಾಗೇ ಮಲಕುಗಳ ಸಲಾಮ್ ದೊರಕುವ ವ್ಯಕ್ತಿಯ ಗತಕಾಲ ಪಾಪಗಳೆಲ್ಲವೂ ಮನ್ನಿಸಲ್ಪಡುತ್ತದೆ.." (ಶರಹುಲ್ ಮುಹದ್ಸಬ್)

ಸಬಾಹಲ್ ಖೈರ್

ಸಬಾಹಲ್ ಖೈರ್ ಲೈಲತುಲ್ ಖದ್‌ರ್ ಸಹಸ್ರ ಮಾತುಗಳಿಗಿಂತ ಶ್ರೇಷ್ಠವಿದೆಯೆಂದು ಪವಿತ್ರ ಕುರ್‍ಆನ್ ಸ್ಪಷ್ಟ ವಾಕ್ಯಗಳಿಂದ ಸಾರಿ ಹೇಳಿದ ಒಂದು ರಾತ್ರಿಯಾಗಿದೆ ಲೈಲತುಲ್ ಖದ್‌ರ್, ಕೇವಲ ಈ ಒಂದು ರಾತ್ರಿಯ ಮಹತ್ವಗಳನ್ನು ಮಾತ್ರ ವರ್ಣಿಸಲು ಅಲ್ಲಾಹು ಪವಿತ್ರ ಕುರ್‍ಆನಿನಲ್ಲಿ ಒಂದು ಅಧ್ಯಾಯವನ್ನೇ ಅವತೀರ್ಣಗೊಳಿಸಿದ್ದಾನೆ. ಈ ರಾತ್ರಿಯಲ್ಲಿ ಮಾಡುವ ಪ್ರತಿಯೊಂದು ಪುಣ್ಯ ಕರ್ಮಕ್ಕೂ ಇದರ ರಾತ್ರಿಗಳಲ್ಲಿ ಸಾವಿರ ಮಾಸಗಳ ಕಾಲ ನಿರ್ವಹಿಸುವಷ್ಟೂ ಹೇರಳ ಪ್ರತಿಫಲ ಲಭ್ಯವಾಗುತ್ತದೆ. ಆಯುಷ್ಯವಿಡೀ ಸಂಪಾದಿಸಲು ಸಾಧ್ಯವಾಗದ ಪುಣ್ಯಗಳನ್ನು ಕೇವಲ ಒಂದು ರಾತ್ರಿಯಲ್ಲೇ ಸಂಪಾದಿಸಬಹುದು. ಇದು ಪೂರ್ವಿಕ ಜನಾಂಗಗಳಿಗೇನೂ ದೊರಕದಂತಹ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಸಮುದಾಯದ ಒಂದು ವಿಶೇಷತೆಯಾಗಿದೆ. ಈ ರಾತ್ರಿ ಯಾವಾಗವೆಂದು ಖಚಿತ ಪಡಿಸಲು ಸ್ವಷ್ಟ ಆಧಾರಗಳಿಲ್ಲ. ಆದರೂ ರಮಳಾನಿನ ಕೊನೆಯ ಹತ್ತರಲ್ಲಿ ಒಂಟಿಯಾಗಿ ಬರುವ ವಿಶೇಷ ರಾತ್ರಿಯೆಂದಾಗಿದೆ ಪ್ರಬಲಾಭಿಪ್ರಾಯ. ಅಥವಾ 21, 23, 24, 27, 29 ಇವುಗಳ ಪೈಕಿ ಯಾವುದೇ ಒಂದರಲ್ಲಾಗುವ ಸಂಭವ ಇದೆ. ಅದರಲ್ಲೂ 27ನೇ ರಾತ್ರಿ ಎಂಬ ಅಭಿಪ್ರಾಯಕ್ಕೆ ಹೆಚ್ಚಿನ ಪ್ರಾಬಲ್ಯವಿದೆ. ಪ್ರತೀ ವರ್ಷದಲ್ಲೂ ವ್ಯತ್ಯಸ್ಥ ರಾತ್ರಿಗಳಿಗೆ ಬದಲಾವಣೆಗೊಳ್ಳುವುದು ಎಂಬ ಅಭಿಪ್ರಾಯವೂ ಕೆಲವು ಪ್ರಮುಖ ಪಂಡಿತರುಗಳಿಗಿದೆ. ದಾನ ಧರ್ಮ, ಇಅತಿಕಾಫ್, ಕುರ್‌ಆನ್ ಪಾರಾಯಣ, ಪ್ರಾರ್ಥನೆ, ದಿಕ್ರ್ ಸ್ವಲಾತ್, ಬಂಧು-ನೆರೆಹೊರೆ ಆಪ್ತೇಷರು ಹಾಗೂ ಕು...

ಸಬಾಹಲ್ ಖೈರ್

ಸಬಾಹಲ್ ಖೈರ್ ಇಅತಿಕಾಫ್: ಇದು ಕೂಡಾ ಬಹಳ ಪ್ರತಿಫಲಾರ್ಹವಾದ ಇಬಾದತ್ತಾಗಿದೆ. ರಮಳಾನ್ ತಿಂಗಳಲ್ಲಿ ಇದರ ಪುಣ್ಯ, ದುಪ್ಪಟ್ಟು ಹೆಚ್ಚುತ್ತದೆ. "ಈ ಮಸೀದಿಯಲ್ಲಿ ನಾನು ಅಲ್ಲಾಹನಿಗಾಗಿ ಇಅತಿಕಾಫ್ ಕುಳಿತುಕೊಳ್ಳುತ್ತೇನೆ.." ಎಂಬ ದೃಢ ಸಂಕಲ್ಪದೊಂದಿಗೆ ಸ್ವಲ್ಪ ಹೊತ್ತು ಮಸೀದಿಯಲ್ಲಿ ಕಳೆಯುವುದು ಇಅತಿಕಾಫ್. ಹಾಗೆ ಸಂಕಲ್ಪ ಮಾಡಿ ಎಷ್ಟು ಸಮಯ ಮಸೀದಿಯಲ್ಲೇ ಇರುತ್ತಾನೋ ಆ ಪ್ರತಿಯೊಂದು ಕ್ಷಣಕ್ಕೂ ಪುಣ್ಯ ಲಭ್ಯವಾಗುತ್ತದೆ. ರಮಳಾನಿಗೆ ಕೊನೆಯ ಹತ್ತು ದಿನಗಳಲ್ಲಿ ಇಅತಿಕಾಫ್ ಅತ್ಯಂತ ವಿಶೇಷ ಸುನ್ನತ್ತಾಗಿದೆ.. 

