ಅದಕ್ಕೆ ಕಾರಣ ಒಂದು ತಪ್ಪಾಗಿತ್ತು..!
ಅದಕ್ಕೆ ಕಾರಣ ಒಂದು ತಪ್ಪಾಗಿತ್ತು..! ಇಬ್‌ನು ಅಬ್ಬಾಸ್ ಹೇಳುತ್ತಾರೆ : 80 ವರ್ಷಗಳ ಕಾಲ ಸೃಷ್ಟಿಕರ್ತನಾದ ಅಲ್ಲಾಹನ ಆರಾಧನೆಯಲ್ಲಿ ಜೀವಿಸಿದ್ದ ಒಬ್ಬ ಮಹಾತ್ಮರಿದ್ದರು. ಅವರ ಜೀವನದ ಕೊನೆಯ ಘಳಿಗೆಯಲ್ಲಿ ಅವರಿಂದ ಒಂದು ತಪ್ಪು ಸಂಭವಿಸಿತು. ಆ ತಪ್ಪು ಅವರಲ್ಲಿ ಭಯದ ಹಿಮಾಲಯವನ್ನೇ ಸೃಷ್ಟಿಸಿತು. ಭಯವಿಹ್ವಲನಾದ ಮಹಾತ್ಮರು ಎಲ್ಲೆಂದಿಲ್ಲದೆ ಪರಿಭ್ರಾಂತರಾಗಿ ಓಡಿ ಮರುಭೂಮಿಗೆ ತಲುಪಿದರು. ಅಲ್ಲಿ ಅವರು ಕೂಗಿ ಕೇಳುತ್ತಾರೆ.. "ಬಹಳಷ್ಟು ಮರಳ ಗುಡ್ಡಗಳೂ, ಮುಳ್ಳುಗಿಡಗಳೂ, ವನ್ಯಮೃಗಗಳೂ ಅವಿತು ಕುಳಿತಿರುವ ಹಲವಾರು ವಂಚನೆಯ ಬೀಡಾದ ಮರುಭೂಮಿಯೇ, ನನ್ನ ಸೃಷ್ಟಿಕರ್ತನಿಂದ ನನ್ನನ್ನು ಅಡಗಿಸಲು ಸಾಧ್ಯವಿರುವ ಯಾವುದಾದರೂ ಸ್ಥಳ ನಿನ್ನಲ್ಲಿದ್ದರೆ ನನಗೆ ತಿಳಿಸಿಕೊಡವೆಯಾ..? ಮಹಾತ್ಮರ ಪ್ರಶ್ನೆಯನ್ನು ಕೇಳಿ ಅಲ್ಲಾಹನ ಆಜ್ಞೆಯ ಪ್ರಕಾರ ಆ ಮರುಭೂಮಿ ಮಾತನಾಡಲು ಪ್ರಾರಂಭಿಸಿತು... "ಓ ಮನುಷ್ಯ, ನನ್ನಲ್ಲಿನ ಮುಳ್ಳಿನ ಗಿಡಗಳಿಗೂ, ಮರಳಿನ ಗುಡ್ಡಗಳಿಗೂ ಬೇರೆಲ್ಲ ವಸ್ತುಗಳಿಗೂ ಅವಗಳಿಗೆ ಜವಾಬ್ದಾರಿ ವಹಿಸಿಕೊಟ್ಟು ಒಂದು ಮಲಕನ್ನು ಅಲ್ಲಾಹು ನೇಮಿಸಿದ್ದಾನೆ. ಅವರ ಕಣ್ಣು ತಪ್ಪಿಸಿ ಬೇರೇನನ್ನೂ ನಡೆಸಲು ನನಗೆ ಸಾಧ್ಯವಿಲ್ಲ. ಮತ್ತೆ ನಾನು ಹೇಗೆ ನಿನಗೆ ಅಭಯವನ್ನು ನೀಡಲಿ...!? ಮರುಭೂಮಿ ತನ್ನ ನಿಸ್ಸಹಾಯಕತೆಯನ್ನು ತೋಡಿಕೊಂಡಿತು. ಮರುಭೂಮಿಯ ಆ ಅಶಕ್ತತೆಯ ಮಾತನ್ನು ಕೇಳಿದ ಅವರು ತನ್ನ ನಿರೀಕ್ಷೆಯನ್ನು ಕೈಬಿಡದೆ ಸಮುದ್ರದ ...