ಕಪ್ಪು ಉಪ್ಪು: ಗ್ಯಾಸ್ಟ್ರಿಕ್, ಎದೆಯುರಿ, ಅಜೀರ್ಣ ಸಮಸ್ಯೆಗೆ ಪರ್ಫೆಕ್ಟ್ ಮನೆಮದ್ದು!
ಕಪ್ಪು ಉಪ್ಪು: ಗ್ಯಾಸ್ಟ್ರಿಕ್, ಎದೆಯುರಿ, ಅಜೀರ್ಣ ಸಮಸ್ಯೆಗೆ ಪರ್ಫೆಕ್ಟ್ ಮನೆಮದ್ದು! ರುಚಿಗೆ ತಕ್ಕಷ್ಟು ಉಪ್ಪು ಹಾಕದೆ ಇದ್ದರೆ ನಾವು ತಯಾರು ಮಾಡುವ ಅಡುಗೆ ಬಾಯಲ್ಲಿ ಇಡಲು ಕೂಡ ಸಾಧ್ಯವಿರುವುದಿಲ್ಲ. ಏಕೆಂದರೆ ಅಪಾರ ಪ್ರಮಾಣದ ಅಡುಗೆಯ ಸ್ವಾದ ಕೇವಲ 1 ಟೇಬಲ್ ಚಮಚ ಉಪ್ಪಿನಲ್ಲಿ ನಿರ್ಧಾರವಾಗುತ್ತದೆ. ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಉಪ್ಪಿನಿಂದ ಕೂಡ ನಮಗೆ ಆರೋಗ್ಯಕ್ಕೆ ಸಾಕಷ್ಟು ಅನುಕೂಲವಿದೆ. ಇದಕ್ಕೆ ಉದಾಹರಣೆಯೆನ್ನುವಂತೆ ಕಪ್ಪು ಉಪ್ಪು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ವಿಶೇಷವಾಗಿ ಗ್ಯಾಸ್ಟ್ರಿಕ್ ಮತ್ತು ಆಮ್ಲೀಯತೆ ಜೊತೆಗೆ ಎದೆಯುರಿ ಸಮಸ್ಯೆಯನ್ನು ದೂರ ಮಾಡುವ ಗುಣವನ್ನು ಸಹ ಇದು ಪಡೆದುಕೊಂಡಿದೆ. ಕಪ್ಪು ಉಪ್ಪು ಹೇಗೆ ಸಹಾಯಕ? ಜೀರ್ಣಶಕ್ತಿ ಹೆಚ್ಚಿಸುತ್ತದೆ ನೈಸರ್ಗಿಕವಾಗಿ ಉತ್ತೇಜನ ಶಕ್ತಿಯನ್ನು ಪಡೆದಿರುವ ಕಪ್ಪು ಯಕೃತ್ ಭಾಗವನ್ನು ಉತ್ತೇಜಿಸಿ ದೇಹದ ಜೀರ್ಣ ಪ್ರಕ್ರಿಯೆಗೆ ಅನುಕೂಲವಾಗುವಂತೆ ಅಗತ್ಯವಾಗಿ ಬೇಕಾಗಿರುವ ಜೀರ್ಣ ರಸಗಳನ್ನು ಉತ್ಪತ್ತಿಯಾಗುವಂತೆ ಮಾಡಿ ಹಸಿವಿನ ನಿಯಂತ್ರಣ ಮಾಡುತ್ತದೆ. ಕೆಲವೊಂದು ಆಮ್ಲೀಯ ಅಂಶಗಳನ್ನು ಒಳಗೊಂಡಿರುವ ಜೀರ್ಣರಸಗಳು ನೀವು ಸೇವಿಸುವ ಆಹಾರದಲ್ಲಿ ಕಂಡುಬರುವ ಕೊಬ್ಬಿನ ಅಂಶವನ್ನು ಮತ್ತು ಕರಗುವ ವಿಟಮಿನ್ ಅಂಶಗಳನ್ನು ಸಣ್ಣ ಕರುಳಿನ ಭಾಗಕ್ಕೆ ಪೂರೈಕೆ ಮಾಡುತ್ತದೆ. ಉಪಹಾರದ ಸಮಯದಲ್ಲಿ ಇವುಗಳನ್ನು ತಿಂದರೆ ಜೀರ್ಣಶಕ್ತಿ ಹೆಚ್ಚಾಗುತ್ತದೆ! *ಎದೆಯುರಿ ...