ಸಬಾಹಲ್ ಖೈರ್

ಸಬಾಹಲ್ ಖೈರ್ ಬದ್‌ರ್ ದಿನ: ಇಸ್ಲಾಮಿನ ಇತಿಹಾಸದಲ್ಲೇ ಅತ್ಯಂತ ಸ್ಮರಿಸಲ್ಪಡುವ ಒಂದು ವಿಶಿಷ್ಟ ದಿನವಾಗಿದ ಬದ್‌ರ್ ದಿನ, ಸತ್ಯ ಮತ್ತು ಅಸತ್ಯದ ವಿವೆಚನೆಗಾಗಿ ನಡೆದ ಅದ್ಭುತ ಹೋರಾಟವೊಂದಕ್ಕೆ ಸಾಕ್ಷಿಯಾದ ಈ ದಿನವು ಪವಿತ್ರ ರಮಳಾನಿನ 17ನೇ ಹಗಲಲ್ಲಾಗಿತ್ತು. ಕೇವಲ ಮುನ್ನೂರ ಹದಿಮೂರು ಧರ್ಮಯೋಧರು ಉಪವಾಸ ಕೈಗೊಂಡು ನಿರಾಯುಧರಾಗಿ ಸಾವಿರಗಟ್ಟಲೆ ಬರುವ ಸರ್ವ ವಿಧ ಆಯುಧ ಸಜ್ಜರಾಗಿರುವ ಶತ್ರಗಳ ವಿರುದ್ಧ ಧರ್ಮ ಹೋರಾಟ ನಡೆಸಿ ಅದ್ಭುತ ವಿಜಯ ಗಳಿಸಿದ ಈ ಪುಣ್ಯ ದಿನವು ಸತ್ಯ ವಿಶ್ವಾಸಿಗಳಿಗೆ ಒಮ್ಮೆಯೂ ಮರೆಯಲಾಗದ ದಿನವಾಗಿದೆ. ಆ ಮಹಾ ಘಟನೆಯಲ್ಲಿ ಭಾಗವಹಿಸಿದ ಬದ್‌ರ್ ಶುಹದಾಗಳನ್ನು ಸ್ಮರಿಸಿ ಬದ್‌ರ್ ಮೌಲಿದ್, ದಾನ ಧರ್ಮ ಮುಂತಾದ ಒಳಿತುಗಳನ್ನು ಹೆಚ್ಚಿಸುವುದು ಈ ದಿನದಲ್ಲಿ ಪ್ರತ್ಯೇಕ ಪುಣ್ಯದಾಯಕವಾಗಿದೆ.. 

ಸಬಾಹಲ್ ಖೈರ್

ಸಬಾಹಲ್ ಖೈರ್ ಉಪವಾಸಿಗರಿಗೆ ಇದು ತಿಳಿದಿರಲೇಬೇಕು: •ಕೆಲವು ಮಹಿಳೆಯರಿಗೆ ರಮಳಾನ್ ವ್ರತದ ಸಂದರ್ಭದಲ್ಲಿ ರುಚಿ ನೋಡುವ ಅಭ್ಯಾಸವಿದೆ. ಆದರೆ, ಈ ಕುರಿತು ಎಚ್ಚರಿಕೆ ವಹಿಸಬೇಕು. ನಾಲಗೆ ಮೇಲೆ ಒಂದು ವಸ್ತು ಇಟ್ಟರೆ ಅದರ ರುಚಿ ಒಳ ಹೋಗುತ್ತದೆ. ಇದರಿಂದ ವ್ರತಕ್ಕೆ ತೊಂದರೆ ಇಲ್ಲದಿದ್ದರೂ ಇದು ಕರಾಹತ್ ಆಗಿದೆ. ಆದರೆ, ನಾಲಗೆ ಮೇಲೆ ಇಟ್ಟ ವಸ್ತುವನ್ನು (ಅದು ದ್ರವರೂಪದಲ್ಲಿರುವ ವಸ್ತುವಾದರೂ) ತಕ್ಷಣವೇ ಉಗುಳಿ ಬಾಯಿ ಮುಕ್ಕಳಿಸುವುದು ಉತ್ತಮ. ಈ ವಿಷಯದಲ್ಲಿ ಬಹಳಷ್ಟು ಜಾಗೃತೆ ವಹಿಸಬೇಕು.. •ಮಾಂಸ ಖಂಡಗಳಿಗೆ ಚುಚ್ಚುಮದ್ದು ಕೊಡುವುದರಿಂದ ವ್ರತಕ್ಕೆ ತೊಂದರೆ ಇಲ್ಲ..  •ಸ್ವಲನವಾಗುವ ಉದ್ದೇಶವಿಲ್ಲದೇ ವುಳೂಅ್ ಭಂಗವಾಗದ ರೀತಿಯಲ್ಲಿ ಮರೆಯ ಮೇಲೆ ಪತ್ನಿ/ಪತಿಯನ್ನು ಸ್ಪರ್ಶಿಸಿದಾಗ ಸ್ವಲನವಾದರೂ, ಚಿಂತನೆಯ ಮೂಲಕ ಸ್ವಲನವಾದರೂ ಹಾಗೂ ಸ್ವಪ್ನ ಸ್ಥಲನವಾದರೂ ವ್ರತ ಕೆಡುವುದಿಲ್ಲ. ಆದರೆ ಸೂಕ್ಷ್ಮ ತೆಗೆ ಬೇಕಾಗಿ ಇವುಗಳಿಂದ ದೂರವಿರುವುದೇ ಉತ್ತಮ.. •ಸ್ನಾನ ಮಾಡುವಾಗ ಬಾಯಿ, ಮೂಗು, ಕಿವಿ, ಗುದದ್ವಾರ ಮತ್ತು ಸ್ತ್ರೀಯರು ಯೋನಿ ಶುಚಿಗೊಳಿಸುವಾಗ (ಕೈ ಬೆರಳು) ನೀರು ಒಳ ಹೋಗದಂತೆ ಜಾಗೃತೆ ವಹಿಸಬೇಕು. ರಮಳಾನ್ ತಿಂಗಳಲ್ಲಿ ರಾತ್ರಿ ಅಥವಾ ಸಹರಿಗೆ ಮುಂಚೆ ಸ್ನಾನ ಮಾಡುವುದನ್ನು ರೂಢಿ ಮಾಡಿದರೆ ಸೂಕ್ಷತೆ ಕಾಯ್ದುಕೊಂಡಂತಾಗುತ್ತದೆ.. •ಹಲ್ಲುಜ್ಜುವಾಗ ಗಂಟಲಿಗೆ ಬ್ರೆಷ್ ಹಾಕಬಾರದು. ವಾಂತಿ ಆಗುವ ಸಾಧ್ಯತೆ ಇರುತ್ತದೆ.. •ತಲೆಗೆ ಎಣ್ಣೆ ಹಾಕುವುದು, ಕಣ್ಣ...

ಸಬಾಹಲ್ ಖೈರ್

ಸಬಾಹಲ್ ಖೈರ್ ಉಪವಾಸದ ಕಡ್ಡಾಯ ನಿಯಮಗಳು: ಉಪವಾಸಕ್ಕೆ ಕಡ್ಡಾಯವಾದ ಕಾರ್ಯಗಳು ಹೆಚ್ಚೇನೂ ಇಲ್ಲ. ಆದರೆ, ವಿವರಣೆಗಳು ಹೆಚ್ಚಿವೆ. ನಿಯ್ಯತ್ ಹಾಗೂ ಉಪವಾಸ ಮುರಿಯುವ ಕಾರ್ಯಗಳನ್ನು ವರ್ಜಿಸುವುದು ಉಪವಾಸದ ಫರ್‌ಳ್ ಅಥವಾ ಕಡ್ಡಾಯ ನಿಯಮಗಳಾಗಿವೆ. ಉಪವಾಸ ಮೊದಲ ನಿಬಂಧನೆ ನಿಯ್ಯತ್ ಸಂಕಲ್ಪಿಸುವುದು. ಉಪವಾಸ ಹಿಡಿಯುವ ಉದ್ದೇಶದಿಂದ ಸಹರಿ ಸೇವಿಸುವವನೂ ಸಹ ನಿಯ್ಯತ್ ಸಂಕಲ್ಪಿಸಬೇಕು . ಅದು ಕಡ್ಡಾಯ. ವುಳೂಅ್ ನಿರ್ವಹಿಸಿ, ಮಸೀದಿಯ ಒಳಗೆ ಹೋಗಿ ಇಮಾಮರ ಹಿಂದೆ ನಿಲ್ಲುವವನ ಮನಸಿನಲ್ಲೂ ತಾನು ನಮಾಝ್ ಮಾಡಲು ಹೊರಟಿದ್ದೇನೆ ಎಂಬ ಪ್ರಜ್ಞೆಯಿರುತ್ತದೆಯಲ್ಲವೇ..? ಅವನೂ ಸಹ ನಿಯ್ಯತ್ ಸಂಕಲ್ಪಿಸಲೇಬೇಕು. ಹಾಗೆಯೇ ಉಪವಾಸ ವ್ರತದ ನಿಯ್ಯತ್ ಕೂಡ. ಪ್ರವಾದಿﷺಮರು ಹೇಳುತ್ತಾರೆ. "ನಿಶ್ಚಯವಾಗಿಯೂ ಕರ್ಮಗಳು ಸ್ವೀಕರಿಸಲ್ಪಡುವುದು ನಿಯ್ಯತ್‌ನ ಮೂಲಕವಾಗಿದೆ (ಬುಖಾರಿ) ಇಂತಿಂಥ ಉಪವಾಸ, ನಮಾಝ್ ಎಂದೇ ನಿಯ್ಯತ್ ಸಂಕಲ್ಪಿಸಬೇಕೆಂಬುದನ್ನು ಈ ಪ್ರವಾದಿ ವಚನ ಸ್ಪಷ್ಟಪಡಿಸುತ್ತದೆ.."

ಸಬಾಹಲ್ ಖೈರ್

ಸಬಾಹಲ್ ಖೈರ್ ಉಪವಾಸವು ಇಸ್ಲಾಮಿನ ಪಂಚ ಸ್ಥಂಭಗಳಲ್ಲೊಂದಾಗಿದೆ. ಉಪವಾಸವು ಇಸ್ಲಾಮಿನ ಪಂಚಸ್ಥಂಭಗಳಲ್ಲೊಂದಾಗಿದೆ. ನಮ್ಮಂತೆಯೇ ಪೂರ್ವಿಕ ಜನಾಂಗಕ್ಕೂ ಕಡ್ಡಾಯಗೊಳಿಸಲ್ಪಟ್ಟ ಪುರಾತನ ಆರಾಧನೆಗಳಲ್ಲಿ ಇದೂ ಒಂದಾಗಿದೆ. ಪಾಪಗಳಿಂದ ತುಂಬಿದ ದೇಹ ಮತ್ತು ಮನಸನ್ನು ಶುಚಿಗೊಳಿಸಲು ಅಲ್ಲಾಹನು ನೀಡಿದ ಸದವಕಾಶವೇ ಉಪವಾಸ ವ್ರತ. ಪವಿತ್ರ ಖುರ್‌ಆನ್‌ನಲ್ಲಿ ಅಲ್ಲಾಹನು ಹೇಳುತ್ತಾನೆ: "ಓ ಸತ್ಯ ವಿಶ್ವಾಸಿಗಳೇ..! ನಿಮ್ಮ ಪೂರ್ವಿಕರ ಮೇಲೆ ಉಪವಾಸ ಕಡ್ಡಾಯಗೊಳಿಸಿದಂತೆ ನಿಮ್ಮ ಮೇಲೂ ಉಪವಾಸ ಕಡ್ಡಾಯಗೊಳಿಸಲಾಗಿದೆ. ಅದರ ಮೂಲಕ ನೀವೂ ಭಯ, ಭಕ್ತಿ ಉಳ್ಳವರಾಗಲಿಕ್ಕಾಗಿ.." ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ; "ಒಬ್ಬ ವ್ಯಕ್ತಿ ಕೆಟ್ಟ ಮಾತುಗಳನ್ನೂ, ಪಾಪ ಕೃತ್ಯಗಳನ್ನೂ ಉಪೇಕ್ಷಿಸದೇ ಕೇವಲ ಅನ್ನ ಪಾನೀಯಗಳನ್ನು ತೊರೆಯುವುದು ಅಲ್ಲಾಹನಿಗೆ ಅಗತ್ಯವಿಲ್ಲ.." ಅನ್ನ ಪಾನೀಯಗಳನ್ನು ತೊರೆಯುವುದರ ಮೂಲಕ ಮಾನಸಿಕ ಹಾಗೂ ದೈಹಿಕ ನಿಯಂತ್ರಣವೇ ಉಪವಾಸದ ನಿಜವಾದ ಗುಟ್ಟು ಎನ್ನುವುದನ್ನು ಈ ಹದೀಸಿನ ಮೂಲಕ ತಿಳಿಯಬಹುದಾಗಿದೆ. ಮನುಷ್ಯನ ಉನ್ನತಿಯನ್ನು ತಡೆಯುವ ಅನೇಕ ವಿಷಯಗಳಿವೆ. ನಡೆ, ನುಡಿ, ಚಿಂತನೆಗಳಲ್ಲಿ ಸಂಭವಿಸುವ ಕೆಡುಕುಗಳು ಅವುಗಳಲ್ಲಿ ಬಹಳ ಮುಖ್ಯವಾದವುಗಳು. ಆದರೆ, ವ್ರತ ಅವುಗಳಿಂದ ಮುಕ್ತಿ ನೀಡಿ, ಮನುಷ್ಯನನ್ನು ಔನ್ನತ್ಯಕ್ಕೇರಿಸುತ್ತದೆ. ವ್ರತಕಾಲವು ದುಷ್ಟ ಚಿಂತೆ, ದುಷ್ಟ ಕೆಲಸಕಾರ್ಯಗಳಿಂದ ತಡೆದು ನಿಲ್ಲಿಸಿ, ಮನಸು ಹ...

ಸಬಾಹಲ್ ಖೈರ್

ಸಬಾಹಲ್ ಖೈರ್ ರಮಳಾನ್ ವರ್ಷವಿಡೀ ಪ್ರತಿಫಲ: "ವಿಶ್ವಾಸದಿಂದ ಹಾಗೂ ಪ್ರತಿಫಲದ ಅಪೇಕ್ಷೆಯೊಂದಿಗೆ ರಮಳಾನಿನಲ್ಲಿ ಒಬ್ಬ ವ್ರತಾಚರಿಸಿದರೆ ಅವನ ಈ ಹಿಂದಿನ ಪಾಪಗಳೆಲ್ಲವೂ ಮನ್ನಿಸಲ್ಪಡುವುದು..” (ಬುಖಾರಿ, ಮುಸ್ಲಿಮ್). “ಒಬ್ಬ ವ್ಯಕ್ತಿ ರಮಳಾನಿನ ಉಪವಾಸ ಹಾಗೂ ಅದರ ಮುಂದುವರಿದ ಭಾಗವಾಗಿ ಶವ್ವಾಲಿನ ಆರು ಉಪವಾಸವನ್ನು ಆಚರಿಸಿದರೆ ವರ್ಷವಿಡೀ ಉಪವಾಸ ಆಚರಿಸಿದ ಪ್ರತಿಫಲ ಲಭ್ಯವಾಗುವುದು.." ಎಂದು ಹೇಳುವ ನಬಿವಚನವಿದೆ. ಒಂದು ಒಳಿತಿಗೆ ಹತ್ತು ಪ್ರತಿಫಲವಿರುವಾಗ ಮೂವತ್ತು ದಿನಗಳ ಉಪವಾಸಕ್ಕೆ ಮುನ್ನೂರು ಹಾಗೂ ಶವ್ವಾಲಿನ ಆರು ಉಪವಾಸಕ್ಕೆ ಅರುವತ್ತು ಪ್ರತಿಫಲದಂತೆ ಮುನ್ನೂರ ಅರುವತ್ತು ಪ್ರತಿಫಲ ಲಭ್ಯವಾಗುತ್ತದೆ. ಅಂದರೆ, ವರ್ಷವಿಡೀ ಉಪವಾಸ ಆಚರಿಸಿದ ಪ್ರತಿಫಲ ಲಭ್ಯವಾದಂತಾಯಿತಲ್ಲವೇ..? ರಮಳಾನಿನ ಮಹತ್ವವನ್ನು ಮತ್ತೊಂದು ಹದೀಸಿನಲ್ಲಿ ಹೀಗೆ ಹೇಳಲಾಗಿದೆ. "ರಮಳಾನಿನ ಆಗಮನದೊಂದಿಗೆ ಸ್ವರ್ಗದ ಬಾಗಿಲುಗಳು ತೆರೆಯಲ್ಪಡುತ್ತದೆ. ನರಕದ ಬಾಗಿಲುಗಳು ಮುಚ್ಚಲ್ಪಡುತ್ತದೆ. ಪಿಶಾಚಿಗಳನ್ನು ಬಂಧಿಸಲಾಗುವುದು..” (ಬುಖಾರಿ, ಮುಸ್ಲಿಮ್) ರಮಳಾನಿನ ಪ್ರತೀ ಹಗಲು ರಾತ್ರಿಗಳಲ್ಲಿ ಅಲ್ಲಾಹನು ನರಕ ವಿಮೋಚನೆ ನೀಡುವನು. ಪ್ರತೀ ಹಗಲು ರಾತ್ರಿಗಳಲ್ಲೂ ಮುಸ್ಲಿಮನ ಪ್ರಾರ್ಥನೆಯನ್ನು ಸ್ವೀಕರಿಸಲಾಗುವುದು ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ.. ಅಬ್ದುರ್ರಹ್ಮಾನಿಬ್ನು ಔಫ್ (ರ) ಹೇಳುತ್ತಾರೆ.. ಇತರ ತಿಂಗಳುಗಳಿಗಿಂತಲೂ ರಮಳಾನಿ...

ಸಬಾಹಲ್ ಖೈರ್

ಸಬಾಹಲ್ ಖೈರ್ ವ್ರತದ ಮಹತ್ವಗಳು ಉಪವಾಸ ವ್ಯಕ್ತಿ ಮತ್ತು ಅಲ್ಲಾಹನೆಡೆಯಲ್ಲಿರುವ ಒಂದು ರಹಸ್ಯ ಆರಾಧನೆಯಾಗಿದೆ, ಇತರ ಆರಾಧನೆಗಳಂತೆ ಜನರನ್ನು ತೋರ್ಪಡಿಸುವ ಅಥವಾ ಅವರೆಡೆಯಲ್ಲಿ ನನ್ನನ್ನು ಗಮನಿಸಬೇಕೆಂಬ ಉದ್ದೇಶ ಉಪವಾಸದಿಂದುಂಟಾಗುವುದಿಲ್ಲ. ಕೇವಲ ಸರ್ವಶಕ್ತನಾದ ಅಲ್ಲಾಹನ ತೃಪ್ತಿಯನ್ನು ಮಾತ್ರ ಹುಡುಕಬೇಕಷ್ಟೆ. ಆದ್ದರಿಂದಲೇ ಅದಕ್ಕೆ ಅಲ್ಲಾಹು ನೀಡುವ ಪ್ರತಿಫಲ ಕೂಡಾ ಬಹಳ ಹಿರಿದಾಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ..  "ಮಾನವನು ಮಾಡುವ ಪ್ರತಿಯೊಂದು ಸತ್ಕರ್ಮಗಳಿಗೂ ಹತ್ತರಿಂದ ಏಳ್ನೂರರ ತನಕ ದುಪ್ಪಟ್ಟು ಪ್ರತಿಫಲ ಸಿಗುತ್ತದೆ.."  ಆದರೆ ಅಲ್ಲಾಹು ಹೇಳುತ್ತಾನೆ.   "ಉಪವಾಸ ಬಿಟ್ಟು, ಅದು ನನಗೆ ಮಾತ್ರವಿರುವ (ತಿಳಿಯುವ) ಆರಾಧನೆಯಾಗಿದೆ. ಆದ್ದರಿಂದ ಅದರ ಪ್ರತಿಫಲ ನಾನೇ ನೀಡುತ್ತೇನೆ. (ಅದಕ್ಕೆ ಯಾವುದೇ ಮಿತಿಯಿರುವುದಿಲ್ಲ). ಕಾರಣ ಉಪವಾಸಿಗನು ನನಗೆ ಬೇಕಾಗಿ ಮಾತ್ರ ತನ್ನ ಕಾಮ ಮತ್ತು ಆಹಾರಗಳನ್ನೆಲ್ಲಾ ಕೈ ಬಿಡುತ್ತಾನೆ.." ಎಂದು  ಉಪವಾಸಿಗನಿಗೆ ಎರಡು ಮಹಾ ಸಂತೋಷಗಳಿವೆ. ವ್ರತ ತೆರೆಯುವ ಸಂದರ್ಭವಿರುವ ಸಂತೋಷ ಹಾಗೂ ತನ್ನ  ಯಜಮಾನನ್ನು ಕಾಣುವ (ಪಾರಿತ್ರಿಕ ಲೋಕದಲ್ಲಿ) ವೇಳೆಯಿರುವ ಮಹಾ ಸಂತೋಷ. ಅಲ್ಲಾಹನ ಬಳಿ ಉಪವಾಸಿಗನ ಬಾಯಿಯ ಸುವಾಸನೆ ಕಸೂರಿಗಿಂತಲೂ ಮಿಗಿಲಾಗಿರುತ್ತದೆ..  (ಬುಖಾರಿ ಮುಸ್ಲಿಂ)

ಸಬಾಹಲ್ ಖೈರ್

ಸಬಾಹಲ್ ಖೈರ್  ವ್ರತದ ಸುನ್ನತ್‌ಗಳು •ಸಹರಿಯೂಟ •ಸ್ನಾನ ಕಡ್ಡಾಯವಿದ್ದವರು ಫಜ್ರಾಗುವ ಮುಂಚೆಯೇ ಸ್ಥಾನ ಮಾಡುವುದು. •ಹಗಲು ಹೊತ್ತು ಜನಾಬತ್ತಾದಲ್ಲಿ ವಿಳಂಬ ಮಾಡದೆ ಕೂಡಲೇ ಸ್ನಾನ ನಿರ್ವಹಿಸುವುದು. •ಮಲಮೂತ್ರ ವಿಸರ್ಜನೆಯನ್ನು ಸಾಧ್ಯವಿದ್ದಷ್ಟೂ ರಾತ್ರಿ ಹೊತ್ತಲ್ಲೇ ಅಭ್ಯಾಸ ಮಾಡುವುದು. •ಐಹಿಕ ಸುಖ ಭೋಗಗಳಿಂದಲೂ, ದೇಹೇಚ್ಚೆಗಳಿಂದಲೂ ಸಂಪೂರ್ಣ ದೂರ ಸರಿಯುವುದು. •ಕುರ್‌ಆನ್ ಪಾರಾಯಣ, ದಾನಧರ್ಮ, ಇಅತಿಕಾಫ್ ಹಾಗೂ ಇನ್ನಿತರ ಸತ್ಕರ್ಮಗಳನ್ನು ಹೆಚ್ಚಿಸುವುದು. •ಇಫ್ತಾರ್‌ ಏರ್ಪಡಿಸುವುದು. •ಸೂರ್ಯಾಸ್ತಮಾನ ಖಚಿತಗೊಂಡ ಕೂಡಲೇ ವ್ರತ ತೊರೆಯುವುದು, ಮಗ್ರಿಬ್ ನಮಾಝಗಿಂತಲೂ ಮುಂಚೆಯೇ ತೊರೆಯುವುದು.

ಸಬಾಹಲ್ ಖೈರ್

ಸಬಾಹಲ್ ಖೈರ್ ಸ್ವರ್ಗ ಅಲಂಕಾರ ಅಬೂಹುರೈರ (ರ) ರವರಿಂದ ವರದಿ:  ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ:  "ಖಂಡಿತ ರಮಳಾನಿಗೆ ಬೇಕಾಗಿ ಸ್ವರ್ಗವನ್ನು ಅಲಂಕರಿಸಲ್ಪಡುತ್ತದೆ. ಪ್ರತಿಯೊಂದು ವರ್ಷದ ಪ್ರಾರಂಭದಿಂದಿಡಿದು ಮುಂದಿನ ವರ್ಷದ ತನಕ ಸುಮಾರು ಒಂದು ವರ್ಷಗಳ ಕಾಲವೇ ಈ ಅಲಂಕಾರ ಜರಗುತ್ತದೆ.." ನಂತರ ಅವರು ಹೇಳುತ್ತಾರೆ: "ಹಾಗೇ ರಮಳಾನಿನ ಪ್ರಥಮ ದಿನ ಬಂದು ಮುಟ್ಟಿದರೆ ಪವಿತ್ರ ಆರ್‌ಶಿನ ಕೆಳಗಡೆ ಸ್ವರ್ಗದ ವೃಕ್ಷಗಳಿಂದ ಬಡಿದೇಳುವ ವಿಶೇಷ ಗಾಳಿ ಬೀಸುತ್ತದೆ. ಅದು ಸ್ವರ್ಗದ ತರುಣಿಗಳಾದ ಹೂರುಲ್ ಈನ್‌ ಗಳಾದ ಮೇಲೆ ಸ್ಪರ್ಶಿಸುವಾಗ ಅವರು ಹೀಗೆನ್ನುವರು.." “ನಾಥಾ.. ನಿನ್ನ ಇಷ್ಟದಾಸರಿಂದ ನಮಗೆ ಪತಿಗಳನ್ನು ಆರಿಸಿಕೊಡಿ. ನಾವು ಅವರನ್ನೂ ಅವರು ನಮ್ಮನ್ನೂ ಕಣ್ಣು ತುಂಬಾ ಮೆಚ್ಚುವವರು.." (ಶುಅ್‌ಬುಲ್ ಈಮಾನ್ )

ಸಬಾಹಲ್ ಖೈರ್

ಸಬಾಹಲ್ ಖೈರ್ ಪ್ರವಾದಿﷺಮರವರ ನಾಮಗಳು: ಪ್ರವಾದಿﷺಮರವರಿಗೆ ಅನೇಕ ನಾಮಗಳಿರುವುದಾಗಿ ಹದೀಸ್'ಗಳಿಂದ ತಿಳಿಯಬಹುದು.  ಜುಬೈರ್ ಇಬ್ನ್ ಮುತ್'ಇಂ [ರ]ರವರಿಂದ ವರದಿ: ಪ್ರವಾದಿﷺಮರವರು ಹೇಳುವುದನ್ನು ನಾನು ಆಲಿಸಿದ್ದೇನೆ. "ಖಂಡಿತವಾಗಿಯೂ ನನಗೆ ತುಂಬಾ ನಾಮಗಳಿವೆ. ನಾನು ಮುಹಮ್ಮದ್ ಆಗಿರುವೆನು, ಅಹ್ಮದ್ ಆಗಿರುವೆನು, ನಾನು ಅವಿಶ್ವಾಸವನ್ನು ಅಳಿಸಿ ಬಿಡುವ ಅಲ್ ಮಾಹಿ ಆಗಿರುವೆನು. ನಾನು ನನ್ನ ಸುತ್ತಲೂ ಜನರನ್ನು ಒಟ್ಟು ಸೇರಿಸುವ ಅಲ್ ಹಾಶಿರ್ ಆಗಿರುವೆನು. ನಾನು, ಇನ್ನು ಯಾರೂ ಬರಲಿಕ್ಕಿಲ್ಲದ ಅಂತ್ಯದವನು (ಪ್ರವಾದಿ) ಆಗಿರುವೆನು." [ಬುಖಾರಿ, ಮುಸ್ಲಿಮ್] ಇನ್ನೊಂದು ಹದೀಸ್'ನಲ್ಲಿ: ಅಬೂ ಮೂಸಲ್ ಅಶ್'ಅರಿ [ರ]ರವರಿಂದ ವರದಿ: ಪ್ರವಾದಿﷺಮರರವರೇ ಸ್ವಯಂ ತಮಗೆ ಕೆಲವು ನಾಮಗಳಿವೆಯೆಂದು ನಮ್ಮೊಡನೆ ಹೇಳುತ್ತಿದ್ದರು. "ನಾನು ಮುಹಮ್ಮದ್ ಆಗಿರುವೆನು, ಅಹ್ಮದ್ ಆಗಿರುವೆನು, ನಾನು ಮುಖಫ್ಫ್ (ಹೆಚ್ಚು ಜನರಿಂದ ಅನುಸರಿಸಲ್ಪಡುವ ದೂತನು) ಆಗಿರುವೆನು. ಅಲ್ ಹಾಶಿರ್ ಆಗಿರುವೆನು, ತೌಬಾದ ದೂರನಾಗಿರುವೆನು, ಕಾರುಣ್ಯದ ದೂತನಾಗಿರುವೆನು." [ಮುಸ್ಲಿಮ್]

ಸಬಾಹಲ್ ಖೈರ್

ಸಬಾಹಲ್ ಖೈರ್ ಮಲಕುಗಳು ಸಾಕ್ಷಿಗಳಾಗುವ ನಮಾಝ್: ಅಬೂ ಹುರೈರಾ [ರ]ರವರಿಂದ ವರದಿ: ಪ್ರವಾದಿﷺಮರವರು ಹೇಳುವುದನ್ನು ನಾನು ಆಲಿಸಿದೆನು: "ಸಾಮೂಹಿಕ (ಜಮಾಅತ್) ನಮಾಝ್, ನಿಮ್ಮಲ್ಲೊಬ್ಬರು ಒಂಟಿಯಾಗಿ ನಮಾಝಿಗಿಂತ ಇಪ್ಪತ್ತೈದು ಪಟ್ಟು ಹೆಚ್ಚು ಶ್ರೇಷ್ಠವಾಗಿದೆ. ಫಜ್ರ್ ನಮಾಝಿಗೆ ರಾತ್ರಿಯ ಮತ್ತು ಹಗಲಿನ ಮಲಕುಗಳು ಒಟ್ಟು ಸೇರುತ್ತಾರೆ.." ನಂತರ ಅಬೂ ಹುರೈರಾ [ರ] ಅದಕ್ಕೆ (ಆಧಾರವಾಗಿ) ನೀವು ಉದ್ದೇಶಿಸುವುದಾದರೆ ಈ ಸೂಕ್ತಿಯನ್ನು ಪಾರಾಯಣ ಮಾಡಿರಿ ಎಂದರು. "ಖಂಡಿತವಾಗಿಯೂ ಪ್ರಭಾತ ನಮಾಝ್'ನ ಕುರ್‍ಆನ್ ಪಾರಾಯಣವು ಸಾಕ್ಷ್ಯವಹಿಸಲ್ಪಡುತ್ತದೆ.." [ಕುರ್‍ಆನ್, ಇಸ್ರಾಹ್: 78]  [ಬುಖಾರಿ]

ಸಬಾಹಲ್ ಖೈರ್

ಸಬಾಹಲ್ ಖೈರ್ ಪ್ರವಾದಿﷺಮರವರ ಶ್ರೇಷ್ಠತೆಗಳು: ಜಾಬೀರ್ [ರ]ರವರು ಹೇಳುತ್ತಾರೆ: ಪ್ರವಾದಿﷺಮರವರು ಹೇಳಿದರು: "ನನಗೆ ಐದು ಕಾರ್ಯಗಳನ್ನು ನೀಡಲಾಗಿದೆ. ನನಗಿಂತ ಮುಂಚೆ ಅದನ್ನು ಇನ್ಯಾರಿಗೂ ನೀಡಲಾಗಿಲ್ಲ.." 1). ನನ್ನ ಮತ್ತು ಶತ್ರುಗಳ ಮಧ್ಯೆ ಒಂದು ತಿಂಗಳ ಸಮಾಚಾರ ದೂರವಿದ್ದರೂ ಶತ್ರುಗಳಿಗೆ ಭಯ ನೀಡಿ ಅಲ್ಲಾಹನು ನನಗೆ ಸಹಾಯ ಮಾಡಿದನು.. 2). ಭೂಮಿಯನ್ನು ನನಗೆ ಮಸೀದಿಯನ್ನಾಗಿಯೂ, ಶುದ್ದೀಕರಿಸಲಿಕ್ಕಿರುವ ವಸ್ತುವಾಗಿಯೂ ಮಾಡಿ ಕೊಟ್ಟನು. ಆದುದರಿಂದ ನನ್ನ ಸಮುದಾಯದಲ್ಲಿ ಯಾರಿಗಾದರೂ ನಮಾಝಿನ ಸಮಯವಾದರೆ ಅವನು ನಮಾಝ್ ನಿರ್ವಹಿಸಲಿ.. 3). ಯುದ್ದಾರ್ಜಿತ ಸೊತ್ತನ್ನು ಅಲ್ಲಾಹನು ನನಗೆ ಅಣುವಾದನೀಯ ಗೊಳಿಸಿದನು. ನನಗೆ ಮುಂಚೆ ಯಾರಿಗೂ ಅದನ್ನು ಅನ್ದುದನೀಯ ಗೊಳಿಸಲಿಲ್ಲ.. 4). ಶಫಾಅತಿ (ಪರಲೋಕದ ಶಿಫಾರಸ್ಸಿ)ಗಿರುವ ಅಧಿಕಾರವನ್ನೂ ನೀಡಿದನು.. 5). ಪ್ರತಿಯೊಂದು ಪ್ರವಾದಿಗಳನ್ನು ತಂತಮ್ಮ ಸಮುದಾಯದ ಕಡೆಗೆ ನಿಯೋಗಿಸಲಾಗಿದೆ. ಆದರೆ ನನ್ನನ್ನು ಸರ್ವ ಮನುಷ್ಯರಿಗಾಗಿ ನಿಯೋಗಿಸಲಾಗಿದೆ.      [ಬುಖಾರಿ]

ಸಬಾಹಲ್ ಖೈರ್

ಸಬಾಹಲ್ ಖೈರ್ ಅಲ್ಲಾಹನನ್ನು ದರ್ಶಿಸಲು: ಜಾಬೀರ್ [ರ]ರವರು ವರದಿ ಮಾಡುತ್ತಾರೆ: ನಾವೊಮ್ಮೆ ಪ್ರವಾದಿﷺಮರವರ ಜೊತೆಯಲ್ಲಿದ್ದೆವು. ಆಗ ಪೂರ್ಣ ಚಂದ್ರನನ್ನು ನೋಡಿ ಪ್ರವಾದಿﷺಮರವರು ಹೇಳಿದರು: "ಖಂಡಿತವಾಗಿಯೂ ನೀವು ಪರದೆಯಿಲ್ಲದೆ ಈ ಪೂರ್ಣ ಚಂದ್ರನನ್ನು ದರ್ಶಿಸುವಂತೆ ನೀವು ನಿಮ್ಮ ಪ್ರಭುವನ್ನು ಕಾಣುವಿರಿ. ನಿಮಗೆ ಸಾಧ್ಯವಾಗುವುದಾದರೆ ಸೂರ್ಯೋದಯದ ಮತ್ತು ಸುರ್ಯಾಸ್ತಮದ ನಮಾಝ್'ಗಳು ನಿಮ್ಮನ್ನು ಪರಾಜಿತ ಗೊಳಿಸಿದಿರಲಿ.." (ಅರ್ಥಾತ್: ಅವುಗಳನ್ನು ನಿಶ್ಚಯಿಸಲ್ಪಟ್ಟ ಸಮಯದಲ್ಲಿ ನಿರ್ವಹಿಸುವುದರಲ್ಲಿ ನಿಮಗೆ ಯಾವುದೇ ಲೋಪದೋಷ ಉಂಟಾಗ ಕೂಡದು).. "ಸೂರ್ಯೋದಯಕ್ಕೆ ಮುಂಚೆ ಮತ್ತು ಸುರ್ಯಾಸ್ತಮಾನಕ್ಕೆ ಮುಂಚೆ ತಮ್ಮ ಪ್ರಭುವಿನ ಸುತ್ತಿಯೊಂದಿಗೆ (ಅವನ) ಪರಿಪಾವನತೆಯನ್ನು ಕೊಂಡಾಡಿರಿ.." [ಕುರ್‍ಆನ್, ಸೂರಃ ಖಾಫ್: 39]  [ಮುಸ್ಲಿಮ್]

ಸಬಾಹಲ್ ಖೈರ್

ಸಬಾಹಲ್ ಖೈರ್  ಫಜ್ರ್ ನಮಾಝ್ ನಿರ್ವಹಿಸಿದವನು ರಾತ್ರಿ ಪೂರ್ಣವಾಗಿ ನಮಾಝ್ ನಿರ್ವಹಿದವನಿಗೆ ಸಮಾನ: ಪ್ರವಾದಿﷺಮರವರು ನುಡಿದರು: "ಯಾರಾದರೂ ಇಶಾ ನಮಾಝನ್ನು ಜಮಾಅತಿನೊಂದಿಗೆ ನಿರ್ವಹಿಸಿದರೆ ಅವನು ರಾತ್ರಿಯ ಅರ್ಥ ಭಾಗ ನಮಾಝ್ ನಿರ್ವಹಿಸಿರುವುದಕ್ಕೆ ಸಮಾನ. ಯಾರಾದರೂ ಫಜ್ರ್ ನಮಾಝನ್ನು ಜಮಾಅತಿನೊಂದಿಗೆ ನಿರ್ವಹಿಸಿದರೆ ಅವನು ರಾತ್ರಿ ಪೂರ್ಣವಾಗಿ ನಮಾಝ್ ನಿರ್ವಹಿಸಿರುವುದಕ್ಕೆ ಸಮಾನ.." [ಮುಸ್ಲಿಮ್]

ಸಬಾಹಲ್ ಖೈರ್

ಸಬಾಹಲ್ ಖೈರ್ ಪ್ರವಾದಿ [ಸ.ಅ]ರವರ ಪರಂಪರೆ ಅದ್'ನಾನರ ಮಗನು, ಮುಅದ್ದರು ಮಗನು, ನಿಸಾರರ ಮಗನು, ಮಳರಿನ ಮಗನು,  ಇಲ್ಯಾಸರ ಮಗನು, ಮುದ್'ರಿಕರ ಮಗನು, ಖುಸೈಮರ ಮಗನು, ಕಿನಾನರ ಮಗನು, ನಳ್'ರಿನ ಮಗನು, ಮಾಲಿಕನ ಮಗನು, ಫಿಹ್'ರಿನ ಮಗನು, ಗ್ವಾಲಿಬರ ಮಗನು, ಲುಹೈರ ಮಗನು, ಕಅಬರ ಮಗನು, ಮುರ್ರರ ಮಗನು, ಕಿಲಾಬರ ಮಗನು, ಕುಸೈರ ಮಗನು, ಅಬ್ದುಮನಾಫರ ಮಗನು, ಹಾಶಿಮರ ಮಗನು, ಅಬ್ದುಲ್ ಮುತ್ತಲಿಬರ ಮಗನು ಹಾಗೂ ಅಬ್ದುಲ್ಲಾಹರ ಪೂತ್ರರೂ ಖಾಸಿಮರ ಪಿತರೂ ಆಗಿರುವರು ಅಂತ್ಯ ಪ್ರವಾದಿ ಮುಹಮ್ಮದ್ [ಸ.ಅ]. ಇದು ಪಂಡಿತರರುಗಳ ನಡುವೆ ಒಮ್ಮಾತಾಭಿಪ್ರಾಯವಿರುವ ಪ್ರವಾದಿ ಪರಂಪರೆಯಾಗಿದೆ. ಕಿನಾನರನ್ನು ಆಯ್ಕೆ ಮಾಡಿದನು. ಕಿನಾನರ ಸಂತಾನ ಪರಂಪರೆಯಿಂದ ಖುರೈಶರನ್ನು ಆಯ್ಕೆ ಮಾಡಿದನು, ಖುರೈಶರ ಬನೂ ಹಾಶಿಮರನ್ನು ಆಯ್ಕೆ ಮಾಡಿದನು, ಬನೂ ಹಾಶಿಮರ ನನ್ನನ್ನು ಆಯ್ಕೆ ಮಾಡಲಾಯಿತು."  [ಮುಸ್ಲಿಮ್] ಅಬೂ ಸುಫಿಯಾನರಲ್ಲಿ ಹಿರ್ಕಲ್ ರಾಜರು ಪ್ರವಾದಿ [ಸ.ಅ]ರವರ ಕುಟುಂಬ ಪರಂಪರೆಯ ಬಗ್ಗೆ ವಿಚಾರಿಸಿದಾಗ ಅಬೂ ಸುಫಿಯಾನ್ ಹೇಳಿದರು: "ಅವರು ನಮ್ಮಲ್ಲಿ ಉನ್ನತ ಕುಟುಂಬ ಪರಂಪರೆಯಿರುವವರು ಆಗಿರುವರು, ಆಗ ಹಿರ್ಕಲ್ ಹೇಳಿದರು: ಪ್ರವಾದಿಗಳನ್ನು ನಿಯೋಗಿಸಲ್ಪಡುವುದು ಹಾಗಾಗಿದೆ. ಅವರ ಪರಂಪರೆಯಿಂದಲೇ ಆಗಿದೆ."  [ಬುಖಾರಿ]

ಸಬಾಹಲ್ ಖೈರ್

ಸಬಾಹಲ್ ಖೈರ್ ಒಂದು ಅಕ್ಷರಕ್ಕೆ ಹತ್ತು ಪ್ರತಿಫಲ: ಕುರ್‍ಆನ್ ಪಾರಾಯಣ ಗೈಯ್ಯುವುದು ಅಲ್ಲಾಹನ ಬಳಿ ತುಂಬಾ ಪ್ರತಿಫಲವಿರುವ ಕರ್ಮವಾಗಿದೆ. ಪ್ರತಿಯೊಂದು ಅಕ್ಷರಕ್ಕೆ ಹತ್ತು ಪ್ರತಿಫಲವಿದೆ. ಪ್ರವಾದಿﷺಮರವರು ನುಡಿದರು. ಯಾರಾದರೂ ಕುರ್‍ಆನ್'ನಿಂದ ಒಂದು ಅಕ್ಷರ ಪಾರಾಯಣಗೈದರೆ ಆತನಿಗೆ ಒಂದು ಒಳಿತಿದೆ. ಪ್ರತಿಯೊಂದು ಒಳಿತು ಹತ್ತು ಒಳಿತಿಗೆ ಸಮಾನವಾಗಿದೆ. ಅಲಿಫ್-ಲಾಮ್-ಮೀಮ್ ಎಂಬುದನ್ನು ನಾನು ಒಂದಕ್ಷರವೆನ್ನುವುದಿಲ್ಲ. ಅಲಿಫ್ ಒಂದು ಅಕ್ಷರ, ಲಾಮ್ ಒಂದು ಅಕ್ಷರ, ಮೀಮ್ ಇನ್ನೊಂದು ಅಕ್ಷರವಾಗಿದೆ.  [ದಾರಿಮಿ, ತಿರ್ಮಿದಿ]

ಸಬಾಹಲ್ ಖೈರ್

ಸಬಾಹಲ್ ಖೈರ್ ಪ್ರವಾದಿ [ಸ.ಅ]ರವರ ಖದೀಜರೊಂದಿಗೆ ವಿವಾಹ: "25ನೇ" ವಯಸ್ಸು ಪ್ರಾಯದಲ್ಲಿ ಪ್ರವಾದಿ [ಸ.ಅ]ರವರು ಖದೀಜ[ರ]ರವರನ್ನು ವಿವಾಹರಾದರು. ಖದೀಜ [ರ]ರವರ ದಾಸರಾದ ಮೈಸರರೊಂದಿಗೆ ಖದೀಜ [ರ]ರವರ ನಿರ್ದೇಶನದ ಪ್ರಕಾರ ಪ್ರವಾದಿ [ಸ.ಅ]ರವರು ಶಾಮಿಗೆ [ಸಿರಿಯಾ] ವ್ಯಾಪಾರಕ್ಕಾಗಿ ತೆರಳಿದರು. ಹಾಗೆ ಮೈಸರ ಪ್ರವಾದಿ [ಸ.ಅ]ರವರ ವಿಶ್ವಸ್ತತೆಯನ್ನೂ, ಸೌಮ್ಯತೆಯನ್ನೂ, ಸದ್ಗುಣವನ್ನೂ ದರ್ಶಿಸಿ ಅದನ್ನು ತನ್ನ ಯಜಮಾನರಾದ ಖದೀಜರಿಗೆ ವಿವರಿಸಿ ಕೊಟ್ಟಾಗ ಅವರು ಪ್ರವಾದಿವರ್ಯರನ್ನು ವಿವಾಹವಾಗಲು ಇಚ್ಛೆಯನ್ನು ವ್ಯಕ್ತಪಡಿಸಿದರು. ಅಂದು ಅವರಿಗೆ 40 ವಯಸ್ಸು ಪ್ರಾಯ ಮತ್ತು ವಿಧವೆಯೂ ಆಗಿದ್ದರು.

ಸಬಾಹಲ್ ಖೈರ್

ಸಬಾಹಲ್ ಖೈರ್ ಅಲ್ಲಾಹನ ಮೇಲೆ ತವಕ್ಕುಲ್ ಮಾಡುವವರನ್ನು (ದೂತರೇ,) ನೀವು ಅವರ (ವಿಶ್ವಾಸಿಗಳ) ಪಾಲಿಗೆ ಸೌಮ್ಯರಾಗಿರುವುದು ಅಲ್ಲಾಹನ ಕೃಪೆಯೇ ಆಗಿದೆ. ಒಂದು ವೇಳೆ ನೀವು ಒರಟು ಸ್ವಭಾವದವರೂ ಕಠೋರ ಹೃದಯದವರೂ ಆಗಿದ್ದರೆ, ಅವರೆಲ್ಲಾ ನಿಮ್ಮ ಬಳಿಯಿಂದ ಚದುರಿ ಹೋಗುತ್ತಿದ್ದರು. ನೀವು ಅವರನ್ನು ಕ್ಷಮಿಸಿರಿ. ಅವರ ಕ್ಷಮೆಗಾಗಿ (ಅಲ್ಲಾಹನಲ್ಲಿ) ಪ್ರಾರ್ಥಿಸಿರಿ ಮತ್ತು ವಿವಿಧ ವಿಷಯಗಳಲ್ಲಿ ಅವರ ಜೊತೆ ಸಮಾಲೋಚಿಸಿರಿ. ಇನ್ನು ನೀವು ಒಂದು ನಿರ್ಧಾರ ಕೈಗೊಂಡರೆ (ಆ ಕುರಿತು) ಅಲ್ಲಾಹನಲ್ಲಿ ಸಂಪೂರ್ಣ ಭರವಸೆ ಇಟ್ಟು ಬಿಡಿರಿ. (ತನ್ನಲ್ಲಿ) ಭರವಸೆ ಇಡುವವರನ್ನು ಅಲ್ಲಾಹನು ಖಂಡಿತ ಪ್ರೀತಿಸುತ್ತಾನೆ..  [ಕುರ್‍ಆನ್, 3: 159]